Saturday, 14th December 2024

ಎಐಎಂಐಎಂ ಸಲ್ಲ, ಎಲ್ಲ ಪಕ್ಷಗಳಿಗೆ ಮೈತ್ರಿಗೆ ಸ್ವಾಗತ: ಅಖಿಲೇಶ್

ಲಖನೌ: ಬಿಜೆಪಿಯನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸೋಲಿಸಬೇಕೆಂದಿ ರುವ ಎಲ್ಲ ಪಕ್ಷಗಳಿಗೆ ಮೈತ್ರಿಗೆ ಸ್ವಾಗತವಿದೆ. ಆದರೆ ಎಐಎಂಐಎಂ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.

ಯಾದವ್ ಅವರ ನಿಲುವಿನಿಂದ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಭಾಗಿದಾರಿ ಸಂಕಲ್ಪ್ ಮೋರ್ಚಾ ಮೈತ್ರಿಕೂಟ ದಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.

ರಾಜ್‌ಭರ್ ಅವರು ಅಕ್ಟೋಬರ್ 27ರಂದು ಎಸ್‌ಪಿ ಜತೆ ಮೈತ್ರಿಯ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಎಐಎಂಐಎಂ ಪಕ್ಷವು ಭಾಗಿದಾರಿ ಸಂಕಲ್ಪ್ ಮೋರ್ಚಾದ ಪ್ರಮುಖ ಅಂಗವಾಗಿತ್ತು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಮೋರ್ಚಾ ಹಾಗೂ ರಾಜ್‌ಭರ್ ಜತೆಗಿನ ಬಾಂಧವ್ಯದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

ಏಕಾಂಗಿಯಾಗಿ ಚುನಾವಣೆ ಎದುರಿಸಲೂ ಸಿದ್ಧರಿದ್ದೇವೆ’ ಎಂದು ಎಐಎಂಐಎಂ ನಾಯಕರು ಹೇಳಿದ್ದಾರೆ.