Saturday, 23rd November 2024

ರಿಯಲ್ ಮಿ 5ಎಸ್ ಮತ್ತು ಮೊಟೋ ರೇಜರ್

* ವಸಂತ ಗ ಭಟ್

ಭಾರತದ ಬೃಹತ್ ಮೊಬೈಲ್ ಮಾರುಕಟ್ಟೆೆಯಲ್ಲಿ ವ್ಯಾಾಪಾರ ಮಾಡಲು ಹೊಸ ವಿದೇಶೀ ಮೊಬೈಲ್‌ಗಳು ಲಗ್ಗೆೆ ಇಡುತ್ತಲೇ ಇವೆ. ಹೊಸದಾಗಿ ನಮ್ಮ ದೇಶಕ್ಕೆೆ ಪರಿಚಯವಾಗಲಿರುವ ಎರಡು ಮೊಬೈಲ್‌ಗಳ ವಿವರ ಇಲ್ಲಿದೆ.

ಅಗ್ಗದ ಬೆಲೆಗೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಭಾರತದ ಮಾರುಕಟ್ಟೆೆಯಲ್ಲಿ ಬಿಡುಗಡೆ ಮಾಡುತ್ತಿಿರುವ ಚೈನ ದೇಶದ ರಿಯಲ್‌ಮಿ ಸಂಸ್ಥೆೆ ನಿಧಾನವಾಗಿ ಭಾರತೀಯ ಗ್ರಾಾಹಕರ ಮನಸ್ಸಿಿನಲ್ಲಿ ನೆಲೆ ಕಂಡುಕೊಳ್ಳುತ್ತಿಿದೆ. ಸದ್ಯ ಭಾರತದಲ್ಲಿ ಶಿಯೋಮಿ ಸಂಸ್ಥೆೆಗೆ ಅತೀ ಹೆಚ್ಚು ಸ್ಪರ್ಧೆ ಒಡ್ಡುತ್ತಿಿರುವ ರಿಯಲ್ ಮೀ, ಶಿಯೋಮಿ ಬಿಡುಗಡೆ ಮಾಡುತ್ತಿಿರುವ ಪ್ರತಿ ಮೊಬೈಲಿಗೂ ಪ್ರತಿಸ್ಪರ್ಧಿಯಾಗಿ ಮೊಬೈಲ್‌ಅನ್ನು ಬಿಡುಗಡೆ ಮಾಡುತ್ತಿಿದೆ. ಈಗ ಹೊಸ ಮೊಬೈಲ್ ರಿಯಲ್ ಮಿ 5ಎಸ್ ನೊಂದಿಗೆ ಭಾರತದ ಮಾರುಕಟ್ಟೆೆಯಲ್ಲಿ ಅದೃಷ್ಟ ಪರೀಕ್ಷೆಗೆ ತಯಾರಾಗಿದೆ.

