ಈಕ್ವೆಡಾರ್: ಕ್ವಿಟೋ ದೇಶದ ಈಕ್ವೆಡಾರ್ ನಗರದ ಜೈಲಿನಲ್ಲಿ ಖೈದಿಗಳ ನಡುವೆ ಭಾರಿ ಮಾರಾಮಾರಿ ನಡೆದು, ಗಲಭೆಯಲ್ಲಿ 68 ಕೈದಿಗಳು ಮೃತಪಟ್ಟಿದ್ದಾರೆ.
ಹಿಂದಿನ ಗಲಭೆಯ ನಂತರ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿದ್ದರೂ ಮತ್ತು ಶಾಂತ ತೆಯನ್ನು ಪುನಃಸ್ಥಾಪಿಸಲು ಸದ್ಯ ವಾಗಿಲ್ಲ. ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳನ್ನು ಜೈಲುಗಳಿಗೆ ಕಳುಹಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರಲಾಗಿದೆ.
ಮಾದಕ ವಸ್ತು ಕಳ್ಳಸಾಗಣೆ ಮಾರ್ಗಗಳ ಹಿಡಿತ ಸಾಧಿಸಲು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಗಲಭೆಯಲ್ಲಿ ಸತತ ಹತ್ಯೆಗಳು ನಡೆದಿವೆ ಎಂದು ಅಧಿಕಾರಿಗಳು ಆರೋಪಿಸಿ ದ್ದಾರೆ. 1 ಗಂಟೆಗಳ ಕಾಲ ಜೈಲಿನ್ನಲ್ಲಿ ಗನ್ ಫೈರಿಂಗ್ ನಡೆದಿದೆ ಎಂದು ಜೈಲಿನಲ್ಲಿದ್ದವರು ಹೇಳಿದ್ದಾರೆ.
ಶವದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೆಪ್ಟಂಬರ್ ತಿಂಗಳಲ್ಲಿ ಲಿಟರೋಲ್ ಜೈಲಿನಲ್ಲಿ ಹಿಂಸಾ ತ್ಮಕ ಘಟನೆ ನಡೆದಿತ್ತು. ಈ ಘಟನೆಯ ನಂತರ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದರು.