ಬೆಂಗಳೂರು: ಕರ್ನಾಟಕದ ಬೆಂಗಳೂರಿನಿಂದ ೯-೧೬ ವರ್ಷಗಳ ವಯಸ್ಸಿನ ಆರು ವಿದ್ಯಾರ್ಥಿಗಳು `ವೈಟ್‌ಹ್ಯಾಟ್ ಜೂನಿಯರ್ ಸ್ವಸ್ಥ್ ಭಾರತದ ಟೆಕ್ ಚಾಂಪ್ಸ್’ ಟಾಪ್ ೫೦ ರಾಷ್ಟ್ರೀಯ ವಿಜೇತರ ಭಾಗವಾಗಿ ಆಯ್ಕೆಯಾಗಿದ್ದು ಇದನ್ನು `ಡೆಟಾಲ್ ಬನೇಗಾ ಸ್ವಸ್ಥ್ ಇಂಡಿಯಾ’ ಕಾರ್ಯಕ್ರಮದ ಭಾಗವಾಗಿ ಪ್ರಾರಂಭಿಸಲಾಗಿದ್ದು ಈ ಕಾರ್ಯಕ್ರಮವನ್ನು ಮುಂಚೂಣಿಯ ಜಾಗತಿಕ ಗ್ರಾಹಕ ಆರೋಗ್ಯ ಮತ್ತು ನೈರ್ಮಲ್ಯ ಕಂಪನಿ ರೆಕಿಟ್ಟ್ ಪ್ರಾರಂಭಿಸಿದೆ.
ರೆಕಿಟ್ ಮತ್ತು ವೈಟ್‌ಹ್ಯಾಟ್ ಜೂನಿಯರ್ ಈ ವರ್ಷದ ಪ್ರಾರಂಭದಲ್ಲಿ ಯುವ ತಲೆಮಾರನ್ನು ನಮ್ಮ ದೇಶದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸ್ಫೂರ್ತಿ ತುಂಬಲು ಸಹಯೋಗ ಹೊಂದಿದವು. ಈ ಆರು ಮಂದಿ ವಿಜೇತ ರಲ್ಲಿ ತಾನ್ಯಾ ಪ್ರಸಾದ್(೧೨ ವರ್ಷಗಳು), ಶಿವಾನಿ ದೋಗಿಪರ್ತಿ(೧೫ ವರ್ಷಗಳು), ಇರಾ ಸಕ್ಸೇನಾ(೯ ವರ್ಷಗಳು), ಧ್ರುವ್ ಪ್ರೀತ್ ಸಿಂಗ್(೧೩ ವರ್ಷಗಳು), ಅಕ್ಷಯ್ ಶ್ರೀನಿವಾಸ್(೧೬ ವರ್ಷಗಳು) ಮತ್ತು ಪ್ರಾಂಜಾ ಜೈತ್ರಿ(೧೦ ವರ್ಷಗಳು) ಭಾರತವನ್ನು ಆರೋಗ್ಯಕರ ಮತ್ತು ನಿರ್ಮಲವಾಗಿಸುವ ಉದ್ದೇಶದಿಂದ ಉತ್ಸಾಹಕರ ಆ್ಯಪ್‌ಗಳನ್ನು ಸೃಷ್ಟಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ೬-೧೮ ವರ್ಷಗಳ ವಯಸ್ಸಿನ ಭಾರತದ ೭೦೦+ ನಗರಗಳು ಮತ್ತು ಪಟ್ಟಣಗಳಿಂದ ೧೦,೭೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದ್ದನ್ನು ಕಂಡಿದೆ. ಟಾಪ್ ೫೦ ಮಂದಿ ವಿಜೇತರು ತ್ಯಾಜ್ಯ ನಿರ್ವಹಣೆ, ಕೋವಿಡ್-೧೯ ಆರೈಕೆ ಮತ್ತು ಲಸಿಕೆ ನೀಡಿಕೆ, ಸಮುದಾಯ ಮತ್ತು ವೈಯಕ್ತಿಕ ಆರೋಗ್ಯ ಹಾಗೂ ನೈರ್ಮಲ್ಯ, ವೈಯಕ್ತಿಕ ಆರೋಗ್ಯ ಮತ್ತು ನೈರ್ಮಲ್ಯ, ಮಾನಸಿಕ ಆರೋಗ್ಯ ಮತ್ತು ಮುಟ್ಟು ಮುಂತಾದ ಕ್ಷೇತ್ರಗಳಲ್ಲಿ ಹೊಸ ಐಡಿಯಾಗಳನ್ನು ತಂದಿದ್ದಾರೆ. ಈ ೫೦ ವಿಜೇತರಿಗೆ ರೆಕಿಟ್ಟ್ ತಲಾ ೫೦,೦೦೦ ರೂ. ಶಿಷ್ಯವೇತನ ನೀಡಿ ಪುರಸ್ಕರಿಸಿ ದ್ದಲ್ಲದೆ ಸೂಪರ್‌ಸ್ಟಾರ್ ಮತ್ತು ಡೆಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಅಭಿಯಾನದ ರಾಯಭಾರಿ ಅಮಿತಾಭ್ ಬಚ್ಚನ್ ಅವರೊಂದಿಗೆ ಡೆಟಾಲ್ ಮತ್ತು ಎನ್‌ಡಿಟಿವಿಯ ಸ್ವಸ್ಥ್ ಭಾರತ್ ಸಂಪನ್ನ್ ಭಾರತ್ ಟೆಲಿಥಾನ್‌ನಲ್ಲಿ ಸಕ್ರಿಯ ವಾಗಿ ಭಾಗವಹಿಸುವ ಅವಕಾಶ ನೀಡಿದೆ.