ರಿಯಲ್ ಮಿ 5ಎಸ್ ಸದ್ಯ ಮಾರುಕಟ್ಟೆೆಯಲ್ಲಿರುವ ರಿಯಲ್ ಮಿ 5 ಮೊಬೈಲ್ ನ ಮುಂದಿನ ಅವತರಿಣಿಕೆ. ಇದು ಸಂಪೂರ್ಣ ಪರದೆಯ ಮೊಬೈಲ್ ಅಲ್ಲ, ಈಗ ಅತಿ ಹೆಚ್ಚು ಬಳಕೆಯಲ್ಲಿರುವ ನೀರಿನ ಹನಿ ಪರದೆಯನ್ನು ಹೊಂದಿರುವ ಈ ಮೊಬೈಲ್ 6.5 ಇಂಚಿನಷ್ಟು ಉದ್ದದ ಎಚ್‌ಡಿ ಪ್ಲಸ್ ಡಿಸ್ಪ್ಲೇ ಯನ್ನು ಪರದೆಯ ರೆಸಲ್ಯೂಷನ್ 720 * 1600. ಪರದೆಯಲ್ಲಿ ಕೊರ್ನಿಂಗ್ ಗೋರಿಲ್ಲಾ ಗ್ಲಾಾಸ್‌ಅನ್ನು ಬಳಸಲಾಗಿದ್ದು ಈ ಬೆಲೆಯ ಮೊಬೈಲ್‌ಗಳಲ್ಲಿ ಇದು ಅತ್ಯುತ್ತಮ ಪರದೆ ಹೊಂದಿದ ಮೊಬೈಲ್ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿಿಯಿಲ್ಲ. ಮೊಬೈಲ್‌ನ ಎಡ ಭಾಗದಲ್ಲಿ ಸಿಮ್ ಮತ್ತು ಮೆಮರೀ ಕಾರ್ಡ್ ಹಾಕಲು ಸ್ಥಳಾವಕಾಶ ನೀಡಲಾಗಿದ್ದು ಎರಡು ಸಿಮ್‌ಅನ್ನು ಬಳಸಬಹುದಾಗಿದೆ. ಬಲಭಾಗದಲ್ಲಿ ಪವರ್ ಬಟನ್ ಮತ್ತು ಧ್ವನಿಯನ್ನು ನಿಯಂತ್ರಿಿಸುವ ಬಟನ್‌ಗಳನ್ನು ನೀಡಲಾಗಿದೆ. ಮೊಬೈಲ್‌ನ ಕೆಳಭಾಗದಲ್ಲಿ ಚಾರ್ಜಿಂಗ್ ಮತ್ತು ಸ್ಪೀಕರ್ ಹೊಂದಿದ್ದು, ಮೊಬೈಲ್ ಸುಮಾರು 157 ಗ್ರಾಾಂ ತೂಕವಿದೆ. ಬಾಹ್ಯ ಲಕ್ಷಣದ ಮುಖ್ಯ ಆಕರ್ಷಣೆಯೆಂದರೆ, ಮೊಬೈಲ್ ನ ಹಿಂಬದಿಯ ಡೈಮಂಡ್ ಹೊಲೋಗ್ರಾಾಫಿಕ್‌ಸ್‌ ನ ಡಿಸೈನ್. ಬೆಳಕು ಬಿದ್ದಾಗ ಸುಂದರವಾಗಿ ಹೊಳೆಯುವ ಈ ಡಿಸೈನ್ ಮೊಬೈಲ್‌ನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಿಸಲಿದೆ. ಆದರೆ ಮೊಬೈಲ್‌ಅನ್ನು ಕೈಯಲ್ಲಿ ಹಿಡಿದಾಗ ಮೊಬೈಲ್‌ನ ಹಿಂಭಾಗ ಜಾರದಂತೆ ನೋಡಿಕೊಳ್ಳುವ ಎಚ್ಚರಿಕೆಯನ್ನು ಸಹ ಸಂಸ್ಥೆೆ ತೆಗೆದುಕೊಂಡಿದೆ.

