Saturday, 23rd November 2024

ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಕೇಂದ್ರ ಸಚಿವ ಕಿಡಿ

ನವದೆಹಲಿ: ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದೆ ಎಂದು ಇಸ್ರೇಲ್‌ನೊಂದಿ ಗಿನ ಒಪ್ಪಂದದ ಭಾಗವಾಗಿ ವರದಿ ಪ್ರಕಟಿಸಿ ರುವ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಕೇಂದ್ರ ಸಚಿವ, ಜನರಲ್ ವಿ. ಕೆ. ಸಿಂಗ್ ಶನಿವಾರ ಕಿಡಿ ಕಾರಿದ್ದಾರೆ.

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಕಂಪನಿಯು ತಯಾರಿಸುತ್ತಿರುವ ಪೆಗಾಸಸ್‌ ಬೇಹುಗಾರಿಕೆ ತಂತ್ರಾಂಶ ಬಳಸಿ ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಭಾರತದ ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಇದ್ದಾರೆ ಎಂಬ ಆರೋಪ ಕಳೆದ ವರ್ಷ ಕೇಳಿ ಬಂದಿತ್ತು. ಇದು ಭಾರತದಲ್ಲಿ ವಿವಾದಕ್ಕೂ ಕಾರಣವಾಗಿತ್ತು.

ನ್ಯೂಯಾರ್ಕ್‌ ಟೈಮ್ಸ್‌ ವರದಿಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿರುವ ರಾಜ್ಯ ಸಚಿವ ಸಿಂಗ್ ‘ನೀವು ಎನ್‌ವೈಟಿ ಯನ್ನು ನಂಬುತ್ತೀರಾ? ಅದು ‘ಸುಪಾರಿ ಮಾಧ್ಯಮ’ ಎಂದು ಕರೆದಿದ್ದಾರೆ.

ಸಿಂಗ್ ಅವರು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರೂ ಆಗಿದ್ದಾರೆ.