Saturday, 14th December 2024

ಮತಾಂತರ ನಿಲ್ಲದಿದ್ದರೆ ದೇಶ ಜಾತ್ಯತೀತವಾಗಿ ಉಳಿಯದು

ಸಿದ್ದಾರ್ಥ ವಾಡೆನ್ನವರ

ಅಲ್ಪಸಂಖ್ಯಾತರು ಮುಂದೊಂದು ದಿನ ಬಹುಸಂಖ್ಯಾತರಾದರೆ ಈ ದೇಶ ಜಾತ್ಯತೀತವಾಗಿ ಉಳಿಯುವುದಿಲ್ಲ. ಜಗತ್ತಿನಲ್ಲಿ ಎಲ್ಲೆಲ್ಲಿ ಮುಸ್ಲೀಮರು ಬಹು ಸಂಖ್ಯಾತ ರಾಗಿದ್ದಾರೋ ಆ ದೇಶಗಳು ಬಹುತೇಕ ಇಸ್ಲಾಮಿಕ್ ದೇಶಗಳಾಗಿ ಪರಿವರ್ತನೆ ಹೊಂದಿವೆ. ಕ್ರಿಶ್ಚಿಯನ್ನರು ಅಽಕವಾಗಿರುವ ದೇಶಗಳಲ್ಲಿಯೂ ಹಿಂದೂಗಳಿಗೆ ಅಪಾಯವಿದೆ. ಹಿಂದೂಗಳಿಗೆ ಉಳಿದಿರುವುದು ಒಂದೇ ದೇಶ, ಅದು ಭಾರತ.

ಸ್ವಾಮೀ ವಿವೇಕಾನಂದರು ಹೀಗೆ ಹೇಳುತ್ತಾರೆ-‘ಒಬ್ಬ ಹಿಂದು ಉತ್ತಮ ಹಿಂದು ಆಗಬೇಕು, ಒಬ್ಬ ಮುಸ್ಲಿಂ ಉತ್ತಮ ಮುಸ್ಲಿಂ ಆಗಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು. ಒಟ್ಟಿನಲ್ಲಿ ಒಬ್ಬ ಮನುಷ್ಯ ಉತ್ತಮ ಮನುಷ್ಯ ಆಗಬೇಕು ಅಷ್ಟೇ.’ ನಮ್ಮ ಎಲ್ಲ ಗ್ರಂಥಗಳನ್ನು ನಾಶಪಡಿಸಿ, ಕುರಾನ್ ಅಥವಾ ಬೈಬಲ್ ಅನ್ನು ಓದಿಕೊಂಡು, ಇಂಗ್ಲಿಷ್ ಹಾಗೂ ಉರ್ದು ಭಾಷೆ ಮಾತಾಡಿಕೊಂಡು ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿಗಳನ್ನು ಬಿಟ್ಟು ವರ್ಷಕ್ಕೆ ಎರಡು ಹಬ್ಬಗಳನ್ನು ಆಚರಿಸಿಕೊಂಡು, ಬೇರೆ ಜನಾಂಗ ದವರಿಗೆ ಬದುಕಲು ಬಿಡದೆ ಮತಾಂತರ ಮುಂದುವರಿ ಸಿದರೆ ನಮ್ಮ ದೇಶ ಹೇಗಿರುತ್ತದೆ?
ಅಂತಹ ಭಾರತವನ್ನು ಊಸಲು ಸಾಧ್ಯವೇ? ಪ್ರತಿಯೊಬ್ಬರೂ ನನ್ನಂತೆಯೇ ಆಗಬೇಕು ಎಂಬ ಮನಃಸ್ಥಿತಿ ಬಹಳ ಕೆಟ್ಟದ್ದು, ಅದು ದೇಶ ದೇಶಗಳನ್ನೇ ಬದಲಾಯಿಸಿ ಬಿಟ್ಟಿದೆ.

ಸಂಸ್ಕೃತಿಗಳನ್ನು ನಾಶ ಮಾಡಿದೆ. ಅಂತಹ ಮನಃಸ್ಥಿತಿ ಹೊಂದಿರುವ ಧರ್ಮಗಳು ಎಲ್ಲೆಲ್ಲಿ ಕಾಲಿಟ್ಟಿವೆಯೋ ಆ ದೇಶಗಳ ಸಂಸ್ಕೃತಿ ಉಳಿದಿಲ್ಲ! ಭಾರತ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಮತಾಂತರ ಪ್ರಮುಖ ವಾದುದು. ದೇಶೀ ಶಕ್ತಿಗಳ ಬೆಂಬಲದೊಂದಿಗೆ ಏಕದೇವತಾ ಆರಾಧಕರು ಬಡ ಜನರನ್ನು ಹಣದ ಅಥವಾ ಇನ್ನಾವುದೋ ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡುತ್ತಿದ್ದಾರೆ. ಸಹಸ್ರಾರು ವರ್ಷಗಳಿಂದ ಪಾಲಿಸಿ ಕೊಂಡು ಬರುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಇದರಿಂದ ಧಕ್ಕೆ ಉಂಟಾಗುತ್ತಿದೆ. ಕ್ರೈಸ್ತ ಧರ್ಮಿಯರು ಪ್ರೀತಿ(?)ಯ ಮಾರ್ಗ ಹಿಡಿದಿದ್ದರೆ, ಇಸ್ಲಾಂ ಧರ್ಮದ ಕೆಲವರು ಹಿಂಸಾ ಮಾರ್ಗ ಹಿಡಿದಿದ್ದಾರೆ.

