Saturday, 14th December 2024

ನಃ ಸ್ತ್ರೀ ಸ್ವಾತಂತ್ರ‍್ಯಂ ಅರ್ಹತಿ ಎಂಬ ಮಾತು

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಸನಾತನ ಹಿಂದೂ ಧರ್ಮದಲ್ಲಿ ಮಹಿಳೆಗೆ ಸಾಕಷ್ಟು ಗೌರವ ನೀಡಲಾಗಿದೆ. ವಿಪರ್ಯಾಸವೆಂದರೆ, ಇಂದು ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಮಹಿಳೆಯರು ಮತ್ತೊಬ್ಬರಿಗೆ ಭಾರ ಎನ್ನುವ ಮನೋಭಾವನೆ ಕಳೆಯಲು, ಹೆಣ್ಣು ಸುಶಿಕ್ಷಿತಳಾಗಬೇಕು, ಆರ್ಥಿಕವಾಗಿ ಸದೃಢವಾಗಬೇಕು.

ಅಮ್ಮಾ, ಬ್ರಿಟಿಷರು ಭಾರತಕ್ಕೆ ಬಂದು ಸಾಕಷ್ಟು ಒಳ್ಳೆಯದನ್ನೂ ಮಾಡಿದ್ದಾರೆ ಗೊತ್ತಾ? ಇಲ್ಲದಿದ್ರೆ ಇಷ್ಟು ಹೊತ್ತಿಗೆ ಗಂಡ ಸತ್ತ ಕೂಡಲೇ ಹೆಂಡತಿಯನ್ನೂ ಅದೇ ಚಿತೆಯಲ್ಲಿ ಹಾಕಿ ಸುಟ್ಟುಬಿಡುತ್ತಿದ್ರು ಅಂದ. ಹೌದು ಪುಟ್ಟಾ, ಅವರು ಮಾಡಿದ ರಸ್ತೆಗಳು ಕೆಲವು ಕಡೆ ಈಗಲೂ ಸುಸ್ಥಿತಿಯಲ್ಲಿದೆ. ಆದರೆ ಈಗಿನ ರಸ್ತೆಗಳಲ್ಲಿ ಹೆಚ್ಚಾಗಿ
ಗುಂಡಿಗಳೇ ತುಂಬಿ ಹೋಗಿ ಅದೆಷ್ಟು ಜೀವಗಳು ಬಲಿಯಾಗುತ್ತಿರುವುದನ್ನು ದಿನಬೆಳಗಾದರೆ ನಾವು ನೋಡು ತ್ತಿದ್ದೇವೆ ಅಂದೆ. ಅವನೊಂದಿಗೆ ಮಾತಾಡುವುದು ಖುಷಿ ಕೊಡುತ್ತದೆ. ಅವನ ಮಾತುಗಳಲ್ಲಿ, ಆಲೋಚನೆಗಳಲ್ಲಿ. ವಯಸ್ಸಿಗೆ ಮೀರಿದ ಪ್ರೌಢಿಮೆ ಇದೆ.

ಹೀಗಾಗಿ we both exchange our thoughts nd opinions whenever we get time.  ಅವನಾಡಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತ್ತು. ಸತಿ ಸಾವಿತ್ರಿ, ಸತಿ ಸಕ್ಕೂಬಾಯಿ, ಸತಿ ಅನಸೂಯಾ ಇವರೆಲ್ಲ ಸದಾಕಾಲ ತಮ್ಮ ಪತಿಯ ಶ್ರೇಯಸ್ಸನ್ನೇ ಬಯಸಿದವರು. ಸತಿ ಸಾವಿತ್ರಿಯಂತೂ ಯಮನ ಪಾಶ ದಿಂದ ಮುಕ್ತಗೊಳಿಸಿ ತನ್ನ ಪತಿಯನ್ನು ಬದುಕಿಸಿಕೊಂಡವಳು. ಇಚ್ಛೆಯನರಿ ಯುವ ಸತಿ ಜೊತೆಯಲಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದವನು ಸರ್ವಜ್ಞ! ಆದರೆ ಆ ಸತಿಯ ಇಚ್ಛೆಯನ್ನೇ ಅರಿಯದೇ ಅವಳನ್ನು ಚಿತೆಗೆ ನೂಕೆಂದವರು ಯಾರು? ಪುರಾಣಗಳ ಪ್ರಕಾರ ಶಿವನ ಸಹಧರ್ಮಿಣಿ ಸತಿ. ಶಿವನ ಮಾತನ್ನು ಕೇಳದೆ ತನ್ನ ತಂದೆ ಪ್ರಜಾಪತಿ ದಕ್ಷನ ಆಮಂತ್ರಣವಿಲ್ಲದೆಯೂ ಯಜ್ಞಸಭೆಗೆ ಹೋಗಿ ಅವಮಾನಿತಳಾಗಿ ಕೊನೆಗೆ ಅದೇ ಅಗ್ನಿಕುಂಡಕ್ಕೆ ಹಾರಿ ಆಹುತಿಯಾದ ವಳು.

