ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 101
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ
ಹುಟ್ಟಿದ ಪ್ರತಿಯೊಬ್ಬರೂ ಮಾತನಾಡಲು ಸಾಧ್ಯವಿರುವುದಿಲ್ಲ
ಬೆಂಗಳೂರು: ಹುಟ್ಟಿದ ಪ್ರತಿಯೊಬ್ಬರೂ ಮಾತನಾಡಲು ಸಾಧ್ಯವಿರುವುದಿಲ್ಲ. ಮಾತನಾಡಲು ಮುಖ್ಯವಾಗಿ ಬೇಕಾಗಿರುವುದು ಶ್ರವಣ ಶಕ್ತಿ. ಹುಟ್ಟಿ ನಿಂದಲೂ ಮಾತು ಹಾಗೂ ಶ್ರವಣ ತೊಂದರೆ ಇರುತ್ತದೆ. ಅದನ್ನು ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಅಖಿಲ ಭಾರತ ವಾಕ್ -ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ಮಾತನಾಡುತ್ತೇವೆ. ಎಲ್ಲರೂ ಕೇಳುತ್ತಾರೆ. ಎಲ್ಲರೂ ಪ್ರಶ್ನೆ ಕೇಳುತ್ತಾರೆ ಆ ಪ್ರಶ್ನೆಗೆ ಉತ್ತರ ಪಡೆದು ಕೊಳ್ಳುತ್ತಾರೆ. ಹುಟ್ಟಿದ ಪ್ರತಿಯೊ ಬ್ಬರೂ ಮಾತನಾಡಲು ಸಾಧ್ಯವಿರುವುದಿಲ್ಲ. ಕೆಲವರಿಗೆ ಮಾತು ಬರುವುದಿಲ್ಲ, ಕೆಲವರಿಗೆ ಕೇಳುವ ತೊಂದರೆ ಇರುತ್ತದೆ.
ಹುಟ್ಟಿನಿಂದಲೂ ಇದು ಇದ್ದೇ ಇರುತ್ತದೆ. ಹೆಚ್ಚು ಕಡಿಮೆ ೧೦-೧೫ ತೊಂದರೆಗಳಿವೆ. ಮಾತನಾಡಲು ಮೊದಲು ಬೇಕಾದ್ದು ಶ್ರವಣ ಶಕ್ತಿ. ಕಿವಿ ಇದ್ದವ ರೆಲ್ಲಾ ಕೇಳೋಲ್ಲ, ಕೇಳಿದವರೆಲ್ಲ ಅರ್ಥ ಮಾಡಿಕೊಳ್ಳುವುದಿಲ್ಲ. ಕಿವಿಯ ಭಾಗಗಳಾಗಿ ಹೊರಕಿವಿ, ಮಧ್ಯಕಿವಿ, ಒಳಕಿವಿ ಇರುತ್ತೆ. ಹೊರಕಿವಿಯು ಮಾತು ಅಥವಾ ಶಬ್ದವನ್ನು ಸ್ವೀಕರಿ ಸುತ್ತದೆ, ಮಧ್ಯಕಿವಿಯಲ್ಲಿರುವ ತಮಟೆ ಅದನ್ನು ಪಡೆದುಕೊಳ್ಳುತ್ತದೆ. ಇದರಲ್ಲಿರುವ ಮೃದು ಮೂಳೆಗಳಿಂದ ಧ್ವನಿ ಅಥವಾ ಶಬ್ದ ಒಳಹೋಗಿ ಧ್ವನಿಯು ಸಂಕೇತದಂತೆ ಮಿದುಳಿಗೆ ತಲುಪುತ್ತದೆ. ಈ ಕ್ರಿಯೆ ಮುಖ್ಯವಾದುದು.
