ಬೇಗ್, ಶಂಕರ್ ಹೊರೆತು ಎಲ್ಲ ಅನರ್ಹರಿಗೂ ಟಿಕೆಟ್ ಡಿಸಿಎಂಗೆ ಟಿಕೆಟ್ ನೀಡದೇ ಶಾಕ್ ನೀಡಿದ ವರಿಷ್ಠರು ಇಂದು ಕಾಂಗ್ರೆೆಸ್ ಅಭ್ಯರ್ಥಿಗಳ ಆಯ್ಕೆೆ ಅಂತಿಮ
ರಾಜ್ಯದಲ್ಲಿ ಉಪಚುನಾವಣಾ ಕಾವು ಪಡೆದುಕೊಳ್ಳುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆೆಸ್ಗೆ ಅಭ್ಯರ್ಥಿ ಆಯ್ಕೆೆಯ ತಲೆಬಿಸಿಯಾದರೆ, ಆಡಳಿತರೂಢ ಬಿಜೆಪಿಗೆ ಪಕ್ಷದ ನಾಯಕರನ್ನು ಸಂತೈಸುವುದು ಹಾಗೂ ಬಂಡಾಯವೇಳದ ರೀತಿ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ರೋಷನ್ ಬೇಗ್ ಹೊರೆತುಪಡಿಸಿ ಇನ್ನುಳಿದ ಎಲ್ಲ ಅನರ್ಹ ಶಾಸಕರು ಬಿಜೆಪಿಗೆ ಗುರುವಾರ ಅಧಿಕೃತವಾಗಿ ಸೇರ್ಪಡೆಗೊಂಡ ಕೆಲ ಗಂಟೆಯಲ್ಲಿಯೇ 14 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಘೋಷಿಸಿತ್ತು. ಆದರೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಗೆ ಟಿಕೆಟ್ ನೀಡದೇ ಪಕ್ಷದ ವರಿಷ್ಠರು ಶಾಕ್ ನೀಡಿದ್ದಾರೆ.
ಇನ್ನು ಲಕ್ಷ್ಮಣ ಸವದಿ ಅವರ ಟಿಕೆಟ್ ಮಿಸ್ ಆಗಿರುವುದು ಒಂದೆಡೆಯಾದರೆ, ರಾಣೆಬೆನ್ನೂರು ಅನರ್ಹ ಶಾಸಕ ಶಂಕರ್ ಬಿಜೆಪಿ ಪ್ರಾಾಥಮಿಕ ಸದಸ್ಯತ್ವ ಪಡೆಯುವ ತನಕ ಉಪಚುನಾವಣೆಗೆ ಟಿಕೆಟ್ ಫಿಕ್ಸ್ ಎಂದೇ ಹೇಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಟಿಕೆಟ್ ಕೈತಪ್ಪಿಿದ್ದು, ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ಫೈನಲ್ ಆಗಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ. ಕುರುಬ ಸಮುದಾಯದ ಪ್ರಾಾಬಲ್ಯವಿರುವ ರಾಣೆಬೆನ್ನೂರಿನಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರ ಮೇಲೆ ಈಶ್ವರಪ್ಪ ಹೇರಿದ್ದರು. ಈಶ್ವರಪ್ಪ ಒತ್ತಾಾಯಕ್ಕೆ ಮಣಿದು ಪಕ್ಷದ ವರಿಷ್ಠರು ಕಾಂತೇಶ್ಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ.
ಶಂಕರ್ಗೆ ಎಂಎಲ್ಸಿ ಸ್ಥಾಾನದ ಭರವಸೆ
ರಾಣೆಬೆನ್ನೂರಿನಿಂದ ಕಾಂತೇಶ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ, ಶಂಕರ್ ಅವರಿಗೆ ವಿಧಾನಪರಿಷತ್ ಸ್ಥಾಾನ ನೀಡುವ ಪ್ರಸ್ತಾಾಪವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಬಳಿಕ ಸಚಿವ ಸ್ಥಾಾನ ನೀಡುವ ಭರವಸೆಯನ್ನು ನೀಡಿದ್ದಾಾರೆ. ಆರಂಭದಲ್ಲಿ ಈ ಆಫರ್ ಒಪ್ಪಿಕೊಳ್ಳದ ಶಂಕರ್ ಕೊನೆ ಕ್ಷಣದಲ್ಲಿ ಅನಿವಾರ್ಯವಾಗಿ ಒಪ್ಪಿಿದ್ದಾಾರೆ ಎಂದು ತಿಳಿದುಬಂದಿದೆ.