ನಾಲ್ಕು ಕ್ಯಾಾಮೆರಾ
ಕ್ಯಾಾಮೆರಾ ವಿಚಾರಕ್ಕೆೆ ಬರುವುದಾದರೆ ಹಿಂಬದಿಯಲ್ಲಿ 4 ಕ್ಯಾಾಮೆರಗಳಿವೆ. ಪ್ರಾಾಥಮಿಕ ಕ್ಯಾಾಮೆರಾ 12 ಪಿಕ್ಸೆೆಲ್ ನದ್ದಾಗಿದ್ದಾರೆ, ಎರಡನೆಯ ಕ್ಯಾಾಮೆರಾ 8 ಮೆಗಾ ಪಿಕ್ಸೆೆಲ್‌ನದ್ದಾಗಿದ್ದು, ಮೂರನೆಯ ಮತ್ತು ನಾಲ್ಕನೆಯ ಕ್ಯಾಾಮೆರಾ ತಲಾ 2 ಪಿಕ್ಸೆೆಲ್ ನದ್ದಾಗಿದೆ. ಮುಂಬದಿಯ ಕ್ಯಾಾಮೆರಾ 13 ಮೆಗಾ ಪಿಕ್ಸೆೆಲ್‌ನದ್ದಾಗಿದೆ. ಕ್ಯಾಾಮೆರಾದಿಂದ ತೆಗೆದ ಚಿತ್ರಗಳ ಬಗ್ಗೆೆ ಮಾತನಾಡುವಾದಾದರೆ ಈ ಬೆಲೆಯ ಮೊಬೈಲ್ ಗಳಲ್ಲಿರುವ ಒಂದು ಉತ್ಕೃಷ್ಟ ಕ್ಯಾಾಮೆರಾಗಳನ್ನು ಈ ಮೊಬೈಲ್ ಹೊಂದಿದೆ. ಹಿಂಬದಿಯ ನಾಲ್ಕು ಕ್ಯಾಾಮೆರಗಳು ಹತ್ತಿಿರದ ಮತ್ತು ದೂರದ ಉತ್ತಮ ಚಿತ್ರಗಳನ್ನು ತೆಗೆಯಲು ಬಹಳಷ್ಟು ಸಹಕರಿಸುತ್ತವೆ. ಕಡಿಮೆ ಬೆಳಕಿದ್ದರು ಸಹ ಗುಣಮಟ್ಟದ ಚಿತ್ರಗಳನ್ನು ತೆಗೆಯಬಹುದಾಗಿದೆ. 5000 ಎಂಹೆಚ್ ಬ್ಯಾಾಟರಿಯನ್ನು ಹೊಂದಿರುವ ಮೊಬೈಲ್ ಅನ್ನು ಒಂದು ದಿನ ಸುಲಭವಾಗಿ ಬಳಸಬಹುದಾಗಿದೆ. ತಕ್ಕಮಟ್ಟಿಿಗೆ ಬಳಸುವುವರಾದರೆ ಒಂದುವರೆಯಿಂದ ಎರಡು ದಿನ ಸಹ ಬಳಸಬಹುದು. ಅನ್ದ್ರೋಯಿಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುವ ಮೊಬೈಲ್ ಕ್ವಾಾಲ್ ಕೊಮ್ ಸ್ನಾಾಪ್ ಡ್ರಾಾಗನ್ ಪ್ರಾಾಸೆಸರ್ ಹೊಂದಿರಲಿದೆ. 3 ಮತ್ತು 4 ಜಿಬಿಯ ರಾಮ್ ಮತ್ತು 32, 64 ಮತ್ತು 128 ಜಿಬಿಯ ಆಂತರಿಕ ಸಂಗ್ರಹ ಹೊಂದುವ ಆಯ್ಕೆೆಯನ್ನು ನೀಡಿದೆ. 3ಜಿಬಿ ರಾಮ್ ಮತ್ತು 32 ಜಿಬಿಯ ಆರಂಭಿಕ ದರ್ಜೆಯ ಮೊಬೈಲ್ ನ ಬೆಲೆ 9999 ಮತ್ತು 4 ಜಿಬಿ ರಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ ಹೊಂದಿರುವ ಮೊಬೈಲ್ ನ ಬೆಲೆ ಸುಮಾರು ರು.12,999. ಇದೆ ನವೆಂರ್ಬ 20ರಂದು ಫ್ಲಿಿಪ್‌ಕಾರ್ಟ್‌ನಲ್ಲಿ ಬಿಡುಗಡೆ ಎಂದು ಸೂಚಿಸಲಾಗಿದೆ.