ಮಾತನಾಡಲು ಗಾಳಿ ಬೇಕು. ಶ್ವಾಸಕೋಶದಿಂದ ಬರುವ ಗಾಳಿ ಧ್ವನಿ ತಂತುವಿಗೆ ಹೋಗುತ್ತೆ. ಗಾಳಿ ಧ್ವನಿ ತಂತುಗೆ ಹೋದಾಗ ಶಬ್ದರೂಪವಾಗಿ ಬಾಯಿಗೆ ಬರುತ್ತೆ. ಬಾಯಿಯ ಕಿರುನಾಲಿಗೆ, ನಾಲಿಗೆಯಲ್ಲಿ ಗಾಳಿಯಿಂದ ಚಲನೆ ಉಂಟಾಗಿ ಶಬ್ದ ಬರುತ್ತದೆ. ಇದು ಮಾತು. ಕ್ಷಣಾರ್ಧದಲ್ಲಿ ಇದೆಲ್ಲಾ ಆಗಿ ಕೇಳಿಸಿ ಕೊಂಡು ಮಾತನಾಡುತ್ತೇವೆ. ಈ ಜೋಡಣೆಯಲ್ಲಿ ತೊಂದರೆಯಾದರೆ ಮಾತು, ಭಾಷೆಗೆ ಸಮಸ್ಯೆಯಾಗುತ್ತದೆ. ಮಾತು, ಭಾಷೆ ಮಾನವನ ಜೀವನದ ಅವಿಭಾಜ್ಯ ಅಂಗ. ಅನೇಕ ಕಾರಣ ದಿಂದ ಮಾತಿನ ತೊಂದರೆ ಮತ್ತು ಕಿವಿ ತೊಂದರೆ ಆಗುತ್ತದೆ ಎಂದರು.
ಮೂರನೇ ತಿಂಗಳಿನಲ್ಲಿ ೪ ಭಾಗ: ಮೊದಲ ೩ ತಿಂಗಳು ಅತ್ಯಂತ ಸೂಕ್ಷ್ಮ. ಮಗು ಹುಟ್ಟುವಾಗಲೇ ಮುಖ ಇರುತ್ತದೆ ಅಂದುಕೊಳ್ಳುತ್ತಾರೆ. ಗರ್ಭಾ ವಸ್ಥೆಯ ಮೂರನೇ ತಿಂಗಳಿನಲ್ಲಿ ೪ ಭಾಗ ಇರುತ್ತದೆ. ನಾಲ್ಕು ಭಾಗದ ಜೋಡಣೆಯಾದಾಗ ಮುಖ ಆಗುತ್ತದೆ. ೩ ತಿಂಗಳಿರುವಾಗ ೪ ಭಾಗಗಳು ಜೋಡಣೆ ಯಾಗುತ್ತದೆ. ಮೂರನೇ ತಿಂಗಳ ಬಳಿಕ ದೈಹಿಕ ಬೆಳವಣಿಗೆ ಆಗುತ್ತದೆ. ಮೊದಲ ೩ ತಿಂಗಳಿನಲ್ಲಿ ತಾಯಿಗೆ ತೊಂದರೆ ಆದರೆ ಚಿಕನ್ ಪಾಕ್ಸ್,
ಜ್ವರದಂತಹ ತೊಂದರೆ ಆದರೆ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ. ೯ ತಿಂಗಳೂ ನಾಜೂಕಾದ ಸಮಯ. ಮಗು ಹುಟ್ಟಿದ ಬಳಿಕ ಮಗು ಬೆಳೆಯುವ ೧ ವರ್ಷ ಮಗುವಿನ ಮಿದುಳಿನ ಬೆಳವಣಿಗೆ ಕಾಲ. ಆಗ ಏನಾದರೂ ತೊಂದರೆ ಆದರೂ ಅದು ಸಮಸ್ಯೆಯಾಗುತ್ತದೆ. ಗೊತ್ತಾಗದ ಕಾರಣ ಅನೇಕವಿದೆ.
ಸಂಬಂಧದಲ್ಲಿ ಮದುವೆಯಾಗುವುದು, ವಂಶವಾಹಿನಿಯಿಂದ ಬರುವ ತೊಂದರೆಗಳು, ಸೀಳು ತುಟಿ, ೩೫ ವರ್ಷದ ಬಳಿಕ ಗರ್ಭ ಧರಿಸಿದರೂ ತೊಂದರೆ ಅಽಕ. ಬೆಳೆಯುವಾಗಲೂ ತೊಂದರೆಯಾಗುತ್ತದೆ. ಕಿವಿ, ಮಾತಿನ ತೊಂದರೆ ಯಾವಾಗಲೂ ಬರುತ್ತದೆ. ಕೇಂದ್ರ ಯೋಜನೆಯಂತೆ ಶ್ರವಣ ಮುಕ್ತ ಭಾರತ
ಮಾಡಬೇಕು. ಹುಟ್ಟಿನಿಂದ ಬರುವ ಶ್ರವಣ ಸಮಸ್ಯೆ ಮಾತಿಗೂ ತೊಂದರೆ ಮಾಡಿಬಿಡುತ್ತದೆ.