ತುಮಕೂರಿನಲ್ಲಿ ಈ ಬಗ್ಗೆೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು, ಶಂಕರ್ ಅವರಿಗೆ ಅನ್ಯಾಾಯವಾಗಲು ಬಿಡುವುದಿಲ್ಲ. ಅವರನ್ನು ವಿಧಾನಪರಿಷತ್ ಸದಸ್ಯರನ್ನಾಾಗಿಸಿ, ಬಳಿಕ ಸಚಿವ ಸ್ಥಾಾನ ನೀಡುವುದಾಗಿ ಘೋಷಿಸಿದ್ದಾಾರೆ.
ಬಿಜೆಪಿ ಬಂಡಾಯ ತಣಿಸುವುದೇ ಮುಂದಿನ ಸವಾಲು
ರಾಣೆಬೆನ್ನೂರು ಹೊರೆತುಪಡಿಸಿ, 14 ಕ್ಷೇತ್ರದಲ್ಲಿ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿಗೆ ಇದೀಗ ಬಹುತೇಕ ಕ್ಷೇತ್ರದಲ್ಲಿ ಎದ್ದಿರುವ ಬಂಡಾಯವನ್ನು ತಣಿಸುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಹೊಸಕೋಟೆಯಿಂದ ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಕಾಗವಾಡದ ರಾಜುಕಾಗೆ ಕಾಂಗ್ರೆೆಸ್ಗೆ ಹೋಗಿದ್ದಾಾರೆ. ಇದರೊಂದಿಗೆ ಮಹಾಲಕ್ಷ್ಮೀ ಲೇಔಟ್ನಿಂದ ಗೋಪಾಲಯ್ಯ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ, ಮಾಜಿ ಮೇಯರ್ ಹರೀಶ್ ಅವರ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಿಗೆ ಹಾಕಿ ದಾಂದಲೆ ಎಬ್ಬಿಿಸಿದ್ದಾಾರೆ.
ಕಟ್ಟಾ ಟಿಕೆಟ್ ತಪ್ಪಿಸಲು ಸರವಣಗೆ ಟಿಕೆಟ್?
ಅನರ್ಹ ಶಾಸಕರ ಪೈಕಿ ಬೆಂಗಳೂರು ಭಾಗದಲ್ಲಿ ಭಾರಿ ಪ್ರಭಾವ ಹೊಂದಿರುವ ಹಾಗೂ ಅಲ್ಪಸಂಖ್ಯಾಾತ ಸಮುದಾಯದ ನಾಯಕನಾಗಿ ಗುರುತಿಸಿಕೊಂಡಿರುವ ರೋಷನ್ ಬೇಗ್ ಅವರಿಗೆ ಟಿಕೆಟ್ ತಪ್ಪಿಿದೆ ಎನ್ನುವುದಕ್ಕಿಿಂತ, ಬೇಗ್ ಅವರೇ ಈ ತಂತ್ರ ರೂಪಿಸಿದ್ದಾಾರೆ ಎನ್ನಲಾಗಿದೆ.
ರೋಷನ್ ಬೇಗ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಕಟ್ಟಾಾ ಸುಬ್ರಮಣ್ಯ ನಾಯ್ಡು ಅವರು ಹೇಳಿದ್ದರು. ಇದರೊಂದಿಗೆ ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲುವು ಕಷ್ಟ ಸಾಧ್ಯ ಎನ್ನುವುದು ಖಚಿತವಾಗುತ್ತಿಿದ್ದಂತೆ, ತಮ್ಮ ಆಪ್ತ ಸರವಣಗೆ ಟಿಕೆಟ್ ನೀಡುವಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹೇರಿದ್ದಾಾರೆ. ಬಳಿಕ ತಾವು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆೆಸ್ನಲ್ಲಿ ಮುಗಿಯದ ಆಯ್ಕೆೆ ಕಸರತ್ತು
ತಿಂಗಳ ಮೊದಲೇ ಕೈಪಡೆಯ ಮೊದಲ ಪಟ್ಟಿಿ ಬಿಡುಗಡೆಗೊಳಿಸಿದ್ದ ಕಾಂಗ್ರೆೆಸ್ ನಾಯಕರು, ಬಾಕಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಾಟಕ್ಕೆೆ ಭಾರಿ ಕಸರತ್ತು ನಡೆಸುತ್ತಿಿರುವುದು ಸ್ಪಷ್ಟವಾಗಿದೆ. ಬಾಕಿಯಿರುವ ಏಳು ಕ್ಷೇತ್ರಗಳಲ್ಲಿ ಪ್ರಮುಖವಾಗಿ ಕಾಂಗ್ರೆೆಸಿಗೆ ಅಭ್ಯರ್ಥಿ ಹಾಗೂ ಉಸ್ತುವಾರಿ ನಾಯಕರು ಸಿಗುತ್ತಿಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಆದ್ದರಿಂದ ಶುಕ್ರವಾರ ಮಧ್ಯಾಾಹ್ನದ ವೇಳೆಗೆ ಟಿಕೆಟ್ ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ತಡವಾಗಲು ಪ್ರಮುಖವಾಗಿ, ಬಿಜೆಪಿಯಿಂದ ಟಿಕೆಟ್ ವಂಚಿತರು ಬಂಡಾಯ ಅಥವಾ ಪಕ್ಷಾಾಂತರ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಗೆಲ್ಲುವ ಅಭ್ಯರ್ಥಿಗಳು ಈ ಬಂಡಾಯ ಪ್ರಕ್ರಿಿಯೆಯಲ್ಲಿ ಸಿಕ್ಕರೆ ಅವರನ್ನು ನಿಲ್ಲಿಸುವ ಲೆಕ್ಕಾಾಚಾರದಲ್ಲಿ ಕಾಂಗ್ರೆೆಸ್ ಇದೆ ಎಂದು ತಿಳಿದುಬಂದಿದೆ.
