Wednesday, 11th December 2024

ಪಿವಿಸಿ ಪೈಪುಗಳು, ಕೊಬ್ಬರಿ ಸುಟ್ಟು ಭಸ್ಮ

ಚಿಕ್ಕನಾಯಕನಹಳ್ಳಿ : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಿವಿಸಿ ಪೈಪುಗಳು ಹಾಗು ಕೊಬ್ಬರಿ ಸುಟ್ಟು ಭಸ್ಮವಾಗಿ ರುವ ಘಟನೆ ಪಟ್ಟಣದ ಸಮೀಪ ಜೋಡಿ ಕಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪರಮೇಶ್ವರಯ್ಯ ಎಂಬುವರ ಹೆಂಚಿನ ಮನೆಗೆ ಯಾರು ಇಲ್ಲದ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಉರಿಯಲಾರಂಭಿಸಿದೆ. ಇದನ್ನು ನೋಡಿದ ಸ್ಥಳೀಯರು ಮನೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನು ಬಿಡಿಸಿ ಬೆಂಕಿಯನ್ನು ನಂದಿಸಿದರೂ ಕೂಡ ಅಪಾರ ಪ್ರಮಾಣದ ಕೊಬ್ಬರಿ, ಪಿವಿಸಿ ಪೈಪುಗಳು, ಮರದ ತೀರು ಸುಟ್ಟು ಭಸ್ಮವಾಗಿದೆ. ಅಂದಾಜು ೧ ಲಕ್ಷ ಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಕುಟುಂಬದವರು ಅಂದಾಜಿಸಿದ್ದಾರೆ.