ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷ ಗದ್ದುಗೆ ಹಿಡಿಯಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ಆಮ್‌ಆದ್ಮಿ ಪಕ್ಷಕ್ಕೆ ದೆಹಲಿಯಲ್ಲಿ ಸುಲಭವಾಗಿ ಆಡಳಿತ ನಡೆಸುವ ಹಾಗೇ ಪಂಜಾಬಿನಲ್ಲಿ ನಡೆಸಲು ಸಾಧ್ಯವಿಲ್ಲ. ಪಂಜಾಬ್‌ನ್ನು ಆಮ್‌ಆದ್ಮಿ ಆರ್ಥಿಕವಾಗಿ ಅಧಃಪತನಕ್ಕಿಳಿಸಿದರೆ ಆಶ್ಚರ್ಯವಿಲ್ಲ.
ಪಂಚ ರಾಜ್ಯಚುನಾವಣೆಗಳು ಹತ್ತಿರವಾಗುತ್ತಿವೆ. ಬಹುತೇಕ ಸಮೀಕ್ಷೆಗಳ ಪ್ರಕಾರ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಆಗಿದ್ದು ಕಾಂಗ್ರೆಸ್ ಪಂಜಾಬಿನಲ್ಲಿ ಅಽಕಾರ ಕಳೆದುಕೊಳ್ಳಲಿದೆ ಎಂದು ಹೇಳುತ್ತಿವೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪಂಜಾಬ್ ಭದ್ರತಾ ತಂತ್ರಗಾರಿಕೆಯ ದೃಷ್ಟಿಯಿಂದ ಅತೀ ಮುಖ್ಯವಾದ ರಾಜ್ಯ.
ಖಲಿಸ್ತಾನಿ ಹೋರಾಟದ ಹಿನ್ನಲೆಯಲ್ಲಿ ಪಾಕಿಸ್ತಾನದ ಪ್ರಚೋದನೆಗೆ ಒಳಗಾಗಿ ಹಲವು ಅಹಿತಕರ ಘಟನೆಗಳು ಪಂಜಾಬಿನಲ್ಲಿ ನಡೆಯುತ್ತಿವೆ. ದೆಹಲಿಯ ರೈತ ಪ್ರತಿಭಟನೆಯ ಹೋರಾಟ ದಿಕ್ಕು ತಪ್ಪಿ ಖಲಿಸ್ತಾನಿ ಹೋರಾಟ ವಾಗಿ ಮಾರ್ಪಾಡಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು, ಹಾಗಾಗಿ ದೇಶದ ಭದ್ರತೆಯ ದೃಷ್ಟಿ ಯಿಂದ ಕೇಂದ್ರ ಸರಕಾರ ರೈತ ಮಸೂದೆಗಳನ್ನು ಹಿಂಪಡೆಯಿತು.
ಇಂದಿರಾ ಗಾಂಧಿಯ ಕಾಲದಿಂದಲೂ ಪಂಜಾಬನ್ನು ಬೇರೆ ರಾಷ್ಟ್ರ ಮಾಡಬೇಕೆಂಬ ಖಲಿಸ್ತಾನಿ ಪ್ರತ್ಯೇಕತಾ ವಾದಿಗಳ ಬೇಡಿಕೆಯಾಗಿದೆ. ೩೮ ವರ್ಷಗಳ ಹಿಂದೆ ನಡೆದ ಇಂದಿರಾ ಗಾಂಧಿಯವರ ಹತ್ಯೆಯನ್ನೇ ಮಾನದಂಡ ಮಾಡಿಕೊಂಡಿರುವ ಖಲಿಸ್ತಾನಿಗಳು ಈಗಲೂ ಅದೇ ರೀತಿಯಲ್ಲಿ ಪ್ರಧಾನಮಂತ್ರಿಗಳಿಗೆ ಧಮ್ಕಿ ಹಾಕುತ್ತಾರೆ. ಇತ್ತೀಚಿಗೆ ಅಲ್ಲಿನ ಸರಕಾರವೇ ಪರೋಕ್ಷವಾಗಿ ನರೇಂದ್ರ ಮೋದಿಯವರ ಭದ್ರತಾಲೋಪದಲ್ಲಿ ಶಾಮೀಲಾ ಗಿತ್ತು, ಪಂಜಾಬಿನಲ್ಲಿ ನಡೆಯುವ ಡ್ರಗ್ಸ್ ದಂದೆ ಭಾರತದ ಬೇರೆ ಯಾವ ರಾಜ್ಯದಲ್ಲಿಯೂ ನಡೆಯುವುದಿಲ್ಲ .
