Saturday, 23rd November 2024

ಇ-ಅಟಾರ್ನಿ App ಅಭಿವೃದ್ಧಿ ಪಡಿಸಿದ 10 ವರ್ಷದ ಬಾಲಕ

ಬೆಂಗಳೂರು: ಪ್ರತಿಯೊಂದಕ್ಕೂ ಆಪ್ ಇರುವ ಈ ಕಾಲದಲ್ಲಿ 10 ವರ್ಷದ ಬಾಲಕನೊಬ್ಬ ವಕೀಲರು ತಮ್ಮ ಪ್ರಕರಣಗಳನ್ನು ಒಂದೆಡೆ ಸಂಗ್ರಹಿಸಿಕೊಳ್ಳ ಲೆಂದು “ಇ-ಅಟಾರ್ನಿ” ಎಂಬ ವಿಶೇಷ ಆಪ್ ಅಭಿ ವೃದ್ಧಿ ಪಡಿಸಿದ್ದಾನೆ.

ಹೌದು, ಆರ್.ಕಾನಿಷ್ಕರ್ ಎಂಬ ಕೇವಲ 10 ವರ್ಷದ ಯುವಕ ಈ ಆಪ್‌ನನ್ನು ಸಿದ್ಧಪಡಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾನೆ. ತನ್ನ ತಂದೆ ವಕೀಲ ವೃತ್ತಿ ಮಾಡುತ್ತಿದ್ದು, ಕೇಸ್ ವಾದಿಸಲು ಅವರ ತಂದೆ ದಾಖಲೆ ಗಳನ್ನು ಸಂಗ್ರಹಿಸುವಲ್ಲಿ ಪಡುತ್ತಿದ್ದ ಕಷ್ಟವನ್ನು ಅರಿತ ಈ ಬಾಲಕ, ತಂದೆಗೆ ಅನುಕೂಲ ಮಾಡಿ ಕೊಡಲು ಈ ಆಪ್ ಸಿದ್ಧ ಪಡಿಸಿದ್ದಾನೆ. ಇದೀಗ ಈ ಆಪ್ ವಿಶ್ವಾದ್ಯಂತ ಎಲ್ಲಾ ವಕೀಲರಿಗೂ ಹೆಚ್ಚು ಉಪಯುಕ್ತವಾಗಲಿದೆ.

ವೈಟ್‌ಹ್ಯಾಟ್ ಜೂನಿಯರ್ ವಿದ್ಯಾರ್ಥಿಯಾದ ಕಾನಿಷ್ಕರ್, ಈಗಾಗಲೇ ಕೋಡಿಂಗ್ ಕಲಿಯುವಲ್ಲಿ ನಿರತನಾಗಿದ್ದಾನೆ. ವೈಟ್‌ಹ್ಯಾಟ್ ಜೂನಿಯರ್ ಪಠ್ಯ ಕ್ರಮದಲ್ಲಿ ಕೋಡಿಂಗ್ ಪ್ರಾಜೆಕ್ಟ್ಗಾಗಿ ಈ ಆಪ್ ನಿರ್ಮಾಣ ಮಾಡುವ ಆಸಕ್ತಿ ತೋರಿದ್ದ. ಅದರಂತೆ ಈ ಆಪ್ ನಿರ್ಮಾಣ ಮಾಡಿದ್ದಾನೆ. ಮೊದ ಮೊದಲು ಇದು ಸಣ್ಣ ಆಪ್ ಆಗಿತ್ತು. ಆದರೆ, ಇದರ ಪ್ರಾಮುಖ್ಯತೆ ಅರಿತ ವೈಟ್‌ಹ್ಯಾಟ್ ಜೂನಿಯರ್ ದೊಡ್ಡ ಮಟ್ಟದಲ್ಲಿ ಆಪ್ ಅಭಿವೃದ್ಧಿ ಪಡಿಸಲು ಬೆಂಬಲ ನೀಡಿದರು.

