Saturday, 14th December 2024

ಅತ್ತೆ-ಸೊಸೆ ನಡುವಿನ ಸಮಸ್ಯೆ ಇತ್ಯರ್ಥಕ್ಕೆ ಒಂದಿಷ್ಟು ಸಲಹೆಗಳು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – ೧೬೬

ಸುಖ ಸಂಸಾರದ ಸೂತ್ರಗಳ ಮೌಲ್ಯ ತಿಳಿಸಿದ ಕೌಟುಂಬಿಕ ಸಲಹೆಗಾರ ನಾಗೇಶ್

ಬೆಂಗಳೂರು: ಎಲ್ಲ ಮಹಾಯುದ್ಧಗಳಲ್ಲೂ ತಾರ್ಕಿಕ ಅಂತ್ಯ ಎಂಬುದು ಇರುತ್ತದೆ. ಆದರೆ, ಅತ್ತೆ-ಸೊಸೆ ನಡುವಿನ ಸಮಸ್ಯೆಗಳಿಗೆ ತಿಲಾಂಜಲಿ ಹೇಳಬೇಕಾದರೆ ಕಷ್ಟ. ಎಷ್ಟೋ ಕುಟುಂಬಗಳ ನಡುವೆ ಅತ್ತೆ ಸೊಸೆ ನಡುವಿನ ಬಿರುಕಿಗೆ ಮುಲಾಮು ಸಿಗುವುದಿಲ್ಲ. ಆದರೂ ಕೌಟುಂಬಿಕ ಸಲಹೆಗಾರ ರಾದ ನಾಗೇಶ್ ಅವರು ಅವರು ಅತ್ತೆ-ಸೊಸೆ ನಡುವಿನ ಸಾಮರಸ್ಯದ ಸಂಗತಿಗಳನ್ನು ವಿಶ್ವವಾಣಿ ಕ್ಲಬ್‌ಹೌಸ್‌ ನಲ್ಲಿ ತಿಳಿಸಿದ್ದಾರೆ.

ಸಮಾಲೋಚನೆ ವಿಭಾಗದಲ್ಲಿ ಅತ್ತೆ ಸೊಸೆ ಸಾಮರಸ್ಯ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ಇದೆ. ಮದುವೆ ಎನ್ನುವುದು ಸಂಭ್ರಮದ ಹಂತ. ಸಂಭ್ರಮ ಮುಂದುವರಿಸಿಕೊಂಡು ಹೋಗುವುದು ಗೊತ್ತಿಲ್ಲದೆ ಪರದಾಡುತ್ತಾರೆ. ಎಷ್ಟೋ ಸಲ ನಂತರ ಪರಿಣಾಮ ನಿಭಾಯಿಸಲಾಗದೆ ಜೀವನ ಒಂದು ಹಂತಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಮದುವೆ ನಂತರ ಬರುವ ಜವಾಬ್ದಾರಿ ಪಾತ್ರ ಮೊದಲು ತಿಳಿದಿರಬೇಕು ಎಂದರು.

ಅತ್ತೆ ದೃಷ್ಟಿಕೋನದಿಂದ ನೋಡುವುದಾದರೆ ತನ್ನ ಮಗ ನನ್ನು ಬೇರೆಯವರಿಗೆ ಬಿಟ್ಟುಕೊಡುವ (ಮದುವೆ) ಹೆದರಿಕೆ ತಾಯಿಯ ಮನಸ್ಸಿನಲ್ಲಿ ಕಾಡುತ್ತದೆ. ಪ್ರಾರಂಭಿಕ ಹಂತಗಳು ಬಿಟ್ಟು ಉಳಿದ ದಿನಗಳಲ್ಲಿ ಮದುವೆ ಆದ ಮೇಲೆ ಮಗನ ಮೇಲಿನ ಜವಾಬ್ದಾರಿ ಕಳೆದುಕೊಳ್ಳುವಂತೆ ಭಯ ತಾಯಿ ಮನಸ್ಸಿನಲ್ಲಿ ಇರಲಿದೆ. ಮದುವೆ ಮಾಡಿ ಕೊಟ್ಟ ನಂತರ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎಂದು ಮಗನ ಜೀವನದಿಂದ ದೂರವಾಗಲು ಬಯಸುವುದು ಗೊತ್ತಿರುವುದಲ್ಲಿ ತಾಯಿಗೆ.