ಆದರೆ ಆಗ ಅವಳು ವಿಧವೆಯಾಗಿರಲಿಲ್ಲ. ಇನ್ನು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡುವಿನ ಹೆಂಡತಿ ಮಾದ್ರಿ ತನ್ನ ಮಕ್ಕಳಾದ ನಕುಲ-ಸಹದೇವರನ್ನು ಕುಂತಿಯ ಮಡಿಲಿಗೆ ಹಾಕಿ ನಿರಾತಂಕವಾಗಿ ಪಾಂಡುವಿನ ಶವದ ಜೊತೆಗೆ ಚಿತೆಯೇರುತ್ತಾಳೆ. ಗಂಡ ಸತ್ತ ನಂತರ ಹೆಂಡತಿಯಾಗಿದ್ದವಳ ಬಳೆ ಒಡೆಸಿ, ಮುಡಿಯ ಹೂವು ತೆಗೆಸಿ, ಹಣೆಯ ಕುಂಕುಮ ತೆಗೆಸಿ, ತಲೆ ಬೋಳಿಸಿ, ಬಿಳಿ ಸೀರೆ ಉಡಿಸಿ ಅವಳನ್ನು ಎಲ್ಲ ಮಂಗಳ ಕಾರ್ಯಗಳಿಂದ ದೂರ ಉಳಿಸುತ್ತದೆ. ಇದೆಲ್ಲ ಅವಳ ಮನಸಿನ ಮೇಲೆ ಎಂಥಾ ಗಾಢ ಪರಿಣಾಮವನ್ನು ಬೀರಬಲ್ಲದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದನ್ನೆಲ್ಲ ನೋಡು ವಾಗ ಅವಳ ಅಸಹಾಯಕತೆಯನ್ನು, ಪ್ರೀತಿಯನ್ನು, ತ್ಯಾಗವನ್ನು ದುರುಪಯೋಗಿಸಿಕೊಂಡು ನಿರಂತರವಾಗಿ ಸಮಾಜದ ಶೋಷಣೆಗೆ ಬಲಿಯಾಗುತ್ತಲೇ ಇದ್ದಾಳೆ ಹೆಣ್ಣು ಅನ್ನಿಸುತ್ತದೆ.