ಬೌದ್ಧಿಕ ಸ್ವಾತಂತ್ರ್ಯ, ವಿಚಾರ ಮಂಡನೆ, ಚರ್ಚೆ ಮತ್ತು ಬದಲಾವಣೆಗೆ ಹಿಂದೂ ಧರ್ಮದಲ್ಲಿ ಅವಕಾಶವಿದೆ. ಆದರೆ ಇವ್ಯಾವುವೂ ಇತರ ಧರ್ಮಗಳಲ್ಲಿ ಇಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ಇಸ್ಲಾಂ, ಕ್ರಿಶ್ಚಿಯಾನಿಟಿ ಇತ್ಯಾದಿ ಧರ್ಮಗಳು ದೇವರೆಡೆಗೆ ಸಾಗುವ ಭಿನ್ನ ಮಾರ್ಗಗಳು ಅಷ್ಟೇ. ನಮ್ಮ ದೇಶ ಸಾವಿರಾರು ವರ್ಷಗಳವರೆಗೆ ಜಾತ್ಯತೀತ ರಾಷ್ಟ್ರವಾಗಿ ಉಳಿಯಬೇಕು. ಹಾಗಾಗ ಬೇಕಾದರೆ, ಆಮಿಷಗಳ ಮುಂಖಾಂತರ ಬಡವರನ್ನು ಟಾರ್ಗೆಟ್ ಮಾಡಿ, ಅವರನ್ನು ಮರಳು ಮಾಡಿ, ದಾನ, ಸಹಾಯ, ಒತ್ತಾಯ ಇಂಥವೆಲ್ಲ ಬಳಸಿ ಬ್ರೈನ್‌ವಾಷ್ ಮಾಡಿ ಕೊನೆಗೆ ಯಾವುದಕ್ಕೂ ಬಗ್ಗದಿದ್ದಲ್ಲಿ ದಬ್ಬಾಳಿಕೆಯಿಂದಲಾದರೂ ನಡೆಯುತ್ತಿರುವ ಮತಾಂತರ ವ್ಯವಸ್ಥೆಗೆ ಬ್ರೆಕ್ ಬೀಳಬೇಕು.

ಇದು ಹೀಗೇ ಮುಂದುವರಿದರೆ ಈ ದೇಶದಲ್ಲಿ ಬದುಕು ತ್ತಿರುವ ಹಿಂದೂಗಳು ನೂರು-ಐನೂರು ವರ್ಷಗಳ ಅವಧಿಯಲ್ಲಿ ಇಲ್ಲೇ ಅಲ್ಪಸಂಖ್ಯಾತರಾಗುವುದರಲ್ಲಿ ಸಂಶಯವಿಲ್ಲ. ಸಾವಿರಾರು ವರ್ಷಗಳ ಹಿಂದೆ ಈಗಿನ ಬಾಂಗ್ಲಾ, ಪಾಕಿಸ್ಥಾನ, ಅಫ್ಘಾನಿಸ್ತಾನ, ಮ್ಯಾನ್ಮಾರ್ ಮತ್ತು ಶ್ರೀಲಂಕಗಳಲ್ಲಿ ಬಹುದೇವತಾ ಆರಾಧಕರೇ
ವಾಸಿಸುತ್ತಿದ್ದರು. ಅಲ್ಲೆಲ್ಲ ಅಂದು ಮತಾಂತರ ತೀವ್ರ ಗತಿಯಲ್ಲಿತ್ತು. ಈ ದೇಶಗಳು ಇಂದು ಏನಾಗಿವೆ? ಅದೇ ಸ್ಥಿತಿ ಭಾರತಕ್ಕೂ ಬಾರದೇ? ಬಹುಸಂಖ್ಯಾತ ಹಿಂದೂಗಳು ಈ ದೇಶದಲ್ಲಿ ಅಲ್ಪಸಂಖ್ಯಾತರಾದರೆ ಹಿಂದೂಗಳು ಪೂಜಿಸುತ್ತಿರುವ ಬಸವಣ್ಣ, ರಾಮ, ಕೃಷ್ಣ, ಲಕ್ಷ್ಮೀ, ದುರ್ಗೆ, ಗಣಪತಿ, ಹನುಮಂತ ಇವರೆಲ್ಲ ಇರುತ್ತಾರೆಯೇ? ಈ ದೇವರುಗಳೆಲ್ಲ ತಮ್ಮ ಅಸ್ತಿತ್ವ ಕಳೆದುಕೊಂಡು ಇತಿಹಾಸ ಪುಟ ಸೇರದುಳಿದಾರೇ? ಇತಿಹಾಸದಿಂದ ಪಾಠ ಕಲಿತು ನಾವು ಭಾರತೀಯರು ಈಗಲೇ ಎಚ್ಚೆತ್ತುಕೊಳ್ಳಬೇಕು.

