ವಿಶ್ಲೇಷಣೆ
ಎಸ್.ಗುರುಮೂರ್ತಿ
ಚುನಾವಣೆಗಳು ಸನ್ನಿಹಿತವಾಗಿರುವ ಕಾಲದಲ್ಲೂ ಅಂತಹ ಉಚಿತ ಕೊಡುಗೆಗಳಿಗೆ ಮಣೆಹಾಕಿಲ್ಲ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯ ಚುನಾವಣೆ ಎದುರಿಗಿರುವಾಗ ಗೆಲ್ಲುವುದಕ್ಕೆ ಬೇಕಾದ ಗಿಮಿಕ್ಕನ್ನು ಈ ಬಜೆಟ್ಟಿನಲ್ಲಿ ಮಾಡದಿರುವುದು ಮೆಚ್ಚಬೇಕಾದ ಸಂಗತಿ.
೨೦೨೨-೨೩ರ ಬಜೆಟ್ ವಿಚಾರಕ್ಕೆ ಬರುವುದಾದರೆ ಅಲ್ಲಿ ಕೆಲವು ಪ್ರಥಮಗಳಿವೆ. ಎಲ್ಲದಕ್ಕೂ ಮೊದಲನೆಯ ಸಂಗತಿ ಎಂದರೆ. ವಿತ್ತ ಮಂತ್ರಿಯ ಭಾಷಣಕ್ಕೆ ಎಲ್ಲೂ ಅಡ್ಡಿ ವ್ಯಕ್ತವಾಗಲಿಲ್ಲ. ವಿತ್ತ ಸಚಿವರ ಭಾಷಣದ ವೇಳೆ ಯಾವುದೇ ಪ್ರತಿಭಟನೆಯ ಕೂಗು ಕಾಣಿಸಲಿಲ್ಲ, ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಚುನಾವಣೆ ಗಳು ಸನ್ನಿಹಿತವಾಗಿರುವಾಗ ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡದೇ ಮಂಡಿಸಿರುವ ವಿಶೇಷ ಬಜೆಟ್ ಇದು ಎಂಬುದರಲ್ಲಿ ಎರಡು ಮಾತಿಲ್ಲ.
ಮತ್ತೂ ಒಂದು ಗಮನಿಸಬೇಕಾದ ಅಂಶವೆಂದರೆ ಈ ಬಜೆಟ್ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಾ ಗದೇ ರಾಹುಲ್ ಗಾಂಧಿ ತಮ್ಮ ಕಾರಿನತ್ತ ಓಡಿಹೋದರು. ಒಂದು ಗಂಟೆ ಕಳೆದ ನಂತರ ಅವರ ಸಲಹೆಗಾರರು ಕೊಟ್ಟ ಆಕ್ಷೇಪಾರ್ಹ ಟ್ವೀಟನ್ನು ಬಿಡುಗಡೆಗೊಳಿಸಿದರು. ಚುನಾವಣೆಗಳು ಎದುರಿಗಿರುವ ಸಂದರ್ಭದಲ್ಲಿ ಎಲ್ಲರೂ ಒಂದಷ್ಟು ಉಚಿತ ಕೊಡುಗೆಗಳ ನಿರೀಕ್ಷೆಯಲ್ಲಿದ್ದರು. ವಿಪಕ್ಷಗಳು ಈ ನಿಟ್ಟಿನಲ್ಲಿ ಸಜ್ಜಾಗಿಯೇ ಇದ್ದವು. ಆದರೆ ಯಾವುದೇ ಅಂತಹ ಉಚಿತ ಕೊಡುಗೆಗಳ ಗಿಮಿಕ್ ಇಲ್ಲದೇ ಇರುವ ಕಾರಣ ತಕ್ಷಣದ ಪ್ರತಿಕ್ರಿಯೆ ನೀಡುವಾಗ ತಬ್ಬಿಬ್ಬಾದವು.
ಮನ್ರೇಗಾ, ಆಹಾರ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ಇವುಗಳು ಅಷ್ಟಾಗಿ ಇಲ್ಲದೇ ಇದ್ದ ಕಾರಣ ಇದನ್ನು ಬಡವರ ವಿರುದ್ಧದ ಬಜೆಟ್ ಎಂದು ಬಿಂಬಿಸಿದವು. ವಿಪಕ್ಷಗಳು ಈ ಬಜೆಟ್ ನಿಂದ ನಿಜಕ್ಕೂ ಅಚ್ಚರಿಗೊಂಡಿದ್ದವು. ಅವರ ನಿರೀಕ್ಷೆ ಬೇರೆಯದೇ ಆಗಿತ್ತು. ಇನ್ನೊಂದು ಪ್ರಮುಖ ಸಂಗತಿಯೆಂದರೆ ಡಿಜಿಟಲ್ ರೂಪದಲ್ಲಿ ಬಿಡುಗಡೆಯಾದ ಈ ಬಜೆಟ್, ಗ್ರಾಮಗಳ ಕೃಷಿಯಿಂದ ಅಂಚೆ ಕಚೇರಿಗಾಳ ಪುನಶ್ಚೇತನದವರೆಗೆ, ಭೂದಾಖಲೆಗಳ ಡಿಜಿಟಲೀಕರಣದಿಂದ ತೆರಿಗೆ ಸಂಗ್ರಹದ ಹೊಸ ಸ್ವರೂಪ ಗಳವರೆಗೆ, ರೈಲು, ರಸ್ತೆ ಮತ್ತು ಜಲಮಾರ್ಗಗಳ ಹೊಸ ಸಾರಿಗೆ ವ್ಯವಸ್ಥೆಯ ಬಗ್ಗೆ ಮತ್ತು ಇಡೀ ದೇಶವನ್ನು ಬಲಯುತಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಉತ್ತಮ ವಾಗಿದೆ.
ಆರ್‌ಬಿಐ ತರಲು ಹೊರಟಿರುವ ಡಿಜಿಟಲ್ ಕರೆನ್ಸಿ ಇನ್ನೊಂದು ಬಗೆಯ ಹೊಸ ವಿಚಾರ. ಮಾಮೂಲಾಗಿ ಬಜೆಟನ್ನು ಸಾರಾ ಸಗಟಾಗಿ ತೆಗಳುವ ವಿಪಕ್ಷಗಳಿಗೆ ಕೂಡ ಇಲ್ಲಿ ತೆಗಳಲು ಕಾರಣಗಳನ್ನು ಹುಡುಕಬೇಕಾಯಿತು. ಮನೋವೈಜ್ಞಾನಿಕ ನೆಲೆಯಲ್ಲಿ ಬಜೆಟನ್ನು ವಿಶ್ಲೇಷಿಸುವ ಅರ್ಥಶಾಸ್ತಜ್ಞರಿಗೆ ಇದೊಂದು ವಿನೂತ ನವೆನ್ನಿಸುವ ಪ್ರಯೋಗ.
ಖರ್ಚು ಮಾಡುವಲ್ಲಿ ಜನರ ಹಿಂಜರಿಕೆ
ಈ ಬಜೆಟಿನಲ್ಲಿ ಅಳವಡಿಕೆಯಾಗಿರುವ ಮೂಲ ತತ್ವವೆಂದರೆ ಜನರ ಉಳಿತಾಯದ ದೃಷ್ಟಿಕೋನ. ಬಜೆಟ್ ಪೂರ್ವ ಸಮೀಕ್ಷೆಗಳಲ್ಲಿ ಈ ಬಾರಿ ಜನರ ಉಳಿತಾಯದ ಪ್ರಮಾಣ ಏಳು ಕೋಟಿ ಹೆಚ್ಚಾಗಿದೆ ಎಂದು ಹೇಳಲಾಗಿತ್ತು.
ಆದರೆ ಖರ್ಚಿನ ಪ್ರಮಾಣ ೧೮೦೦೦ ಕೋಟಿಯಷ್ಟಿತ್ತು. ಜನಧನ ಯೋಜನೆಯಂತಹ ಸಾಮಾನ್ಯ ಜನರು ಹೊಂದಿರುವ ೪೫ ಕೋಟಿ ಖಾತೆಗಳನ್ನೂ ಸೇರಿದಂತೆ
ಒಟ್ಟಾರೆ ಉಳಿತಾಯ ೩೯,೦೦೦ ಕೋಟಿ ರು. ದಾಟಿತ್ತು. ಇದು ಕೇವಲ ೯ ತಿಂಗಳದ ಸಂಗತಿ. ಇಲ್ಲಿ ನಿಚ್ಚಳವಾಗಿ ಗಮನಿಸಬೇಕಾದ ಸಂಗತಿ ಎಂದರೆ ಜನ ಹೆಚ್ಚು ಖರ್ಚು ಮಾಡುವುದನ್ನು ತಡೆಹಿಡಿಯುತ್ತಿದ್ದಾರೆ ಎಂಬುದು. ಪ್ರಾಯಶಃ ಈ ಸಾಂಕ್ರಾಮಿಕ ರೋಗ ಪೂರ್ಣವಾಗಿ ತೊಲಗುವ ತನಕವೂ ಈ ಉಳಿತಾಯ ಸತ್ರ
ಮುಂದುವರಿಯಲಿದೆ ಎಂದೆನಿಸುತ್ತದೆ. ಹೀಗಾಗಿ ಜನರ ನಾಡಿಮಿಡಿತವನ್ನರಿತ ಹಣಕಾಸು ಸಚಿವರು ಬಡ್ಡಿದರದಲ್ಲಿ ವ್ಯತ್ಯಯ ಮಾಡುವಲ್ಲಿ ಕೈಹಾಕಿಲ್ಲ. ಇದು ಬಜೆಟ್ ಕುರಿತಾದ ಚರ್ಚೆಯಲ್ಲಿ ವಿಸ್ತೃತವಾಗಿ ಚರ್ಚೆಗೆ ಬಂದ ವಿಷಯಗಳಂದು.
ಸಾರ್ವಜನಿಕ ವೆಚ್ಚ
ದೇಶದ ಆರ್ಥಿಕತೆ ೨೦೨೦-೨೧ರಲ್ಲಿ ಹೊಡೆತವನ್ನು ಕಂಡಿತ್ತು. ೨೦೨೧-೨೨ರಲ್ಲಿ ಆರ್ಥಿಕತೆ ಒಂದಷ್ಟು ಚುರುಕಾಗಿತ್ತು. ಹಾಗಾಗಿ ರೆವಿನ್ಯೂ ವೆಚ್ಚದ ವಿಚಾರದಲ್ಲಿ
ಅರ್ಥಸಚಿವರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ದೇಶದ ಆರ್ಥಿಕತೆಗೆ ಒತ್ತು ಕೊಡುವಲ್ಲಿ ಒಂದಷ್ಟು ಉಪಕ್ರಮಗಳನ್ನು ಘೋಷಿಸಿದ್ದಾರೆ.
ಚಿಲ್ಲರೆ ಮಾರಾಟ ಕ್ಷೇತ್ರದ ಹಣದುಬ್ಬರ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟ ಸಚಿವರು ಎಂಎಸ್‌ಇ ಗಳಿಗೆ ಕ್ರೆಡಿಟ್ ಗ್ಯಾರಂಟಿ ಒದಗಿಸುವ ದಿಸೆಯಲ್ಲಿ ಸಾಕಷ್ಟು ಗಮನ ವಹಿಸಿದ್ದಾರೆ. ಅನುತ್ಪಾದಕ ಕೊಡುಗೆ ಗಳನ್ನು ಕೊಡುವುದಕ್ಕಿಂತ ಉತ್ಪಾದಕತೆಗೆ ಒತ್ತು ಕೊಡುವ ಸವಲತ್ತುಗಳನ್ನು ಒದಗಿಸುವಲ್ಲಿ ಅರ್ಥಸಚಿವರ ಆದ್ಯತೆ ಇರುವುದು ಗಮನಕ್ಕೆ ಬರುತ್ತದೆ.
ವಿವೇಕಯುತ ಮತ್ತು ಸಕ್ಷಮ
ಬಜೆಟ್‌ನಲ್ಲಿ ಖರ್ಚುಗಳಿಗೆ ಕೊಡಮಾಡಲಾಗಿರುವ ಅವಕಾಶ ವಿವೇಕಯುತವಾಗಿದೆ ಮತ್ತು ಸಾಕಷ್ಟಿದೆ ಕೂಡ. ಸಾರ್ವಜನಿಕ ವೆಚ್ಚದ ಮಿತಿ ೭.೫ ಕೋಟಿಗಳಷ್ಟಿ ದ್ದರೆ, ಗೃಹ ನಿರ್ಮಾಣ ಕ್ಷೇತ್ರಕ್ಕೆ ೪೮೦೦೦ ಕೋಟಿ ರು.ಗಳನ್ನು ಇಡಲಾಗಿದೆ. ರಾಜ್ಯ ಸರಕಾರಗಳಿಗೆ ಮುಲಸೌರ್ಯಗಳಿಗೆ ನಿಗದಿಯಾದ ಬಡ್ಡಿರಹಿತ ಸಾಲದ ಮಿತಿ ಒಂದು ಲಕ್ಷ ಕೋಟಿಗಳಷ್ಟಿದ್ದರೆ, ಗ್ರಾಮೀಣ ಉದ್ಯೋಗ ಖಾತ್ರಿಗೆ ೭೮೦೦೦ ಕೋಟಿ ನಿಗದಿಪಡಿಸಲಾಗಿದೆ. ಜಲಜೀವನ ಮಿಶನ್ ಗೆ ೬೦ ಸಾವಿರ ಕೋಟಿ ರು. ಇಡಲಾಗಿದೆ.
ಇವೆಲ್ಲವೂ ದೇಶದ ಆರ್ಥಿಕತೆಯನ್ನು ಎತ್ತಿಹಿಡಿಯುವಲ್ಲಿ ಪುಷ್ಟಿ ಕೊಡುವ ಸಂಗತಿಗಳು. ಇನ್ನೊಂದು ಬಾರಿ ಕೋವಿಡ್ ತಲೆ ಎತ್ತಿದರೆ ೨೦೨೦-೨೧ ರದಂತೆ ಯಾವುದೇ ಸಮಸ್ಯೆ ಆಗಬಾರದು ಎನ್ನುವುದು ಅರ್ಥಸಚಿವರ ಯೋಜನೆಗಳಲ್ಲಿ ಎದ್ದುಕಾಣುವ ಆದ್ಯತೆಯ ಸಂಗತಿಯಾಗಿದೆ. ಇನ್ನೊಂದು ವಿಶೇಷವೆಂದರೆ ವಿತ್ತ ಸಚಿವರು ಅಪಾಯ ಕಾರಿ ಜನಪ್ರಿಯ ಘೋಷಣೆಗಳಿಂದ ಹಿಂದೆ ಸರಿದರು. ಒಂದು ವೇಳೆ ಕೇವಲ ಜನಪ್ರಿಯ ಘೋಷಣೆಗಳಿಗೇ ಅಂಟಿ ಕೊಳ್ಳುವುದಾದರೆ ಅರ್ಥ
ಸಚಿವರು ಮನ್ರೇಗಾ ಯೋಜನೆಗೆ ಅನುದಾನ ಹೆಚ್ಚಳ ಮಾಡುತ್ತಿದ್ದರು.
ರಸಗೊಬ್ಬರ ಸಬ್ಸಡಿ ಯನ್ನು ಇನ್ನಷ್ಟು ಏರಿಸುತ್ತಿದ್ದರು. ಒಂದು ವೇಳೆ ಕೇವಲ ಜನಪ್ರಿಯ ಅಂಶಗಳಿಗೇ ಒತ್ತು ನೀಡಿದ್ದಲ್ಲಿ ಅದು ಜನರಿಗೆ ಪ್ರಯೋಜನಕಾರಿ ಯಾಗುವ ಬದಲು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿತ್ತು. ಚುನಾವಣೆಗಳು ಸನ್ನಿಹಿತವಾಗಿರುವ ಕಾಲದಲ್ಲೂ ಅಂತಹ ಉಚಿತ ಕೊಡುಗೆ
ಗಳಿಗೆ ಮಣೆಹಾಕದೇ ಇರುವುದಕ್ಕೆ ಮೋದಿ ಸರಕಾರಕ್ಕೆ ಧನ್ಯವಾದ ಸಮರ್ಪಿಸಲೇಬೇಕು. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯ ಚುನಾವಣೆ ಎದುರಿಗಿರುವಾಗ ಗೆಲ್ಲುವುದಕ್ಕೆ ಬೇಕಾದ ಗಿಮಿಕ್ಕನ್ನು ಈ ಬಜೆಟ್ಟಿನಲ್ಲಿ ಮಾಡದೇ ಸಮತೂಕದ ಬಜೆಟ್ಟನ್ನು ಮಂಡಿಸಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.
ಕೊರತೆ ಚರ್ಚೆಗೆ ಬರಲಿಲ್ಲ
ಇದು ಇನ್ನೊಂದು ಪ್ರಮುಖ ಅಂಶ. ಸಾಮಾನ್ಯವಾಗಿ ಬಜೆಟ್ ಚರ್ಚೆಯಲ್ಲಿ ಎದ್ದು ಕಾಣುವ ಅಂಶಗಳೆಂದರೆ, ಆರ್ಥಿಕತೆ, ವ್ಯಾಪಾರ, ಹಣಕಾಸು, ವಹಿವಾಟು ಮತ್ತು
ರಾಜಕೀಯ. ೨೦೨೦ರಿಂದೀಚೆಗೆ ದೇಶಕ್ಕೆ ಎರಡೆರಡು ಕಡೆಗಳಿಂದ ಯುದ್ಧಗಳ ಅಪಾಯ ಕಣ್ಮುಂದೆ ಇರುವ ಸಂದರ್ಭದಲ್ಲಿ, ಬಜೆಟ್ ಚರ್ಚೆಗಳಲ್ಲಿ ಆ ಬಗೆಗಿನ ಆದ್ಯತೆ ಎದ್ದು ಕಾಣುತ್ತಿಲ್ಲ. ರಕ್ಷಣಾ ಕ್ಷೇತ್ರಕ್ಕೆ ನಿಗದಿಪಡಿಸಲಾಗಿರುವ ಅನುದಾನದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿಲ್ಲ.
ಬಜೆಟ್ ಬಗ್ಗೆ ಮಾತನಾಡುವ ಎಲ್ಲರೂ, ರೈತರ ಬಗ್ಗೆ, ಬಡವರ ಬಗ್ಗೆ, ವೇತನದಾರರ ಸಮಸ್ಯೆಗಳ ಬಗ್ಗೆಯೇ ಪ್ರಧಾನವಾಗಿ ಮಾತನಾಡುತ್ತಿದ್ದಾರೆಯೇ ವಿನಃ ರಕ್ಷಣಾ ಕ್ಷೇತ್ರದ ಬಗ್ಗೆ ಹೆಚ್ಚಬೇಕೋ, ಕಡಿಮೆಯಾಗಬೇಕೋ ಎಂಬ ಬಗ್ಗೆ ಒಬ್ಬರೂ ಮಾತನಾಡುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಖರ್ಚು ಹೆಚ್ಚಾಗಿದೆ. ಜತೆಗೆ ರಕ್ಷಣಾ ಇಲಾಖೆಯಲ್ಲಿ ಪಿಂಚಣಿಯ ಮೊತ್ತವೂ ಏರಿಕೆಯಾಗಿದೆ.
ರಕ್ಷಣಾ ಇಲಾಖೆಗೆ ತೆಗೆದಿರಿಸಿರುವ ೫ ಲಕ್ಷ ಕೋಟಿ ಬಹುದೊಡ್ಡ ಮೊತ್ತ. ಆದರೆ ಅದನ್ನು ಯಾರೂ ಪರಿಗಣಿಸಿದಂತೆ ಅಥವಾ ಚರ್ಚೆಯ ಒರೆಗೆ ಹಚ್ಚಿದಂತೆ
ಕಾಣುತ್ತಿಲ್ಲ. ಬಹಳ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಎಂದರೆ ಈ ಬಾರಿಯ ಬಜೆಟಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನಿಗದಿಯಾಗಿರುವ ಅನುದಾನದಲ್ಲಿ ದೊಡ್ಡ ಮೊತ್ತ ದೇಶೀಯ ತಯಾರಿಕೆಗೆ ಮೀಸಲಿರಿಸಲಾಗಿದೆ. ಇದರಿಂದ ಆಗುವ ಪರ್ಯಾಯ ಲಾಭಗಳು, ಉದ್ಯೋಗಸೃಷ್ಟಿ ಬಗ್ಗೆ ಯಾರೂ ಮಾತನಾಡಿದಂತೆ ಕಾಣುತ್ತಿಲ್ಲ. ಭಾರತ ಸ್ಥಳೀಯವಾಗಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಗಳ ೬೦೦ ಮಿಲಿಯ ಡಾಲರ್ ಮೊತ್ತದ ರಫ್ತನ್ನು ಮಾಡುವುದಕ್ಕೆ ಶಕ್ತವಾಗಿರುವ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ.