ಇಷ್ಟೇ ಸಮಸ್ಯೆಗಳಿಂದ ಕೂಡಿರುವ ಪಂಜಾಬಿಗೆ ಸ್ಥಿರವಾದಂತಹ ರಾಷ್ಟ್ರೀಯವಾದಿ ಸರಕಾರದ ಅವಶ್ಯಕತೆ ಇದೆ. ಆದರೆ ಸಮೀಕ್ಷೆಗಳೆಲ್ಲವೂ ಆಪ್ ಪಂಜಾಬಿನಲ್ಲಿ ಸರಕಾರ ರಚಿಸಬಹುದೆಂದು ಹೇಳುತ್ತಿವೆ. ಕೇವಲ ನರೇಂದ್ರ ಮೋದಿಯವರನ್ನು ವಿರೋಧಿಸುವ ಕಾರಣಕ್ಕೆ ಭಾರತೀಯಜನತಾ ಪಕ್ಷಕ್ಕೆ ಮತ ಹಾಕಬಾರದೆಂಬ
ಹಠ ಪಂಜಾಬಿಗರಲ್ಲಿದೆ. ಅತ್ತ ಕಾಂಗ್ರೆಸ್ಸಿನ ಬೇಜವಾಬ್ದಾರಿ ನಾಯಕತ್ವವನ್ನುಪಂಜಾಬಿಗರು ಒಪ್ಪಿಕೊಳ್ಳುತ್ತಿಲ್ಲ, ಹಾಗಾಗೀ ವಿಧಿಯಿಲ್ಲದೇ ಮೂರನೇ ಪಕ್ಷವನ್ನಾಗಿ ಆಪ್ ಬೆಂಬಲಿಸುವತ್ತ ಪಂಜಾಬಿಗರಿದ್ದಾರೆ. ಪಂಜಾಬಿಗರಿಗೆ ಸಾಂಧರ್ಬಿಕ ಶಿಶುವಿನಂತೆ ಕಾಣುತ್ತಿರುವ ಆಪ್ ಅಧಿಕಾರಕ್ಕೆ ಬಂದರೆ ಅಷ್ಟೊಂದು ಸಮಸ್ಯೆಗಳಿಂದ
ಕೂಡಿರುವ ರಾಜ್ಯವನ್ನು ಆಳುವುದು ಸುಲಭವಲ್ಲ.