ತೊಂಬತ್ತರ ದಶಕದಲ್ಲಿ ಶಾಲೆ ಮುಗಿಸಿ ಕಾಲೇಜಿಗೆ ಸೇರಿದರೂ ನನಗದು ಕಾಲೇಜು ಅನ್ನಿಸುತ್ತಲೇ ಇರಲಿಲ್ಲ. ಕಾರಣ, ಶಾಲೆಯ ಕ್ಯಾಂಪಸ್ಸಿನ ನಾಲ್ಕು ಕೊಠಡಿ ಗಳನ್ನು ಹೆಚ್ಚಿಸಿ ಪಿಯು ಕಾಲೇಜನ್ನು ಮಾಡಲಾಗಿತ್ತು. ಮೊದಲ ದಿನವೇ ನಮ್ಮ ಪ್ರಿನ್ಸಿಪಾಲರಿಂದ ನಮಗೆಲ್ಲ ಹಿತವಚನ. ಹೆಣ್ಣು ಮಕ್ಕಳು ಹೇಗಿರಬೇಕು? ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡಬೇಕು, ಹೊತ್ತಿಗೆ ಮುಂಚೆ ಮನೆ ಸೇರಿಕೊಳ್ಳಬೇಕು, ಹುಡುಗರೊಂದಿಗೆ ಹೆಚ್ಚು ಮಾತನಾಡಬಾರದು ಅಂತೆಲ್ಲ. ಅದು ವುಮೆನ್ಸ್ ಕಾಲೇಜಾಗಿದ್ದಿದ್ದರಿಂದ ಅದರ ಪ್ರಮೇಯವೇ ಬರಲಿಲ್ಲ. ಆದರೆ ಅವರು ಹೇಳಿದ್ದಕ್ಕೆಲ್ಲ ಮನದೊಳಗೇ ಒಂದು ಪ್ರಶ್ನೆ ಎದ್ದು ನಿಲ್ಲುತ್ತಿತ್ತು. ಇದೆಲ್ಲ
r-estriction ಹೆಣ್ಣುಮಕ್ಕಳಾದ ನಮಗೆ ಮಾತ್ರ ಯಾಕೆ? ಅಂತ. ಆದರೆ ಕೇಳುವ ಧೈರ್ಯವಾಗುತ್ತಿರಲಿಲ್ಲ. ಅದಾದ ನಾಲ್ಕು ವರ್ಷಗಳಿಗೆ ನಾನು ಕದಿರೇನ ಹಳ್ಳಿಯ ಟೀಚರ್ಸ್ ಕಾಲೋನಿಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಹಾಯ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಅನ್ನುವ ಹುದ್ದೆಗೆ ಸೇರಿ ಅಲ್ಲಿನ ಕಂಪ್ಯೂಟರ್ ಸೆಕ್ಷನ್ನಿನಲ್ಲಿ ಅಕ್ಷರ ವಿನ್ಯಾಸಕಿಯಾಗಿದ್ದಾಗ ನನ್ನ ವಯಸ್ಸು ಇಪ್ಪತ್ತು! ಬಿಕಾಮ್ ಬ್ರಾಕೆಟ್ಟಿನಲ್ಲಿಯೇ ಉಳಿದು ಹೋಗಿತ್ತು. ಆಗ ಬೆಂಗಳೂರು ಇಷ್ಟೆಲ್ಲ ಬೆಳೆದಿರಲಿಲ್ಲ. ಪ್ರತಿದಿನ ಆಫೀಸಿಗೆ ಹೊರಡುವಾಗ ಅಮ್ಮ ಮರೆಯದೇ ಹೇಳುತ್ತಿದ್ದ ಮಾತೆಂದರೆ ಕತ್ತಲಾಗುವ ಮುಂಚೆ ಮನೆಗೆ ಬಂದು ಬಿಡು ಅಂತ.

ಹೀಗಾಗಿ ಬೆಂಗಳೂರಿನ ರಾತ್ರಿಗಳು ಹೇಗಿರುತ್ತವೆ ಅನ್ನುವ ಕಲ್ಪನೆಯೇ ನನಗಿರಲಿಲ್ಲ. ಆದರೆ ದಿನಕಳೆದಂತೆಲ್ಲ ಪತ್ರಿಕಾ ಕಚೇರಿಯ ಕೆಲಸದ ಒತ್ತಡಗಳು ಅನುಭವಕ್ಕೆ ಬರಲಾರಂಭಿಸಿತು. ಅರ್ಧದ ಕೆಲಸ ಬಿಟ್ಟು ಎದ್ದು ಹೋಗಲಾಗುತ್ತಿರಲಿಲ್ಲ. ತಡವಾದರೆ ನಿವೇದಿತಾರೊಂದಿಗೆ ಬಾಸ್ ಮನೆಗೆ drop ಮಾಡಿ
ಹೋಗುತ್ತಿದ್ದರು. ಆಗೆಲ್ಲ ಕತ್ರಿಗುಪ್ಪೆ, ಹೊಸಕೆರೆಹಳ್ಳಿಯ ಔಟರ್ ರಿಂಗ್ ರೋಡ್ ಈಗಿನಷ್ಟು ಜನನಿಬಿಡವಾಗಿರುತ್ತಿರಲಿಲ್ಲ. ರವಿಯ ದೂರದ ಸಂಬಂಽಯೂ ಆಗಿದ್ದ ನನ್ನ ಸಹೋದ್ಯೋಗಿಯೊಬ್ಬರು ರವಿಯ ಬಗ್ಗೆ ಅವರಿಗಿದ್ದ ಅಫರ್‌ಗಳ ಬಗ್ಗೆ ಒಂದಷ್ಟು ಕಥೆಗಳೆಲ್ಲ ಹೇಳಿ ಯಾವುದಕ್ಕೂ ನೀನು ಹುಷಾರಾಗಿರು ಎಂದು ಎಚ್ಚರಿಸಿ ದ್ದರು. ಕಚೇರಿಯಲ್ಲಿ ಅವರು ಎಂದಿಗೂ ಆ ರೀತಿ ನಡೆದುಕೊಂಡಿಲ್ಲದಿದ್ದರೂ ಅದನ್ನು ಕೇಳಿದ ಮೇಲೆ ನನಗೆ ಅವರೊಂದಿಗೆ ಮಾತನಾಡುವುದಕ್ಕೆ ಭಯವಾಗುತ್ತಿತ್ತು.

