ಅ. 24ರಂದು ಪಾಕಿಸ್ತಾನ ವಿರುದ್ಧ ಇವೇ ಕಾರಣದಿಂದ ಭಾರೀ ಸೋಲನುಭವಿಸಿದ್ದ ಭಾರತ, ಅದೇ ಪಿಚ್ನಲ್ಲಿ ನ್ಯೂಜಿಲೆಂಡ್ ಎದುರು ಹೀನಾಯ ಸೋಲುಂಡಿತು. ಟಿ20 ವಿಶ್ವಕಪ್ನ ಎರಡನೇ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಭಾರತ ಕೇವಲ 110 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ 33 ಎಸೆತ ಬಾರಿ ಇರುವಂತೆ ಭರ್ಜರಿ ಜಯಭೇರಿ ಭಾರಿಸಿತು. ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಸೋತಿದ್ದ ನ್ಯೂಜಿಲೆಂಡ್ಗೆ ಇದು ಟೂರ್ನಿಯಲ್ಲಿ ಮೊದಲ ಗೆಲುವು.
ಸೂರ್ಯಕುಮಾರ್ ಅವರಿಗೆ ಗಾಯದ ಸಮಸ್ಯೆಯಾದ್ದರಿಂದ ಇಶಾನ್ ಕಿಶನ್ ಅವರನ್ನ ಆಡಿಸ ಲಾಯಿತು. ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ಗೆ ಅವಕಾಶ ಕೊಡಲಾಯಿತು. ಈ ಎರಡೂ ಬದಲಾವಣೆಗಳಿಂದ ಭಾರತಕ್ಕೆ ವರ್ಕೌಟ್ ಆಗಲಿಲ್ಲ. ಇಶಾನ್ ಕಿಶನ್ ಕೇವಲ 4 ರನ್ಗೆ ಔಟ್ ಆದರು. ಶಾರ್ದೂಲ್ ಠಾಕೂರ್ ಹಾಕಿದ 9 ಎಸೆತದಲ್ಲಿ 17 ರನ್ನಿತ್ತು ದುಬಾರಿ ಎನಿಸಿದರು.ಇನ್ನಿಂಗ್ಸ್ ಓಪನ್ಗೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಕಳುಹಿಸಿವ ಪ್ರಯೋಗ ವಿಫಲವಾಯಿತು. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಒಂದಷ್ಟು ರನ್ ಗಳಿಸಿದ ಕಾರಣ ಭಾರತದ ಸ್ಕೋರ್ ನೂರರ ಗಡಿ ದಾಟಲು ಸಾಧ್ಯವಾಯಿತು. 6ನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಗಳಿಸಿದ 24 ರನ್ಗಳು ಇನ್ನಿಂಗ್ಸ್ನ ಗರಿಷ್ಠ ಜೊತೆಯಾಟ ಎನಿಸಿತು. ಭಾರತ ಒಡ್ಡಿದ 111 ರನ್ಗಳ ಸುಲಭ ಗುರಿಯನ್ನ ನ್ಯೂಜಿಲೆಂಡ್ ತೀರಾ ಸುಲಭವಾಗಿ ಮುಟ್ಟಿತು. ಸತತ ಎರಡು ಪಂದ್ಯ ಸೋತಿರುವ ಭಾರತ ಈಗ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನ ಗೆಲ್ಲುವುದು ಅನಿವಾರ್ಯವಾಗಿದೆ.
ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಸತತ ಮೂರು ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ನಮೀಬಿಯಾ ತಲಾ 2 ಅಂಕಗಳೊಂದಿಗೆ 3 ಮತ್ತು 4ನೇ ಸ್ಥಾನದಲ್ಲಿವೆ. ಕೊನೆಯ ಎರಡು ಸ್ಥಾನಗಳನ್ನ ಭಾರತ ಮತ್ತು ಸ್ಕಾಟ್ಲೆಂಡ್ ಆಕ್ರಮಿಸಿಕೊಂಡಿವೆ. ಪಾಕಿಸ್ತಾನಕ್ಕೆ ಒಂದು ಸೆಮಿಫೈನಲ್ ಸ್ಥಾನ ಖಚಿತವೆಂದಿಟ್ಟು ಕೊಂಡರೆ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ಪೈಪೋಟಿ ಏರ್ಪಡಬಹುದು.
ಸ್ಕೋರು ವಿವರ:
ಭಾರತ 20 ಓವರ್ 110/7