ಸೂಕ್ತ ಕಾನೂನು ಜಾರಿಗೊಳ್ಳಲು ಇದು ಸಕಾಲ. ಪ್ರಸ್ತಾವಿತ ಮತಾಂತರ ನಿಷೇಧ ಮಸೂದೆ ಪಾಸಾದರೆ ಆಮಿಷ ಪ್ರೇರಿತ ಇಂಥ ಎಲ್ಲ ಮತಾಂತರಕ್ಕೆ ಬ್ರೆಕ್ ಬೀಳಲಿದೆ. ನುಮಾನವೇ ಇಲ್ಲ, ಮತಾಂತರವು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಭಂಗಗೊಳಿಸುತ್ತದೆ. ಧರ್ಮ ಪ್ರಸಾರ ಅಥವಾ ಬೋಧನೆ ಮಾಡಬಹುದು.
ಆದರೆ ಒತ್ತಾಯದ ಮತ್ತು ಆಮಿಷದ ಮತಾಂತರ ಆಗಬಾರದು. ಇಂಥ ಮಿಷನರಿಗಳ ತಂತ್ರವನ್ನು ಚೆನ್ನಾಗಿ ಅರಿತಿದ್ದ ಮಹಾತ್ಮ ಗಾಂಧೀಜಿ, ‘ಈ ದಿನ ಏಸುವು ಸ್ವರ್ಗದಿಂದ ಇಳಿದು ಬಂದರೆ ಮಿಷನರಿಗಳ ತಂತ್ರವನ್ನು ಕಂಡು ಬೆಚ್ಚಿಬೀಳುತ್ತಾನೆ’ ಎಂದಿದ್ದರು.

ಭೌತಿಕ ಒತ್ತಾಯ ಅಥವಾ ಬೆದರಿಕೆ ಮೂಲಕ ಅಷ್ಟಾಗಿ ಕ್ರೈಸ್ತ ಮಿಷನರಿಗಳಿಂದ ಮತಾಂತರ ಆಗುತ್ತಿಲ್ಲ,. ಬದಲಾಗಿ ಹಣ, ಅಧಿಕಾರದ ಜತೆಗೆ ದಯೆ, ರೋಗ
ನಿವಾರಕ ಶಕ್ತಿ ಎಂಬ ಮರಳು ಮಾತುಗಳಿಂದ ಮತಾಂತರ ನಿರಂತರವಾಗಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹಿಂದುಳಿದವರ, ಕೆಳವರ್ಗದ
ಕಾಲನಿಗಳು, ಕೊಳೆಗೇರಿಗಳು, ಬುಡಕಟ್ಟು ಸಮುದಾಯದ ವಾಸ ತಾಣ ಮುಂತಾದವು ಮತಾಂತರಕ್ಕೆ ಆಯಕಟ್ಟಿನ ಸ್ಥಳಗಳಾಗಿ ಮಾರ್ಪಟ್ಟಿವೆ.

ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರನ್ನು ಗುರಿಯಾಗಿಸಿಕೊಂಡು ಅವರನ್ನು ಗುರುತಿಸಿ ವಿಶ್ವಾಸ ಸಂಪಾದಿಸಿ ಸಹಾಯ ಮಾಡಿ ಮತಾಂತರ ಬಲೆಗೆ ಸಿಲುಕಿಸುವ ವ್ಯವಸ್ಥೆ ವ್ಯವಸ್ಥಿತಿವಾಗಿ ನಡೆಯುತ್ತಿದೆ. ಅವರ ಮನೆಗಳನ್ನೇ ಪ್ರಾರ್ಥನಾ ಸ್ಥಳವನ್ನಾಗಿ ರೂಪಾಂತರಿಸಿ ಏಸುನ ಕೀರ್ತನೆ, ಸಾಹಿತ್ಯ ನೀಡುವುದು ಅಲ್ಲಲ್ಲಿ ನಡೆಯುತ್ತಲೇ ಇದೆ. ಆರ್ಥಿಕ, ವೈದ್ಯಕೀಯ ಇತ್ಯಾದಿ ನೆರವಿನ ಸುದ್ದಿ ಹಬ್ಬಿಸುವುದು, ಪ್ರಾರ್ಥನೆ, ಊಟ, ಬಟ್ಟೆ, ಪ್ರಸಾದ ವಿತರಣೆಗಳು ನಿರಂತರವಾಗಿದೆ. ದೇವರು ಒಬ್ಬನೇ; ನಿಮ್ಮ ದೇವರೇ ನಮ್ಮ ದೇವರು ಎಂದು ನಂಬಿಸಿ, ಅದು ಗಟ್ಟಿಗೊಳ್ಳುತ್ತಿದ್ದಂತೆ ಬಹು ದೇವರುಗಳ ಫೋಟೋಗಳನ್ನು ತೆಗೆಸಿ ಏಸುವಿನ ಫೋಟೋ ಹಾಕಿಸುವುದು, ಬಳೆ, ಕುಂಕುಮಗಳನ್ನು ತ್ಯಜಿಸುವಂತೆ ಮಾಡುವುದು, ಪಾರಂಪರಿಕ ಹಬ್ಬಗಳನ್ನು ಕಡೆಗಣಿಸಿ ತಮ್ಮ ಹಬ್ಬವನ್ನು ವೈಭವದಿಂದ ಆಚರಿಸಲು ಪ್ರೋತ್ಸಾಸುವುದು ಹೀಗೆ ಮುಂದುವರಿದಿದೆ ಮತಾಂಧರ ದಂಧೆ! ಇದನ್ನು ದೇಶಭಕ್ತರು ಮತ್ತು ಆಳುವವರು ಅರ್ಥಮಾಡಿಕೊಳ್ಳಬೇಕಾಗಿದೆ.

ಮತಾಂತರ ಇದು ದೇಶ ನೀಡಿದ ಕೊಡುಗೆ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಾರೆ. ಕೆಲವು ಸಾಹಿತಿಗಳಲ್ಲೂ ಇದೇ ಭಾವನೆ ಇದೆ. ಆದರೆ ಕಾನೂನು ಹಾಗೆ ಇಲ್ಲ. ನ್ಯಾ. ಎಂ. ರಾಮಾಜೋಯಿಸರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ, ಮತಾಂತರ ದಿಂದ ಸಮಾಜದಲ್ಲಿ ಸಂಘರ್ಷಗಳು ಉಂಟಾಗಿ ಕುಟುಂಬಗಳು ಒಡೆಯುತ್ತವೆ. ಆ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಮತಾಂತರ ಬೇಡ ಎನ್ನುತ್ತದೆ. ಸಂವಿಧಾನದಲ್ಲಿ ’ಊಛಿಛಿbಟಞ ಟ್ಛ ಛ್ಝಿಜಿಜಜಿಟ್ಞ’ ಅಂದರೆ ‘ಜಿಜeಠಿ ಠಿಟ mಟmZಜZಠಿಛಿ ಟ್ಞಛಿ’o ಛ್ಝಿಜಿಜಜಿಟ್ಞ‘ ಎಂದಿದೆ. ಈ ಮಾತಿನ ಅರ್ಥ ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಆಚರಿಸುವ, ಬೋಧಿಸುವ ಹಕ್ಕು ಇದೆಯೇ ಹೊರತು ಇನ್ನೊಬ್ಬರನ್ನು ಮತಾಂತರಿಸುವ ಹಕ್ಕು ಇಲ್ಲ.

