Saturday, 23rd November 2024

ರಾಮನಾಥಪುರದಲ್ಲಿ ಅವಧೂತ ಸ್ಮರಣೆ ಕೃಷ್ಣ ಯೋಗೀಂದ್ರರ ಆರಾಧನೋತ್ಸವ

* ವಾರುಣಿ

ಶ್ರೀ ಕೃಷ್ಣ ಯೋಗೀಂದ್ರ ಸರಸ್ವತಿ ಪರಮಹಂಸ ಗುರು ಮಹಾರಾಜರ ಆರಾಧನಾ ಮಹೋತ್ಸವ ಹಾಗೂ ಸಖರಾಯಪಟ್ಟಣ ಅವಧೂತ ಸದ್ಗುರು ಶ್ರೀ ವೆಂಕಟಾಚಲ ಗುರುಮಹಾರಾಜರ ಸ್ಮರಣಾರ್ಥ ಹಾಸನಜಿಲ್ಲೆೆ ರಾಮನಾಥಪುರದಲ್ಲಿ 8 ದಿನಗಳ ಕಾಲ ಅಖಂಡ ಗುರುಚರಿತ್ರೆ ಪಾರಾಯಣ ಯಜ್ಞ, ಸಾಧು- ಸಂತ ಕಳೆದ ವಾರ ಸಂಪನ್ನಗೊಂಡಿತು. ವಾರಕರೀ ಸಂಪ್ರದಾಯದಂತೆ ಅಖಂಡ ವೀಣಾನಾದ, ಚಿದಂಬರ ನಾಮ ಸ್ಮರಣೆ, ಕಾಕಡಾರತಿ, ಗುರು ಪಾದುಕಾ ಅಭಿಷೇಕ, ಸಪ್ತಶತಿ ಪಾರಾಯಣ, ಹೋಮ ಇತ್ಯಾದಿ ವಿಧಿಗಳು ಸಂಪನ್ನಗೊಂಡು ಗ್ರಾಾಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದವು.

ಪ್ರತಿ ಮನೆತನ, ಸಮುದಾಯ, ಪ್ರದೇಶ, ಪರಂಪರೆಗೆ ಒಬ್ಬಬ್ಬೊ ಗುರು ಇದ್ದೇ ಇರುತ್ತಾಾರೆ. ಗುರುವೇ ಬಾಳಿಕೆ ಬೆಳಕು, ಗುರುವೇ ಸಾಕ್ಷಾತ್ ಪರಬ್ರಹ್ಮ ಎಂದು ನಂಬಿದ ನಮ್ಮ ದೇಶದ ಪರಂಪರೆಗೆ ಹೊಸ ಕಾಲಘಟ್ಟದಲ್ಲಿ ಪುನಶ್ಚೇತನ ನೀಡಲು ಗುರುಗಳ ಅನುಯಾಯಿಗಳು ಪಾರಾಯಣ ಯಜ್ಞಕ್ಕೆ ತಮ್ಮತನು ಮನಗಳನ್ನು ಮೀಸಲಿರಿಸಿದ್ದರು. ಇದನ್ನು ನೋಡುವುದು, ಕೇಳುವುದೇ ಜೀವನದ ಮಹಾಯೋಗವೆಂದು ಭಾವಿಸಿ ಅಸಂಖ್ಯ ಭಕ್ತಗಣ ಇದೀಗ ದತ್ತನ ನೆಲೆಯತ್ತ ಧಾವಿಸಿ ಬರಹತ್ತಿದೆ. ಅವಧೂತ ಸಂಪ್ರದಾಯಕ್ಕೆೆ ಬಾಳನ್ನು ಸಮರ್ಪಿಸಿ ಕೊಂಡ ನೂರಾರು ಸಂತರನ್ನು, ಸಾಧನಾ ತೇಜೋಪುಂಜಗಳನ್ನು ಹತ್ತಿರದಿ ಕಾಣುವ ಮೇರು ಪುಣ್ಯ ಎಂಬುದೇ ಭಕ್ತರಿಂದ ಬಂದ ಉದ್ಗಾಾರ ಒದಗಿ ಬಂದಿದೆ.

