ಮ್ಯಾರಥಾನ್ ವೇಳೆ ಕೆಲವು ಹುಡುಗಿಯರು ಎಡವಿ ನೆಲಕ್ಕೆ ಬೀಳುತ್ತಿರುವುದು, ಆ ಹುಡುಗಿಯರ ಹಿಂದೆ ಓಡುತ್ತಿದ್ದವರು ತಕ್ಷಣವೇ ನಿಲ್ಲುವ ಭರದಲ್ಲಿ ಮುಗ್ಗರಿಸಿದರು ಹಾಗೂ ಮತ್ತಷ್ಟು ಓಟಗಾರರು ನೆಲಕ್ಕೆ ಉರುಳಿದರು. ಅದರಿಂದಾಗಿ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಯಿತು.
ಕಾಂಗ್ರೆಸ್ ನಾಯಕಿ ಮತ್ತು ಬರೇಲಿಯ ಮಾಜಿ ಮೇಯರ್ ಸುಪ್ರಿಯಾ ಏರೊನ್, ‘ಆತಂಕ ಪಡುವ ಅಗತ್ಯವಿಲ್ಲ. ವೈಷ್ಣೋ ದೇವಿಯಲ್ಲೇ ಕಾಲ್ತುಳಿತ ಉಂಟಾಗಿದೆ, ಇದು ಮನುಷ್ಯನ ಸಹಜ ಗುಣ. ಆದರೆ ನಾನು ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.
ಕಳೆದ ಡಿಸೆಂಬರ್ 28ರಂದು ಕಾಂಗ್ರೆಸ್ ಲಖನೌದಲ್ಲಿ ಇಂಥದ್ದೇ ಮ್ಯಾರಥಾನ್ ಆಯೋಜಿಸಿತ್ತು. ಐದು ಕಿಲೋ ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು.