Saturday, 23rd November 2024

ಪಾಸಿಟಿವ್ ಟ್ರೆಂಡ್: ಸೆನ್ಸೆಕ್ಸ್ 157 ಅಂಕಗಳ ಏರಿಕೆ

share market

ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಟ್ರೆಂಡ್ ಪರಿಣಾಮ ಗುರುವಾರ ಮುಂಬೈ ಷೇರುಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 157 ಅಂಕಗಳ ಏರಿಕೆ ಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 157.45 ಅಂಕ ಏರಿಕೆಯಾಗಿದ್ದು, 58,807.13 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟನ್ನು ಅಂತ್ಯಗೊಳಿಸಿದೆ. ಎನ್ ಎಸ್ ಇ ನಿಫ್ಟಿ 47.10 ಅಂಕಗಳಷ್ಟು ಏರಿಕೆಯೊಂದಿಗೆ 17,516.85 ಅಂಕಗಳ ಗಡಿ ತಲುಪಿದೆ.

ಐಟಿಸಿ, ಎಲ್ ಆಯಂಡ್ ಟಿ, ಏಷ್ಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರ ಆಯಂಡ್ ಮಹೀಂದ್ರ, ಬಜಾಜ್ ಫೈನಾನ್ಸ್ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿದೆ.

ಬೆಳಗ್ಗೆ ಷೇರುಪೇಟೆ ವಹಿವಾಟು ಆರಂಭದಲ್ಲಿ ಲಾಭಾಂಶವನ್ನು ಕಾಯ್ದಿರಿಸುವಲ್ಲಿ ಹೂಡಿಕೆದಾರರು ಮುಂದಾದ ಪರಿಣಾಮ ಸೆನ್ಸೆಕ್ಸ್, ನಿಫ್ಟಿ ಏರಿಳಿಕೆ ಕಂಡಿತ್ತು. ಬಳಿಕ ಜಾಗತಿಕ ಷೇರುಪೇಟೆಯ ಭರ್ಜರಿ ವಹಿವಾಟಿನ ನಂತರ ಏರಿಕೆಯ ಹಾದಿಗೆ ಮರಳಿದೆ.