ಕಿವಿ ರಚನೆಯಲ್ಲಿ ಕೇಳಲು ಬೇಕಾದ ನರಕ್ಕೆ ಹಾನಿಯಾಗಿರುತ್ತದೆ. ಇದರಿಂದ ಕೇಳಲು ಸಮಸ್ಯೆ. ಹೊರಕಿವಿ, ಮಧ್ಯಕಿವಿ, ಒಳಕಿವಿ ರಚನೆಗೆ ತೊಂದರೆ ಯಾದರೂ ಸಮಸ್ಯೆ ಖಚಿತ. ನಾವು ಸಣ್ಣವರಿರುವಾಗ ಮಾತು ಕೇಳುವಂತೆ ಇರಬೇಕು. ಮಗುವಿಗೆ ಅರ್ಥವಾಗದಿದ್ದರೂ ಕೇಳುತ್ತಾ ಇರಬೇಕು. ಹಾಗಾಗಿ ಮಗುವಿನಲ್ಲಿ ಮಾತಿನ ಬೆಳವಣಿಗೆ ಆಯಿತು. ಕೇಂದ್ರ ಸರಕಾರದ ಯೋಜನೆಯಂತೆ ಹುಟ್ಟಿದ ಮಗುವಿಗೆ ೧, ೨, ೩ ಮಂತ್ರ ಅಂದರೆ ಮಗುವಿಗೆ ಕಿವಿ ಕೇಳುತ್ತಾ ಅಂತ ಪರೀಕ್ಷಿಸಬೇಕು.
ನಾವೆಲ್ಲಾ ಮಗು ಹುಟ್ಟಿದಾಗ ಗಿಲ್ಕಿ ಬಳಸುತ್ತೇವೆ. ಆಗ ಅದು ಕಿವಿಯ ಪರೀಕ್ಷೆ ಎಂದು ಗೊತ್ತಿರಲಿಲ್ಲ. ಶ್ರವಣ ತೊಂದರೆ ಇರೋರು ಶಬ್ದ ಪ್ರಪಂಚಕ್ಕೆ ಹೊಂದಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಲು ಶ್ರವಣಯಂತ್ರ ಹಾಕುತ್ತೇವೆ. ಇದರಿಂದ ಮಗುವಿನ ಕಿವಿಗೆ ಶಬ್ದ ಚೆನ್ನಾಗಿ ಹೋಗುತ್ತದೆ. ಆ ಸಮಯದಲ್ಲಿ
ಶ್ರವಣ ತಜ್ಞರು ಶಬ್ದ ಪ್ರಪಂಚಕ್ಕೆ ಕರೆದುಕೊಂಡು ಹೋಗಿ ಪದಗಳನ್ನು ಹೇಳಿಕೊಡ್ತೇವೆ. ಭಾಷೆ ಕೇಳುತ್ತೆ ಹೊರತು ಅರ್ಥ ಆಗಲ್ಲ. ಮಗುವಿಗೂ ಹೀಗೆ ತರಬೇತಿ ಕೊಡುತ್ತೇವೆ. ವಿಶೇಷ ಚೇತನ ಮಕ್ಕಳಿಗೆ ತಾಯಿ ತಂದೆ ೧೪-೧೫ ಗಂಟೆ ಮಾತಾಡಿ, ಓದಿಸಿ- ಬರೆಸಿ ಮಗುವನ್ನು ಸಮಾಜಕ್ಕೆ ಹತ್ತಿರವಾಗಿಸುತ್ತಾರೆ. ೩-೪ ವರ್ಷ ತರಬೇತಿ ಮಗುವಿಗೆ ಅಗತ್ಯ ಎಂದು ಹೇಳಿದರು.