ಗಂಡ-ಹೆಂಡತಿ ನಡುವೆ ಯುದ್ಧವಾಗ ಮಗನನ್ನು ಸಮರ್ಥ ಮಾಡಿಕೊಳ್ಳಲು ತಾಯಿ ಮುಂದಾಗುತ್ತದೆ. ತನ್ನ ಮಗಳು ಗಂಡ ಅತ್ತೆ ಅಥವಾ ಗಂಡನ ಬಗ್ಗೆ ದೂರು ಹೇಳಿದಾಗ ಹುಡುಗಿ ಅಮ್ಮ ಇದೇ ರೀತಿ ಮಗಳಿಗೆ ಬೆಂಬಲ ನೀಡುತ್ತಾಳೆ. ಗಂಡ-ಹೆಂಡತಿ ಸಮಸ್ಯೆ ಆಂತರಿಕವಾಗಿ ಇಬ್ಬರಲ್ಲಿ ಇತ್ಯರ್ಥವಾಗಬೇಕು ಎಂದು ಹೇಳಿದರು. ದಂಪತಿಗಳು ಜಗಳವಾಡಿದಾಗ ಎರಡೂ ಕಡೆ ಅಮ್ಮಂದಿರು ಮಧ್ಯ ಪ್ರವೇಶ ಮಾಡ ಬಾರದು. ಸೊಸೆ ಬೇರೆ ಮನೆಯಿಂದ ಬಂದಿರು ತ್ತಾಳೆ. ಹೊಸ ರೀರಿಯ ಜೀವನ ಶೈಲಿಗೆ ಹೊಂದಾಣಿಕೆ ಮಾಡಿಕೊಳ್ಳಲು ಆಗುವ ವ್ಯತ್ಯಾಸಗಳಿಂದ ಅತ್ತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಗಂಡನ ಮನೆ, ಅತ್ತೆ ಮನೆಯಲ್ಲಿ ಬೆಳೆದ ರೀತಿ ವ್ಯತ್ಯಾಸವಿರುತ್ತದೆ.

ಬದಲಾವಣೆಗೆ ಹೊಂದಿಕೊಂಡು ಹೋಗಲು ಸೊಸೆಗೆ ಅವಕಾಶ ಮಾಡಿಕೊಡಬೇಕು. ಸಾಧ್ಯವಾದಷ್ಟು ಅತ್ತೆ ಮಾವ ಇಲ್ಲಬಾರದು ಎಂಬ ಭಾವನೆ ಕೆಲವು ಸೊಸೆಯಂದಿರು ಊಹಿಸುತ್ತಾರೆ. ಮಗಳ ತಂದೆ ತಾಯಿ ಋಣಾತ್ಮಕ ಚಿಂತನೆಗಳನ್ನು ಬಿತ್ತಿರುತ್ತಾರೆ. ಮಕ್ಕಳನ್ನು ಸಾಕುವಾಗ ತನ್ನ ಮಕ್ಕಳನ್ನು ಹೇಗೆ ಸಾಕಬೇಕು ಎಂದು ಹೆಂಡತಿಗೆ ತನ್ನದೆ ಆದ ಚಿಂತನೆಗಳು ಇರುತ್ತದೆ. ಅತ್ತೆಯಾದವರು ಮಧ್ಯ ಪ್ರವೇಶ ಮಾಡಿದಾಗ ಕೌಟುಂಬಿಕ ಸಮಸ್ಯೆ ಎದುರಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಗನಿಗೆ ಶಿಸ್ತು ಕಲಿಸುವಾಗ ಸೊಸೆ ಭಾಗಿತ್ವ ಇರಬಾರದೆಂದು ಅತ್ತೆ ಭಾವಿಸುತ್ತಾಳೆ. ಪ್ರತಿಯೊಬ್ಬರಿಗೂ ತನ್ನ ಪಾತ್ರ ಹಾಗೂ ನಿಭಾಯಿಸುವ ಸ್ಪಷ್ಟತೆ ಇರುವುದಿಲ್ಲ. ಇತ್ತೀಚಿನ ಹೆಣ್ಣು ಮಕ್ಕಳು ತಮ್ಮದೆ ಆದ ಗುರಿಗಳನ್ನು ಇಟ್ಟುಕೊಂಡಿರುತ್ತಾರೆ. ಆತ್ಮವಿಶ್ವಾಸ ಇರುವ ವ್ಯಕ್ತಿತ್ವ ಇರುವ ಸೊಸೆಯನ್ನು ಹೇಗೆ
ನಿಭಾಯಿಸಬೇಕು ಎಂದು ಅತ್ತೆ ತಿಳಿದುಕೊಳ್ಳಬೇಕು. ಮಗನಿಗೆ ವಿವಾಹ ಬಾಹಿರ ಲೈಂಗಿಕ ಸಮಸ್ಯೆಗಳು ಇದ್ದರೆ ಅತ್ತೆ ಸಮರ್ಥಿಸಿಕೊಂಡಾಗ ಸೊಸೆ ಯಾದವಳು ಸಹಿಸುವುದಿಲ್ಲ ಎಂದು ಮಾಹಿತಿ ನೀಡಿದರು.