ಈ ಬಗ್ಗೆ ೧೯೭೭ರ ಸರ್ವೋನ್ನತ ನ್ಯಾಯಾಲಯ ಪೂರ್ಣ ಪೀಠದ ತೀರ್ಪಿನ ಒಂದು ಭಾಗ ಹೀಗಿದೆ- ಅಐ ೧೯೭೭ ಖ್ಠmಛಿಞಛಿ ಇಟ್ಠ್ಟಠಿ, ೯೯೮=೧೯೭೭.
ಇಐ ಔ.ಒ. ೫೫೧)‘ಅಇಈ ಇಟ್ಞoಠಿಜಿಠ್ಠಿಠಿಜಿಟ್ಞ ಟ್ಛ ಐbಜಿZ. ಅಠಿಜ್ಚ್ಝಿಛಿ (೧) ಊಛಿಛಿbಟಞ ಟ್ಛ ಛ್ಝಿಜಿಜಜಿಟ್ಞಜಿಜeಠಿ ಠಿಟ mಟmZಜZಠಿಛಿ ಟ್ಞಛಿ’o ಛ್ಝಿಜಿಜಜಿಟ್ಞIಛಿZಜ್ಞಿಜ Seಛ್ಟಿಛಿ ಜಿo ಟ bZಞಛ್ಞಿಠಿZ ಜಿಜeಠಿ ಠಿಟ ಟ್ಞqಛ್ಟಿಠಿ Zqs mಛ್ಟಿoಟ್ಞ ಠಿಟ ಟ್ಞಛಿ’o ಟಡ್ಞಿ ಛ್ಝಿಜಿಜಜಿಟ್ಞ’. ಸಂವಿಧಾನದಲ್ಲಿ ಧರ್ಮಬೋಧನೆಗೆ ಅವಕಾಶವಿ ದೆಯೇ ಹೊರತು ಮತಾಂತರಕ್ಕೆ ಅವಕಾಶವಿಲ್ಲ.

‘ಈಶ್ವರ, ಅಲ್ಲಾ (ಏಸು) ತೇರೇ ನಾಮ್, ಸಬಕೋ ಸನ್ಮತಿ ದೇ ಭಗವಾನ್’ ಇಂಥ ಸಾಲುಗಳು ಹಿಂದೂಗಳ ಬಾಯಿಂದ ಬರುತ್ತದೆ. ಆದರೆ, ಉಳಿದವರ ಬಾಂಯಿದ ಇವನ್ನು ಕೇಳಿಲ್ಲ. ಇದೇ ಕಾರಣಕ್ಕಾಗಿ ಮತಾಂತರ ನಿಷೇಧ ಜಾರಿ ಅತ್ಯಗತ್ಯ. ಮಧ್ಯಪ್ರದೇಶ, ಒರಿಸ್ಸಾ, ಗುಜರಾತ್ ರಾಜ್ಯಗಳಲ್ಲಿ ಇರುವಂತೆ ಮತಾಂತರ ನಿಷೇಧ ಕಾನೂನನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಬೇಕು. ಗಾಂಧೀಜಿ ಹೇಳುತ್ತಾರೆ – ಱಐ ಐ eZb ಠಿeಛಿ mಟಡಿಛ್ಟಿ Zb ಟ್ಠ್ಝb ಛಿಜಜಿoZಠಿಛಿ, ಐ oeಟ್ಠ್ಝb oಠಿಟm Z mಟoಛ್ಝಿqsಠಿಜ್ಢಿZಠಿಜಿಟ್ಞ‘ ಮತಾಂತರಕ್ಕೆ ಇನ್ನೊಂದು ಫಲವಾದ ಕಾರಣವಿದೆ; ಅದೇನೆಂದರೆ, ಹಿಂದೂಗಳ ಒಳಕಚ್ಚಾಟ. ಇದು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳ ವಿಸ್ತರಣೆಗೆ ಮೂಲ ಕಾರಣ. ಇದನ್ನು ಈಗಿನ ಬಹುಸಂಖ್ಯಾತ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ. ಆ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯ ಈಡೇರಿಸಲು ಮತಾಂತರ ನಿಷೇಧ ಜಾರಿಗೊಳಿಸಬೇಕು. ಇದು ಬಾಪೂಜಿ ಅವ ರಿಗೆ ನಾವು ಕೊಡುವ ನಿಜವಾದ ಗೌರವ.

ಗಾಂಧೀಜಿ ನೆರಳಲ್ಲಿ ಬೆಳೆದ ಪಕ್ಷಗಳು ಗಾಂಧೀಜಿಯವರ ಆಸೆಗಳನ್ನು ಪೂರೈಸಲಿಲ್ಲ ಎನ್ನುವ ಸಂಗತಿಯನ್ನು ಮರೆಯಬಾರದು!  ಈಗೊಮ್ಮೆ ಇತಿಹಾಸವನ್ನು ಗಮನಿಸೋಣ. ವಾಸ್ಕೋಡ ಗಾಮ ೧೪೯೮ರಲ್ಲಿ ಕಲ್ಲಿಕೋಟೆ ತಲುಪಿದ, ಮುಂದೆ ಪೋರ್ಚುಗೀಸರಿಂದ ವ್ಯಾಪಾರ ಆರಂಭ ವಾಗಿ ಗೋವಾ ಅವರ ವಶವಾಯಿತು. ಕ್ರಿ.ಶ. ೧೬೦೦ ರಲ್ಲಿ ಸ್ಥಾಪಿತವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ರಾಣಿ ಎಲಿಜಬೆತ್‌ರಿಂದ ಅಽಕೃತ ಆದೇಶ ಪಡೆದು ಭಾರತದಲ್ಲಿ ಮುಂಬಯಿ, ಕೋಲ್ಕತಾ, ಚೆನ್ನೈ ಬಂದರು ಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಆರಂಭಿಸಿತು.

ಮುಂದೆ ಫ್ರೆಂಚರು ವ್ಯಾಪಾರದ ನಿಮಿತ್ತ ಬಂದು ಪುದುಚ್ಚೇರಿಯನ್ನು ಕೇಂದ್ರವಾಗಿಸಿಕೊಂಡರು. ಔರಂಗಜೇಬನ ಸಾವಿನ ಬಳಿಕ ೧೭೦೦ ರಿಂದ ಈಸ್ಟ್ ಇಂಡಿಯಾ ಕಂಪನಿ ಒಂದು ಪ್ರಬಲ ಶಕ್ತಿಯಾಗಿ ಬೆಳೆಯಿತು. ೧೭೫೭ರಲ್ಲಿ ರಾಬರ್ಟ್ ಕ್ಲೈವ್ ಭಾರತೀ ಯರನ್ನು ಪ್ಲಾಸಿ ಕದನದಲ್ಲಿ ಬ್ರಿಟೀಷ್ ಸೈನ್ಯದ ಸಹಾಯದಿಂದ
ಸೋಲಿಸಿ ಆ ಕಂಪನಿ ಪ್ರಬಲ ಆಡಳಿತ ಶಕ್ತಿಯಾಗಿ ಬೆಳೆಯಲು ಕಾರಣವಾದರು. ಈ ಎಲ್ಲದರ ಪರಿಣಾಮ ಹಿಂದೂಗಳ ಅವನತಿ ಆರಂಭವಾಯಿತು.

ಪೋರ್ಚುಗೀಸರು ಗೋವಾದಲ್ಲಿ ಹಿಂದೂಗಳನ್ನು ಬೆದರಿಸಿ ಅವರ ದೇವಾಲಯಗಳನ್ನು ಸುಟ್ಟು, ಅವರ ಚರ್ಮ ಸುಲಿದು, ಬೆಂಕಿಯ ಉರಿ ಮಧ್ಯೆ ನಿಲ್ಲಿಸಿ ಸುಡುವ ಬೆದರಿಕೆ ಹಾಕಿ, ಸಾರಾರು ಜನರನ್ನು ಮತಾಂತರಗೊಳಿಸಿದರು! ಈ ಷಯ ಗೋವಾ ಚರಿತ್ರೆಯಲ್ಲಿ ದಾಖಲಾಗಿದೆ. ಹಲವು ಹಿಂದೂಗಳನ್ನು ಕಂಬಕ್ಕೆ ಕಟ್ಟಿ ಜೀವಂತ ಸುಟ್ಟು ಹಾಕಿದರು ಎನ್ನುವುದೂ ಇದೆ! ೧೬೮೪ರ ಪೋರ್ಚುಗೀಸ್ ರಾಜಾಜ್ಞೆ ಪ್ರಕಾರ, ಗೋವಾದಲ್ಲಿ ಸ್ಥಳಿಯ ಭಾಷೆಯನ್ನು ಯಾರೂ ಮಾತನಾಡುವಂತಿರಲಿಲ್ಲ. ಪೋರ್ಚುಗೀಸ್ ದೊರೆ ಮೂರನೇ ಜೋಆಎ ಇಲ್ಲಿಯ ವೈಸರಾಯ್‌ಗೆ ಪತ್ರ ಬರೆದು ಲೋಹ, ಮರ, ಶಿಲೆ ಯಾವುದೇ ಆಗಿರಲಿ ಎಲ್ಲ ಗ್ರಹಗಳನ್ನು ನಾಶ ಪಡಿಸಬೇಕು ಎಂದು ಆಜ್ಞೆ ಹೊರಡಿಸಿದ!

ಹೀಗಾಗಿ ಗೋವಾದಲ್ಲಿ ವಾಸಿಸುವ ಬಹುದೇವತಾ ಆರಾಧಕರು ಏಕದೇವತಾ ಆರಾಧಕರಾಗಿ ಪರಿವರ್ತನೆ ಹೊಂದಿದರು! ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಬಲವಂತದಿಂದ ಅಥವಾ ಪ್ರಚೋದನೆ ಮೂಲಕ ಮತಾಂತರ ಮಾಡುವುದನ್ನು ನಿಷೇದಿಸಲಾಗಿದೆ. ೨೦೦೩ರಲ್ಲಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ಜಾರಿಗೊಳಿಸಿದರು. ಬಲವಂತದ ಅಥವಾ ಪ್ರಚೋದನೆಯ ಮತಾಂತರವನ್ನು ಶಿಕ್ಷಾರ್ಹ ಅಪರಾಧ ವೆಂದು ಈ ಕಾಯಿದೆ ಪರಿಗಣಿಸುತ್ತದೆ.

