Saturday, 23rd November 2024

ಸೋಶಿಯಲ್ ಡೆಮಾಕ್ರೆಟ್ಸ್ ಪಕ್ಷ ವಿಜಯ: ಮಾರ್ಕೆಲ್ ಆಡಳಿತ ಅಂತ್ಯ

ಬರ್ಲಿನ್ : ಜರ್ಮನಿಯಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರೆಟ್ಸ್ ಪಕ್ಷವು ವಿಜಯ ಸಾಧಿಸಿದೆ. ಈ ಮೂಲಕ ಆಯಂಜೆಲಾ ಮರ್ಕೆಲ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿ ಸರಕಾರದ ಆಡಳಿತ(ಕಳೆದ 16 ವರ್ಷ) ವನ್ನು ಅಂತ್ಯಗೊಳಿಸಿದೆ.

ಮರ್ಕೆಲ್ ಅವರ ಪಕ್ಷ 2005ರಿಂದ ಜರ್ಮನಿಯಲ್ಲಿ ಅಧಿಕಾರದಲ್ಲಿತ್ತು. ಸೋಶಿಯಲ್ ಡೆಮಾಕ್ರೆಟ್‍ ಗಳಿಗೆ ಶೇ 26ರಷ್ಟು ಮತಗಳು ದೊರಕಿದ್ದರೆ ಕನ್ಸರ್ವೇಟಿವ್ ಪಕ್ಷಕ್ಕೆ ಶೇ 24.5 ಮತಗಳು ದೊರ ಕಿವೆ. ಸೋಶಿಯಲ್ ಡೆಮಾಕ್ರೆಟ್ ಪಕ್ಷ ತನಗೆ ಸ್ಪಷ್ಟ ಜನಾದೇಶ ದೊರಕಿದೆ ಎಂದು ಹೇಳಿಕೊಂಡಿದೆ.

ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ಇದ್ದ ಮರ್ಕೆಲ್ ಅವರ ಕನ್ಸರ್ವೇಟಿವ್ ಪಕ್ಷ ಹಾಗೂ ಸಿಎಸ್‍ಯು ಮೈತ್ರಿ ಮತ್ತೆ ಮುಂದುವರಿಯುವ ಲಕ್ಷಣಗಳಿಲ್ಲ. ಸದ್ಯದ ಮಟ್ಟಿಗೆ ಸೋಶಿಯಲ್ ಡೆಮಾಕ್ರೆಟ್ಸ್ ಅಥವಾ ಕನ್ಸರ್ವೇಟಿವ್ ಪಕ್ಷ ನೇತೃತ್ವದ ತ್ರಿಪಕ್ಷೀಯ ಮೈತ್ರಿ ರಚನೆ ಸಾಧ್ಯತೆಯೂ ಇದೆ.

ಒಂದು ವೇಳೆ ಕನ್ಸರ್ವೇಟಿವ್ ಪಕ್ಷ ಸರಕಾರದ ನೇತೃತ್ವ ವಹಿಸಿದಲ್ಲಿ ಓಲಫ್ ಶೋಲ್ಝ್ ಮುಂದಿನ ಚಾನ್ಸಲರ್ ಆಗಿ ಮರ್ಕೆಲ್ ಅವರ ಸ್ಥಾನ ತುಂಬಲಿದ್ದಾರೆ.