ರಾಮನಾಥಪುರದಲ್ಲಿ ನಡೆದ 8ನೇ ವರ್ಷದ ಆರಾಧನಾ ಸಪ್ತಾಹ ಮಹೋತ್ಸವದ ನೇತಾರ ಮತ್ತು ನಾರಾಯಣ ಸರಸ್ವತಿ ಪರಮಹಂಸ ಅಧಿಷ್ಠಾಾನಂ ಟ್ರಸ್‌ಟ್‌ ಮುಖ್ಯಸ್ಥ ಸಂತ ಶ್ರೀ ವಿದ್ಯಾಧೀಶರು ಹೇಳುತ್ತಾರೆ, ‘ಗುರುಗಳ ಆರಾಧನೆ ಎಂದರೆ ಅದು ಒಂದು ಪವಾಡ. ಮಹಾಗುರುಗಳ ಆರಾಧನೆ ಮಾಡುವುದು ವಾಡಿಕೆ. ಇದನ್ನು ನಾವು ನಡೆಸುತ್ತೇವೆ ಎಂದು ಎಲ್ಲ ಭಕುತರು ಭಾವಿಸಿದ್ದಾಾರೆ. ಅದು ಲೌಕಿಕ. ಆದರೆ ಆಳವಾಗಿ ಅವಲೋಕಿಸಿದರೆ ಗುರು ಮಹಾರಾಜರೇ ಎಲ್ಲವನ್ನೂ ನಡೆಸಿಕೊಳ್ಳುತ್ತಾಾರೆ. ಕಳೆದ ವರ್ಷ ಕಲಬುರಗಿ ಜಿಲ್ಲೆೆ ಗಾಣಗಾಪುರದಲ್ಲಿ, ಅದರ ಹಿಂದಿನ ವರ್ಷ ಅರಸೀಕೆರೆ ತಾಲೂಕು ಬಾಣಾವರದಲ್ಲೇ ಆರಾಧನೆ ನಡೆಸಲು ಗುರುಗಳು ಕೊಟ್ಟರು. ಬಾಣಾವರಕ್ಕೆೆ ನೂರಾರು ನಾಗಸಾಧುಗಳು ಉತ್ತರಭಾರತದಿಂದ ಬಂದರು! ಸದಾ ಸಂಚಾರಿಗಳಾದ ಅವರು ವಾರಗಟ್ಟಲೇ ಆರಾಧನೆಗೆ ನೆಲೆ ನಿಂತರು. ಭಕುತರ ಸಂಖ್ಯೆೆ ಲಕ್ಷ ದಾಟಿತು. ನಿರೀಕ್ಷೆಗೂ ನೂರು ಪಟ್ಟು ಮೀರಿ ಎಲ್ಲರೂ ಮಹಾಪ್ರಸಾದ ಸ್ವೀಕರಿಸಿ ತೃಪ್ತಿಪಟ್ಟರು. ಅಸಂಖ್ಯ ದಾನಿಗಳು ಲೋಡ್ ಗಟ್ಟಲೆ ಸುವಸ್ತುಗಳನ್ನು ನೀಡಿದರು. ಇದೇ ಪವಾಡ. ಪ್ರತಿ ವರ್ಷವೂ ಹೀಗೇ ಆಗುತ್ತದೆ. ಜಾತಿ, ಮತ, ಪಂಥ ಮೀರಿ ಬಂದ ಭಕುತರಿಗೆಲ್ಲರಿಗೂ ಮಹಾ ಪ್ರಸಾದ ವಿತರಣೆ ಆಗುತ್ತದೆ’ ಎಂದರು. ಈ ಅವರು ಕಳೆದ 8 ವರ್ಷಗಳಿಂದ ರಾಜ್ಯದ ವಿವಿಧ ಊರು-ಕೇರಿಗಳಲ್ಲಿ ನಡೆಸಿ ಗುರಕೃಪೆಗೆ ಪಾತ್ರರಾಗಿದ್ದಾಾರೆ. ದತ್ತಾಾತ್ರೇಯನ, ಗುರು ಮಹಾರಾಜರ ಮಹಾ ಕೃಪೆಗೆ ಸಕಲರನ್ನು ಒಂದುಗೂಡಿಸಿ ಅಧ್ಯಾಾತ್ಮ ಮಾರ್ಗದತ್ತ ಕರೆದೊಯ್ಯುವ ಯತ್ನ ಮಾಡುತ್ತಿದ್ದಾರೆ.

