Wednesday, 11th December 2024

ಈ ಸಂದರ್ಭದಲ್ಲಿ ಚುನಾವಣೆ ಏಕೆ?

ದೇಶಾದ್ಯಂತ ಕರೋನಾ ಮೂರನೇ ಅಲೆ ಆರ್ಭಟ ಜೋರಾಗುತ್ತಿರುವ ಈ ಹೊತ್ತಿನಲ್ಲೇ ಉತ್ತರಪ್ರದೇಶ, ಗೋವಾ, ಉತ್ತರಾಖಂಡ, ಪಂಜಾಬ್ ಮತ್ತು ಮಪುರ ರಾಜ್ಯಗಳ ವಿಧಾನಸಭೆಗೆ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಸಜ್ಜಾಗಿವೆ. ಈ ಬಾರಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ ತಜ್ಞರ ಎಚ್ಚರಿಕೆಯನ್ನೂ ಪರಿಗಸದೆ ಚುನಾವಣೆಗೆ ದಿನಾಂಕ ಘೋಷಿಸಿದ್ದು ಆತಂಕಕಾರಿ.

ಎರಡನೇ ಅಲೆ ಸಂದರ್ಭದಲ್ಲಿ ಜನರು ಹೈರಾಣಾಗಿದ್ದರ ನೆನಪು ಇನ್ನೂ ಹಸಿಯಾಗಿಯೇ ಇರುವಾಗ, ಮುಂದೆ ಆಗಬಹುದಾದ ಸಾವು ನೋವುಗಳು ಜನರ ಕಣ್ಮುಂದೆ ಬಂದು ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಬೇಕಾದ ಅನಿವಾರ್ಯ ಇತ್ತೇ ಎಂಬ ಪ್ರಶ್ನೆ ಉದ್ಭವವಾಗಿದೆ. ಚುನಾವಣೆಯು ಪ್ರಜಾ ಪ್ರಭುತ್ವದ ಅವಿಭಾಜ್ಯ ಅಂಗ ಮತ್ತು ಅನಿವಾರ್ಯ ಪ್ರಕ್ರಿಯೆ. ಜನರ ಆರೋಗ್ಯ ಮತ್ತು ಜೀವನೋಪಾಯ ಹಾಗೂ ದೇಶದ ಅರ್ಥ ವ್ಯವಸ್ಥೆಯನ್ನು ಸಂರಕ್ಷಿಸಬೇಕಾದುದು ಕೂಡ ಅಷ್ಟೇ ಮಹತ್ವದ ವಿಚಾರ.

ಜನರ ಆರೋಗ್ಯಕ್ಕೆ ಯಾವ ಧಕ್ಕೆಯೂ ಆಗದ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಆಯೋಗವು ನಡೆಸ ಬೇಕಾದ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ, ರ‍್ಯಾಲಿ, ಸಮಾವೇಶ, ಬಹಿರಂಗ ಸಭೆಗಳನ್ನು ಆಯೋಗವು ನಿಷೇಧಿಸಿರುವುದು ಸ್ವಾಗತಾರ್ಹ. ಮನೆ ಮನೆ ಪ್ರಚಾರಕ್ಕೆ ಕೂಡ ಅಭ್ಯರ್ಥಿ ಸೇರಿ ಐವರಿಗಿಂತ ಹೆಚ್ಚು ಜನರು ಹೋಗುವಂತಿಲ್ಲ ಎಂಬ ನಿಯಮ ರೂಪಿಸಿದೆ. ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆಯವರೆಗೆ, ಬಹಿರಂಗವಾದ ಯಾವುದೇ ಪ್ರಚಾರಕ್ಕೆ ಅವಕಾಶ ಇಲ್ಲ. ಮತ ಎಣಿಕೆಯ ಬಳಿಕವೂ ವಿಜಯೋತ್ಸವವನ್ನು ನಿಷೇಽಸಿದೆ. ವರ್ಚುವಲ್ ರೂಪ ದಲ್ಲಿಯೇ ಪ್ರಚಾರ ನಡೆಸಿ ಎಂದು ರಾಜಕೀಯ ಪಕ್ಷಗಳಿಗೆ ಆಯೋಗವು ಸಲಹೆ ಕೊಟ್ಟಿದೆ.

ರಾಜಕೀಯ ಪಕ್ಷಗಳು ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ. ಇಲ್ಲದೇ ಹೋದರೆ, ಜನರ ಮತ ಯಾಚನೆಗೆ ಹೋಗುವ ರಾಜಕೀಯ ಪಕ್ಷಗಳ ನಾಯಕರಿಗೆ ಜನರ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದು ಸಾಬೀತಪಡಿಸಿದಂತಾಗುತ್ತದೆ. ಜನರು ಕೂಡ ತಮ್ಮ ನಾಯಕನನ್ನು ಗೆಲ್ಲಿಸುವ ಉತ್ಸಾಹದಲ್ಲಿ ಅಬ್ಬರದ ಪ್ರಚಾರ, ವಿಜಯೋತ್ಸವದ ಸಂಭ್ರಮದಲ್ಲಿ ಭಾಗವಹಿಸುವುದನ್ನು ಬಿಡಬೇಕು. ಮಾ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಗುಂಪು ಗೂಡದೇ ಇರುವುದು, ಲಸಿಕೆ ಹಾಕಿಸಿಕೊಳ್ಳುವುದು ಕೋವಿಡ್‌ನಿಂದ ರಕ್ಷಣೆ ಪಡೆದುಕೊಳ್ಳಲು ಇರುವ ಮಾರ್ಗಗಳು ಎಂಬುದನ್ನು ಎಲ್ಲರೂ ಸದಾ ನೆನಪಿನಲ್ಲಿಡ ಬೇಕಿದೆ. ಆ ಮೂಲಕ ಕರೋನಾ ಹೊಡೆದೊಡಿಸಲು ಪ್ರಯತ್ನಿಸಬೇಕಿದೆ.