ಅವರನ್ನು ನೋಡಿದಾಗಲೆಲ್ಲ ಸಿನೆಮಾಗಳಲ್ಲಿ ತೋರಿಸುವ ಕೈಗೆ ಮಲ್ಲಿಗೆ ಹೂವು ಸುತ್ತಿಕೊಂಡು ನಶೆಯ ಕಣ್ಣುಗಳಲ್ಲಿ ಬೈಠಕ್‌ಗಳಲ್ಲಿ ಕಾಣುವ ಸೀಲೋಲರ ಪಾತ್ರಗಳೆಲ್ಲ ನೆನಪಾಗಿ ಬಿಡುತ್ತಿದ್ದವು. ಅಂದು ಸಂಜೆ ಕೆಲಸ ಮುಗಿಸಿ ಹೊರಟು ನಿಂತಾಗ ಅವರು, ನಾನೇ drop ಮಾಡ್ತೀನಿ ಅಂದು ಕಾರು ತೆಗೆಯುವಾಗ ಬೇಡವೆಂದು ಹೇಳಲು ಧೈರ್ಯವಾಗದೆ ಸುಮ್ಮನಿದ್ದೆ. ಮನೆ ಹತ್ತಿರ ಬರುತ್ತಿದ್ದಂತೆಯೇ ನಿಂಗೇನೂ ಅಭ್ಯಂತರವಿಲ್ಲದಿದ್ರೆ ಒಂದಷ್ಟು ದೂರ ಹೋಗಿ ಬರೋಣ
ಅಂದಾಗ ನಂಗೆ ಜೀವವೇ ಬಾಯಿಗೆ ಬಂದಂತಾಗಿತ್ತು.  But he was so cool and gentle. ನಾನೇ ಅನಗತ್ಯವಾಗಿ ಏನೇನೋ ಕಲ್ಪನೆ ಮಾಡಿಕೊಂಡು
ಹೆದರಿಬಿಟ್ಟಿದ್ದೆ.

