ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ನವರಾತ್ರಿ ಬಂತೆಂದರೆ ಸಾಕು ನಾಡಹಬ್ಬ ಮೈಸೂರು ದಸರಾ, ಮಂಗಳೂರಿನ ಕುದ್ರೋಳಿ ದಸರಾ ರಾಜ್ಯದಲ್ಲಿ ವೈಭವೋಪೇತವಾಗಿ ನಡೆಯುವ ಬಹು ದೊಡ್ಡ ಜಾತ್ರೆಯೆಂದೇ ಹೇಳಬಹುದು.
ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸುವ ಈ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಯೆಂದು ಆಚರಿಸುವುದುಂಟು. ಈ ನವರಾತ್ರಿಯ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಪಿಲಿ ನಲಿಕೆ ( ಹುಲಿವೇಷ ಕುಣಿತ ) ಪ್ರಮುಖ ಪಾತ್ರವಹಿಸುತ್ತದೆ. ಹುಲಿ, ಸಿಂಹ, ಕರಡಿ ವೇಷ ಧರಿಸಿ ದೇವಿಗೆ ಹರಕೆ ಹೊತ್ತು ವ್ರತಾಚರಣೆ ಮಾಡಿ ಮನೆಮನೆಗೆ ತೆರಳಿ ತಾಸೆ, ಚೆಂಡೆ, ಹಲಗೆ, ತಮಟೆಯ ಗತ್ತಿಗೆ ತಕ್ಕಂತೆ ಹುಲಿ ವೇಷ ದಾರಿ ಕುಣಿದರೆ ವೇಷಧಾರಿಗೆ ಆ ಮನೆಮಂದಿ ಹಣ ನೀಡುವುದು ವಾಡಿಕೆ.
ಸಾಧಾರಣ ಒಂದೊಂದು ತಂಡದಲ್ಲಿ ೭-೮ ಮಂದಿ ಹೊಂದಿರುವ ಈ ಗುಂಪುಗಳ ಪೈಕಿ ಕೆಲ ತಂಡಗಳು ಹೊಟ್ಟೆ ಪಾಡಿಗಾಗಿ, ಕೆಲವು ಮನೋರಂಜನೆಗಾಗಿ, ಇನ್ನೂ ಕೆಲವು ಹೊತ್ತ ಹರಿಕೆಯನ್ನು ತೀರಿಸಲು ಈ ಸಂಸ್ಕೃತಿಗೆ ಮುನ್ನುಡಿ ಬರೆದ ವೇಷಧಾರಿಗಳೂ ಇzರೆ. ಹುಲಿ ವೇಷ ಹಾಕುವುದು ಕರ್ನಾಟಕ ತುಂಬೆ ಕಂಡು ಬರುವ ಜಾನಪದ ಕಲೆಯಾದರೂ ಇವು ಗ್ರಾಮೀಣ ಮತ್ತು ಹಳ್ಳಿಗಾಡಿನಲ್ಲಿ ಹೆಚ್ಚು ಪ್ರಸಿದ್ಧಿ ಈ ಹಿಂದೆ ಪಡೆದಿತ್ತು. ಕಳೆದ ಐದು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಯಲ್ಲಿ ಗ್ರಾಮ,ನಗರ ಸೇರಿದಂತೆ ಗಲ್ಲಿಗಲ್ಲಿಗಳಲ್ಲಿ ಟ್ರೆಂಡ್ ಆಗಿ ದೇಶವ್ಯಾಪಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ವಿವಿಧ ವೇದಿಕೆಗಳಲ್ಲಿ, ಟಿವಿ ರಿಯಾಲಿಟಿ ಶೋಗಳಲ್ಲಿ ದೇಶ-ವಿದೇಶಗಳಲ್ಲಿ ಹುಲಿವೇಷದ ತಾಸೆಯ ಪೆಟ್ಟು ಮಾರ್ದನಿಸುತ್ತಿದೆ.
