Saturday, 23rd November 2024

ಬಡತನದಿಂದ ಮೇಲೆದ್ದುಬಂದ ಕಲ್ಪನಾ ಸರೋಜ್

*ವಿಜಯಕುಮಾರ್ ಎಸ್. ಅಂಟೀನ

ಬಾಲ್ಯ ವಿವಾಹಕ್ಕೊೊಳಗಾಗಿ, ಪತಿಯಿಂದ ಹಿಂಸೆಗೆ ಒಳಗಾಗಿ, ಆತ್ಮಹತ್ಯೆೆಗೆ ಮುಂದಾಗಿದ್ದ ಈ ಮಹಿಳೆ, ಉದ್ಯಮಪತಿಯಾಗಿ ಬೆಳೆದದ್ದು ಒಂದು ಸಾಹಸಗಾಥೆ.

ಧೃಢ ಸಂಕಲ್ಪವಿದ್ದರೆ ಬಂಜರು ಭೂಮಿಯಲ್ಲೂ ಬಂಗಾರ ಬೆಳೆಯ ಬಹುದು ಎಂಬುದನ್ನು ಸಾಧಿಸಿ ತೋರಿಸಿದರು ಕಲ್ಪನಾ ಸರೋಜ್. ದಲಿತ ಬಾಲೆ ಉದ್ಯಮಿಯಾದ ಸಾಹಸ ಕಥೆ. ಗಂಡನಿಂದ ಚಿತ್ರಹಿಂಸೆ ಅನುಭವಿಸಿ, ಸಮಾಜದ ಅವಮಾನಗಳನ್ನು ಎದುರಿಸಿ ಇತಿಹಾಸ ಸೃಷ್ಟಿಿಸಿದ ಛಲಗಾತಿ.

ಕಲ್ಪನಾ ಅವರು ಇಂದು 700 ಕೋಟಿ ಬೆಲೆ ಬಾಳುವ ಕಂಪನಿಗಳ ಒಡತಿ. ‘ಕಮಾನಿ ಟ್ಯೂಬ್ಸ್’ ನ ಅಧ್ಯಕ್ಷೆ ಮತ್ತು ಪದ್ಮಶ್ರೀ ಪ್ರಶಸ್ತಿಿ ಪುರಸ್ಕೃತೆ! ಇದಲ್ಲದೆ, ಕಲ್ಪನಾ ಸರೋಜ್ ಅವರು ಕಮಾನಿ ಸ್ಟೀಲ್ಸ್, ಕೆಎಸ್ ಕ್ರಿಿಯೇಷನ್‌ಸ್‌, ಕಲ್ಪನಾ ಬಿಲ್ಡರ್ ಡೆವಲಪರ್ಸ್, ಕಲ್ಪನಾ ಅಸೋಸಿಯೇಟ್‌ನಂತಹ ಕಂಪನಿಗಳ ಮಾಲೀಕರಾಗಿದ್ದಾರೆ. ಈ ಕಂಪನಿಗಳ ದೈನಂದಿನ ವಹಿವಾಟು ಕೋಟಿಗಳಲ್ಲಿದೆ. ಕಲ್ಪನಾ ಅವರು ಸಾಮಾಜಿಕ ಸೇವೆ ಮತ್ತು ಉದ್ಯಮಶೀಲತೆಗಾಗಿ ಭಾರತ ಮತ್ತು ವಿದೇಶಗಳಲ್ಲಿ ಡಜನ್ಗಟ್ಟಲೆ ಪ್ರಶಸ್ತಿಿಗಳನ್ನು ಪಡೆದಿದ್ದಾರೆ. ಒಟ್ಟಾಾರೆಯಾಗಿ, ಒಮ್ಮೆೆ ದಿನಕ್ಕೆೆ ಎರಡು ರೂಪಾಯಿ ಗಳಿಸುತ್ತಿಿದ್ದ ಕಲ್ಪನಾ ಇಂದು 700 ಕೋಟಿ ಸಾಮ್ರಾಾಜ್ಯವನ್ನು ಆಳುತ್ತಿಿದ್ದಾರೆ.

