ವಿಶ್ವವಾಣಿ ವಿಶೇಷ
ಇಷ್ಟು ದಿನ ಇಲ್ಲದ ವಿವಾದ ಈಗೇಕೆ?
ಬಾಕಿಯಿರುವ ಎರಡು ತಿಂಗಳ ಶೈಕ್ಷಣಿಕ ಅವಧಿಗೆ ವಿವಾದ
ವಿದ್ಯಾರ್ಥಿನಿಯರ ಹಿಂದಿರುವ ಶಕ್ತಿಯಾದರೂ ಯಾವುದು?
ಬೆಂಗಳೂರು: ರಾಷ್ಟ್ರದ ಗಮನ ಸೆಳೆದಿರುವ ಉಡುಪಿ ಸರಕಾರಿ ಕಾಲೇಜಿನ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಯ ನಡುವೆ,
ನೆರೆಯ ಕುಂದಾಪುರದಲ್ಲೂ ಇಂತಹದ್ದೇ ವಿವಾದ ಕಾಣಿಸಿಕೊಂಡಿದೆ.
ಇಷ್ಟು ದಿನ ಇಲ್ಲದ ವಿವಾದ, ಶೈಕ್ಷಣಿಕ ವರ್ಷ ಮುಗಿಯುತ್ತಿದೆ ಎನ್ನುವ ಸಂದರ್ಭದಲ್ಲಿ ಭುಗಿಲೆದ್ದಿರುವುದು ನುಮಾನಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಿನಿಂದ ಉಡುಪಿ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿ ತರಗತಿ ಪ್ರವೇಶಿಸಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಕುಂದಾಪುರದಲ್ಲೂ ಅದೇ ರೀತಿಯ ವಿವಾದ ಇಣುಕಿದೆ. ಈ ಮೊದಲು ಸಹ ಸರಕಾರಿ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಇರಲಿಲ್ಲ. ಈಗಲೂ ಇಲ್ಲ. ಕೆಲವು ಸರಕಾರಿ ಕಾಲೇಜುಗಳಲ್ಲಿ ಸಮವಸ ಕಡ್ಡಾಯವಿದ್ದರೂ ಸಮವಸ್ತ್ರ ಸಂಹಿತೆಯನ್ನು ಸರಕಾರ ರೂಪಿಸಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ವಿವಾದ ಎಬ್ಬಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.
ವಸ್ತ್ರ ಸಂಹಿತೆಗೇಕೆ ವಿಳಂಬ
ಉಡುಪಿಯಲ್ಲಿ ಇಷ್ಟೆಲ್ಲ ವಿವಾದವಾಗುತ್ತಿರುವುದಕ್ಕೆ ಮತ್ತೊಂದು ಸಮಸ್ಯೆ ಎಂದರೆ ಸಮವಸ ಸಂಹಿತೆಯ ಬಗ್ಗೆ ಸ್ಪಷ್ಟ ಮಾರ್ಗಸೂಚಿಯನ್ನು ಸರಕಾರ ಹೊರಡಿಸದೇ ಇರುವುದು. ಉನ್ನತ ಶಿಕ್ಷಣ ಇಲಾಖೆ ವಸ್ತ್ರ ಸಂಹಿತೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದಿದೆ. ವಸ್ತ್ರ ಸಂಹಿತೆ ವಿಧಿಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದಷ್ಟೇ ಹೇಳಿದೆ. ಇದರ ಮಧ್ಯೆ ವಿವಾದ ಕುಂದಾಪುರಕ್ಕೂ ಕಾಲಿಟ್ಟಿದೆ. ಆದರೆ, ಈ ವಿವಾದವಾದ ಬಳಿಕವೂ ಸರಕಾರ ಎಚ್ಚೆತ್ತುಕೊಳ್ಳದೇ ಇರುವುದು ಗೊಂದಲ ಹೆಚ್ಚಲು ಕಾರಣವಾಗಿದೆ.
ಹೈಕೋರ್ಟ್ ಮೆಟ್ಟಿಲು ಏರುವಷ್ಟು ಶಕ್ತರೇ?
ಹಿಜಾಬ್ ಇಲ್ಲದೇ ಬಂದರೆ ಮಾತ್ರ ಪ್ರವೇಶವೆಂದು ಕಾಲೇಜು ಪ್ರಾಂಶುಪಾಲರು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಹಿಜಾಬ್ ಧರಿಸಲು ಅವಕಾಶ ಕೋರಿ ಆ ವಿದ್ಯಾರ್ಥಿನಿಯರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧವಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಓದುವ, ಅವರೇ ಹೇಳಿ ಕೊಳ್ಳುವಂತೆ ಮಧ್ಯಮ ವರ್ಗದ ಆ ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲು ಏರುವಷ್ಟು ‘ಶಕ್ತಿ’ ತುಂಬುವ ಕೆಲಸ ವನ್ನು ಯಾರು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಶುರುವಾಗಿದೆ.
***
ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಬೇಡ. ಮತೀಯತೆ ಬಿಟ್ಟು ವಿಶಾಲ ಮನೋಭಾವ ಇರಬೇಕು. ವಿದ್ಯಾರ್ಥಿಗಳು ಹಿಜಾಬ್, ಕೇಸರಿ ವಸ್ತ್ರ ಧರಿಸಿ ಭಾವನೆ ಗಳನ್ನು ಕೆರಳಿಸಬಾರದು.
-ಆರಗ ಜ್ಞಾನೇಂದ್ರ ಗೃಹ ಸಚಿವ
ಬೇಟಿ ಬಚಾವೋ ಬೇಟಿ ಪಡಾವೋ ಅನ್ನುವುದು ಮತ್ತೊಂದು ಸುಳ್ಳು ಘೋಷಣೆ. ಮುಸ್ಲಿಂ ಹೆಣ್ಣು ಮಕ್ಕಳು ತೊಡುವ ವಸ್ತ್ರಗಳಿಂದಾಗಿ ಶಿಕ್ಷಣದ ಹಕ್ಕನ್ನು
ಕಳೆದುಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮು ದಾಯವನ್ನು ಕಡೆಗಣಿಸುವುದು ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ಮತ್ತೊಂದು ಹೆಜ್ಜೆಯಾಗಿದೆ.
-ಮೆಹಬೂಬಾ ಮುಫ್ತಿ ಜೆಕೆಪಿಡಿಪಿ ಅಧ್ಯಕ್ಷೆ