ಮುಂಬೈ: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೆ ಬುಧವಾರ ಕೂಡ ಜಾಮೀನು ಸಿಕ್ಕಿಲ್ಲ.
ಮಾದಕ ದ್ರವ್ಯ ವಿರೋಧಿ ಸಂಸ್ಥೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ನಾಳೆ ಉತ್ತರಿಸಲಿದ್ದಾರೆ.
ಆರೋಪಿಗಳ ಪರವಾಗಿ ವಕೀಲರಾದ ಅಮಿತ್ ದೇಸಾಯಿ, ಮುಕುಲ್ ರೋಹಟಗಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ವಾದ ಮಂಡಿಸಿದರು. ಆರೋಪಿ ಅರ್ಬಾಜ್ ಮರ್ಚೆಂಟ್ ಪರವಾಗಿ ವಾದ ಮಂಡಿಸಿದ ಶ್ರೀ ದೇಸಾಯಿ, ಮೊದಲ ರಿಮಾಂಡ್ ಸಮಯ ದಲ್ಲಿ ಇದೊಂದು ಪಿತೂರಿ ಪ್ರಕರಣ ಎಂದು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯ ಲಾಗಿದೆ. ಬಂಧಿತ ವ್ಯಕ್ತಿಗಳಿಗೆ ಅವರ ಬಂಧನದ ಕಾರಣವನ್ನು ತಿಳಿಸಬೇಕು ಎಂದು ಹೇಳಿದರು.
ಆರ್ಯನ್ ಖಾನ್ ಅಕ್ಟೋಬರ್ 8 ರಿಂದ ಜೈಲಿನಲ್ಲಿದ್ದಾರೆ. ಅಕ್ಟೋಬರ್ 2 ರಂದು ಎನ್ಸಿಬಿ ಯಿಂದ ಕ್ರೂಸ್ ಶಿಪ್ ಪಾರ್ಟಿಯ ಮೇಲೆ ಡ್ರಗ್ ದಾಳಿಯ ನಂತರ ಅವರನ್ನು ಬಂಧಿಸಲಾ ಯಿತು.
ಆರ್ಯನ್ ಗೆ ಎರಡು ಬಾರಿ ಜಾಮೀನು ನಿರಾಕರಿಸಲಾಯಿತು. ಆರ್ಯನ್ ಮತ್ತು ಇತರ 18 ಮಂದಿಯೊಂದಿಗೆ ಅರ್ಬಾಜ್ ಮರ್ಚೆಂಟ್ ಅನ್ನು ಸಹ ಬಂಧಿಸಲಾಗಿದೆ.