Saturday, 23rd November 2024

ಟ್ರೆಂಡ್ ಆದ ʼನಾಥೂರಾಂ ಗೋಡ್ಸೆ ಝಿಂದಾಬಾದ್‌ʼ ಹ್ಯಾಶ್‌ ಟ್ಯಾಗ್‌

ನವದೆಹಲಿ: ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದ ಮೂಲಕ ಹೋರಾಡಿದ ಸಾಕಾರ ಮೂರ್ತಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದರೆ, ಸಾಮಾಜಿಕ ತಾಣದಲ್ಲಿ ʼನಾಥೂರಾಂ ಗೋಡ್ಸೆ ಝಿಂದಾಬಾದ್‌ʼ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

ʼಹಿಂದೂ ವಿರೋಧಿ ಗಾಂಧಿಯನ್ನು ಕೊಂದು ಗೋಡ್ಸೆ ಧರ್ಮವನ್ನು ಉಳಿಸಿದರುʼ ಎಂದು ಬಲಪಂಥೀಯರು ತಮ್ಮ ವಿಕೃತಿ ಯನ್ನು ಸಾಮಾಜಿಕ ತಾಣದಲ್ಲಿ ಮೆರೆದಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಮಹಿಳೆಯರ ಫೋಟೊದೊಂದಿಗೆ ಅಶ್ಲೀಲ ವಾಗಿ ಚಿತ್ರಿಸಿ ಕೆಲವರು ಪೋಸ್ಟ್‌ ಮಾಡಿದ್ದರೆ, ಇನ್ನಿತರರು ಗಾಂಧೀಜಿಯನ್ನು ವ್ಯಂಗ್ಯವಾಡಿ ದ್ದಾರೆ. ಬಿಜೆಪಿ ಆಡಳಿತಕ್ಕೆ ಬರುವವರೆಗೂ ನಮಗೆ ಲಾಲ್‌ ಬಹದ್ದೂರ್‌ ಶಾಸ್ತ್ರಿಯ ಜನ್ಮದಿನ ತಿಳಿದೇ ಇರಲಿಲ್ಲ. ಇಂದು ಗಾಂಧಿಯನ್ನು ಆಚರಿಸುವ ಬದಲು ಶಾಸ್ತ್ರಿಯ ಜನ್ಮದಿನ ಆಚರಿಸ ಬೇಕು” ಎಂದು ಟ್ವೀಟ್‌ ಮಾಡಿದ್ದಾರೆ.

ಗಾಂಧಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಾಥೂರಾಮ ಗೋಡ್ಸೆ ಹಾಗೂ ಪ್ರಕರಣದ ಆರೋಪಿಗಳಲ್ಲಿ ಹೆಸರಿಸಲ್ಪಟ್ಟಿದ್ದ ಸಾವರ್ಕರ್‌ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ಬಲಪಂಥೀಯ ಮನಸ್ಥಿತಿಯ ವ್ಯಕ್ತಿಗಳು ವಿಕೃತಿ ಮೆರೆಯುತ್ತಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ.