ರೈತರಿಗೆ ವಿಮೆ ಮತ್ತು ಪಿಂಚಣಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಈ ಘೋಷಣೆಗೂ ಮುನ್ನ ರೈತರಿಗೆ ಆಹಾರ (ಗೋಧಿ ಮತ್ತು ಅಕ್ಕಿ) ಕೈಯಲ್ಲಿ ತೆಗೆದುಕೊಳ್ಳುವ ಮೂಲಕ ಬಿಜೆಪಿ ಯನ್ನು ತೊಡೆದುಹಾಕಲು ಮನವಿ ಮಾಡಿದರು.
ಸಮಾಜವಾದಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ, 15 ದಿನಗಳಲ್ಲಿ ರೈತರಿಗೆ ಕಬ್ಬು ಹಣ ಪಾವತಿ, ರೈತರಿಗೆ ನೀರಾವರಿಗಾಗಿ ಉಚಿತ ವಿದ್ಯುತ್, ಬಡ್ಡಿರಹಿತ ಸಾಲ, ವಿಮೆ ಮತ್ತು ರೈತರಿಗೆ ಪಿಂಚಣಿ ವ್ಯವಸ್ಥೆಗಳನ್ನು ಸೇರಿಸಲಾಗುವುದು ಎಂದು ಹೇಳಿದರು. ಉತ್ತರ ಪ್ರದೇಶ ಚುನಾವಣೆಗೆ ದೊಡ್ಡ ಷಡ್ಯಂತ್ರಗಳನ್ನು ಮಾಡಲಾಗು ತ್ತಿದೆ. ಬಿಜೆಪಿಯ ಪ್ರಣಾಳಿಕೆ ನಂತರ ನಮ್ಮ ಪ್ರಣಾಳಿಕೆ ಬರಲಿದೆ ಎಂದರು.
ಲಖಿಂಪುರ ಕೇರಿ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ತೇಜಿಂದರ್ ಮೇಲೆ ವಾಹನ ಹತ್ತಿಸುವ ಯತ್ನ ನಡೆದಿತ್ತು. ಆ ವೇಳೆ ಅವರು ಗಾಯಗೊಂಡಿ ದ್ದಾರೆ. ಹೋರಾಟ ಮಾಡಿದ ರೈತ ಮುಖಂಡರು ಮತ್ತು ರೈತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ. ರೈತರಿಗೆ ಅನ್ಯಾಯ ಮಾಡಿದವರನ್ನು ತೊಲಗಿಸುವ ಪಣ ತೊಡುತ್ತಿದ್ದೇವೆ ಎಂದು ಅಖಿಲೇಶ್ ನೆರೆದವರನ್ನು ಪ್ರತಿಜ್ಞೆಗೆ ಒತ್ತಾಯಿಸಿದರು.
ಭಾರತವು ಕೊರೋನಾವನ್ನು ಉತ್ತಮವಾಗಿ ನಿಯಂತ್ರಿಸಿರುವುದಕ್ಕೆ ಜಗತ್ತು ಸಂತೋಷವಾಗಿದೆ ಎಂದು ಹೇಳಿದರು.