ಬುದ್ದಿಮಾಂದ್ಯತೆ: ಸಮಾಜದಲ್ಲಿ ನಮ್ಮ ನಿಮ್ಮ ಹಾಗೆ ಬದುಕಲು ಬಂದಿರುವವರೇ ವಿಶೇಷ ಚೇತನರು. ಅವರನ್ನು ಅಣಕಿಸಬೇಡಿ, ಹೀಯಾಳಿಸಬೇಡಿ. ಬದುಕಲು ಬಿಡಿ. ನಾನು ನಾಗತಿಹಳ್ಳಿ ಚಂದ್ರಶೇಖರ್ ಅಂಥವರ ಬಳಿ ಕೇಳಿಕೊಂಡಿದ್ದೆ, ಇಂಥವರ ಕುರಿತಾದ ಶಾರ್ಟ್ ಸಿನಿಮಾ ಮಾಡಿ ಎಂದು. ಸಿನಿಮಾಗಳ ಮುಖಾಂತರ ಸಂದೇಶಕೊಟ್ಟು ಬದುಕಲು ಅವಕಾಶ ಮಾಡಿಕೊಡಿ. ಕೆಲವು ಮಕ್ಕಳಿಗೆ ಮಾತು ಅರ್ಥ ಆಗಲ್ಲ, ಇನ್ನು ಕೆಲವಕ್ಕೆ ಅರ್ಥವೂ
ಆಗಲ್ಲ, ಮಾತಾಡೋಕೂ ಬರಲ್ಲ. ಮಕ್ಕಳಲ್ಲಿ ಡೌನ್ ಸಿಂಡ್ರೋಮ್ ನಂತಹ ಅನೇಕ ತೊಂದರೆ ಇರುತ್ತದೆ.
ಮಕ್ಕಳು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲಾ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕು ಅಂತಿಲ್ಲ. ಹುಟ್ಟಿದ ಮಗನಿಗೆ ಕೇಳಿದರೆ ಟೀಚರ್, ಕಲಾವಿದ ಆಗಬೇಕು ಅಂತಾರೆ. ಓದು ಬರಹ ಮಾತ್ರವಲ್ಲ, ಕಲೆಗೂ ಪ್ರೋತ್ಸಾಹ ನೀಡಬೇಕು. ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ಬಿಡಬೇಕು. ವಿಶೇಷ ಚೇತನರಂಥವರನ್ನು ಕೈಹಿಡಿದು ಮುಂದೆ ಕರೆತನ್ನಿ. ಕೇಳಿಕೊಳ್ಳುತ್ತಾರೆ, ಅರ್ಥಮಾಡಿ ಕೊಳ್ಳುತ್ತಾರೆ ಅಷ್ಟೇ. ಇಂಥವರಿ ಗಾಗಿಯೇ ಕೇಂದ್ರ ಸರಕಾರದಲ್ಲಿ ಯೋಜನೆಗಳಿವೆ.
ತೊಂದರೆ ಯಾಕೆ ಬರುತ್ತದೆ?
ಮಣಿಕಾಂತ್ ಅವರು ಪರಿಚಿತರು. ಅವರಿಗೆ ಕಿವಿ ಸಮಸ್ಯೆ ಇದೆ. ಬೆಳೆಯುತ್ತಾ ಬಂದಾಗ ಶ್ರವಣ ಸಮಸ್ಯೆ ಆಗಿದೆ. ಇಂಥವರನ್ನು ಅರ್ಥ ಮಾಡಿಕೊಂಡು
ಮುಂಚೂಣಿಗೆ ತರುತ್ತೇವೆ. ಶಬ್ದ ಮಾಲಿನ್ಯವೂ ಕಿವಿ ಸಮಸ್ಯೆಗೆ ಕಾರಣ. ಹೆಲ್ತ್ ಚೆಕ್ ಅಪ್ ಜತೆ ಶ್ರವಣ ಪರೀಕ್ಷೆ ಮಾಡಿ ಚಿಕಿತ್ಸೆ ಕೊಡುತ್ತೇವೆ. ಕೆಲವರಿಗೆ ಕಿವಿ ಗುಂಯ್ ಅನ್ನಿಸುತ್ತೆ. ಕೆಲವರಿಗೆ ಒಳಗಿನಿಂದ ಗುಂಯ್ ಅಂತ ಕೇಳಿದರೆ ಇನ್ನು ಕೆಲವರಿಗೆ ಹೊರಗಿನಿಂದ ಗುಂಯ್ ಅಂತ ಕೇಳುತ್ತದೆ. ಅಂದರೆ ಬೇರೆಯವರ ಕಿವಿಯಿಂದ ಬಂದ ಶಬ್ದ ಇದಕ್ಕೆ ಟಿನೈಟಸ್ ಅಂತೇವೆ.