***

ತಾಲಿಬಾನ್ ಕಾಶ್ಮೀರ ಸಮಸ್ಯೆಗಿಂತ ಅತ್ತೆ-ಸೊಸೆ ಸಮಸ್ಯೆ ಜಟಿಲವಾದುದು. ಕೌಟುಂಬಿಕ ಸಮಸ್ಯೆಗಳ ಕುರಿತು ಇತ್ಯರ್ಥ ಪಡಿಸುವ ಕೌಶಲ ಹೊಂದಿದ್ದಾರೆ
ಕೌಟುಂಬಿಕ ಸಲಹೆಗಾರ ನಾಗೇಶ್ ಅವರು. ಕೌನ್ಸೆಲಿಂಗ್ ಸೈಕಾಲಜಿಯಲ್ಲಿ ಎಂಎ ಪದವಿ ಮಾಡಿದ್ದಾರೆ. ಅನೇಕ ಪುಸ್ತಕ ಬರೆದಿದ್ದಾರೆ. ಉದ್ಯೋಗಿಗಳಿಗೆ ಪಾಲಕರಿಗೆ, ಶಿಕ್ಷಕರಿಗೆ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ನೀಲಗಿರಿ ಬೆಟ್ಟಗಳಲ್ಲಿ ಹಿಮಾಲಯದ ಗಡಿಗಳಲ್ಲಿ ಪ್ರವಾಸ ಮಾಡಿದ್ದಾರೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು

***

ಸುಸೂತ್ರ ಸಂಸಾರದ ಸೂತ್ರಗಳು
? ಮದುವೆ ಆದ ನಂತರ ತಮ್ಮ ಪಾತ್ರಗಳ ಬಗ್ಗೆ ಸ್ಪಷ್ಟನೆ ಹಾಗೂ ನಿಭಾಯಿಸುವ ತಿಳುವಳಿಕೆ ಇರಬೇಕು.
? ಮದುವೆ ಮುಂಚೆ ಪ್ರೀತಿಸುತ್ತಿದ್ದಾಗ ಅದು ಜಾಹಿರಾತು. ಮದುವೆ ನಂತರ ನಿಜ ಜೀವನ.
? ವಿಷಯಗಳ ಕುರಿತು ಚರ್ಚೆ ಮಾಡಲು ಸಮಯ ವಿನಿಯೋಗಿಸಬೇಕು.
? ಮಗನವರೆಗೂ ದೂರು ಹೋಗದ ಹಾಗೆ ಇಬ್ಬರಲ್ಲೆ ಇತ್ಯರ್ಥವಾಗಬೇಕು.
? ಖಾಸಗಿ ಸಮಯಾವಕಾಶಬೇಕು.
? ಇಬ್ಬರ ನಡುವೆ ಬೌಂಡರಿ ಇರಬೇಕು.
? ಬದಲಾವಣೆಗೆ ಅನುಗುಣವಾಗಿ ಹೊಂದಿಕೊಳ್ಳಲು ಸೊಸೆಗೆ ಅವಕಾಶ ನೀಡಬೇಕು.
? ಅತ್ತೆಯಾದವಳಿಗೆ ಸೊಸೆಯಲ್ಲಿನ ಒಳ್ಳೆಯ ಗುಣ ಗುರುತಿಸಬೇಕು.
? ಗಂಡನ ಹಾಗೂ ಅತ್ತೆಯ ಒಳ್ಳೆಯ ಗುಣ ಸೊಸೆ ಹೇಳಬೇಕು.
? ಇಬ್ಬರೂ ಮನೆ ಕೆಲಸಗಳನ್ನು ಹಂಚಿಕೊಳ್ಳಬೇಕು.
? ದಂಪತಿಗಳ ಬಗ್ಗೆ ವಾದ ವಿವಾದ ಉಂಟಾದಾಗ ಸೊಸೆ ಮಧ್ಯಸ್ಥಿಕೆವಹಿಸಬಾರದು.
? ಅತ್ತೆ ಬಗ್ಗೆ ಸೊಸೆ ಅಥವಾ ಸೊಸೆ ಬಗ್ಗೆ ಅತ್ತೆ ದೂರು ಹೇಳುವಾಗ ಸತ್ಯಾಸತ್ಯತೆ ಹೇಳಬೇಕು.
? ಮಗನನ್ನು ಹೆಂಡತಿ ನೋಡಿಕೊಳ್ಳುವಾಗ ಲೋಪದೋಷಗಳು ಸಾಮಾನ್ಯ. ಅತ್ತೆಯಾದವರು ಬದಲಾವಣೆಗೆ ಪ್ರಯತ್ನಿಸಬೇಕು.
? ಟೀಕಾತ್ಮಕ ಗುಣಗಳನ್ನು ಬಿಡಬೇಕು.

? ಗುಣಾತ್ಮಕ ಸಮಸ್ಯೆ ಬಹಳ ಮುಖ್ಯವಾಗಿರುತ್ತದೆ.
? ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳಬೇಕು.
? ಮನೆಯನ್ನು ಒಳ್ಳೆಯ ವಾತಾವರಣದಿಂದ ಇಟ್ಟುಕೊಟ್ಟುವ ದೃಢವಾದ ನಿರ್ಧಾರ ಇರಬೇಕು.