ಸ್ವಯಂ ಸೇವಕರ ಸಹಕಾರ
ವಿವಿಧ ಮಠ- ಪೀಠದ ನೂರಾರು ಸಾಧು ಸಂತರು, ಸಾವಿರಾರು ದತ್ತಾಾವಧೂತರು, 25ಜನ ಋತ್ವಿಜರು 8 ದಿನ ನಡೆದ ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು. 100ಕ್ಕೂ ಹೆಚ್ಚು ಸ್ವಯಂಸೇವಕರು ವಸತಿ, ಅನ್ನದಾನ ಸೇರಿ ವಿವಿಧ ಟೊಂಕ ಕಟ್ಟಿ ನಿಂತಿದ್ದರು. ವಾರಕರಿ ಸಂಪ್ರದಾಯದ ಭಕ್ತಗಣ ನಿರಂತರ ವೀಣಾನಾದ, ಸಾಂಬ ಚಿದಂಬರ ಜಪ ಯಜ್ಞ ನಡೆಸಿದರು. ಪ್ರತಿದಿನ ಶತಚಂಡಿಕಾ ಯಾಗ, ಮಹಾರುದ್ರಯಾಗ, ಸತ್ಯದತ್ತವ್ರತ, ಚಿದಂಬರ ವ್ರತ, ಅನಘಾಲಕ್ಷ್ಮೀ ವ್ರತ, ಕಾಕಡಾರತಿ, ಮಧುಕರಿ, ಸಾಂಪ್ರದಾಯಿಕ ಭಜನೆ, ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿತ್ತು. ಸಾಂಪ್ರದಾಯಿಕ ಭಜನೆ, ಅಖಂಡ ವೀಣಾ ಶಿವ ಚಿದಂಬರ ನಾಮಸ್ಮರಣೆ, ಸಂಜೆ ನಾಡಿನ ಖ್ಯಾತ ಕಲಾವಿದರಿಂದ ಸಂಗೀತ ಕಛೇರಿಗಳು, ಸೌಂದರ್ಯ ಲಹರೀ, ಲಲಿತಾಸಹಸ್ರನಾಮ ಪಾರಾಯಣ ಲಹರಿ ಹರಿದಿತ್ತು.

ಸಾಂಸ್ಕೃತಿಕ
ಆರಾಧನೆಯ ಅವಧಿಯಲ್ಲಿ ಪ್ರತಿದಿನ ಸಂಜೆ 6ಕ್ಕೆೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ಮನಸೂರೆಗೊಂಡಿತು. ಬಿಂದು ಮತ್ತು ತಂಡದಿಂದ ಭರತನಾಟ್ಯ, ಮೈಸೂರಿನ ವಿದ್ವಾನ್ ಪದ್ಮನಾಭ ಮತ್ತು ತಂಡದಿಂದ ವೀಣಾವಾದನ, ತುಮಕೂರಿನ ಅನಘಾ ಪ್ರಸಾದ್ ಹರಿಕಥೆ, ಬೆಂಗಳೂರಿನ ವಿದ್ವಾಾನ್ ಜೆ.ಎಸ್. ಶ್ರೀಕಂಠ ಭಟ್ ತಂಡದಿಂದ ಗಾಯನ, ವಿದ್ವಾಾನ್ ರಾಘವೇಂದ್ರ ತಂಡದಿಂದ ಸಂಗೀತ, ಮೈಸೂರಿನ ಅಂಬಾ ಪ್ರಸಾದ್ ತಂಡದಿಂದ ಪಿಟೀಲು ವಾದನ ಮೊದಲಾದವು ರಾಮನಾಥಪುರ ಗ್ರಾಾಮಸ್ಥರಿಗೆ ಸಾಂಸ್ಕೃತಿಕ ಸಮಾಗಮವನ್ನೇ ಉಣಬಡಿಸಿದವು. 8ನೇ ದಿನದ ಗ್ರಾಮದಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು.