ಇನ್ನೊಂದು ತೊಂದರೆ ತಲೆ ಸುತ್ತು. ಒಳಕಿವಿಯಲ್ಲಿ ಎಂಡೀಲಿಪ್‌ನಲ್ಲಿ ಸಮಸ್ಯೆಯಾದರೆ ತಲೆ ಸುತ್ತು ಆಗುತ್ತದೆ. ಮಹಾಭಾರತದಲ್ಲಿ ಕೃಷ್ಣ, ಸುಭದ್ರೆಗೆ
ಹೇಳಿದ ಕಥೆ ಕೇಳಿಸಿಕೊಳ್ಳುತ್ತಿದ್ದ ಅಭಿಮನ್ಯು. ಉಚ್ಚಾರಣೆ ದೋಷ. ೫ ವರ್ಷ ಅದರೂ ಒತ್ತಕ್ಷರ ಹೇಳಲು ಬರುವುದಿಲ್ಲ. ಶ್ರವಣ ಸಮಸ್ಯೆ, ಬುದ್ಧಿ
ಮಾಂದ್ಯತೆ, ಸೀಳು ತುಟಿ ಕಾರಣ, ತೊದಲಿನ ತೊಂದರೆ ಬರುತ್ತದೆ. ಸ್ಟ್ಯಾಮರಿಂಗ್ ಅಂದರೆ ತೊದಲಿನ ತೊಂದರೆ. ತೊದಲುವಿಕೆ ಸಮಸ್ಯೆ ಬರುವುದು ಮಗು ಮಾತು ಕಲಿಯುವ ಸಮಯದಲ್ಲಿ. ಮಕ್ಕಳನ್ನು ಪ್ರೋತ್ಸಾಹಿಸಬೇಕು. ಒತ್ತಡ ಇರಬಾರದು, ಬಾಲ ಭಾಷೆ ಸಮಯದಲ್ಲಿ ಪ್ರೋತ್ಸಾಹಿಸಬೇಕು. ಮಗುವಿನ ಮಾನಸಿಕ ಸಮಸ್ಯೆಗೆ ಮುಖ್ಯ ಕಾರಣ ಕಂಪೇರಿಂಗ್.ಗಂಡು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಅಮೆರಿಕಾದ ಅಧ್ಯಕ್ಷರಿಗೂ ತೊದಲುವಿಕೆ ತೊಂದರೆ ಇದೆ, ಐಪಿಎಸ್ ಆಫೀಸರ್ ಅಣ್ಣಾಮಲೈ, ನಟ ಹೃತಿಕ್ ರೋಷನ್ ಕೂಡಾ ತೊದಲುವಿಕೆ ಸಮಸ್ಯೆ ಹೊಂದಿದ್ದಾರೆ.
ಧ್ವನಿ ತೊಂದರೆ
ಧ್ವನಿ ತಂತುವಿಗೆ ಸಮಸ್ಯೆ ಉಂಟಾಗುತ್ತದೆ. ಹುಟ್ಟಿದಾಗ ಒಂದು ಧ್ವನಿ, ಬೆಳೆಯುತ್ತಾ ಧ್ವನಿ ಮಾರ್ಪಾಟಾಗುತ್ತದೆ. ೧೨-೧೫ ವರ್ಷಕ್ಕೆ. ಕೀರಲು ಧ್ವನಿಯಲ್ಲಿ ಮಾತನಾಡುವುದು ಧ್ವನಿ ತೊಂದರೆ. ಗಾಳಿಯಂತೇ ಮಾತನಾಡುವುದು. ಧ್ವನಿ ಇದ್ದಕ್ಕಿದ್ದಂತೆ ನಿಂತು ಹೋಗುವುದು ಕೂಡಾ ಸಮಸ್ಯೆ. ಇದಕ್ಕೆ ಕಾರಣ ಮಾನಸಿಕ, ಒತ್ತಡ ಸಮಸ್ಯೆ. ಒತ್ತಡ ಬಿದ್ದಾಗ ಮೊದಲು ಕೈಕೊಡೋದು ಧ್ವನಿ. ನಮ್ಮ ಧ್ವನಿ ವ್ಯಕ್ತಿತ್ವದ ಕನ್ನಡಿ. ಯುವ ಜನಾಂಗದಲ್ಲಿ ಧ್ವನಿ ತಂತುವಿಗೆ ತೊಂದರೆ ಕೊಡುವುದು ಧೂಮಪಾನ. ಕ್ಯಾನ್ಸರ್ ಬಂದವರಿಗೂ ಈ ಧ್ವನಿ ತಂತುವನ್ನು ತೆಗೆದುಹಾಕುತ್ತಾರೆ. ಇದರಿಂದ ಮಾತು ನಿಂತುಹೋಗುತ್ತದೆ. ಎಳೆದುಕೊಂಡು ಮಾತನಾಡುವುದು ಮಾತಿನ ತೊಂದರೆ. ಆನ್‌ಲೈನ್ ಕ್ಲಾಸ್, ಆನ್ ಲೈನ್‌ನಲ್ಲಿ ಆಟ, ಪಾಠವಾಗುತ್ತಾ ಇದೆ. ಮಗುವಿಗೆ ನಿಸರ್ಗದ ಸಂಪರ್ಕ ಇರಬೇಕು. ಮಕ್ಕಳ ಸಹಜವಾದ ಬೆಳವಣಿಗೆಯನ್ನು ಕಸಿದುಕೊಳ್ಳುತ್ತಿದ್ದೇವೆ.
