Saturday, 23rd November 2024

ಷೇರುಪೇಟೆ ಸೆನ್ಸೆಕ್ಸ್: 400 ಅಂಕಗಳ ಏರಿಕೆ

ಮುಂಬೈ: ಮುಂಬೈ ಷೇರುಪೇಟೆ ಬುಧವಾರ ಆರಂಭಿಕ ಹಂತದಲ್ಲಿಯೇ ಏರಿಕೆಯೊಂದಿಗೆ ವಹಿವಾಟು ಆರಂಭ ಗೊಂಡಿದ್ದು, ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿದೆ.

ಷೇರುಪೇಟೆ ಸೆನ್ಸೆಕ್ಸ್ 413.19 ಅಂಕಗಳ ಏರಿಕೆಯೊಂದಿಗೆ 58,221.77 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ಎಸ್ಇ ನಿಫ್ಟಿ 118 ಅಂಕಗಳಷ್ಟು ಏರಿಕೆಯಾಗಿದ್ದು, 17,384.75 ಅಂಕಗಳ ಮಟ್ಟ ತಲುಪಿದೆ.

ಭಾರ್ತಿ ಏರ್ ಟೆಲ್ ಲಿಮಿಟೆಡ್, ಅದಾನಿ ವಿಲ್ಮಾರ್, ಎನ್ ಎಎಲ್ ಸಿಒ, ಹಿಂಡಲ್ಕೋ, ಆಯಸ್ಟೆರ್ ಡಿಎಂ ಹೆಲ್ತ್ ಕೇರ್ ಲಿಮಿಟೆಡ್, ಮಹೀಂದ್ರ ಲೈಫ್ ಸ್ಪೇಸ್ ಡೆವಲಪರ್ಸ್, ಬಾಟಾ ಲಿಮಿಟೆಡ್, ವೊಡಾಫೋನ್ ಐಡಿಯಾ ಲಿಮಿಟೆಡ್, ಯೆಸ್ ಬ್ಯಾಂಕ್, ಟಾಟಾ ಪವರ್ ಕಂಪನಿ ಲಿಮಿಟೆಡ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ ಎಐಎಲ್) ಷೇರುಗಳು ಲಾಭಗಳಿಸಿದೆ.

ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್, ಡಿಸಿಎಂ ಶ್ರೀರಾಮ್ ಲಿಮಿಟೆಡ್, ವರುಣ್ ಬೇವರೇಜಸ್ ಲಿಮಿಟೆಡ್, ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ ಲಿಮಿಟೆಡ್, ಟಾಟಾ ಟೆಲಿಸರ್ವೀಸ್ (ಮಹಾರಾಷ್ಟ್ರ) ಲಿಮಿಟೆಡ್ ಷೇರುಗಳು ನಷ್ಟ ಕಂಡಿದೆ.