ಅದೇ ನರೇಂದ್ರ ಮೋದಿ ಇಂದು ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಾಗಿ ದೇಶಾದ್ಯಂತ ಅನ್ವಯವಾ ಗುವಂತೆ ಮತಾಂತರ ನಿಷೇಧ ಕಾಯ್ದೆ
ಜಾರಿಗೊಳಿ ಸಬಹುದೆನ್ನುವ ಚರ್ಚೆಯೂ ಇದೆ. ಗುಜರಾತ್‌ನಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯಿದೆ ಪ್ರಕಾರ ಯಾವುದೇ ವ್ಯಕ್ತಿ ನೇರವಾಗಿ/ಪರೋಕ್ಷವಾಗಿ ಬಲವಂತ ಅಥವಾ ಆಮಿಷದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಮತಾಂತರ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ, ಅಂತಹ ವ್ಯಕ್ತಿಗೆ ಕನಿಷ್ಠ ೩ ವರ್ಷ ಜೈಲು ಶಿಕ್ಷೆ ಮತ್ತು ೫೦,೦೦೦ರೂ. ದಂಡ ವಿಧಿಸಲು ಅವಕಾಶವಿದೆ. ಮಹಿಳೆಯರು, ಮಕ್ಕಳು ಮತ್ತು ಪರಿಶಿಷ್ಟ ಸಮುದಾಯದವರನ್ನು ಈ ರೀತಿಯ
ಬಲವಂತದ ಮತಾಂತರಕ್ಕೆ ಒಳಪಡಿಸಿದರೆ ಅಂತಹ ಅಪರಾಧಗಳಿಗೆ ಕನಿಷ್ಠ ೪ ವರ್ಷ ಜೈಲು ಮತ್ತು ೧ ಲಕ್ಷ ರೂ.ದಂಡ ವಿಧಿಸಲು ಅವಕಾಶವಿದೆ.

ಈ ಕಾಯಿದೆ ಪ್ರಕಾರ, ಮತಾಂತರಕ್ಕೆ ಮುನ್ನ, ಜಿಲ್ಲಾ ದಂಡಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ. ಜೈನ ಮತ್ತು ಬೌದ್ಧ ಧರ್ಮಗಳನ್ನು ಹಿಂದೂ ಧರ್ಮ
ಗಳ ಅಂಗಗಳೆಂದು ಈ ಕಾಯಿದೆ ಪರಿಗಣಿಸುತ್ತದೆ. ೨೦೧೧ರ ಜನಗಣತಿ ಪ್ರಕಾರ ಭಾರತದಲ್ಲಿ ಶೇ.೭೯ರಷ್ಟು ಹಿಂದೂಗಳು ಇದ್ದರೆ, ಎರಡನೇ ಸ್ಥಾನದಲ್ಲಿ
ಶೇ.೧೪.೨ರಷ್ಟು ಮುಸ್ಲಿಮ್ ಸಮುದಾಯ ಇದೆ. ಶೇ.೨.೩ರಷ್ಟು ಕ್ರೈಸ್ತರು ಇದ್ದಾರೆ. ಅರುಣಾಚಲ ಪ್ರದೇಶ ರಾಜ್ಯದಲ್ಲಿ ೧೯೭೮ರಲ್ಲಿ, ಗುಜರಾತ್ ರಾಜ್ಯದಲ್ಲಿ ೨೦೦೩ರಲ್ಲಿ, ಮಧ್ಯಪ್ರದೇಶ ರಾಜ್ಯದಲ್ಲಿ ೨೦೦೬ರಲ್ಲಿ, ಛತ್ತೀಸ್‌ಗಢ ರಾಜ್ಯದಲ್ಲಿ ೨೦೦೬ರಲ್ಲಿ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ೨೦೦೭ರಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಬಂದಿದೆ.