ಭಾಷೆಯಲ್ಲಿ ತೊಂದರೆ
ಒಂದು ವರ್ಷದಲ್ಲಿ ಮಾತನಾಡಬೇಕು. ಮಾತನಾಡಿಲ್ಲ ಅಂದರೆ ನಮ್ಮ ಹಿರಿಯರು ಹೀಗೆ ಇದ್ದರು ಅಂತ ಸುಮ್ಮನಿದ್ದು ಬಿಡುತ್ತೇವೆ. ಮಗು ೧ ವರ್ಷ
ಆದರೂ ಮಾತನಾಡಿಲ್ಲ ಎಂದರೆ, ಮಾತಿನಲ್ಲಿ ಬೆಳವಣಿಗೆಯಾಗಿಲ್ಲ, ಸಮಸ್ಯೆ ಇದೆ ಎಂದರ್ಥ. ಈಗ ಮಕ್ಕಳ ಮಾತು ಕೇಳುವುದನ್ನು ತಾಯಂದಿರು ಬಿಟ್ಟಿದ್ದಾರೆ. ಆನ್‌ಲೈನ್ ಯುಗದಲ್ಲಿ ಮಾತು ಎಂಬುದು ಯಾಂತ್ರಿಕವಾಗಿದೆ. ತಡವಾಗಿ ಮಾತನಾಡುವುದಕ್ಕೆ ಮನೆವಾತಾವರಣ ಮುಖ್ಯ ಕಾರಣ.
***
ಮಗುವಿಗೆ ತಂದೆ ತಾಯಿ ಆಪ್ತ ಸಮಯಕೊಡಿ, ಬೆಳವಣಿಗೆಗೆ ಸಹಕಾರ
ಮಗುವಿಗೆ ನಿಸರ್ಗದ ಸಂಪರ್ಕ ಇರಬೇಕು, ಆನ್‌ಲೈನ್‌ಗೆ ಸೀಮಿತ ಬೇಡ
ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ಬಿಡಬೇಕು, ಒತ್ತಡ ಹೇರಬೇಡಿ
ನಿರರ್ಗಳ ಮಾತಿಗೆ ಗಾಳಿ ಅಗತ್ಯ, ಗಾಳಿಯಿಂದ ಚಲನೆ ಉಂಟಾಗಿ ಶಬ್ದ
ಮಾತು, ಭಾಷೆ ಮಾನವನ ಜೀವನದ ಅವಿಭಾಜ್ಯ ಅಂಗ, ಅವಶ್ಯವೂ ಹೌದು
ಗರ್ಭಾವಸ್ಥೆಯಲ್ಲೇ ಮಗು ಮಾತು ಕೇಳಿಸಿಕೊಳ್ಳುತ್ತದೆ.
ಧ್ವನಿ ವ್ಯಕ್ತಿತ್ವದ ಕನ್ನಡಿ, ಒತ್ತಡ ಬಿದ್ದಾಗ ಮೊದಲು ಕೈಕೊಡೋದು ಧ್ವನಿ
ಯುವ ಜನಾಂಗದಲ್ಲಿ ಧ್ವನಿ ತಂತುವಿಗೆ ತೊಂದರೆ ಕೊಡುವುದು
ಧೂಮಪಾನ, ಕ್ಯಾನ್ಸರ್ ಬಂದವರಿಗೂ ಧ್ವನಿ ತಂತು ತೆಗೆಯುತ್ತಾರೆ.