ಮೊಟೊ ರೇಜರ್

2004 ರಲ್ಲಿ ಮೋಟೋರೋಲ ಸಂಸ್ಥೆೆ ಮೊಟೊ ರೇಜರ್ ಎಂಬ, ಮೇಲಿನಿಂದ ಕೆಳಗೆ ಮಡಚಬಹುದಾದಂತಹ ಮೊಬೈಲ್‌ಅನ್ನು ಬಿಡುಗಡೆ ಮಾಡಿತ್ತು. ಮೊಬೈಲ್ ಯಾವ ಪರಿ ಬೇಡಿಕೆಯನ್ನು ಸ್ರಷ್ಟಿಿಸಿತ್ತೆೆಂದರೆ ಮೊಬೈಲ್ ಬಿಡುಗಡೆ ಯಾದ ಎರಡು ವರ್ಷಗಳಲ್ಲಿ ಸುಮಾರು 50 ಮಿಲಿಯನ್ ಮೊಬೈಲ್ಗಳು ಮಾರಾಟವಾಗಿದ್ದವು. ನಷ್ಟದಲ್ಲಿದ್ದ ಮೋಟೋರೋಲದ ಮೊಬೈಲ್ ಅಂಗಸಂಸ್ಥೆೆಯನ್ನು ಈ ಮೊಬೈಲ್ ಲಾಭದ ಹಳಿಗೆ ಮರಳಿಸಿತ್ತು, 2007 ರಲ್ಲಿ ಈ ಶ್ರೇಣಿಯ ಮೊಬೈಲ್ ಅನ್ನು ನಿಲ್ಲಿಸಿ ಮೊಟೊ ರೇರ್ಜ 2 ಎನ್ನುವ ಶ್ರೇಣಿಯನ್ನು ಆರಂಭಿಸುವ ವರೆಗೂ ಸುಮಾರು 130 ಮಿಲಿಯನ್ ನಷ್ಟು ಮೊಟೊ ರೇಜರ್ ಮೊಬೈಲ್ ಗಳು ಮಾರಾಟವಾಗಿದ್ದವು. ಮೊಟೊ ರೇರ್ಜ ಶ್ರೇಣಿಯ ಮೊಬೈಲ್ ಗಳು ಅಷ್ಟಾಾಗಿ ಜನ ಮನ್ನಣೆ ಗಳಿಸದೆ ಹಂತ ಹಂತವಾಗಿ ಮೋಟರೋಲ ಸಂಸ್ಥೆೆ ನಷ್ಟಕ್ಕೊೊಳಗಾಗಿ ಎಷ್ಟೋೋ ಖರೀಧಿದಾರರ ನಡುವೆ ಹಸ್ತಾಾಂತರವಾಗಿ ಸಧ್ಯ ಲೆನೋವೊ ಸಂಸ್ಥೆೆಯ ಒಡೆತನದಲ್ಲಿದೆ.

ಈಗ ಖುಷಿಯ ಸುದ್ದಿಯೆನೆಂದರೆ ಮೋಟೋರೋಲ ಮತ್ತೆೆ ರೇಜರ್ ಮೊಬೈಲ್ ಅನ್ನು ಮರುಕಟ್ಟೆೆಗೆ ಬಿಡುಗಡೆ ಮಾಡಲಿದೆ. ಅದು ಈ ಜಮಾನಕ್ಕೆೆ ಒಗ್ಗುವ ಹಲವು ವೈಶಿಷ್ತಯ ಮೂಲ ರೇರ್ಜ ರೀತಿಯಲಿಯೇ ಈ ಮೊಬೈಲ್ ಸಹ ಮೇಲಿನಿಂದ ಕೆಳಗೆ ಮಡಚುವಂತಹ ಮೊಬೈಲ್. ಈ ಫೋನ್ ಕೆಳಭಾಗವನ್ನು ಹಿಡಿದು ಸುಮ್ಮನೆ ತಳ್ಳಿಿದರು ಅಥವಾ ಗಾಳಿಯಲ್ಲಿ ಮೊಬೈಲ್ ಅನ್ನು ಹಿಡಿದು ಸ್ವಲ್ಪ ಬೀಸಿದರು ಸಹ ಮೊಬೈಲ್ ನ ಮೇಲ್ಭಾಾಗ ತೆರೆದುಕೊಳ್ಳುತ್ತದೆ, ಇದು ಬಳಕೆದಾರನಿಗೆ ಒಂದು ರೀತಿಯ ಹೊಸ ಅನುಭವನ್ನು ಸಹ ನೀಡುತ್ತದೆ, ಮೊಬೈಲ್ ಅರ್ಧ ಮಡಚಿ ಕೊಳ್ಳುವುದರಿಂದ ಜೇಬಿನಲ್ಲಿ ಅಥವಾ ಬ್ಯಾಾಗ್ ನಲ್ಲಿ ಇಟ್ಟು ಕೊಳ್ಳಲು ಕಡಿಮೆ ಜಾಗ ಸಾಕು. ಅರ್ಧ ಮಡಚಿ ಕೊಂಡಾಗ ಮಡಿಚಿದ ಹಿಂಭಾಗ ಕೂಡ ಪರದೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಸ್ಥಳವನ್ನು ಮತ್ತು ಇನ್ನೊೊಂದಿಷ್ಟೂ ಆಯ್ಕೆೆಗಳಿಗೆ ಮೀಸಲಿಟ್ಟಿಿರುವ ಸಂಸ್ಥೆೆ ಮಡಚಿರುವಾಗಲೇ ಸೇಲ್ಫಿಿ ಯನ್ನು ಸಹ ತೆಗೆಯುವಂತಹ ಆಯ್ಕೆೆಯನ್ನು ನೀಡಿದೆ. ಮೊಬೈಲ್ ನ ಹಿಂಬದಿಯ ಕ್ಯಾಾಮೆರಾ 16 ಮೆಗಾ ಪಿಕ್ಸೆೆಲ್ ನದ್ದಾಗಿದ್ದಾರೆ ಮುಂಬದಿಯ ಕ್ಯಾಾಮೆರಾ ಕೇವಲ 5 ಮೆಗಾ ಪಿಕ್ಸೆೆಲ್.