ಆಪ್ ನಲ್ಲಿ ಎಲ್ಲರೂ ನಾಯಕರೇ, ಕೆಲಸ ಮಾಡಲು ಕಾರ್ಯಕರ್ತರೇ ಇಲ್ಲದ ಪಕ್ಷವದು. ದೆಹಲಿಯಲ್ಲಿ ಆಡಳಿತ ನಡೆಸಿದಂತೆ ಪಂಜಾಬಿನಲ್ಲಿ ಆಡಳಿತ ನಡೆಸ ಲಾಗುವುದಿಲ್ಲ. ದೆಹಲಿಯೆಂಬುದು ಒಂದು ನಗರವಷ್ಟೇ, ದೆಹಲಿಯಲ್ಲಿ ಬರುವ ತೆರಿಗೆಯ ಆದಾಯದ ಬಹುಪಾಲು ಖರ್ಚು ಕೇವಲ ದೆಹಲಿಗಷ್ಟೇ ಸೀಮಿತ. ಜೊತೆಗೆ ರಾಷ್ಟ್ರ ರಾಜಧಾನಿಯಾದ ದೆಹಲಿಗೆ ಕೇಂದ್ರದಿಂದಲೂ ಹೆಚ್ಚಿನ ಅನುದಾನ ಬರುತ್ತದೆ, ಇದರ ಅನುಕೂಲ ಪಡೆದ ಆಪ್ ಸಿಕ್ಕಸಿಕ್ಕಂತೆ ಅಲ್ಲಿನ ಜನರಿಗೆ ಉಚಿತ
ಸಾಮಾಜಿಕ ಯೋಜನೆಗಳನ್ನುನೀಡಿದೆ. ಅಧಿಕೃತವಾಗಿ ಸರಕಾರದ ಹಣವನ್ನುಬಳಸಿಕೊಂಡು ಜನರಿಗೆ ಉಚಿತ ಯೋಜನೆಗಳನ್ನು ಜಾರಿ ಮಾಡಿ ಚುನಾವಣೆ ಗೆಲ್ಲುವುದರಲ್ಲಿ ತಮಿಳುನಾಡು ಹೆಸರುವಾಸಿಯಾಗಿತ್ತು, ಅವರನ್ನೂ ಮೀರಿಸಿದ ಕೀರ್ತಿ ಕೇಜ್ರಿವಾಲನಿಗೆ ಸಲ್ಲಬೇಕು. ರಾಜ್ಯದ ಖಜಾನೆ ಖಾಲಿಯಾಗಿ ಸಾಲ ತಂದು ಉಚಿತ ಯೋಜನೆಗಳ ಮೂಲಕ ಚುನಾವಣೆ ಗೆಲ್ಲುವುದನ್ನೇ ತನ್ನತಂತ್ರಗಾರಿಕೆಯೆಂದು ಹೇಳಿಕೊಳ್ಳುವ ಆಪ್ ಪಂಜಾಬಿನಲ್ಲಿಯೂ ಅದೇ ಪ್ರಯೋಗಕ್ಕೆ ಮುಂದಾ ಗಿದೆ. ಆದರೆ ದೆಹಲಿಯಷ್ಟು ಸುಲಭವಾಗಿ ಆಡಳಿತ ನಡೆಸಲು ಇಲ್ಲಿ ಸಾಧ್ಯವಿಲ್ಲ.
ದೆಹಲಿಯಲ್ಲಿ ಆಡಳಿತ ನಡೆಸುವುದಕ್ಕೂ ನಗರ ಪಾಲಿಕೆಯೊಂದರಲ್ಲಿ ಆಡಳಿತ ನಡೆಸುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ದೆಹಲಿಯ ಆಡಳಿತದಲ್ಲಿ ಹಳ್ಳಿಯ ಪರಿಕಲ್ಪನೆಯೇ ಇಲ್ಲ. ದೆಹಲಿಯಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಳಸಬೇಕೆಂಬ ಸವಾಲಿಲ್ಲ. ಆದರೆ ಹೆಚ್ಚಾಗಿ ಗ್ರಾಮೀಣ ಭಾಗಗಳಿಂದಲೇ ಕೂಡಿರುವ ಪಂಜಾಬ್ ರಾಜ್ಯಕ್ಕೆ ತೆರಿಗೆ ಸಂಗ್ರಹವಾಗುವ ಚಂಡೀಗಢ, ಲೂಧಿಯಾನ, ಮೊಹಾಲಿ, ಅಮೃತಸರದಿಂದಲೇ ಹಣವನ್ನು
ಒದಗಿಸಬೇಕು. ಗ್ರಾಮೀಣ ಭಾಗದ ಕಲ್ಪನೆಯೇ ಇಲ್ಲದೆ ದೆಹಲಿಯಲ್ಲಿ ಆಡಳಿತ ನಡೆಸಿರುವ ಆಪ್ ನೋಡ ನೋಡುತ್ತಲೇ ಉಚಿತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೆಹಲಿಯ ಆರ್ಥಿಕ ಖಜಾನೆಯನ್ನು ಖಾಲಿ ಮಾಡಿ ಸುಮಾರು ೫,೦೦೦ ಕೋಟಿಗೂ ಅಧಿಕ ಸಾಲದಲ್ಲಿರುವಂತೆ ಮಾಡಿದೆ.
ದೆಹಲಿಯಲ್ಲಿ ಸಂಗ್ರಹವಾದಂತಹ ತೆರಿಗೆಯನ್ನು ದೆಹಲಿಗೆ ಸರಿಯಾಗಿ ಬಳಸಲಾಗದೆ ಸಾಲದ ಶೂಲಕ್ಕೆ ಕರೆದೊಯ್ದ ಆಪ್ ಇನ್ನು ಪಂಜಾಬನ್ನು ಯಾವ ಮಟ್ಟದ
ಸಾಲದ ಶೂಲಕ್ಕೆ ಸಿಲುಕಿಸಬಹುದು ನೀವೇಊಹಿಸಿಕೊಳ್ಳಿ. ಆಂಧ್ರಪ್ರದೇಶದಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಹತ್ತಾರು ಉಚಿತ ಯೋಜನೆ ಗಳನ್ನು ಜಾರಿ ಮಾಡಿದ ಜಗನ್ನಾಥ ನೇತೃತ್ವದ ಸರಕಾರ ನೋಡ ನೋಡುತ್ತಲೇ ಆರ್ಥಿಕ ಶಿಸ್ತನ್ನು ಕಳೆದುಕೊಂಡು ಸಾಲಕ್ಕೆ ಸಿಲುಕಿದೆ.
ನಾವು ಪಡೆದ ಉಚಿತ ಯೋಜನೆಗಳು ತಮ್ಮ ರಾಜ್ಯವನ್ನೇ ಸಾಲದ ಶೂಲಕ್ಕೆ ಸಿಲುಕಿಸುತ್ತದೆ ಎಂಬ ಸಾಮಾನ್ಯ ಜ್ಞಾನ ಮತದಾರಿಗೆ ಬರಬೇಕಿದೆ. ದೆಹಲಿಯಲ್ಲಿನ ಬಹುತೇಕರು ವಲಸಿಗರಾಗಿರುವ ಕಾರಣಕ್ಕಾಗಿ ಸರಕಾರದಿಂದ ನೀಡುವ ಉಚಿತ ಸವಲತ್ತುಗಳನ್ನುನೀಡಿ ಮತ ಹಾಕುತ್ತಾರೆ. ಕೇಜ್ರಿವಾಲ್ ಮಾಡಿದ ಸಾಲ ತೀರಿಸಲಾಗದಂತಹ ಪರಿಸ್ಥಿತಿ ಎದುರಾದಾಗ ಅಧಿಕಾರ ಕಳೆದುಕೊಳ್ಳುತ್ತಾನೆ. ನಂತರ ಬರುವ ಸರಕಾರ ಮತ್ತದೇ ಜನರ ಮೇಲೆ ತೆರಿಗೆ ಹೇರಿ ಸಾಲ
ತೀರಿಸ ಬೇಕಾಗುತ್ತದೆ. ವಿದ್ಯಾವಂತರ ಪಕ್ಷವೆಂದು ಹೇಳಿಕೊಳ್ಳುವ ಆಪ್‌ನಲ್ಲಿ ಆರ್ಥಿಕ ಶಿಸ್ತಿಗೆ ಬೆಲೆಯೇ ಇಲ್ಲ. ದೆಹಲಿಯಲ್ಲಿ ಆಡಳಿತ ನಡೆಸಿರುವ ಕೇಜ್ರಿವಾಲನಿಗೆ ರೈತರ ಸಮಸ್ಯೆಗಳ ಅರಿವಿಲ್ಲ, ಯಾಕೆಂದರೆ ದೆಹಲಿಯ ಆಡಳಿತದಲ್ಲಿ ರೈತರೆಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಇತರೆ ರಾಜ್ಯದಲ್ಲಿರುವ ಸಾಲಮನ್ನಾ, ಸಹಾಯಧನ, ಕೃಷಿ ಮಾರುಕಟ್ಟೆ, ಬೆಂಬಲಬೆಲೆ, ರಸಗೊಬ್ಬರ ಕೊರತೆಯೆಂಬ ಸಮಸ್ಯೆಗಳು ದೆಹಲಿಯಲ್ಲಿಲ್ಲ, ಆದರೆ ಪಂಜಾಬಿನಲ್ಲಿ ಇತರೆ ರಾಜ್ಯಗಳಿಗಿಂತಲೂ ಹೆಚ್ಚಿದೆ. ಹೀಗಿರುವಾಗ ದೆಹಲಿಯ ಆಪ್ ಆಡಳಿತವನ್ನು ಪಂಜಾಬಿಗೆ ತಾಳೆ ಮಾಡಲಿಕ್ಕಾಗುವುದಿಲ್ಲ. ಆದರೆ ಕೇಜ್ರಿವಾಲನ ದೀವಾಳಿತನದ ಮೆದುಳು ಪಂಜಾಬಿನ ರೈತರ ಸಮಸ್ಯೆಗಳನ್ನುಬಗೆಹರಿಸಲಾಗದೆ ನರೇಂದ್ರ ಮೋದಿಯವರ ವಿರುದ್ಧ ಸುಳ್ಳು ಸುದ್ದಿಯನ್ನು
ಹಬ್ಬಿಸಿ ರೈತರನ್ನು ಮತ್ತಷ್ಟು ಎತ್ತಿಕಟ್ಟುವತ್ತ ಯೋಚಿಸುವುದರಲ್ಲಿ ಯಾವುದೇ ಅನುಮಾನಪಡಬೇಕಿಲ್ಲ.
ದೆಹಲಿ ರಾಷ್ಟ್ರ ರಾಜಧಾನಿ ಆಗಿರುವುದರಿಂದ ಕೇಂದ್ರದ ನೆರವಿನಿಂದ ಅಲ್ಲಿನ ಭದ್ರತೆ ಹೆಚ್ಚಿರುತ್ತದೆ, ಹಾಗಾಗಿ ಕೇಜ್ರಿವಾಲ್ ದೆಹಲಿಯ ಭದ್ರತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಹಾಗಿಲ್ಲ. ಆದರೆ ಪಂಜಾಬ್ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯ, ಖಲಿಸ್ತಾನಿ ಚಟುವಟಿಕೆಗಳು ಕೊಂಚ ಹೆಚ್ಚಾಗಿ ಗರಿಗೆದರಿರುವುದರಿಂದ ದೇಶದ ರಕ್ಷಣೆಯ ವಿಷಯದಲ್ಲಿ ಪಂಜಾಬಿನ ಗಡಿಯನ್ನು ರಕ್ಷಿಸುವುದು ಬಹುಮುಖ್ಯ. ದೆಹಲಿಯ ಪೊಲೀಸರ ಕಾರ್ಯಚಟುವಟಿಕೆಗಳ ಅರಿವಿಲ್ಲದ ಆಪ್ ಪಕ್ಷ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದರೆ ಯಾವ ಮಟ್ಟದ ಗಡಿ ಸಮಸ್ಯೆ ಆಗಬಹುದು ಊಹಿಸಿಕೊಳ್ಳಿ.