ಎಲ್ಲ ಮಕ್ಕಳೊಂದಿಗೆ ಮಾತನಾಡಿದ ಖ್ಯಾತ ನಟ ಅಮಿತಾಭ್ ಬಚ್ಚನ್, “ಮಗುವಿನ ಮನಸ್ಸು ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಒಂದು ಅದ್ಭುತವಾದ ಅಂಶವಿದೆ. ಪ್ರೌಢರು ಅಡೆತಡೆಗಳನ್ನು ಕಾಣುವಲ್ಲಿ ಮಕ್ಕಳು ಅವಕಾಶಗಳನ್ನು ಕಾಣುತ್ತಾರೆ. ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿ ಸಿದ ಯುವ ವಿಜೇತರಿಂದ ಅದ್ಭುತವಾದ ಆ್ಯಪ್ ಐಡಿಯಾಗಳನ್ನು ನೋಡಿ ಭಾರತದ ಭವಿಷ್ಯಕ್ಕೆ ನನ್ನ ಹೃದಯ ಭರವಸೆಯಿಂದ ತುಂಬಿದೆ. ಇಂದಿನ ಈ ಯುವ ಕ್ರಿಯೇಟರ್‌ಗಳು ನನಗೆ ಉನ್ನತ ಅನುಭವ ತಂದಿದ್ದಾರೆ ಮತ್ತು ನಾನು ಅವರಿಗೆ ಅವರ ಭವಿಷ್ಯಕ್ಕೆ ಶುಭ ಕೋರುತ್ತೇನೆ” ಎಂದರು.
“ಈ ಮಕ್ಕಳು ಇಂದು ಅವರನ್ನು ಅಭಿವ್ಯಕ್ತಿಸಲು ತಂತ್ರಜ್ಞಾನವನ್ನು ಅಳವಡಿಸುತ್ತಿದ್ದಾರೆ, ಅವರ ಆಲೋ ಚನೆಗಳಿಗೆ ರೂಪ ನೀಡುತ್ತಿದ್ದಾರೆ ಮತ್ತು ನೈಜ ಪರಿಹಾರಗಳನ್ನು ಸೃಷ್ಟಿಸುತ್ತಿದ್ದಾರೆ. ವೈಟ್‌ಹ್ಯಾಟ್ ಜೂನಿ ಯರ್ ಸ್ವಸ್ಥ್ ಭಾರತ್ ಟೆಕ್ ಚಾಂಪ್ಸ್ ಕಾರ್ಯಕ್ರಮವು ಈ ಅದ್ಭುತ ಚಳವಳಿಯನ್ನು ಮರು ದೃಢೀಕರಿಸುತ್ತದೆ. ಆರೋಗ್ಯದ ಸಮಸ್ಯೆಗಳ ಅತ್ಯಂತ ಪ್ರಮುಖ ಸಮಸ್ಯೆಗಳ ಕುರಿತು ಮಕ್ಕಳು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿ ದ್ದಾರೆ.