ಅನ್ದ್ರೋಯಿಡ್ 9 ಆಪರೇಟಿಂಗ್ ಸಿಸ್ಟಮ್ 5 ಜಿಬಿ ರಾಮ್ ಅನ್ನು ಹೊಂದಿರುವ ಮೊಬೈಲ್ ಹಳೆಯ ಪ್ರಾಾಸೆರ್ಸ ಸ್ನಾಾಪ್ ಡ್ರಾಾ ಗನ್ 710 ಅನ್ನು ಬಳಸಲಿದೆ. ಮೊಬೈಲ್ ನ ಇನ್ನೊೊಂದು ವಿಶೇಷತೆಯೆಂದರೆ ಹೊಸ ರೇರ್ಜ ಪರದೆಯಲ್ಲಿಯೇ 2004 ರಲ್ಲಿ ಬಿಡುಗಡೆಯಾದ ಹಳೆ ಮೊಟೊ ರೇರ್ಜ ರೀತಿಯ ಪರದೆಯ ಅನುಭವನ್ನು ಪಡೆಯ ಬಹುದಾಗಿದೆ. ಅದನ್ನು ಆಯ್ಕೆೆ ಮಾಡಿಕೊಂಡರೆ ಮೊಬೈಲ್ ನ ಪರದೆಯ ಅರ್ಧ ಭಾಗ ಕೀ ಬೋರ್ಡ್ ರೀತಿ ಪರಿವರ್ತನೆ ಗೊಂಡು ಸ್ಕ್ರೀನ್ ಟಚ್ ಮೊಬೈಲ್ ನಲ್ಲೇ ಬಟನ್ ಇರುವ ಅನುಭವ ಹೊಂದಬಹುದಾಗಿದೆ. ಇನ್ನೂ ಈ ಮೊಬೈಲ್ ನ ಬೆಲೆಯ ವಿಚಾರಕ್ಕೆೆ ಬರುವುದಾದರೆ ಸುಮಾರು 1500 ಅಮೇರಿಕನ್ ಡಾರ್ಲ ಅಥವಾ ಸುಮಾರು 107400 ಭಾರತೀಯ ಮುಂದಿನ ಜನವರಿಯಲ್ಲಿ ಮಾರುಕಟ್ಟೆೆಯನ್ನು ಪ್ರವೇಶಿಸುವ ಈ ಮೊಬೈಲ್ ಭಾರತದ ಮರುಕಟ್ಟೆೆಯಲ್ಲಿ ಲಭ್ಯವಿರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಮಡಚುವ ಅನುಭವವನ್ನು ಬಿಟ್ಟರೆ ಮತ್ತಾಾವುದೇ ವಿಶೇಷತೆಗಳಿಲ್ಲದ ಈ ದುಬಾರಿ ಮೊಬೈಲ್, ಮುಳುಗುತ್ತಿಿರುವ ಮೋಟೋರೋಲ ಸಂಸ್ಥೆೆಯನ್ನು ಕಾಪಾಡಲು ಸಾಧ್ಯವಾದೀತೆ ಎಂಬುದನ್ನೂ ಕಾದು ನೋಡಬೇಕು.