Saturday, 23rd November 2024

ನವೆಂಬರ್ ಬಳಿಕ ಉಚಿತ ಪಡಿತರ ಸ್ಥಗಿತ

ನವದೆಹಲಿ : ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ನವೆಂಬರ್ ಬಳಿಕ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ.

ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಸ್ಪಷ್ಟನೆ ನೀಡಿದ್ದು, ನವೆಂಬರ್ ಬಳಿಕ ಈ ಯೋಜನೆಯಡಿ ಉಚಿತ ಪಡಿತರ ವಿತರಣೆ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದರು.

ದೇಶದ ಆರ್ಥಿಕತೆ ಮತ್ತೆ ಹಳಿಗೆ ಮರಳುತ್ತಿದೆ. ಆದ್ದರಿಂದ ಉಚಿತ ಪಡಿತರ ಒದಗಿಸುವ ಯೋಜನೆಯನ್ನ ಮುಂದಕ್ಕೆ ಕೊಂಡೊಯ್ಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಪಾಂಡೆ ಸ್ಪಷ್ಟಪಡಿಸಿದರು.

ಅಂದ ಹಾಗೆ, ಕೇಂದ್ರ ಸರ್ಕಾರ ಕಳೆದ ವರ್ಷದಿಂದ ಈ ಯೋಜನೆಯಡಿ ಬಡ ಕುಟುಂಬ ಗಳಿಗೆ ಉಚಿತ ಪಡಿತರ ಒದಗಿಸು ತ್ತಿತ್ತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಯನ್ನ ಕಳೆದ ವರ್ಷ ಮಾರ್ಚ್ʼನಲ್ಲಿ ಘೋಷಿಸಲಾಯಿತು. ಆರಂಭದಲ್ಲಿ ಈ ಯೋಜನೆ ಯನ್ನ ಏಪ್ರಿಲ್-ಜೂನ್ 2020ರ ಅವಧಿಗೆ ಪ್ರಾರಂಭಿಸಲಾಯಿತಾದರೂ ನವೆಂಬರ್ 30, 2021 ಕ್ಕೆ ವಿಸ್ತರಿಸಲಾಯಿತು.

ಆರ್ಥಿಕತೆಯು ಮತ್ತೆ ಹಳಿಗೆ ಮರಳುತ್ತಿರುವುದರಿಂದ ಮತ್ತು ನಮ್ಮ ಒಎಂಎಸ್‌ಎಸ್ ಸಹ ಈ ವರ್ಷ ಉತ್ತಮವಾಗಿದೆ. ಆದ್ದರಿಂದ, ಪಿಎಂಜಿಕೆವೈ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ’ ಎಂದರು.