ಛೆ! ಅಂದುಕೊಂಡು ನಾನೂ ಸ್ವಲ್ಪ relax ಆದೆ. ಹೀಗೇ ಮಾತಿನ ನಡುವೆ ಯಾಕೆ ಹೆಣ್ಣುಮಕ್ಕಳಿಗೆ ಇಷ್ಟೊಂದೆಲ್ಲ restriction ಹೇರುತ್ತಾರೆ. ಅದು ಗಂಡು ಮಕ್ಕಳಿಗೇಕಿಲ್ಲ? ಅನ್ನುವ ಬಹು ದಿನದಿಂದ ನನ್ನನ್ನು ಕೊರೆಯುತ್ತಿದ್ದ ಪ್ರಶ್ನೆ ಕೇಳಿದಾಗ, good question ಅಂದು ನಕ್ಕು, ನೋಡು, ಹೆಣ್ಣಿಗೆ ಪ್ರಕೃತಿ ನೀಡಿರುವ ಅತಿ ದೊಡ್ಡ ವರವೇ ಅವಳಿಗೆ ಇಂದು ಶಾಪವಾಗಿ ಪರಿಣಮಿಸಿದೆ. ಗಂಡಿಗೆ ಕಳೆದುಕೊಳ್ಳುವಂಥದ್ದು ಏನೂ ಇರುವುದಿಲ್ಲ. ಆದರೆ ಗಂಡಿನ ಸಂಪರ್ಕಕ್ಕೆ ಬರುವ ಹೆಣ್ಣಿಗೆ ಗರ್ಭವತಿಯಾಗುವ ಸಂಭವವಿರುತ್ತದೆ. ಜೊತೆಗೆ ಹೊರುವ, ಹೆರುವ ಸಂದರ್ಭದಲ್ಲಿ ಅವಳು ಸಂಪೂರ್ಣ ಅಸಹಾಯಕಳಾಗಿರುತ್ತಾಳೆ. ಅವಳಿಗೆ ಯಾರದ್ದಾ ದರೂ ಆಸರೆ ಅವಶ್ಯಕವಾಗಿ ಬೇಕಾಗುತ್ತದೆ. ಅದನ್ನು ತಂದೆ-ತಾಯಿಯರು ನೇರವಾಗಿ ಹೇಳಲಾಗದೆ ಇಂಥದ್ದೆಲ್ಲ ಕಟ್ಟುಪಾಡುಗಳನ್ನು ಮಾಡುತ್ತಾರೆ. ಅವರು ಹೇಳುವುದೂ ಮಕ್ಕಳ ಒಳಿತಿಗಾಗಿ ತಾನೇ? ಎಂದಾಗ ವಿಷಯ ಅರ್ಥವಾಗಿ ಮನಸಿಗೆ ಸಮಾಧಾನ ಸಿಕ್ಕಿತ್ತು.

ಜೊತೆಯ ಅವರೆಡೆಗೆ ಗೌರವ ತುಂಬಿದ ಮೆಚ್ಚುಗೆಯೂ! ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ | ರಕ್ಷಂತಿ ಸ್ಥಾವಿರೇ ಪುತ್ರಾಃನ ಸೀ ಸ್ವಾತಂತ್ರ್ಯ ಮರ್ಹತಿ ಎಂಬ ಮನುಸ್ಮೃತಿಯ ಶ್ಲೋಕದ ಹಿಂದಿರುವ ಉದ್ದೇಶ ಅರಿವಿಗೆ ಬಂದಿತ್ತು. ಆದರೆ ಗಂಡು ಮೂಲತಃ ಆಕ್ರಮಣಕಾರಿ ಸ್ವಭಾವದವನು. ಎಲ್ಲವನ್ನೂ ಗೆಲ್ಲುವ, ತನ್ನ ಅಧೀನ ದಲ್ಲಿಟ್ಟುಕೊಂಡು ಆಳುವ ಜೊತೆಗೆ ರಕ್ಷಿಸುವ ಸಾಮರ್ಥ್ಯವಿರುವವನು. ಹೀಗಾಗಿ ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲಿಯೂ, ಯೌವನದಲ್ಲಿ ಪತಿಯ ರಕ್ಷಣೆಯಲ್ಲಿ ಯೂ, ಮುಪ್ಪಿನಲ್ಲಿ ಮಗನ ರಕ್ಷಣೆಯಲ್ಲಿ ಅವಳು ಸುರಕ್ಷಿತವಾಗಿರಲಿ ಎಂಬುದು. ಹಿಂದೂ ಧರ್ಮದಲ್ಲಿ ಸೀ ರಕ್ಷಣೆಯ ನಿರ್ಬಂಧವಿರುವುದು ಆಕೆ ಅಬಲೆ ಅಥವಾ ಕೀಳು ಎಂಬ ಕಾರಣಕ್ಕಾಗಿ ಅಲ್ಲವೇ ಅಲ್ಲ.

