ಮುಂಬೈ: ಬಾಂಬೆ ಷೇರುಪೇಟೆಯಲ್ಲಿನ ಏರಿಳಿಕೆಯ ಪರಿಣಾಮ ಮಂಗಳವಾರ ಸಂವೇದಿ ಸೂಚ್ಯಂಕ 112.16 ಅಂಕಗಳ ಕುಸಿತ ದೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.
ಸಂವೇದಿ ಸೂಚ್ಯಂಕ 112.16 ಅಂಕಗಳಷ್ಟು ಇಳಿಕೆಯಾಗಿದ್ದು, 60, 433.45 ಅಂಕ ಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ ಗೊಂಡಿದೆ. ಎನ್ ಎಸ್ ಇ ನಿಫ್ಟಿ 24.20 ಅಂಕಗಳಷ್ಟು ಇಳಿಕೆಯಾಗಿದ್ದು, 18,044.30 ಅಂಕಗಳ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಕುಸಿತದಿಂದ ಮಹೀಂದ್ರ ಆಯಂಡ್ ಮಹೀಂದ್ರ, ಟಾಟಾ ಮೋಟಾರ್ಸ್, ಹೀರೋ ಮೋಟಾರ್ಸ್ , ಒಎನ್ ಜಿಸಿ ಮತ್ತು ಎಸ್ ಬಿಐ ಷೇರುಗಳು ಲಾಭಗಳಿಸಿದೆ.