ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ.
ನನ್ನ ಕ್ಷೇತ್ರದ ಜನತೆಯ ಸೇವೆಗೆ ಹೋಲಿಸಿದರೆ ಕ್ಯಾಬಿನೆಟ್ ಸಚಿವ ಸ್ಥಾನ ಏನು ದೊಡ್ಡದಲ್ಲ, ವೈದ್ಯ ಕೀಯ ಕಾಲೇಜು ಸ್ಥಾಪನೆ ನನ್ನ ಬಹುದಿನಗಳ ಬೇಡಿಕೆಯಾಗಿದ್ದು, ಅದನ್ನು ನಿರ್ಲಕ್ಷ್ಯಿಸಲಾಗಿದೆ” ಎಂದು ತಮ್ಮ ಅಸಮಾಧಾನವನ್ನು ಹರಕ್ ಸಿಂಗ್ ರಾವತ್ ಬಹಿರಂಗಪಡಿಸಿದ್ದಾರೆ.
ಹರಕ್ ಸಿಂಗ್ ರಾವತ್ ಡಿ.23 ರಂದು ದೆಹಲಿಯಲ್ಲಿದ್ದರು. ಹರಿದ್ವಾರದಲ್ಲಿ ಮಾಜಿ ಸಿಎಂ ಹರೀಶ್ ರಾವತ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಮಾತ್ರ ಇದು ಕೇವಲ ವದಂತಿ ಯಷ್ಟೇ ಎಂದು ಸುದ್ದಿಯನ್ನು ಅಲ್ಲಗಳೆದಿದೆ. ಹರಕ್ ತುಂಬಾ ಸಮಯದಿಂದ ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಮನವಿ ಮಾಡುತ್ತಿದ್ದರು. ಹಲವು ಬಾರಿ ಈ ವಿಚಾರ ಎತ್ತಿದ್ದರು.
ಸಚಿವ ಸ್ಥಾನದಿಂದಾಗಲೀ, ಪಕ್ಷದಿಂದಾಗಲೀ ಯಾರೂ ರಾಜೀನಾಮೆ ನೀಡುತ್ತಿಲ್ಲ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ನಡೆಯುತ್ತಿದ್ದಾಗಲೇ ಅರ್ಧದಲ್ಲಿ ಆಕ್ರೋಶಗೊಂಡ ಹರಕ್ ಸಿಂಗ್ ರಾವತ್ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು. ಬಿಜೆಪಿಯ ಮತ್ತೋರ್ವ ಶಾಸಕ ಉಮೇಶ್ ಶರ್ಮ ಸಹ ರಾಜೀನಾಮೆ ನೀಡಾಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಬಿಜೆಪಿ ಮಾತ್ರ ಅಸಮಾಧಾನವನ್ನು ಶೀಘ್ರವೇ ಪರಿಹರಿಸುವುದಾಗಿ ಹೇಳಿದೆ. ಈ ವರದಿ ಪ್ರಕಟವಾಗುವವರೆಗೂ ಉತ್ತರಾಖಂಡ್ ನ ರಾಜ್ಯಪಾಲರು ಯಾವುದೇ ರಾಜೀನಾಮೆಯನ್ನೂ ಅಂಗೀಕರಿಸಿಲ್ಲ.