ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ, ಅಷ್ಟೇ ಅಚ್ಚರಿ ಫಲಿತಾಂಶ
ನೀಡಿದೆ. ಹಾಗೆ ನೋಡಿದರೆ ಹೀಗೆಯೇ ಎಂದು ಕೊನೇ ಕ್ಷಣದವರೆಗೂ ಊಹಿಸಲು ಸಾಧ್ಯವಾಗದಿದ್ದ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ
ಗೆದ್ದಿ ದ್ದಾರೆ. ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಲಖನ್ ಗೆದ್ದಿದ್ದಾರೆ.
ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಹಾಗೂ ಇನ್ನೊಬ್ಬ ಮುಖಂಡ ಬಾಲಚಂದ್ರ ಜಾರಕಿಹೊಳಿ ಎಲ್ಲರಿಗೂ ಈತ ಸೋದರ. ಈ ಪೈಕಿ ಸತೀಶ್ ಕಾಂಗ್ರೆಸ್ ನಲ್ಲಿದ್ದರೆ, ಉಳಿದವರೆಲ್ಲರೂ ಬಿಜೆಪಿ. ಇನ್ನೂ ವಿಶೇಷವೆಂದರೆ ಜಾರಕೀಹೊಳಿ ಕುಟುಂಬ ಸೇರಿದಂತೆ ಬೆಳಗಾವಿಯ ನಾಯಕ ರೆಲ್ಲರಿಗೂ ಸಡ್ಡು ಹೊಡೆದು ಬೆಳೆಯುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೋದರ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆದ್ದಿದ್ದಾರೆ. ಇದನ್ನು ಹೇಗೆ ವಿಶ್ಲೇಷಿಸುವದೆಂಬುದೇ ರಾಜಕೀಯ ಪರಿಣತರಿಗೆ ಗೊಂದಲವಾಗಿದೆ.
ಏಕೆಂದರೆ, ಸೋದರ ಗೆದ್ದುದಕ್ಕೆ ಸತೀಶ್-ರಮೇಶ್ ಇಬ್ಬರೂ ಸಂಭ್ರಮಿಸುವಂತಿಲ್ಲ. ಸತೀಶ್‌ಗೆ ಆತ ವಿರೋಧ ಪಕ್ಷದಿಂದ ಬಂಡಾಯವಾಗಿ ಗೆದ್ದವ. ಮಾತ್ರವಲ್ಲ, ಅವರ ಪಕ್ಷದ ಅಧಿಕೃತ ಅಭ್ಯರ್ಥಿಯೂ ಗೆದ್ದಿದ್ದಾರೆ. ರಮೇಶ್‌ಗೆ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಲಕನ್ ಸೋಲಿಸಿರುವುದು. ಹೀಗಾಗಿ ಮುಜುಗರದ ಪ್ರಮೇಯ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅವರು, ಜಿದ್ದಾಜಿದ್ದಿಯಿಂದ ಕೂಡಿದ್ದ ಮತ್ತು ತ್ರಿಕೋನ ಹಣಾಹಣಿಯಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.
ಇನ್ನ ಕಾಂಗ್ರೆಸ್ ನಿಂದಲೂ ಮೊದಲಿಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಗೆದ್ದಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ರಾಜಕೀಯ ತಂತ್ರಗಾರಿಕೆ, ಹಾಗೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪಕ್ಷದಲ್ಲಿನ ಅವರ ಹಿಡಿತ ಹೆಚ್ಚಬಹುದು. ಆದರೆ, ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿ ಹಾಗೂ ಜಿಲ್ಲೆಯಲ್ಲಿ ರಮೇಶ್ ಸ್ಥಾನ ಕೆಳಕ್ಕೆ ಹೋದಂತೆಯೇ ಎಂದು ವಿಶ್ಲೇಷಿಸಲಾಗುತ್ತಿದೆ. ಮಾತ್ರವಲ್ಲ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ರಮೇಶ ಜಾರಕಿಹೊಳಿ ವಿರುದ್ಧ ಸತೀಶ್ ಸೇಡು ತೀರಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.