ಕೊಚ್ಚಿ: ಪತ್ನಿಯೊಂದಿಗೆ 26 ದೇಶಗಳನ್ನು ಸುತ್ತಿ ಖ್ಯಾತಿ ಹೊಂದಿದ್ದ ಕೇರಳದ 76 ವರ್ಷದ ವಿಜಯನ್ ಅವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಫಿ ಶಾಪ್ನಿಂದ ಬಂದ ಆದಾಯದಿಂದಲೇ ಇವರ ವಿಶ್ವಪರ್ಯಟನೆ ಸಾಗಿತ್ತು.
2007 ರಲ್ಲಿ ದಂಪತಿ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದರು. ಅದು ಇಸ್ರೇಲ್ ಆಗಿತ್ತು, ಬ್ರಿಟನ್, ಫ್ರಾನ್ಸ್, ಆಸ್ಟ್ರಿಯಾ, ಈಜಿಪ್ಟ್, ಯುಎಇ, ಯುಎಸ್ ಮತ್ತು ಹೆಚ್ಚಿನ ದೇಶಗಳಿಗೆ ಪ್ರವಾಸ ಮಾಡಲು ತಮ್ಮ ಕಾಫಿ ಅಂಗಡಿಯಲ್ಲಿನ ಉಳಿತಾಯದ ಹಣವನ್ನೇ ಬಳಸಿ ಕೊಂಡಿದ್ದರು ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು.
ಕಳೆದ ತಿಂಗಳು, ರಷ್ಯಾ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಿಸಿದ್ದರು, ಆ ಆಸೆ ವಿಧಿಯ ಆಟದ ಮುಂದೆ ಈಡೇರಿಲ್ಲ.
2019 ರಲ್ಲಿ ದಂಪತಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸವನ್ನು ಮಹೇಂದ್ರ ಗ್ರೂಪ್ ಚೇರ್ಮೆನ್ ಆನಂದ್ ಮಹೇಂದ್ರ ಪ್ರಾಯೋಜ ಕತ್ವದಲ್ಲಿ ಕೈಗೊಂಡಿದ್ದರು.