* ಅಜಯ್
ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಸ್ಮರಣೆಯಲ್ಲಿ ರೂಪುಗೊಂಡಿರುವ ವಿಯೆಲ್ಲೆೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾಾನದ ವತಿಯಿಂದ ನೀಡಲಾಗುತ್ತಿಿರುವ 2020 ನೇ ಸಾಲಿನ ‘ನಿರ್ಮಾಣ್-ಪುರಂದರ ಸುವರ್ಣ ಸಂಗೀತರತ್ನ’ ಪ್ರಶಸ್ತಿಿಗೆ ಉಸ್ತಾಾದ್ ಫಯಾಝ್ ಖಾನ್ರವರು ಭಾಜನರಾಗಿರುತ್ತಾಾರೆ. ಪ್ರಶಸ್ತಿಿಯು ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯವಿರುವ ಪುರಂದರದಾಸರ ಪ್ರತಿಕೃತಿಯನ್ನೊೊಳಗೊಂಡ ಸ್ವರ್ಣ ಪದಕದಿಂದ ಕೂಡಿದ ಸ್ವರ್ಣ ಹಾರ, ಅಭಿನಂದನಾ ಪತ್ರ ಮತ್ತು ರೂ. 1,00,001/- (ರೂಪಾಯಿ ಒಂದು ಲಕ್ಷದ ಒಂದು ಮಾತ್ರ) ನಗದನ್ನು ಒಳಗೊಂಡಿರುತ್ತದೆ.
ಐದು ಶತಮಾನದ ಹಿಂದೆಯೇ ನವಕೋಟಿ ನಾರಾಯಣ ಎಂದೇ ಪ್ರಸಿದ್ಧರಾಗಿದ್ದ, ಚಿನ್ನ, ಬೆಳ್ಳಿಿ ವರ್ತಕರಾಗಿದ್ದ ಪೂರ್ವಾಶ್ರಮದಲ್ಲಿ ಶ್ರೀನಿವಾಸ ನಾಯಕರೆಂದು ನಾಮಾಂಕಿತರಾಗಿದ್ದ ಪುರಂದರದಾಸರು, ಜ್ಞಾಾನ -ಭಕ್ತಿಿ -ವೈರಾಗ್ಯಗಳಿಂದಾಗಿ ‘ದಾಸರೆಂದರೆ ಪುರಂದರದಾಸರಯ್ಯ’ ಎನಿಸಿಕೊಂಡಿದ್ದಾಾರೆ. ಭಾರತದ ಸಂಸ್ಕೃತ ಸಾಹಿತ್ಯ ಪರಂಪರೆಗೆ ವಾಲ್ಮೀಕಿ ಹೇಗೋ ಹಾಗೆಯೇ ಕರ್ನಾಟಕ ಸಂಗೀತ ಕ್ಷೇತ್ರಕ್ಕೆೆ ಪುರಂದರ ದಾಸರು ಎಂದ ಮದ್ರಾಾಸ್ ಮ್ಯೂಸಿಕ್ ಅಕಾಡೆಮಿ, ‘ಸಹಸ್ರ ವರ್ಷಗಳಿಗೊಮ್ಮೆೆ ಇಂತಹ ಮಹಾನ್ ವ್ಯಕ್ತಿಿ ಒಂದು ದೇಶದಲ್ಲಿ ಹುಟ್ಟಿಿ ಬರುತ್ತಾಾರೆ’ ಎಂದು ಫೋಷಿಸಿತ್ತು. ಇಂತಹ ಮಹಾನ್ ವ್ಯಕ್ತಿಿಯನ್ನು ಗೌರವಿಸಲು ಹಂಪೆಯಲ್ಲಿ ಸಾಮ್ರಾಾಟ್ ಕೃಷ್ಣದೇವರಾಯರು ಪುರಂದರ ಮಂಟಪವನ್ನು ಕಟ್ಟಿಿಸಿದ್ದನ್ನು ಇತಿಹಾಸ ಗೌರವದಿಂದ ಸ್ಮರಿಸುತ್ತಿಿದೆ.
ವಿಜಯನಗರದ ಚಕ್ರವರ್ತಿಗಳು, ವ್ಯಾಾಸರಾಜರು, ವಾದಿರಾಜ ಸ್ವಾಾಮಿಗಳು, ಅನೇಕ ಜಗದ್ಗುರುಗಳು, ಸಂತರು, ಅವಧೂತರು, ಶ್ರೇಷ್ಠ ಸಂಗೀತ ವಿದ್ವಾಾಂಸರು, ಸಂಗೀತ ಸಾಮ್ರಾಾಟರು, ವಾಗ್ಗೇಯಕಾರರು, ನಾಡಿನ ಸಂಸ್ಕೃತಿ ಪುರುಷರು ಮುಂತಾದವರೆಲ್ಲ ಕಳೆದ 500 ವರ್ಷಗಳ ಕಾಲ ಆ ಮಂಟಪಕ್ಕೆೆ ತೆರಳಿ ದಾಸರಿಗೆ ತಮ್ಮ ಗೌರವವನ್ನು ಸಮರ್ಪಿಸಿದ್ದಾಾರೆ. ಹಂಪೆಯಲ್ಲಿರುವ ಈ ಪುರಂದರ ಮಂಟಪ, ಕರ್ನಾಟಕದ ಸಾಹಿತ್ಯ, ಸಂಗೀತ, ಹಾಗೂ ಅಧ್ಯಾಾತ್ಮದ ದೃಷ್ಟಿಿಯಿಂದ ಅಪೂರ್ವವಾದ ಕ್ಷೇತ್ರ.
ಪುರಂದರ ದಾಸರು ಕನ್ನಡನಾಡಿನಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಪ್ರಭಾವ ಬೀರಿದವರು. ಅವರ ಕೀರ್ತನೆಗಳು, ಸಾಹಿತ್ಯ, ಸಂಗೀತ ಒಂದು ರೀತಿಯಿಂದ ಪ್ರತಿಯೊಬ್ಬರ ಜೀವನಕ್ಕೂ ಅತ್ಯಂತ ಸ್ಫೂರ್ತಿದಾಯಕ.
ಅವರ ನೆನಪಿನಲ್ಲಿ, ಅವರನ್ನು ಗೌರವದಿಂದ ಸ್ಮರಿಸುತ್ತಾಾ ನಿರ್ಮಾಣ್ ಶೆಲ್ಟರ್ಸ್ ರವರು ಬೆಂಗಳೂರಿನ ಬನ್ನೇರುಘಟ್ಟದ ಬಳಿ ರು. ಎರಡು ಕೋಟಿಗೂ ಮೀರಿದ ವೆಚ್ಚದಲ್ಲಿ ನಿರ್ಮಿಸಿರುವ ‘ಪುರಂದರ ಮಂಟಪ’ ತನ್ನದೇ ರೀತಿಯಲ್ಲಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಸೇವೆಯನ್ನು ಮಾಡಿಕೊಂಡು ಬಂದಿದೆ. ಪುರಂದರದಾಸರ ಹೆಸರನ್ನು, ಕೀರ್ತಿಯನ್ನು ಅಜರಾಮರ ಮಾಡಬೇಕೆಂಬ ಕನಸು ಈ ರೀತಿಯಾಗಿ ಸಾಕಾರಗೊಂಡಿದೆ. ಸುಸಜ್ಜಿಿತ ರಂಗವೇದಿಕೆ, ಸಭಾಂಗಣ, ಆಧುನಿಕ ಧ್ವನಿ ವ್ಯವಸ್ಥೆೆ, ಗಾಳಿಬೆಳಕು ನಿಸರ್ಗ ಬಡಾವಣೆಯ ಕೇಂದ್ರ ಸ್ಥಾಾನದಲ್ಲಿ ಸ್ಥಾಾಪಿತವಾಗಿರುವುದರಿಂದಾಗಿ ಪುರಂದರ ಮಂಟಪ ಬೆಂಗಳೂರಿನ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾಗಿ ರೂಪುಗೊಂಡಿದೆ.
ಅನೇಕ ಹಿರಿಯ ಹರಿದಾಸರ ಹಾಗೂ ವಾಗ್ಗೇಯಕಾರರ ಪೂರ್ಣಪ್ರಮಾಣದ ತೈಲ ಚಿತ್ರಗಳು ಇಡೀ ಸಭಾಂಗಣಕ್ಕೇ ವಿಶೇಷ ಶೋಭೆಯನ್ನು ತಂದಿವೆ. ಪುರಂದರ ದಾಸರ ಹೆಸರಿನಲ್ಲಿ ಪ್ರತಿವರ್ಷವೂ ಸಂಗೀತ ವಿದ್ವಾಾಂಸರೊಬ್ಬರಿಗೆ, ಅದರಲ್ಲೂ ಭಕ್ತಿಿಗಾಯನ ಪ್ರಸರಣದಲ್ಲಿ ಸೇವೆಮಾಡಿರುವ ಕಲಾವಿದರಿಗೆ ‘ನಿರ್ಮಾಣ್-ಪುರಂದರ ಸುವರ್ಣ ಸಂಗೀತರತ್ನ’ ಪ್ರಶಸ್ತಿಿಯನ್ನು ನೀಡಿ ಭಕ್ತಿಿಸಂಗೀತ ಸಂಸ್ಕೃತಿಯನ್ನು ಪ್ರೋೋತ್ಸಾಾಹಿಸುವ ಯೋಜನೆಯನ್ನು ನಿರ್ಮಾಣ್ ಸಮೂಹ ಸಂಸ್ಥೆೆ ಸಾಕಾರಗೊಳಿಸಿದೆ.
ಈ ವರೆಗೆ ಪ್ರಶಸ್ತಿಿಗೆ ಭಾಜನರಾಗಿರುವ ಸಂಗೀತಗಾರರು:
1. 2010 – ಸಂಗೀತ ವಿದ್ಯಾಾನಿಧಿ ವಿದ್ಯಾಾಭೂಷಣ
2. 2011 – ಹರಿದಾಸ ಸಂಗೀತ ವಿದ್ವನ್ಮಣಿ ಅನಂತ ಕುಲಕರ್ಣಿ
3. 2012 – ಪದ್ಮಭೂಷಣ ಆರ್. ಕೆ. ಶ್ರೀಕಂಠನ್
4. 2013 – ಗಾನ ಕಲಾಭೂಷಣ ವಿದ್ವಾಾನ್ ಆರ್. ಕೆ. ಪದ್ಮನಾಭ
5. 2014 – ಸಂಗೀತ ಕಲಾಭೂಷಣ ಪಂಡಿತ್ ನಾಗರಾಜರಾವ್ ಹವಾಲ್ದಾಾರ್
6. 2015 – ಹರಿಕೀರ್ತನ ಶ್ರೇಷ್ಠ ಬಿ. ಕನಕಗಿರಿ ಹುಸೇನ್ ಸಾಬ್
7. 2016 – ಹರಿದಾಸ ಸಂಗೀತ ವಿದ್ವಾಾಂಸ ಮುರುಗೋಡು ಕೃಷ್ಣದಾಸ
8. 2017 – ಡಾ ಮೈಸೂರು ನಾಗಮಣಿ ಶ್ರೀನಾಥ್
9. 2018 – ವಿದುಷಿ ಎಂ. ಎಸ್. ಶೀಲಾ
10. 2019 – ವಿದ್ವಾಾನ್ ಪುತ್ತೂರು ನರಸಿಂಹ ನಾಯಕ್
2020ರ ಹನ್ನೊೊಂದನೇ ವರ್ಷದ ಪ್ರಶಸ್ತಿಿಗೆ ಉಸ್ತಾಾದ್ ಫಯಾಝ್ ಖಾನ್ರವರು ಭಾಜನರಾಗಿರುತ್ತಾಾರೆ. 26.01.2020ರಂದು ಸಂಜೆ 6.00ಗೆ ಬೆಂಗಳೂರಿನ ನಿಸರ್ಗ ಬಡಾವಣೆಯಲ್ಲಿರುವ ಪುರಂದರ ಮಂಟಪದಲ್ಲಿ ಪ್ರಶಸ್ತಿಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಸಂಗೀತಕ್ಕೆೆ ಪ್ರೋೋತ್ಸಾಾಹ ನೀಡುವ ಟ್ರಸ್ಟ್
‘ವಿಯೆಲ್ಲೆೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾಾನ’ ಎನ್ನುವ ಸಂಸ್ಥೆೆಯನ್ನು ನಿರ್ಮಾಣ್ ಸಮೂಹ ಸಂಸ್ಥೆೆಗಳ ಸಂಸ್ಥಾಾಪಕರಾದ ವಿ. ಲಕ್ಷ್ಮೀನಾರಾಯಣ್ರವರು ಪ್ರಾಾರಂಭಿಸಿರುತ್ತಾಾರೆ. ಈ ಮೂಲಕ ನಿರಂತರ ಹಾಗೂ ಶಾಶ್ವತವಾಗಿ ನಿರ್ಮಾಣ್ ಪುರಂದರ ಸಂಗೀತರತ್ನ ಪ್ರಶಸ್ತಿಿ ಸಾಹಿತ್ಯ ಸಂಗೀತ ಆಧಾತ್ಮಿಿಕ ಕಾರ್ಯಕ್ರಮಗಳ ವ್ಯಾಾಪಕ ಸಂಯೋಜನೆ ಮತ್ತು ಕನ್ನಡ ಭಕ್ತಿಿಸಂಸ್ಕೃತಿಯ ಪುನರುತ್ಥಾಾನಕ್ಕೆೆ ತಮ್ಮ ಕೊಡುಗೆ ನೀಡಲು ನಿರ್ಧರಿಸಿರುತ್ತಾಾರೆ. ಈ ಪ್ರತಿಷ್ಠಾಾನವು ವಿಯಲ್ಲೆೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾಾನವೆಂದೇ ಪ್ರಸಿದ್ಧವಾಗಿದ್ದು, ಇದರ ಶಾಶ್ವತ ಟ್ರಸ್ಟಿಿಗಳಾಗಿ ಈ ಕೆಳಕಂಡ ಮಹನೀಯರು ಸೇವೆ ಸಲ್ಲಿಸುತ್ತಿಿದ್ದಾಾರೆ. ವಿ. ಲಕ್ಷ್ಮೀನಾರಾಯಣ್, ವಿದ್ಯಾಾಭೂಷಣ್, ಅರಳುಮಲ್ಲಿಗೆ ಪಾರ್ಥಸಾರಥಿ,ಆರ್. ಮೋಹನ್,ಎಸ್. ರವಿರಾಜ್ ಭಟ್, ಕೆ. ಎನ್. ರಂಗನಾಥ್, ಆರ್. ಸುರೇಶ್, ಕೃಷ್ಣಾಾ ರೆಡ್ಡಿಿ, ಸುಧೀಂದ್ರ ಎಸ್. ಎನ್. ಮತ್ತು ಮೂರ್ತಿ.