ಕಲಿಯುಗದಲ್ಲಿ ನಾಮ ಸ್ಮರಣೆಗೆ, ಸಂಕೀರ್ತನೆಗೆ ವಿಶೇಷ ಪುಣ್ಯ ಎಂದು ನೂರಾರು ಸಂತರು, ದಾಸರು ಹೇಳಿದ್ದಾಾರೆ. ಅದರಲ್ಲೂ ನಿಸರ್ಗ ನಿಯಮಕ್ಕೆ ಬಹು ಹತ್ತಿರವಾಗಿ, ವಾರಕರಿ ಸಂಪ್ರದಾಯದಂತೆ ಸಕಲ ಭಕ್ತರಲ್ಲಿ ಭಗವಂತನನ್ನು ಕಾಣುವುದೇ ನಮ್ಮ ಪರಂಪರೆ ಉದ್ದೇಶ. ಈ ಸೇವೆಗೆ ಜೋಳಿಗೆ ಹಿಡಿದಿದ್ದೇವೆ. ಭಿಕ್ಷೆ ಹಾಕುವ- ಸ್ವೀಕರಿಸುವ ಮಹಾಭಕುತ ಗಣಕ್ಕೆೆ ಕೊಂಡಿಯಾಗುವುದೇ ಗಾಣಾಗಾಪುರಾಧೀಶ ನೀಡಿದ ಮಹಾಕೃಪೆ.
ಸಂತ ಶ್ರೀ ವಿದ್ಯಾಧೀಶರು
ಸಮಿತಿ ಮುಖ್ಯಸ್ಥ
ಮಗ್ ಶಾಟ್ – ಸಂತ ಶ್ರೀ ವಿದ್ಯಾಧೀಶರು 

ಶ್ರೀ ಕೃಷ್ಣ ಯೋಗೀಂದ್ರ ಸರಸ್ವತಿಗಳು
400 ವರ್ಷಗಳ ಹಿಂದೆ ಕಡೂರು ತಾಲೂಕು ಯಳ್ಳಂಬಳಸೆ ಗ್ರಾಮದಲ್ಲಿ ಅವತರಿಸಿದ ಅವಧೂತರು, 8ನೇ ವಯಸ್ಸಿಗೆ ಶ್ರುತಿ, ಶಾಸಗಳ ಅಭ್ಯಾಾಸ ಮಾಡಿ, 16ನೇ ವಯಸ್ಸಿಿಗೆ ಸಕಲಶಾಸಗಳ ಪ್ರಭುತ್ವ ಗಳಿಸಿ ಜೀವನವನ್ನು ಲೌಕಿಕ ಭಕ್ತರ ಉದ್ಧಾಾರಕ್ಕೆೆ ತಮ್ಮ ಜೀವನವನ್ನು ಮೀಸಲಿಟ್ಟರು. ತಾಯಿಯ ಆಜ್ಞೆಯಂತೆ ಭಕ್ತರಿದ್ದಲ್ಲೇ ಗಂಗಾ ಸನ್ನಿಧಿ, ಕಾಶಿ ವಿಶ್ವೇಶ್ವರನ ಮಾಡಿಸಿದ ಪವಾಡ ಪುರುಷರಾದ ಇವರು 24 ಶಿಷ್ಯರಿಗೆ ಉಪದೇಶ ನೀಡಿ ಅರಸೀಕೆರೆ ತಾಲೂಕು ಬಾಣಾವರದಲ್ಲಿ ಸಜೀವ ವೃಂದಾವನಸ್ಥರಾದರು.

