ಶ್ರೀನಗರ: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಆರು ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಬ್ದುಲ್ ಹಮೀದ್ ವಾನಿ, ಜಾಫರ್ ಹುಸೇನ್ ಭಟ್, ಮೊಹಮ್ಮದ್ ರೈಫ್ ಭಟ್, ಲಿಯಾಖತ್ ಅಲಿ, ತಾರಿಖ್ ಮೆಹಮೊದ್ ಹಾಗೂ ಸೊವಾಖತ್ ಅಹ್ಮದ್ ಖಾನ್ ಸರ್ಕಾರಿ ಸೇವೆಯಿಂದ ವಜಾ ಗೊಂಡವರು.
ಇದರಲ್ಲಿ ಇಬ್ಬರು ಪೊಲೀಸ್ ಕಾನ್ಸ್ಸ್ಟೇಬಲ್, ಇಬ್ಬರು ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿ ಹಾಗೂ ರಸ್ತೆ ಮತ್ತು ಕಟ್ಟಡ ಇಲಾಖೆ ನೌಕರರು ಇದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕ್ರಮ ಕೈಗೊಂಡಿದ್ದು, ದೇಶದ್ರೋಹದ ಆರೋಪದ ಮೇಲೆನೌಕರರನ್ನು ವಜಾಗೊಳಿಸಲಾಗಿದೆ.