ಈ ಆಪ್‌ನಲ್ಲಿ ವಕೀಲರು ತಮ್ಮ ಕಕ್ಷೀದಾರರಿಗೆ ಸಂಬಂಧಿಸಿದ ಎಲ್ಲಾ ಬಗೆಯ ದಾಖಲೆಗಳು, ಮತ್ತಿತರ ಪ್ರಕರಣಗಳ ಮಾಹಿತಿ ಎಲ್ಲವನ್ನೂ ಈ ಆಪ್‌ನಲ್ಲಿ ಸಂಗ್ರಹಿಸಲು ಅವಕಾಶವಿದೆ. ಇದರಿಂದ ಹಿಂದೆಂದೋ ನಡೆದ ಪ್ರಕರಣಗಳ ಮಾಹಿತಿಯನ್ನು ಈ ಆಪ್‌ನಲ್ಲಿಯೇ ಸುಲಭವಾಗಿ ಅಧ್ಯಯನ ಮಾಡ ಬಹುದು. ಅಷ್ಟೇ ಅಲ್ಲದೆ, ಕಕ್ಷೀದಾರರು ಸಹ ತಮಗೆ ಸಂಬಂಧಿಸಿದ ಅಥವಾ ಕೋರ್ಟ್‌ನಲ್ಲಿರುವ ಇತರೆ ಪ್ರಕರಣಗಳ ಮಾಹಿತಿಯನ್ನೂ ಸಂಬಂಧಿಸಿದ ವಕೀಲರ ಅನುಮತಿ ಮೇರೆಗೆ ಪಡೆಯಬಹುದು. ಜೊತೆಗೆ ಕಕ್ಷೀದಾರರು ಹಾಗೂ ವಕೀಲರ ಪ್ರೈವೆಟ್ ಚಾಟ್‌ಗೂ ಇದರಲ್ಲಿ ಅವಕಾಶವಿದೆ.

ಈ ಕುರಿತು ಮಾತನಾಡಿದ ಕಾನಿಷ್ಕರ್, ನನ್ನ ತಂದೆ ವಕೀಲರಾಗಿದ್ದು, ಪ್ರತಿ ದಿನ ಕೆಲಸದ ಒತ್ತಡದಿಂದ ಮನೆಗೆ ತಡವಾಗಿ ಬರುತ್ತಿದ್ದರು. ಅಲ್ಲದೆ, ಅವರು ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಎಲ್ಲೆಡೆ ಅಧ್ಯಯನ ನಡೆಸಲು, ಮಾಹಿತಿ ಸಂಗ್ರಹಿಸಿ ಅದನ್ನು ಫೈಲ್ ಮಾಡಲು ಬಹಳ ಸಮಯ ತೆಗೆದು ಕೊಳ್ಳುತ್ತಿದ್ದರು. ಹೀಗಾಗಿ ನಾನು ಎಲ್ಲಾ ವಕೀಲರಿಗೆ ಅನುಕೂಲವಾಗುವಂತೆ ಈ ಆಪ್ ಅಭಿವೃದ್ಧಿ ಪಡಿಸಿದ್ದೇನೆ ಎಂದಿದ್ದಾರೆ. ಈ ಆಪ್ ಗೌಪ್ಯತೆಯಿಂದ ಕೂಡಿದೆ. ಅನವಶ್ಯಕವಾಗಿ ಮತ್ತೊಬ್ಬರ ಮಾಹಿತಿಯನ್ನು ಸೋರಿಗೆ ಮಾಡಲು ಸಾಧ್ಯವೇ ಇಲ್ಲ.

ಶಾಲೆಯಲ್ಲಿ ನಿರ್ಮಿಸಿದ ಈ ಆಪ್‌ನನ್ನು ದೊಡ್ಡಮಟ್ಟ ದಲ್ಲಿ ನಿರ್ಮಿಸಲು ನನಗೆ ಶಿಷ್ಯ ವೇತನ ದೊರೆಯಿತು. ಆನ್‌ಲೈನ್ ಸೆಲ್ಯೂಷನ್ ಎಂಬ ಕಂಪನಿಯ ಸಹಾಯದೊಂದಿಗೆ ಇನ್ನಷ್ಟು ತಂತ್ರಜ್ಞಾನವನ್ನು ಅಳವಡಿಸಲಾಗಿದೆ.