ರಾಮನಾಥಪುರ ಪುಣ್ಯ ಕ್ಷೇತ್ರ
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ನೂರಾರು ದೇವರುಗಳ ಸಂಗಮ, ನಿತ್ಯ ನೂರಾರು ಭಕ್ತರು ಬಂದು ಕಾವೇರಿ ನದಿಯಲ್ಲಿ ಮಿಂದು ಪುನೀತರಾಗುವ ಪವಿತ್ರ ಸ್ಥಳ. ತ್ರೇತಾಯಗದಲ್ಲಿ ವಾಸವಪುರಿ ಎಂಬ ಹೆಸರಿದ್ದ ಈ ಕ್ಷೇತ್ರದಲ್ಲಿ ರಾವಣನ ವಧೆ ನಂತರ ರಾಮನೇ ಪ್ರತಿಷ್ಠಾಾಪಿಸಿದ ರಾಮೇಶ್ವರ ದೇವಾಲಯ. ಭಾರತೀಯ ಪುರಾಣ ಇತಿಹಾಸಗಳ ಸಂಗಮವಾಗಿದೆ. ಅಗಸ್ತ ್ಯ ಪ್ರಸನ್ನ ಸುಬ್ರಹ್ಮಣ್ಯ, ಪಟ್ಟಾಾಭಿರಾಮ, ಲಕ್ಷ್ಮೀ ನರಸಿಂಹ ಸ್ವಾಾಮಿ ಸೇರಿ ನೂರಾರು ದೇವರ ಸನ್ನಿಧಿಯನ್ನು ಹೊಂದಿರುವ ಪಾವನ ಭೂಮಿ. ರಾಮೇಶ್ವರನ ದೇವಾಲಯವನ್ನು ಹೊಯ್ಸಳರ ಅರಸ 3ನೇ ನರಸಿಂಹ 1253 ರಿಂದ 1292 ರಲ್ಲಿ ನಿರ್ಮಿಸಿದ. ದೇವಾಲಯ ಮತ್ತು ಗರ್ಭಗುಡಿಗೆ ಬಳಪದ ಕಲ್ಲು ಬಳಸಲಾಗಿದೆ. 9 ಅಂಕಣದ ಸ್ತಂಭಗಳಿವೆ. ಮುಂದೆ ಸೋಮದಂಡನಾಯಕ ಹೊಯ್ಸಳ ಶಿಖರದ ಮುಂದೆ ಸಳ- (ಹೊಯ್ಸಳರ ಮೂಲ ಪುರುಷ ಸಳನು ಹುಲಿಯನ್ನು ಕೊಲ್ಲುತ್ತಿರುವ) ಲಾಂಛನ ಅಳವಡಿಸಿದ. ವಿಜಯನಗರ ಅರಸರು ಮತ್ತು ಪಾಳೆಗಾರರ ಆಳ್ವಿಿಕೆಯಲ್ಲಿ ದೇವಸ್ಥಾಾನದ ಆವರಣ ಮಂಟಪಗಳನ್ನು ನಿರ್ಮಿಸಲಾಯಿತು.

ಇಹ ಮತ್ತು ಪರಗಳಲ್ಲಿ ಶಾಂತಿ-ಸುಖಮಯ ಜೀವನ ನಡೆಸಲು ಇಷ್ಟ ದೇವರ, ಗುರುಗಳ ನಾಮ ಸ್ಮರಣೆ ಮಾಡುವ ಭಕ್ತರಿಗೆ ಜಾತಿ, ವಯಸ್ಸುಗಳೇ ಇಲ್ಲ. ನಾಮ ಜಪ ಮಾಡುತ್ತಾ, ಆತ್ಮ ನಿರೀಕ್ಷಣೆಗೆ ಮತ್ತು ಅಧ್ಯಾತ್ಮ ಸಾಧನೆಗೆ ಎಲ್ಲರಿಗೂ ಬಾಗಿಲು ತೆರೆದಿದೆ. ಇದೇ ಆರಾಧನೆಯ ಅಂತಶಕ್ತಿ.
ಶ್ರೀ ವಿದ್ಯಾಧೀಶ
ಆರಾಧನೋತ್ಸವ ಸಮಿತಿ ಮುಖ್ಯಸ್ಥ