Saturday, 23rd November 2024

ಉತ್ತರಾಖಂಡದಲ್ಲಿ ಭಾರಿ ಮಳೆ ಮುನ್ಸೂಚನೆ: ಶಾಲಾ ಕಾಲೇಜುಗಳಿಗೆ ರಜೆ

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸೋಮವಾರ ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪರ್ವತಾರೋಹಣ, ಶಿಬಿರ ಚಟುವಟಿಕೆಗಳನ್ನು ಮಂಗಳ ವಾರದವರೆಗೆ ನಿಷೇಧಿಸಲಾಗಿದೆ.

ರಾಜ್ಯದ 13 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ಇಂದು ಭಾರಿ ಮಳೆಯಾಗುವ ಮುನ್ಸೂಚನೆಯಿಂದಾಗಿ ‘ರೆಡ್‌ ಅಲರ್ಟ್‌’ ಘೋಷಣೆಯಾಗಿದೆ ಹಾಗೂ ಮಂಗಳ ವಾರಕ್ಕೆ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಲಿದ್ದು, ಹವಾಮಾನ ಇಲಾಖೆ ‘ಆರೆಂಜ್‌ ಅಲರ್ಟ್‌’ ಘೋಷಿಸಿದೆ.

ಅ.19ರ ವರೆಗೆ ಚಮೋಲಿ ಜಿಲ್ಲೆಯ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಗೋಪೇಶ್ವರದ ಸಂಪೂರ್ಣ ಅರಣ್ಯ ಪ್ರದೇಶದಲ್ಲಿ ಚಾರಣ, ಪರ್ವಾತಾ ರೋಹಣದಂಥ ಚಟುವಟಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಡೆಹ್ರಾಡೂನ್‌ನಲ್ಲಿ ಇದೇ 18, 19ರಂದು ನಡೆಯಬೇಕಿದ್ದ ಜಿಲ್ಲಾಮಟ್ಟದ ಖೇಲ್ ಮಹಾಕುಂಭವನ್ನು ಅ.24 ಮತ್ತು 25ಕ್ಕೆ ಮುಂದೂಡಲಾಗಿದೆ.