12ನೆಯ ವಯಸ್ಸಿಿಗೆ ಮದುವೆ
ಕಲ್ಪನಾ ಅವರು ಬರ ಪೀಡಿತ ಮಹಾರಾಷ್ಟ್ರದ ವಿದರ್ಭದಲ್ಲಿ 1961ರಲ್ಲಿ ಜನಿಸಿದರು. ತಂದೆ ಪೊಲೀಸ್ ಆಗಿದ್ದರೂ, ಬಡತನದ ಜೀವನ. ತಮ್ಮ 12 ನೇ ವಯಸ್ಸಿಿನಲ್ಲಿ, ಕಲ್ಪನಾ ತಮಗಿಂತ 10 ವರ್ಷ ಹಿರಿಯ ವ್ಯಕ್ತಿಿಯನ್ನು ಮದುವೆಯಾದರು. ಕಲ್ಪನಾ ವಿದರ್ಭದಿಂದ ಮುಂಬೈನ ಕೊಳೆಗೇರಿಗೆ ಬಂದರು. ಅವರ ವಿದ್ಯಾಾಭ್ಯಾಾಸಕ್ಕೆೆ ತಿಲಾಂಜಲಿ ಇಡಬೇಕಾಯಿತು. ಮನೆಯಲ್ಲಿನ ಹಿಂಸೆ ತಾಳಲಾರದೆ ಕಲ್ಪನಾ ಬದಕುವ ಉತ್ಸಾಾಹವನ್ನು ಕಳೆದುಕೊಂಡರು. ಮೂರು ಬಾಟಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆೆಗೆ ಯತ್ನಿಿಸಿದರು. ಆದರೆ ಸಂಬಂಧಿ ಮಹಿಳೆಯೊಬ್ಬಳು ಅವರನ್ನು ರಕ್ಷಿಸಿದಳು. ‘ನಾನು ಯಾಕೆ ಸಾಯುತ್ತಿಿದ್ದೇನೆ ಎಂದು ಯೋಚಿಸಿದೆ, ನಾನು ನನಗಾಗಿ ಏಕೆ ಬದುಕಬಾರದು, ದೊಡ್ಡದನ್ನು ಏಕೆ ಸಾಧಿಸಬಾರದು’ಎಂದುಕೊಂಡು ಧೈರ್ಯದಿಂದ ಮುನ್ನುಗ್ಗಿಿದರು.

ಮುಂಬೈಯಲ್ಲಿ ಕಲ್ಪನಾ ಅವರಿಗೆ ಗಾರ್ಮೆಂಟ್ ಕಂಪನಿಯಲ್ಲಿ ಕೆಲಸ ಸಿಕ್ಕಿಿತು. ಒಂದು ದಿನಕ್ಕೆೆ 2 ರೂಪಾಯಿ ಸಂಬಳ ಪಡೆದರು. ಅದು ಸಾಲದೇ ಕಲ್ಪನಾ ವೈಯಕ್ತಿಿಕವಾಗಿ ಹೊಲಿಗೆ ಕೆಲಸ ಪ್ರಾಾರಂಭಿಸಿದರು. ಕಲ್ಪನಾ ಟೈಲರಿಂಗ್ ಮತ್ತು ಬೊಟಿಕ್ ಕೆಲಸಗಳಲ್ಲಿ ಸಾಕಷ್ಟು ಅವಕಾಶವಿದೆ ಎಂದು ಅರಿತುಕೊಂಡರು. ಅವರು ಸರ್ಕಾರ ದಲಿತರಿಗೆ ನೀಡುತ್ತಿಿದ್ದ 50,000 ರೂಪಾಯಿ ಸಾಲವನ್ನು ತೆಗೆದುಕೊಂಡು, ಹೊಲಿಗೆ ಯಂತ್ರ ಮತ್ತು ಇತರ ಕೆಲವು ವಸ್ತುಗಳನ್ನು ಖರೀದಿಸಿ ಅಂಗಡಿಯೊಂದನ್ನು ತೆರೆದರು. ಹಗಲು ರಾತ್ರಿಿ ಕೆಲಸ ಮಾಡಿ, ಕಲ್ಪನಾ ತನ್ನ ಕುಟುಂಬ ಸದಸ್ಯರಿಗೂ ಹಣವನ್ನು ಕಳುಹಿಸಲು ಪ್ರಾಾರಂಭಿಸಿದರು.ಉಳಿತಾಯದೊಂದಿಗೆ, ಕಲ್ಪನಾ ಪೀಠೋಪಕರಣಗಳ ಅಂಗಡಿಯೊಂದನ್ನು ಸಹ ಸ್ಥಾಾಪಿಸಿದರು, ಅದು ಅವರಿಗೆ ಉತ್ತಮ ಪ್ರತಿಕ್ರಿಿಯೆ ನೀಡಿತು. ಇದರ ಜೊತೆಗೆ, ಅವರು ಬ್ಯೂಟಿ ಪಾರ್‌ಲರ್ ಅನ್ನು ಸಹ ತೆರೆದರು.