ಪಾಕಿಸ್ತಾನದಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಡ್ರಗ್ಸ್ ದಂಧೆ ಮತ್ತಷ್ಟು ಹೆಚ್ಚಳವಾದರೆ ಆಶ್ಚರ್ಯ ಪಡಬೇಕಿಲ್ಲ. ಕ್ಯಾಪ್ಟನ್ ಅಮರೇಂದರ್ ಸಿಂಗ್ ಗಡಿ ಸುರಕ್ಷತೆಯ ಬಗ್ಗೆ ಮೊದಲಿನಿಂದಲೂ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಪಂಜಾಬಿನ ಗಡಿಗಳು ಸುರಕ್ಷಿತ ಆಗಲಿಲ್ಲವೆಂದರೇ ಭಯೋತ್ಪಾದ ಚಟುವಟಿಕೆಗಳು ಹೆಚ್ಚಾಗುವ ಸಂಭವವಿದೆ. ಅಲ್ಲಿನ ಗಡಿಯಲ್ಲಿ ಭದ್ರತೆಯಲ್ಲಿನ ಲೋಪ ಇತರ ರಾಜ್ಯಗಳ ಮೇಲಾಗುವುದರಿಂದ ಪಂಜಾಬಿನ ಮತದಾರರಿಗೆ ಅದರ ಸಮಸ್ಯೆಯ ಅರಿವಿದ್ದಂತೆ ಕಾಣುತ್ತಿಲ್ಲ.ಈ ಕಾರಣದಿಂದಲೇ ಅಮರೇಂದರ್ ಸಿಂಗ್ ಪಂಜಾಬಿನಲ್ಲಿ ಪ್ರಬಲ ರಾಷ್ಟ್ರೀಯವಾದಿ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಹೇಳುತ್ತಿದ್ದಾರೆ.
ದೆಹಲಿ ಹಾಗೂ ಪಂಜಾಬ್ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ನೀರಾವರಿ ಯೋಜನೆಗಳು, ಪಂಜಾಬಿನ ಬಹುಪಾಲು ಜನ ಕೃಷಿಯನ್ನೇ ಅವಲಂಬಿ
ಸುವುದರಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ. ಆದರೆ ಪಂಜಾಬಿನ ಪ್ರಮುಖ ಸಮಸ್ಯೆಯೆಂದರೆ ಅಧಿಕ ನೀರಾವರಿ, ಸಿಂಧು ನದಿಯ ನೀರು ಹೆಚ್ಚಾಗಿ ಈ ರಾಜ್ಯದಲ್ಲಿ ಹರಿಯುವುದರಿಂದ ನೀರಾವರಿಯ ವಿಚಾರದಲ್ಲಿ ಪಂಜಾಬಿನ ಬಹುತೇಕ ಕೃಷಿ ಜಮೀನಿಗೆ ಅಧಿಕ ನೀರಾವರಿಯ ಸಮಸ್ಯೆಯಿದೆ. ನೀರಾವರಿ ಹೆಚ್ಚಾದಷ್ಟು ಭೂಮಿಯು ಒದ್ದೆಯಾಗುತ್ತದೆ, ಇದರಿಂದಾಗಿ ಬೆಳೆಗಳ ಮೇಲಿನ ನಿಯಂತ್ರಣ ಕಷ್ಟವಾಗುತ್ತದೆ. ಬಹುತೇಕ ರೈತರು ದೊಡ್ಡ ದೊಡ್ಡ ನಾಲೆಗಳ ಮೂಲಕ ತಮ್ಮ ಕೃಷಿ ಭೂಮಿಗೆ ಬೇಕಿರುವ ನೀರನ್ನು ಪೂರೈಸಿಕೊಳ್ಳುತ್ತಾರೆ. ಆದರೆ ದೆಹಲಿಯಲ್ಲಿ ಯಾವ ನೀರಾವರಿ ಯೋಜನೆಯೂ ಬೇಕಿಲ್ಲ, ಅಲ್ಲಿನ ಜನರಿಗೆ
ಕುಡಿಯುವ ನೀರನ್ನು ಸರಿಯಾಗಿ ಒದಗಿಸಲಾಗದ ಕೇಜ್ರಿವಾಲ್ ಸರಕಾರ ಪಂಜಾಬಿನಲ್ಲಿ ನೀರಾವರಿ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತದೆ? ದೆಹಲಿಯಲ್ಲಿ ಗದ್ದುಗೆ ಹಿಡಿದಾಕ್ಷಣ ಇತರರಾಜ್ಯಗಳನ್ನೂ ಅದೇ ರೀತಿಯಲ್ಲಿ ಗೆಲ್ಲಬಹುದೆಂಬ ಕನಸು ಕಾಣುತ್ತಿರುವ ಆಪ್ ದೆಹಲಿಯಲ್ಲಿ ತನಗೆ ಸಿಗುವಷ್ಟು ಸ್ವಾತಂತ್ರ್ಯಇತರ
ರಾಜ್ಯಗಳಲ್ಲಿ ಸಿಗುವುದಿಲ್ಲವೆಂಬುದನ್ನು ಮರೆತಿದೆ.