ಕರಾವಳಿಯಾದ್ಯಂತ ವಿವಿಧ ಸಂಘ-ಸಂಸ್ಥೆಗಳು, -ಂq ಕ್ಲಬ್‌ಗಳು, ಯುವಕ ಮಂಡಲಗಳು ದೊಡ್ಡ ದೊಡ್ಡ ಮಟ್ಟದಲ್ಲಿ ಹುಲಿ ವೇಷಗಳನ್ನು, ಹುಲಿ ವೇಷ ಸ್ಪರ್ಧೆಗಳನ್ನು ಆಯೋಜಿಸಿ ಪ್ರಶಸ್ತಿ ನೀಡುವ ಮೂಲಕ ಕರಾವಳಿಯ ಜನಪದ ಕಲೆಗಳಲ್ಲಿ ಒಂದಾದ ಹುಲಿವೇಷ ಹೆಚ್ಚು ಪ್ರಸಿದ್ಧಿ ಪಡೆಯಲು ಕಾರಣೀ ಭೂತರಾಗಿದ್ದಾರೆ. ಶ್ರದ್ಧಾ ಭಕ್ತಿ, ಧಾರ್ಮಿಕ ವಿಽ ವಿಧಾನಗಳೊಂದಿಗೆ ಊದು ಪೂಜೆ ನಡೆಸುವ ಮೂಲಕ ಸರಾಗವಾಗಿ ನೆರವೇರುವ ಈ ಹುಲಿ ವೇಷಧಾರಿಗಳಿಗೆ ಬಣ್ಣ ಬಳಿಯುವುದು, ಆ ವೇಷಧಾರಿಗಳು ಒಂಬತ್ತು ದಿನಗಳ ಕಾಲ ವೇಷದ ಯಥಾಸ್ಥಿತಿಯಲ್ಲಿ ಮುಂದುವರೆಯುವುದು ಕೂಡ ಸವಾಲಿನ ಕೆಲಸವೇ ಸರಿ. ರಾಷ್ಟ್ರೀಯ ಪ್ರಾಣಿ ಹುಲಿಗೆ ಜಾತಿ, ಧರ್ಮ, ವರ್ಣ, ಭೇದವಿಲ್ಲ. ಅಂತೆಯೇ ಹುಲಿ ವೇಷವನ್ನು ಕರಾವಳಿಯ ಸರ್ವಧರ್ಮದ ಜನರು ಮೆಚ್ಚಿ, ಪ್ರೀತಿಸಿ, ಇಷ್ಟ ಪಡುತ್ತಾರೆ.
ಶಾಂತಿ, ಸಾಮರಸ್ಯ, ಐಕ್ಯತೆಯ ಸಹಬಾಳ್ವೆಯ ಪ್ರತೀಕವಾಗಿರುವ ಪಿಲಿನಲಿಕೆಯ ವೇಷಧಾರಿಗಳು ದೇವಸ್ಥಾನ, ಮಸೀದಿ,ಚರ್ಚ್ ಗಳಲ್ಲಿ ಪ್ರಾರ್ಥಿಸಿ ಹುಲಿ ಕುಣಿತಕ್ಕೆ ಮುನ್ನುಡಿ ಬರೆದ ಹಲವಾರು ನಿದರ್ಶನಗಳಿವೆ. ಜತೆಗೆ ವಿವಿಧ ಧರ್ಮದ ಪ್ರಮುಖರು ಪ್ರಾಯೋಜಕತ್ವವನ್ನು ನೀಡುತ್ತಾರೆ. ಪುಟ್ಟ ಮಗುವಿ ನಿಂದ ಹಿಡಿದು ವಯೋವೃದ್ಧರವರೆಗೆ ಹುಲಿವೇಷದ ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕುವಷ್ಟರ ಮಟ್ಟಿಗೆ ಕರಾವಳಿಯಲ್ಲಿ ವರ್ಷ ಕಳೆದಂತೆ ಪಿಲಿನಲಿಕೆ ಮನೆ ಮಾತಾಗುತ್ತಿದೆ. ನವರಾತ್ರಿ ಹೊರತುಪಡಿಸಿದರೆ ಹುಲಿವೇಷ ಕುಣಿತ ಅಷ್ಟಮಿ ಹಬ್ಬದ ಸಂದರ್ಭದಲ್ಲಿ ಕಾಣಬಹುದಾಗಿದೆ. ತಾಳ್ಮೆ ಮತ್ತು ಪರಿಶ್ರಮದ ಪ್ರತೀಕವಾದ ಹುಲಿವೇಷ ಕರಾವಳಿಯ ಮದುವೆ, ಗೃಹ ಪ್ರವೇಶ ಅಥವಾ ಯಾವುದೇ ಶುಭ ಸಮಾರಂಭಗಳಲ್ಲಿ ತಾಸೆಯ ಪೆಟ್ಟು ಸಹಜವಾಗಿಯೇ ಮೊಳಗುವುದು ವಾಡಿಕೆಯಾಗಿದೆ.
ಇಂತಹ ಒಂದು ಶ್ರದ್ಧಾಭಕ್ತಿಯ ಕಲೆ ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಮನರಂಜನೆಯನ್ನು ಒದಗಿಸಲಿ ಮತ್ತು ಜಾತಿ, ಧರ್ಮ, ವರ್ಣ, ಅಸ್ಪೃಶ್ಯತೆ, ಮೇಲು-ಕೀಳು ಮನೋಭಾವನೆಯನ್ನು ಈ ಕಲೆಯು ತೊಡೆದುಹಾಕಿ ಸಮಾಜದಲ್ಲಿ ಶಾಂತಿ, ಸಾಮರಸ್ಯಕ್ಕೆ ಅಡಿಪಾಯ ಹಾಕಲಿ ಎಂಬುದು ಹಾರೈಕೆ.