ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 16,862 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದೆ.
ಇದರೊಂದಿಗೆ ದೇಶದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,40,37,592ಕ್ಕೆ ತಲುಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,03,678ಕ್ಕೆ ಇಳಿಕೆಯಾಗಿದ್ದು, ಇದು ಕಳೆದ 216 ದಿನಗಳಲ್ಲಿಯೇ ಅತೀ ಕನಿಷ್ಠ ಸಂಖ್ಯೆಯಾಗಿದೆ.
ಕಳೆದ 24ಗಂಟೆಗಳಲ್ಲಿ 379 ಮಂದಿ ಮೃತಪಟ್ಟಿದ್ದು, ದೇಶಾದ್ಯಂತ ಕೋವಿಡ್ ನಿಂದ ಮೃತರ ಒಟ್ಟು ಸಂಖ್ಯೆ 4,51,814ಕ್ಕೆ ಏರಿಕೆಯಾಗಿದೆ. ಕಳೆದ 21 ದಿನಗಳಿಂದ 30,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದೆ.