ಪರಿಷತ್ ಫಲಿತಾಂಶ ರಾಜಕೀಯ ದಿಕ್ಸೂಚಿಯಲ್ಲ
ಆಡಳಿತ ವಿರೋಧಿ ಅಲೆಯೂ ಇಲ್ಲ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿಯೂ ಅಲ್ಲ. ಬಿಜೆಪಿ ಆಡಳಿತ ವಿರೋಽ ಅಲೆಯ ಲಕ್ಷಣವೂ ಅಲ್ಲ. ಬದಲಾಗಿ ಇದು ಬಿಜೆಪಿಯಲ್ಲಿರುವ ವಲಸೆ ಸಚಿವರು, ಶಾಸಕರು ವಾಪಸ್ ಕಾಂಗ್ರೆಸ್ ಹೋಗುವ ಮುನ್ನೂಚನೆಯೇ ಈ
ಪರಿಯ ಪ್ರಶ್ನೆ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಫಲಿತಾಂಶದ ನಂತರ ಕೇಳಲಾರಂಭಿಸಿದೆ.
ಇದನ್ನು ಮೇಲ್ನೋಟಕ್ಕೆ ಒಪ್ಪುವುದು ಕಷ್ಟವಾದರೂ ಚುನಾವಣೆ ಹಿನ್ನೆಲೆಯಲ್ಲಿ ನಡೆದಿರುವ ಬೆಳವಣಿಗೆಗಳು, ಪ್ರಕಟವಾಗಿರುವ ಫಲಿತಾಂಶಗಳು ವಲಸೆ ರಾಜಕಾರಣದ ಮುನ್ನೂಚನೆಯನ್ನೂ ನೀಡಲಾರಂಭಿಸಿವೆ.
ಹೇಗೆಂದರೆ, ಸದ್ಯದ ಫಲಿತಾಂಶದ ಪ್ರಕಾರ 25 ಸ್ಥಾನಗಳ ಪೈಕಿ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಪಡೆದಿವೆ. ಜೆಡಿಎಸ್ 2 ಸ್ಥಾನಗಳಿಗೆ ಸುಸ್ತಾದರೆ, ಬಿಜೆಪಿಯ ಬಂಡಾಯ ಅಭ್ಯರ್ಥಿಯೊಬ್ಬರು ಗೆದ್ದಿದ್ದಾರೆ. ಈ ಫಲಿತಾಂಶವನ್ನು ಗಮನಿಸಿದರೆ, ಈ ಚುನಾವಣೆಯಲ್ಲಿ ಬಿಜೆಪಿಗೆ ಅಂತಹಾ ಲಾಭವೇನೂ ಆಗಿಲ್ಲ.
ಕಾಂಗ್ರೆಸ್ಗೆ ಹೇಳಿಕೊಳ್ಳುವ ನಷ್ಟವೂ ಸಂಭವಿಸಿಲ್ಲ. ಜೆಡಿಎಸ್ ಮಾತ್ರ ಕೈಯಲ್ಲಿದ್ದ ಸ್ಥಾನಗಳನ್ನು ಕಳೆದು ಕೊಂಡಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮಾಡಿದ್ದ ಕನಿಷ್ಟ 15 ಸ್ಥಾನಗಳ ಗಳಿಕೆ ಕಾರಣ ವಲಸೆ ಸಚಿವರು, ಶಾಸಕರು ಎನ್ನುವ ಚರ್ಚೆ ಬಿಜೆಪಿಯಲ್ಲಿದೆ. ಇದಕ್ಕೆ ಇಂಬು ನೀಡುತ್ತಿರುವುದು ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿರುವುದು.
ಯಾರಿಗೆ ಕಷ್ಟ, ಯಾರಿಗೆ ನಷ್ಟ: ಫಲಿತಾಂಶದ ಹಿನ್ನೆಯಲ್ಲಿ ಪಕ್ಷಗಳ ಹೋರಾಟಗಳನ್ನು ಗಮನಿಸಿದರೆ, ಬಿಜೆಪಿ ತನ್ನಲ್ಲಿದ್ದ ೬ ಸ್ಥಾನಗಳ ಜತೆ ಈ ಚುನಾವಣೆಯಲ್ಲಿ ಹೆಚ್ಚುವರಿ 5 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಬಿಜೆಪಿಆಡಳಿತ ಪಕ್ಷವಾಗಿ 127 ಶಾಸಕರನ್ನಿಟ್ಟಿಕೊಂಡು ಕೇವಲ 5 ಸ್ಥಾನಗಳನ್ನಷ್ಟೇ ಪಡೆದಿರುವುದು ಕಡಿಮೆಯೇ. ಈ ಚುನಾವಣೆಗೆ ಬಿಜೆಪಿಗೆ ಅಷ್ಟೇನೂ ಲಾಭದಾಯಕವೇನಲ್ಲ.