ಜೆಡಿಎಸ್ನಲ್ಲಿ 12 ಕ್ಷೇತ್ರಕ್ಕೆೆ ಅಭ್ಯರ್ಥಿ ಫೈನಲ್
ರಾಷ್ಟ್ರೀಯ ಪಕ್ಷಗಳು ಉಪಚುನಾವಣೆಗೆ ಸಜ್ಜಾಾದರೆ, ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡಿದೆ. ಇದರೊಂದಿಗೆ ಒಟ್ಟು 11 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಗೈರುಗೊಳಿಸಿದೆ. ಅಥಣಿ, ಕಾಗವಾಡ, ಮಹಾಲಕ್ಷ್ಮೀ ಲೇಔಟ್ ಹಾಗೂ ಗೋಕಾಕ ಹೊರತುಪಡಿಸಿ, ಇನ್ನುಳಿದ 11 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದೆ.
ಉಪಚುನಾವಣಾ ಹುರಿಯಾಳುಗಳು
ಕ್ಷೇತ್ರ ಬಿಜೆಪಿ ಜೆಡಿಎಸ್
ಅಥಣಿ ಮಹೇಶ್ ಕುಮಟಳ್ಳಿಿ
ಕಾಗವಾಡ ಶ್ರೀಮಂತಗೌಡ ಪಾಟೀಲ್ —
ಗೋಕಾಕ ರಮೇಶ್ ಜಾರಕಿಹೊಳಿ —
ಯಲ್ಲಾಾಪುರ ಶಿವರಾಂ ಹೆಬ್ಬಾಾರ್ ಚೈತ್ರಾಾ ಗೌಡ
ಹಿರೇಕೆರೂರು ಬಿ.ಸಿ.ಪಾಟೀಲ್ ಉಜನೆಪ್ಪ ಜಟ್ಟೆೆಪ್ಪ ಕೋಡಿಹಳ್ಳಿಿ
ವಿಜಯನಗರ ಆನಂದ್ ಸಿಂಗ್ ಎನ್.ಎಂ.ನಬಿ
ಚಿಕ್ಕಬಳ್ಳಾಾಪುರ ಡಿ.ಸುಧಾಕರ್ ಕೆ.ಪಿ.ಬಚ್ಚೇಗೌಡ
ಮಹಾಲಕ್ಷ್ಮಿಿ ಲೇಔಟ್ ಗೋಪಾಲಯ್ಯ —-
ಹೊಸಕೋಟೆ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡಗೆ ಬೆಂಬಲ
ಶಿವಾಜಿನಗರ ಸರವಣ ತನ್ವೀರ್ ಅಹಮದ್ ವುಲ್ಲಾಾ
ಕೆ.ಆರ್.ಪುರ ಬೈರತಿ ಬಸವರಾಜ್ ಸಿ.ಕೃಷ್ಣಮೂರ್ತಿ
ಕೆ.ಆರ್.ಪೇಟೆ ನಾರಾಯಣ ಗೌಡ ದೇವರಾಜ್
ಹುಣಸೂರು ಎಚ್.ವಿಶ್ವನಾಥ ಸೋಮಶೇಖರ್
ರಾಣೆಬೆನ್ನೂರು ಕಾಂತೇಶ್ (ಸಂಭಾವ್ಯ) —-