‘ಈ ಪರೀಕ್ಷೆಯಲ್ಲಿ ದೊರೆತ ಯಶಸ್ಸು ಬ್ರಹ್ಮೋಸ್ನ ಇತರ ಆವೃತ್ತಿಯ ಕ್ಷಿಪಣಿ ಗಳ ಉತ್ಪಾದನೆಗೆ ಹಾದಿಯನ್ನು ಸುಗಮಗೊಳಿಸಿ ದಂತಾಗಿದೆ’ ಎಂದು ಇವೇ ಮೂಲಗಳು ಹೇಳಿವೆ.
ಸೂಪರ್ಸಾನಿಕ್ ಯುದ್ಧವಿಮಾನ ಸುಖೋಯ್ 30 ಎಂಕೆ-1 ನಿಂದ ಚಿಮ್ಮಿದ ಬ್ರಹ್ಮೋಸ್ ಕ್ಷಿಪಣಿ, ನಿರ್ದೇಶಿತ ಪಥದಲ್ಲಿ ಸಾಗಿ ಗುರಿಯನ್ನು ನಾಶಪಡಿಸಿತು ಎಂದು ಡಿಆರ್ಡಿಒ ಮೂಲಗಳು ಹೇಳಿವೆ.
ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಡಿಆರ್ಡಿಒ ಮುಖ್ಯಸ್ಥ ಡಾ.ಜಿ.ಸತೀಶ್ ರೆಡ್ಡಿ, ‘ಹಲವಾರು ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ವಾಯುಪಡೆ ಈ ಸಂಕೀರ್ಣವಾದ ಕ್ಷಿಪಣಿಯ ಅಭಿವೃದ್ಧಿ, ಪರೀಕ್ಷೆ ಕಾರ್ಯದಲ್ಲಿ ತೊಡಗಿದ್ದವು’ ಎಂದು ಹೇಳಿದ್ದಾರೆ.