ಆಫ್ರಿಕಾದ ಡೆಸ್ಮಂಡ್ ಟುಟು ಮತಾಂತರ ಬಗ್ಗೆ ಹೀಗೆ ಹೇಳುತ್ತಾರೆ, ಮತಾಂತರವೆಂದರೆ ಅದು ಕೇವಲ ನಮ್ಮ ದೇವರುಗಳ ಬದಲಾವಣೆಯಲ್ಲ ಅದರಾಚೆ ಇರುವ ನಮ್ಮ ಸಂಸ್ಕೃತಿ, ನಮ್ಮ ಬದುಕು, ನಮ್ಮ ಪರಿಸರವನ್ನು ಬದಲಾಯಿಸುತ್ತದೆ. ಮಿಷನರಿಗಳು ಆಫ್ರಿಕಾಕ್ಕೆ ಬಂದಾಗ ಅವರ ಕೈಯಲ್ಲಿ ‘ಬೈಬಲ್’ ಇತ್ತು, ಆಪ್ರಿಕನ್‌ರ ಕೈಯಲ್ಲಿ ‘ಭೂಮಿ’ ಇತ್ತು. ಎಲ್ಲರೂ ಸೇರಿ ಜತೆ ಜತೆಯಲ್ಲಿ ಪ್ರಾರ್ಥನೆ ಮಾಡೋಣವೆಂದರು. ಆಪ್ರಿಕನ್ನರು ಪ್ರಾರ್ಥನೆಗೆಂದು ಕಣ್ಣುಮುಚ್ಚಿ ತೆರೆದಾಗ, ಮಿಷನರಿಗಳ ಕೈಗೆ ನಮ್ಮ ‘ಭೂಮಿ’ ಬಂದಿತ್ತು, ನಮ್ಮ ಕೈಗೆ ಅವರು ಬೈಬಲ್ ಕೊಟ್ಟಿದ್ದರು. ಈ ಅಭಿಪ್ರಾಯ ಎಷ್ಟೊಂದು ಕುತೂಹಲಕಾರಿಯಾಗಿದೆ ಅಲ್ಲವೇ? ‘ಮತಾಂತರ’ವೆನ್ನುವುದು ಏಕ ದೇವತಾ ಆರಾಧಕರ ಪಾಲಿಗೆ ಪುಣ್ಯಕಾರ್ಯ.

ಅವರ ಪ್ರಕಾರ, ಅವರ ಧರ್ಮಗಳು ಮಾತ್ರ ಮಾನವಕುಲಕ್ಕೆ ದೇವನ ಇಚ್ಛೆಯನ್ನು ತಿಳಿಸುವ ನಿಜವಾದ ವಾಣಿಗಳು! ‘ತಮ್ಮದು ಮಾತ್ರ ಸತ್ಯ, ಉಳಿದಿದ್ದೆಲ್ಲ ಸುಳ್ಳು’ ಎನ್ನುವ ರೀತಿಯಲ್ಲಿ ಏಕದೇವತಾ ಆರಾಧಕರು ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. Seಛಿ ಛಿq ಖಠಿZಜಿoZo q/o IZbeqsZ PZbಛಿoe ಪ್ರಕರಣದಲ್ಲಿ: ಜಸ್ಟೀಸ್ ಎ.ಎನ್ ರೇ ಅವರಿದ್ದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ನೀಡಿದ ತೀರ್ಪಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಮತಾಂತರದ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳು, ಸ್ವಾತಂತ್ರ್ಯದ ಬಗ್ಗೆ ಧರ್ಮದಲ್ಲಿ ಏನಿದೆ ಎಂಬುದರ ಉಲ್ಲೇಖ ದೊಂದಿಗೆ ಆದೇಶ ಹೊರಡಿಸಲಾಗಿದೆ. ಭಾರತೀಯ ಸಂವಿಧಾನ ಪರಿಚ್ಛೇದ ೨೫ರ ಅನ್ವಯ ಧಾರ್ಮಿಕ ಸ್ವಾತಂತ್ರ್ಯ ಎಲ್ಲ ಧರ್ಮೀಯರಿಗೂ ಒಂದೇ ಆಗಿದೆ.

ಅದರೆ, ಧರ್ಮ ಪರಿಪಾಲನೆ, ಜಾತೀಯತೆ ಎತ್ತಿ ಹಿಡಿಯುವ ಪ್ರಚಾರ ಮಾಡುವ ಸ್ವಾತಂತ್ರ್ಯವಿದ್ದರೂ ಮತಾಂತರದ ಹಕ್ಕು ನೀಡಲಾಗಿಲ್ಲ. ಪರಿಚ್ಛೇದ ೨೫(೧)ರಲ್ಲಿ ಜಾತಿ, ಧರ್ಮ ಪ್ರಚಾರ, ಬೆಳೆಸುವುದರ ಬಗ್ಗೆ ಉಲ್ಲೇಕವಿದ್ದರೂ ಒಂದು ಧರ್ಮದ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಮತಾಂತರಿಸುವ ಹಾಗಿಲ್ಲ. ಒಬ್ಬ ವ್ಯಕ್ತಿ ಇನ್ನೊಂದು ಧರ್ಮದ ವಿರುದ್ಧ ಪ್ರಚಾರ ಮಾಡಿ ಮರಳು ಮಾಡುವಂತಿಲ್ಲ. ಧರ್ಮ ಪ್ರಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

(…ಮುಂದುವರಿಯುವುದು)