ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಪಂಚ ರಾಜ್ಯಗಳ ಚುನಾವಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕ ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, ಉತ್ತರಾಖಂಡ 70 ವಿಧಾನಸಭೆ ಕ್ಷೇತ್ರ ಮತ್ತು ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಸೇವಾ ಮತದಾರರು ಸೇರಿದಂತೆ ಒಟ್ಟು 18.34 ಕೋಟಿ ಮತದಾರರು ಈ ಚುನಾವಣೆಯಲ್ಲಿ ಭಾಗವಹಿಸಲಿದ್ದು, 8.55 ಕೋಟಿ ಮಹಿಳಾ ಮತದಾರರಿದ್ದಾರೆ. ಈ ಬಾರಿ 24.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಒಂದು ಮತಗಟ್ಟೆಯಲ್ಲಿ ಮತದಾನ ಮಾಡುವ ಮತಾದಾರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.
ಒಟ್ಟು 690 ವಿಧಾನಸಭಾ ಸ್ಥಾನಗಳಿದ್ದು, ನಾವು 1,620 ಮತಗಟ್ಟೆಗಳನ್ನು ಸ್ಥಾಪಿಸುತ್ತಿದ್ದೇವೆ.
80 ವರ್ಷ ಮೇಲ್ಪಟ್ಟವರು, ವಿಕಲಚೇತರು ಹಾಗೂ ಕೊವಿಡ್-19 ಸೋಂಕಿತರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡುವುದಕ್ಕೆ ಅವಕಾಶ
*ಚುನಾವಣೆ ಸುಗಮವಾಗಿ ನಡೆಸಲು ಚುನಾವಣಾ ಆಯೋಗವು ಈಗಾಗಲೇ ಸಾಕಷ್ಟು ಸಂಖ್ಯೆಯ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ವ್ಯವಸ್ಥೆ ಮಾಡಿಕೊಂಡಿದೆ.
*ಚುನಾವಣಾ ಅಭ್ಯರ್ಥಿಗಳಾಗಿ ಆಯ್ಕೆಯಾದ ವ್ಯಕ್ತಿಯ ಹಿನ್ನೆಲೆ ಅವರ ಮೇಲಿರುವ ಕ್ರಿಮಿನಲ್ ಪ್ರಕರಣ ಮತ್ತು ಬಾಕಿ ಇರುವ ಪ್ರಕರಣಗಳ ಬಗ್ಗೆ ವಿವರವಾದ ಮಾಹಿತಿಯನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
* ಜನವರಿ 15 ರವರೆಗೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಇತರ ಗುಂಪುಗಳು ಭೌತಿಕ ಮೆರವಣಿಗಳಿಗೆ ಅನುಮತಿಸಲಾಗುವುದಿಲ್ಲ.
* ಜನವರಿ 15 ರವರೆಗೆ ಯಾವುದೇ ರೋಡ್‌ಶೋಗಳು, ಪಾದಯಾತ್ರೆಗಳು, ಸೈಕಲ್ ಅಥವಾ ಬೈಕ್ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಅನುಮತಿಸಲಾಗುವುದಿಲ್ಲ;
* ಬೆಳಗ್ಗೆ 8 ಗಂಟೆಗೂ ಮೊದಲು ರಾತ್ರಿ 8 ಗಂಟೆ ನಂತರ ಯಾವುದೇ ರೀತಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶವಿಲ್ಲ
ಪಂಚರಾಜ್ಯಗಳಿಗೆ ಚುನಾವಣೆ ಘೋಷಿಸಿದ ಆಯೋಗ:
7 ಹಂತಗಳಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.
ಮೊದಲ ಹಂತದ ಚುನಾವಣೆ: ಉತ್ತರ ಪ್ರದೇಶ
ಜನವರಿ 14ರಂದು ಅಧಿಸೂಚನೆ
ಜನವರಿ 21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಜನವರಿ 24ರಂದು ನಾಮಪತ್ರ ಮರುಪರಿಶೀಲನೆ
ಜನವರಿ 27 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 10ರಂದು ಮತದಾನ
ಎರಡನೇ ಹಂತದ ಮತದಾನ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ
ಜನವರಿ 21ರಂದು ಅಧಿಸೂಚನೆ
ಜನವರಿ 28ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಜನವರಿ 29ರಂದು ನಾಮಪತ್ರ ಮರುಪರಿಶೀಲನೆ
ಜನವರಿ 31 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 14ರಂದು ಮತದಾನ
ಮೂರನೇ ಹಂತದ ಮತದಾನ: ಉತ್ತರ ಪ್ರದೇಶ 3,
ಜನವರಿ 25ರಂದು ಅಧಿಸೂಚನೆ
ಫೆಬ್ರವರಿ 1ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 2ರಂದು ನಾಮಪತ್ರ ಮರುಪರಿಶೀಲನೆ
ಜನವರಿ 4 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 20ರಂದು ಮತದಾನ
ನಾಲ್ಕನೇ ಹಂತದ ಮತದಾನ: ಉತ್ತರ ಪ್ರದೇಶ
ಜನವರಿ 27ರಂದು ಅಧಿಸೂಚನೆ
ಫೆಬ್ರವರಿ 3ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 4ರಂದು ನಾಮಪತ್ರ ಮರುಪರಿಶೀಲನೆ
ಜನವರಿ 7 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 23ರಂದು ಮತದಾನ
ಐದನೇ ಹಂತದ ಮತದಾನ: ಉತ್ತರ ಪ್ರದೇಶ
ಫೆಬ್ರವರಿ 1ರಂದು ಅಧಿಸೂಚನೆ
ಫೆಬ್ರವರಿ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 9ರಂದು ನಾಮಪತ್ರ ಮರುಪರಿಶೀಲನೆ
ಜನವರಿ 11 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 27ರಂದು ಮತದಾನ
ಆರನೇ ಹಂತದ ಮತದಾನ: ಉತ್ತರ ಪ್ರದೇಶ
ಫೆಬ್ರವರಿ 4ರಂದು ಅಧಿಸೂಚನೆ
ಫೆಬ್ರವರಿ 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 14ರಂದು ನಾಮಪತ್ರ ಮರುಪರಿಶೀಲನೆ
ಜನವರಿ 16ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಮಾರ್ಚ್ 3ರಂದು ಮತದಾನ
ಏಳನೇ ಹಂತದ ಮತದಾನ: ಉತ್ತರ ಪ್ರದೇಶ
ಫೆಬ್ರವರಿ 10ರಂದು ಅಧಿಸೂಚನೆ
ಫೆಬ್ರವರಿ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 18ರಂದು ನಾಮಪತ್ರ ಮರುಪರಿಶೀಲನೆ
ಜನವರಿ 21ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಮಾರ್ಚ್ 7ರಂದು ಮತದಾನ