ಅಂದ ಮಾತ್ರಕ್ಕೆ ಇದನ್ನು ಆಡಳಿತವಿರೋಧಿ ಅಲೆ, ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಹೇಳಲಾಗದು. ಕಾಂಗ್ರೆಸ್ 66 ಶಾಸಕರನ್ನಿಟ್ಟುಕೊಂಡು
ತನ್ನಲ್ಲಿದ್ದ 14 ಸ್ಥಾನಗಳ ಪೈಕಿ ಕೇವಲ ೩ ಸ್ಥಾನಗಳನ್ನು ಕಳೆದುಕೊಂಡಿರುವುದು ದೊಡ್ಡ ನಷ್ಟವೇನಲ್ಲ.ಇನ್ನು ಗೆಲ್ಲಲೇಬೇಕೆಂದು ಕೇವಲ ೬ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದ್ದ ಜೆಡಿಎಸ್ ಕೇವಲ ೨ಸ್ಥಾನಗಳಲ್ಲಿ ಪ್ರಯಾಸದ ಗೆಲವು ಸಾಧಿಸಿದ್ದನ್ನು ಗಮನಿಸಿದರೆ ಇದು ಹಳೇ ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಭಾಗದಲ್ಲಿ ಅಸಿತ್ವಕ್ಕೇ ಧಕ್ಕೆ ತಂದುಕೊಳ್ಳುತ್ತಿರುವ ಸೂಚನೆ ಎಂದರೂ ತಪ್ಪಲ್ಲ.
ಏಕೆಂದರೆ ೭ ಶಾಸಕರನ್ನು ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯವರು ಕಾಂಗ್ರೆಸ್ ಗೆ ವಲಸೆ ಬಂದು ದಿಢೀರ್ ಸ್ಪಽಸಿಗೆಲ್ಲುತ್ತಾರೆ ಎಂದು
ಮತದಾರರನ್ನು ಇನ್ನೂ ಜೆಡಿಎಸ್ ಪರ ನಿಲ್ಲಲ್ಲು ಮನಸ್ಸು ಮಾಡುತ್ತಿಲ್ಲ ಎನ್ನುವ ಸಂದೇಶ ರವಾನಿಸುತ್ತದೆ.
ವಲಸಿಗರ ಮೇಲೆ ಮತ್ತೆಗುಮಾನಿ!: ವಲಸಿಗ ಸಚಿವರು, ಶಾಸಕರ ಉಸ್ತುವಾರಿಯಲ್ಲಿದ್ದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಕೆಲವು ಕಡೆ ಕಡಿಮೆ
ಅಂತರದಲ್ಲಿ ಗೆದ್ದಿವೆ. ಅದರಲ್ಲೂ ಮಂಡ್ಯ ಉಪ ಚುನಾವಣೆಯಲ್ಲಿಅದ್ಧೂರಿ ಗೆಲವು ಸಾಧಿಸಿ ಸಚಿವರೂ ಆಗಿರುವ ನಾರಾಯಣಗೌಡರು ತಮ್ಮ
ಕ್ಷೇತ್ರ ದಲ್ಲಿ ಬಿಜೆಪಿಯನ್ನೂ ಮೂರನೆ ಸ್ಥಾನಕ್ಕೆ ಇಳಿಸಿದ್ದಾರೆ. ಅಂದರೆ ಇಲ್ಲಿ ನಾರಾಯಣಗೌಡರು ಯಾವ ಪಕ್ಷದ ಪರ ಕೆಲಸ ಮಾಡಿದ್ದಾರೆ ಎನ್ನುವ ಪ್ರಶ್ನೆ
ಬಿಜೆಪಿಯ ನಾಯಕರದು. ಇದೇರೀತಿ ವರ್ಷದ ಹಿಂದೆಯೇ ಪ್ರಚಾರ ಆರಂಭಿಸಿದ್ಧ ಮೈಸೂರಿನಲ್ಲಿ ರಘು ಕೌಟಿಲ್ಯ ಮೂರನೆ ಸ್ಥಾನಕ್ಕೆ ಹೋಗಿ
ಸೋತಿರುವುದು ಕೂಡ ಅನುಮಾನ ಹುಟ್ಟಿ ಹಾಕಿದೆ.
ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಯನ್ನು ಈತನಕ ತಮ್ಮಲ್ಲಿ ಇರಿಸಿಕೊಂಡಿದ್ದ ಸಚಿವ ಸೋಮಶೇಖರ್ ಅವರು ಮೈಸೂರಿನಲ್ಲಿ ಏಕೆ ಬಿಜೆಪಿ ಸೋಲಿಸುವು ದಕ್ಕೆ ಬಿಟ್ಟಿದ್ದಾರೆ ಎಂದು ಮೂಲ ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ.
ಇನ್ನು ಚುನಾವಣಾ ತಂತ್ರಗಳಲ್ಲಿ ನಿಪುಣರಾಗಿ ಕೋಲಾರ ಉಸ್ತುವಾರಿ ಪಡೆದಿದ್ದ ಸಚಿವರಾದ ಡಾ.ಸುಧಾಕರ್ ಮತ್ತು ಮುನಿರತ್ನ ಅವರು ಕಾಂಗ್ರೆಸ್
ಗೆಲ್ಲುವುದಕ್ಕೆ ಹೇಗೆ ಅವಕಾಶ ನೀಡುತ್ತಾರೆ ಎನ್ನುವ ಮಾತುಗಳು ಕೂಡ ಚರ್ಚೆಗೆ ಬಂದಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್
ಅವರು ಬಿಜೆಪಿ ಗೆಲುವಿಗೆ ಮಾಡಿದ್ದಾದರೂ ಏನು ಎನ್ನುವ ಪ್ರಶ್ನೆ ಕೂಡ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಹಾಸನದಲ್ಲಿ ಗೋಪಾಲಯ್ಯ ಕಸರತ್ತು ನಡೆ ಯುವುದಿಲ್ಲ ಎಂದು ಬಿಜೆಪಿತೀರ್ಮಾನಿಸಿತ್ತು. ಹೀಗೆ ಪಕ್ಷದಲ್ಲಿವಲಸಿಗರ ಮೇಲಿನ ಶಂಕಿತ ಪ್ರಶ್ನೆಗಳು ಹೆಚ್ಚು ಗರಿಗೆದರಿವೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಗೆ ಅಪಾಯದ ಗಂಟೆ!
ಬಿಜೆಪಿ ಅನೇಕ ಕಡೆ ಕಡಿಮೆ ಅಂತರದಲ್ಲಿ ಗೆಲುವ ಸಾಧಿಸಿರುವುದನ್ನು ಕೂಡ ಪಕ್ಷ ಗಂಭೀರವಾಗಿ ಪರಿಗಣಿಸುತ್ತಿದೆ. ಅಂದರೆಮುಖ್ಯಮಂತ್ರಿ ಬೊಮ್ಮಾಯಿ
ಅವರ ತವರು ಕ್ಷೇತ್ರ ಹಾವೇರಿ, ಧಾರವಾಡ ಕ್ಷೇತ್ರಗಳಲ್ಲಿ ಪ್ರದೀಪ್ ಶೆಟ್ಟರ್, ಚಿಕ್ಕಮಗಳೂರಿನಲ್ಲಿ ಪ್ರಾಣೇಶ್ ಕಡಿಮೆ ಅಂತರದಲ್ಲಿ ಗೆದ್ದಿರುವುದು, ತುಮಕೂರು, ಕೋಲಾರ ಹಾಗೂ ವಿಜಯಪುರದಲ್ಲಿ ಸಾಧನೆ ಆಗದಿರುವುದು ಬಿಜೆಪಿಗೆ ಹಿನ್ನಡೆ. ಅದರಲ್ಲೂ ಬೆಳಗಾವಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ, ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದು, ಇದರ ಹಿಂದೆ ರಮೇಶ್ ಜಾರಕಿಹೊಳಿ ಇರಬಹುದೆಂಬ ಅನುಮಾನಗಳು ಪಕ್ಷದಲ್ಲಿ ಭಾರೀ ಚರ್ಚೆ ಉಂಟು ಮಾಡಿದೆ ಎಂದು ಪಕ್ಷದ ಹಿರಿಯರು ಹೇಳಿದ್ದಾರೆ.
***
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನೂ ಕಾಪಾಡಿಕೊಂಡುಉತ್ತಮ ಸಾಧನೆ ಮಾಡಿದೆ. ಕಡಿಮೆ
ಶಾಸಕರನ್ನಿಟ್ಟುಕೊಂಡು ಮಾಡಿರುವ ಈ ಸಾಧನೆ ನಿಜಕ್ಕೂ ದೊಡ್ಡದು. ಆದರೆ ಈ ವಿಚಾರದಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ. ಜೆಡಿಎಸ್ ಬಗ್ಗೆ ಮಾತನಾಡುವಂತೆಯೇ ಇಲ್ಲ.
-ರಮೇಶ್ ಬಾಬು ಕಾಂಗ್ರೆಸ್ ವಕ್ತಾರ