ಪಂಜಾಬಿನ ಚುನಾವಣಾ ಪ್ರಚಾರಸಭೆಗಳಲ್ಲಿಯೂ ಸಹ ದೆಹಲಿಯ ರೀತಿಯಲ್ಲಿ ಉಚಿತ ಸಾಮಾಜಿಕ ಯೋಜನೆಗಳ ಘೋಷಣೆಯ ಮೂಲಕವೇ ಜನರನ್ನು ಆಪ್ ಆಕರ್ಷಿಸುತ್ತಿದೆ. ಬಂಡವಾಳವಾದವಿಲ್ಲದೆ ಸಮಾಜವಾದವಿಲ್ಲವೆಂಬ ಸಾಮಾನ್ಯ ಜ್ಞಾನ ಆಪ್ ಪಕ್ಷಕ್ಕಿಲ್ಲ, ಮೊದಲು ಸಂಪತ್ತನ್ನು ಸೃಷ್ಟಿಸಿ ನಂತರ ಸಮಾಜಕ್ಕೆ ಹಂಚಬೇಕು, ಸಂಪತ್ತನ್ನೇ ಸೃಷ್ಟಿಸದೆ ಸಾಲ ಮಾಡಿ ಜನರ ಬಾಯಿಗೆ ತುಪ್ಪತಿನ್ನಿಸಿ, ಮುಂದೊಂದು ದಿನ ಅದೇ ಜನಗಳ ಮಕ್ಕಳಬಾಯಿಗೆ ವಿಷ ಕುಡಿಸುವ ಪರಿಸ್ಥಿತಿ ಎದುರಾಗುವಂತೆ ಮಾಡುವುದು ಆಪ್‌ನ ದೂರದೃಷ್ಟಿಯ ರಾಜಕೀಯಶೈಲಿ.
ಈ ಸಿದ್ಧಾಂತದಲ್ಲೇ ಕಾರ್ಯನಿರ್ವಹಿಸುತ್ತಿರುವ ಆಮ್ ಆದ್ಮಿ ಪಂಜಾಬ್‌ನಲ್ಲಿ ಅಽಕಾರಕ್ಕೆ ಬಂದರೆ ರಾಜ್ಯದ ಆರ್ಥಿಕತೆಯನ್ನು ಮುಳುಗಿಸುವುದರಲ್ಲಿ ಯಾವುದೇ
ಸಂಶಯವಿಲ್ಲ. ಕಮ್ಯುನಿಸ್ಟರ ಮನಸ್ಥಿತಿಯನ್ನೇ ಹೊಂದಿರುವ ಆಪ್ ಮತ್ತದೇ ಕಮ್ಯುನಿಸ್ಟರ ರೀತಿ ಸಾಲ ಮಾಡಿ ಜನರಿಗೆ ತುಪ್ಪ ತಿನ್ನಿಸುವ ರಾಜಕೀಯ ಕಾರ್ಯ ತಂತ್ರಕ್ಕೆ ಮೊರೆಹೋಗಿದೆ. ಪಂಜಾಬಿನ ಮತದಾರರು ಮೋದಿಯನ್ನು ದ್ವೇಷಿಸುವ ಭರದಲ್ಲಿ ಸಾಂದರ್ಭಿಕ ಶಿಶುವಾದ ಆಪ್‌ಗೆ ಅಧಿಕಾರ ನೀಡಿದರೆ ಐದು ವರ್ಷಗಳಲ್ಲಿ ಪಂಜಾಬ್ ಕೂಡಾ ಸಾಲದ ಸುಳಿಯಲ್ಲಿ ಸಿಕ್ಕು ಒzಡುವುದರಲ್ಲಿ ಯಾವುದೇ ಅನುಮಾನವಿಲ್ಲ.