೨೦೪೭ ರ ಸುದೀರ್ಘ ಗುರಿ
ಈ ಬಾರಿಯ ಬಜೆಟ್ ಸುದೀರ್ಘಾವಧಿ ಗುರಿಯನ್ನು ಇಟ್ಟುಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನಾಂತರವಾಗಿ ಜನರ ಒಳಿತಿಗೆ ಮಾಡಬಹುದಾದ ಕೆಲಸಗಳ ಬಗ್ಗೆ ಗಮನ ಹರಿಸಿದೆ. ದೇಶದ ಬಹುತೇಕ ದಾಖಲೆಗಳ ಡಿಜಿಟಲೀಕರಣ ಸರಕಾರದ ಮುಂದಿರುವ ಬಹುದೊಡ್ಡ ಸವಾಲು. ಇದು ಸಂಪೂರ್ಣವಾದಾಗ ಬಹುತೇಕ ಸಂಗತಿಗಳು ಹದ್ದುಬಸ್ತಿಗೆ ಬರುತ್ತವೆ. ಸೋರಿಕೆ, ಲಂಚಗುಳಿತನಕ್ಕೆ ಕಡಿವಾಣ ಬೀಳಲಿದೆ. ಇದು ಸುಲಭದ ಮಾತಲ್ಲ. ೪೫ ಕೋಟಿಯ ಜನಧನ್ ಬ್ಯಾಂಕ್ ಖಾತೆಗಳ ತೆರೆಯುವಿಕೆ ಬಗ್ಗೆ ಮೋದಿಯವರು ಕೈಗೊಂಡ ದಿಟ್ಟ ಹೆಜ್ಜೆ ಮತ್ತು ಮುದ್ರಾ ಯೋಜನೆಯಂತೆಯೇ ಇದು ಕೂಡ
ಒಂದು ದಾಖಲೆಯಾಗಲಿದೆ. ನೋಟು ಅಮಾನ್ಯೀಕರಣದ ನಂತರದಲ್ಲಿ ಜನರು ಡಿಜಿಟಲ್ ಹಣಕಾಸು ವ್ಯವಸ್ಥೆಗೆ ಒಗ್ಗಿಕೊಂಡಅತೆಯೇ, ದೇಶದ ಆರ್ಥಿಕತೆಯನ್ನು
ಉನ್ನತೀಕರಿಸುವ ನಿಟ್ಟಿನಲ್ಲಿ ಹಲವು ಗಮನಾರ್ಹ ಕ್ರಮಗಳು ಈ ಬಜೆಟಿನ ಮೂಲಕ ಸಾಕಾರಗೊಳ್ಳುತ್ತವೆ.
ಎಸ್‌ಬಿಐ ಅಧ್ಯಯನದ ಪ್ರಕಾರ ಅಮಾನ್ಯೀಕರಣಕ್ಕೆ ಮೊದಲು ದೇಶದ ಆರ್ಥಿಕತೆ ಉತ್ತಮವಾಗುತ್ತಿದೆ. ಇದನ್ನು ಅನುಲಕ್ಷಿಸಿಯೇ ಮೋದಿ ಸರಕಾರ ಪ್ರಾಜೆಕ್ಟ್ ೨೦೪೭ನ್ನು ಕೈಗೆತ್ತಿಕೊಂಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ೨೦೨೨- ೨೩ರ ಬಜೆಟ್ ಭಾರತದ ಭವಿಷ್ಯದ ಹಿತದೃಷ್ಟಿಯಿಂದ ಒಂದು ದೊಡ್ಡ ಸಕಾರಾತ್ಮಕ ತಿರುವನ್ನು ದಾಖಲಿಸಲಿದೆ.
(ಲೇಖಕರು ‘ತುಘಲಕ್’ ಸಂಪಾದಕರು ಮತ್ತು
ಆರ್ಥಿಕ ವಿಶ್ಲೇಷಕರು)