ಹೆಣ್ಣು ಸಮಾಜದ ಕಣ್ಣು! ಹೆಮ್ಮೆ ಮತ್ತು ಶಕ್ತಿ. ಹೇಗೆ ರಾಜರತ್ನವನ್ನು ಸದಾಕಾಲ ರಕ್ಷಿಸಲಾಗುತ್ತದೆಯೋ ಹಾಗೆಯೇ ಸೀಯರ ರಕ್ಷಣೆ ಸದಾಕಾಲವೂ ಇರಬೇಕು. ಬೆಲೆಬಾಳುವ ಆಭರಣಗಳನ್ನು ನಾವು ಇತರ ಕಳಪೆ ಲೋಹದ ಪಾತ್ರೆಗಳಂತೆ ಎಂದರಲ್ಲಿ ಬಿಸಾಡುವುದಿಲ್ಲ. ಅತ್ಯಮೂಲ್ಯ ವಸ್ತುವನ್ನು ರಕ್ಷಿಸುವುದು ಸಹಜವೇ ಎಂದು ಟೆರ್ರ‍ಿಬ್ರೌನ್ ಎಂಬ ಲೇಖಕಿ ತನ್ನ ಎಸ್ಸೇನಿಷಿಯಲ್ ಟೀಚಿಂಗ್ಸ್ ಆಫ್ ಹಿಂದೂಯಿಸಂ ಪುಸ್ತಕದಲ್ಲಿ ಸನಾತನ ಧರ್ಮದಲ್ಲಿ ಸೀಯರ ಮಹತ್ವವನ್ನು
ಹೀಗೆ ವಿವರಿಸಿದ್ದಾರೆ.

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಲ್ಲಿ ಸೀಯರನ್ನೂ ಗೌರವಿಸುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿ ನೆಲೆಸಿರುತ್ತಾರೆ ಎನ್ನುವ ಮಾತಿನಂತೆ ಹಿಂದೂ ದೇಶದಲ್ಲಿ ಭಾರತವನ್ನು ಮಾತೆ ಎಂದು ಪೂಜಿಸಲಾಗುತ್ತದೆ. ಇಲ್ಲಿನ ನದಿ, ಪರ್ವತಗಳನ್ನು, ಪ್ರಕೃತಿಯನ್ನು, ಭೂಮಿಯನ್ನು ಹೆಣ್ಣೆಂದು ಭಾವಿಸಿ ಪೂಜಿಸಲ್ಪಡುತ್ತದೆ. ಕಾಮಧೇನು ಸ್ವರೂಪವಾದ ಗೋವನ್ನೂ ಸಹ ಮಾತೃ ರೂಪದಲ್ಲಿ ಪೂಜಿಸಲ್ಪಡುತ್ತದೆ. ಇಂಥಾ ಸಮೃದ್ಧ ಚೆಲುವಿನ, ಸಂಸ್ಕಾರಯುತ ನಾಡಿನ ಮೇಲೆ ನಿರಂತರವಾಗಿ ಉಂಟಾದ ಸಾಲು ಸಾಲು ಪರಕೀಯ ದಾಳಿಗಳಿಂದ ರಕ್ಷಿಸಲು ಹೆಣ್ಣನ್ನು ಹೊರಗೆ ಬಾರದಂತೆ ಹೊಸ್ತಿಲೊಳಗೆ ನಿಲ್ಲಿಸುವಂತಾ ಯಿತು. ಯುದ್ಧಗಳಲ್ಲಿ ಸೋತಾಗ ರಾಜ್ಯದ ಜೊತೆಗೆ ರಾಣಿಯರನ್ನೂ ವಶಪಡಿಸಿಕೊಂಡು ಅಟ್ಟಹಾಸ ಮೆರೆಯುತ್ತಿದ್ದ ಕಾಲದಲ್ಲಿ ಮೃತ ರಾಜನ ಚಿತೆಯೊಂದಿಗೆ ಜೀವಂತ ರಾಣಿಯರೂ ಚಿತೆಯೇರಿ ವೀರ ಸತಿಯರಾಗಿ ಪೂಜಿಸಲ್ಪಡುವಂತಾಯ್ತು.

ಕಾಲಾಂತರದಲ್ಲಿ ಅದು ರೂಢಿ ಗತವಾಗಿ ಇಚ್ಛೆಯಿಲ್ಲದಿದ್ದರೂ ಬಲವಂತವಾಗಿ ಜೀವಂತ ಹೆಂಡತಿಯನ್ನು ಮೃತ ಗಂಡನ ಚಿತೆಯೊಂದಿಗೆ ಸುಟ್ಟುಹಾಕುವ ಕ್ರೂರ ಪದ್ಧತಿಯಾಗಿ ಹೋಗಿತ್ತು. ಅದರ ವಿರುದ್ಧ ನಿರಂತರವಾಗಿ ಹೋರಾಡಿ ಗೆಲುವನ್ನು ಕಂಡವರು ರಾಜಾರಾಮ್ ಮೋಹನ್ ರಾಯ! ಅದಕ್ಕೆ ಕಾನೂನಿನ
ಬೇಡಿಯನ್ನು ತೊಡಿಸಿದವರು ಲಾರ್ಡ್ ವಿಲಿಯಂ ಬೆಂಟಿಂಕ್!