ಕೆಲವರು ಜನರನ್ನು ಸ್ವಯಂಸೇವೆಗೆ ಮುನ್ನಡೆಸಲು ಕ್ರಿಯಾಶೀಲರಾಗಲು ಅಥವಾ ಔಷಧಗಳನ್ನು ನೀಡಲು ಬಯಸಿದರೆ ಇತರರು ಅವರಿಗೆ ಅವರ ವೈಯಕ್ತಿಕ ಆರೋಗ್ಯ ಸುಧಾರಿಸಲು ಸೆಲ್ಫ್-ಹೆಲ್ಪ್ ಸಾಧನಗಳನ್ನು ಒದಗಿಸಲು ಸನ್ನದ್ಧರಾಗಿಸುತ್ತಿದ್ದಾರೆ. ಕೆಲವರು ಸಮುದಾಯದ ಬೆಂಬಲ ಕ್ರೋಢೀ ಕರಿಸುವಲ್ಲಿ ಅಥವಾ ನಿರ್ದಿಷ್ಟ ಸಮಸ್ಯೆಗಳ ಕುರಿತು ಅರಿವನ್ನು ಮೂಡಿಸುವುದನ್ನು ಬಯಸುತ್ತಿದ್ದಾರೆ” ಎಂದು ವೈಟ್‌ಹ್ಯಾಟ್ ಜೂನಿಯರ್‌ನ ಸಿಇಒ ತೃಪ್ತಿ ಮುಕ್ಕರ್ ಹೇಳಿದರು. “ಈ ಉಜ್ವಲ ಮನಸ್ಸುಗಳಿಗೆ ಬೆಳಕನ್ನು ತೋರಿಸಲು ನಾವು ಉತ್ಸುಕರಾಗಿದ್ದೇವೆ. ವೈಟ್‌ಹ್ಯಾಟ್ ಜೂನಿಯರ್‌ನಲ್ಲಿ ಮಕ್ಕಳನ್ನು ಕ್ರಿಯೇಟರ್ ಗಳನ್ನಾಗಿ ನೋಡುವುದನ್ನು ಮಾತ್ರವೇ ನಾವು ಮಾಡುತ್ತಿರುವುದು” ಎಂದರು.
ರೆಕಿಟ್ಟ್ ಸೌಥ್ ಏಷ್ಯಾದ ಹಿರಿಯ ಉಪಾಧ್ಯಕ್ಷ ಗೌರವ್ ಜೈನ್, “ಹಲವು ವರ್ಷಗಳಿಂದ ಡೆಟಾಲ್ ಸ್ವಸ್ಥ್ ಇಂಡಿಯಾ ಕಾರ್ಯಕ್ರಮವು ಭಾರತವನ್ನು ಆರೋಗ್ಯಕರ ಮತ್ತು ನೈರ್ಮಲ್ಯಯುತವಾಗಿಸಲು ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜನರನ್ನು ಮುನ್ನಡೆಸಲು ಆದ್ಯತೆ ನೀಡಿದೆ. ಡಿಜಿಟಲ್ ಯುಗದಲ್ಲಿ ವೈಟ್‌ಹ್ಯಾಟ್ ಜೂನಿಯರ್ ಸ್ವಸ್ಥ್ ಭಾರತ್ ಟೆಕ್ ಚಾಂಪ್ಸ್ ಕಾರ್ಯಕ್ರಮವು ನಮಗೆ ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ನಭಾಯಿಸುವ ವಿದಾನವನ್ನು ಬದಲಾಯಿಸಲು ಯುವ ಮನಸ್ಸುಗಳನ್ನು ಸಕ್ರಿಯ ಮತ್ತು ಸ್ಫೂರ್ತಿ ತುಂಬುವುದರಲ್ಲಿ ನೆರವಾಗಿದೆ. ಈ ಅದ್ಭುತ ತಂತ್ರಜ್ಞಾನದ ಸಂಯೋಜನೆ ಮತ್ತು ಸೃಜನಶೀಲ ಆಲೋಚನೆಯು ಅದ್ಭುತ ಆಲೋಚನೆಗಳನ್ನು ನೀಡಿದೆ. ಈ ಬಗೆಯ ಸೃಜನಶೀಲ ಆಲೋಚನೆಯೇ ನಮಗೆ ದೀರ್ಘಾವಧಿಯಲ್ಲಿ ಸ್ವಸ್ಥ್ ಭಾರತ್ ಸೃಷ್ಟಿಸುವಲ್ಲಿ ನೆರವಾಗಿದೆ” ಎಂದರು.
ವೈಯಕ್ತಿಕ ಆರೋಗ್ಯ ಮತ್ತು ನೈರ್ಮಲ್ಯದಿಂದ ಪರಿಸರ ಸ್ವಚ್ಛವಾಗಿರಿಸುವವರೆಗೆ ಈ ಆರು ಬೆಂಗಳೂರಿನ ವಿಜೇತರು ಸೃಷ್ಟಿಸಿರುವ ಈ ಆ್ಯಪ್‌ಗಳು ತಂತ್ರಜ್ಞಾನ ಮತ್ತು ಸೃಜನಶೀಲ ಆಲೋಚನೆಯನ್ನು ಸಂಯೋಜಿಸಿ ಸಮಾಜ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನೆರವಾಗು ತ್ತವೆ.