ಕಮಾನಿ ಟ್ಯೂಬ್‌ಸ್‌ ಕಮಾಲ್
17 ವರ್ಷಗಳಿಂದ ಮುಚ್ಚಲ್ಪಟ್ಟಿಿರುವ ‘ಕಮಾನಿ ಟ್ಯೂಬ್ಸ್’ ನ ಕಾರ್ಮಿಕರು ಕಲ್ಪನಾ ಅವರನ್ನು ಭೇಟಿಯಾದರು ಮತ್ತು ಕಂಪನಿಯ ಪುನರಾರಂಭಕ್ಕೆೆ ಸಹಾಯ ಮಾಡುವಂತೆ ಮನವಿ ಮಾಡಿದರು. ಹಲವಾರು ವಿವಾದಗಳಿಂದಾಗಿ ಈ ಕಂಪನಿಯನ್ನು 1988 ರಿಂದ ಮುಚ್ಚಲಾಗಿತ್ತು. ಕಲ್ಪನಾ, ಕಾರ್ಮಿಕರ ಜೊತೆಗೆ, ಕಠಿಣ ಪರಿಶ್ರಮ ಮತ್ತು ಉತ್ಸಾಾಹದ ಬಲದಿಂದ 17 ವರ್ಷಗಳಿಂದ ಮುಚ್ಚಲ್ಪಟ್ಟ ಕಂಪನಿಯನ್ನು ಪುನರುಜ್ಜೀವನಗೊಳಿಸಿದರು. ಕಲ್ಪನಾ ಅವರಿಗೆ ಟ್ಯೂಬ್ ತಯಾರಿಸುವ ಬಗ್ಗೆೆ ಸಾಕಷ್ಟು ತಿಳಿದಿರಲಿಲ್ಲ ಮತ್ತು ನಿರ್ವಹಣೆಯು ಅವರಿಗೆ ತಿಳಿದಿರಲಿಲ್ಲ, ಆದರೆ ಕಾರ್ಮಿಕರನ್ನು ಬೆಂಬಲಿಸುವ ಮತ್ತು ಕಲಿಯುವ ಹಂಬಲವು ದಿವಾಳಿಯಾದ ಕಂಪನಿಯನ್ನು ಯಶಸ್ವಿಿಗೊಳಿಸಿತು. ಸಿನಿಮಾ ಕ್ಷೇತ್ರದಲ್ಲೂ ಅವರು ಕೈ ಆಡಿಸಿದ್ದಾಾರೆ.

ಬಡತನದಲ್ಲಿ ಜನಿಸಿ ಮತ್ತು ಅಮಾನವೀಯ ನಿಂದನೆಗೆ ಒಳಗಾದ ಕಲ್ಪನ , ಅಸಾಧ್ಯವಾದ ವಿಲಕ್ಷಣಗಳನ್ನು ಎದುರಿಸಿ ದೇಶದ ಅತ್ಯಂತ ಬೇಡಿಕೆಯ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಇಂದು ವೇಗವಾಗಿ ಬೆಳೆಯುತ್ತಿಿರುವ 112 ಮಿಲಿಯನ್ ಡಾಲರ್ ಸಾಮ್ರಾಾಜ್ಯದ ಚುಕ್ಕಾಾಣಿ ಹಿಡಿದಿದ್ದಾರೆ.ದೊಡ್ಡ ದೊಡ್ಡ ವಿಶ್ವವಿದ್ಯಾಾಲಯದ ಪದವಿಗಳು ಮತ್ತು ಅಲಂಕಾರಿಕ ಎಂಬಿಎಗಳು ಉದ್ಯಮಿಗಳಾಗಿಸುವುದಿಲ್ಲ ಎಂಬುದು ಅವರ ಯಶಸ್ಸಿಿನಿಂದ ಅರ್ಥಮಾಡಿಕೊಳ್ಳಬೇಕಾದ ಏಕೈಕ ಪಾಠವಾಗಿದೆ. ಹಠ, ಪರಿಶ್ರಮ ಮತ್ತು ಆತ್ಮ ವಿಶ್ವಾಾಸ ಅವರ ದೈತ್ಯ ಯಶಸ್ಸಿಿಗೆ ಸಾಕ್ಷಿ ಯಾಗಿದೆ. ವ್ಯಾಾಪಾರ ಮತ್ತು ಕೈಗಾರಿಕಾ ಕ್ಷೇತ್ರದ ಅವರ ಸಾಧನೆಗಾಗಿ, 2013ರಲ್ಲಿ ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಿಯನ್ನು ಕೊಡಮಾಡಿದೆ.