ಇನ್ನು ಬಳೆ, ಕುಂಕುಮ, ಆಭರಣಗಳಿಂದ ಸುಂದರವಾಗಿ ಕಂಗೊಳಿಸಿದರೆ ಪರಪುರಷರ ಕೆಟ್ಟ ದೃಷ್ಟಿ ಅವಳ ಮೇಲೆ ಬಿದ್ದು ಅದರಿಂದ ಅವಳಿಗೆ ತೊಂದರೆಯಾಗ ಬಾರದು ಎಂಬ ಕಾರಣದಿಂದ ಅವಳನ್ನು ವಿರೂಪಗೊಳಿಸಿ ಎಲ್ಲರ ಆಸೆಯ ಕಣ್ಣುಗಳಿಂದ ಅವಳನ್ನು ತಪ್ಪಿಸಲಾಯಿತು. ಆದರೆ ವಿಷಾದದ ಸಂಗತಿಯೆಂದರೆ ಇಂದು ರಕ್ಷಕರೇ ಭಕ್ಷಕರಾಗಿ ಹೋಗಿದ್ದಾರೆ. ಆಧುನಿಕ ಮಹಿಳೆಯರು ಸ್ವಾತಂತ್ರ್ಯದ ಅಮಲಿನಲ್ಲಿ ಸ್ವೇಚ್ಛೆಗೆ ಬಿದ್ದಿದ್ದಾರೆ. ಹಕ್ಕು, ಮೀಸಲಾತಿಗಳಿಗಾಗಿ ಹೋರಾಟ ಮಾಡುತ್ತ ಧರ್ಮವನ್ನು ಹೋಳಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಬಡತನ, ವರದಕ್ಷಿಣೆಯ ಪಿಡುಗಿನಿಂದಾಗಿ ಹೆಣ್ಣೆಂದರೆ ಹೆತ್ತವರಿಗೆ ಭಾರವೆಂಬ ಮನಸ್ಥಿತಿ
ನಿರ್ಮಾಣವಾಗಿದೆ. ಅದೆಲ್ಲವನ್ನು ದೂರ ಮಾಡಲು ಹೆಣ್ಣು ಹೆಚ್ಚು ಸುಶಿಕ್ಷಿತಳಾಗಬೇಕು, ಆರ್ಥಿಕವಾಗಿ ಸಬಲಳಾಗಬೇಕು.

ಸ್ವಾವಲಂಬಿಯಾಗಬೇಕು. ಪುರುಷದ್ವೇಷಿ ಯಲ್ಲ. ಸೀ-ಪುರುಷರು ಪ್ರಕೃತಿಯ ಎರಡು ಕಣ್ಣು ಗಳಿದ್ದಂತೆ. ಸಮರಸವಿದ್ದರೆ ಸ್ವರ್ಗಕ್ಕೆ ಕಿಚ್ಚು! ಬಿಟ್ಟು ಹೋಗುವಾಗ ಬ್ರಿಟಿಷರು ಕೊಟ್ಟು ಹೋದ ಒಡೆದು ಆಳುವ ನೀತಿಯ ಉಡುಗೊರೆಯನ್ನು ಜತನದಿಂದ ರಕ್ಷಿಸುತ್ತಾ ಉಳಿಸಿಕೊಂಡು ನಿರಂತರವಾಗಿ ಬೆಳೆಸುತ್ತಾ ಬಂದಿದೆ ರಾಜಕಾರಣ. ಯಾರೋ ಒಬ್ಬರ ಕಿಡಿಗೇಡಿತನ ದಿಂದ ಹೆಣ್ಣು ಮತ್ತಷ್ಟು ಕತ್ತಲೆಯ ಹಿಂದೆ ಸರಿದು ಹೋಗುವಂತಾಗದಿರಲಿ.