Saturday, 14th December 2024

ಏರ್ ಟೆಲ್ ನ ಇಂಟರ್ನೆಟ್ ಸೇವೆ ಸ್ಥಗಿತ: ಬಳಕೆದಾರರು ಹೈರಾಣ

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರ ಏರ್ ಟೆಲ್ ನ ಮೊಬೈಲ್ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸೇವೆಗಳು ಶುಕ್ರವಾರ ಸ್ಥಗಿತಗೊಂಡಿವೆ.

ಹೀಗಾಗಿ ಏರ್ಟೆಲವ್ ಸೇವೆಗಳನ್ನು ಬಳಕೆ ಮಾಡುತ್ತಿರುವಂತ ಬಳಕೆದಾರರು ಹೈರಾಣಾಗುವಂತೆ ಆಗಿದೆ.

ದೆಹಲಿ-ಎನ್ ಸಿಆರ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಎರಡೂ ಸೇವೆಗಳ ಸೇವೆಗಳು ಕಡಿಮೆ ಯಾಗಿವೆ. ಏರ್ ಟೆಲ್ ನ ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಡೇಟಾದೊಂದಿಗೆ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ ನಂತರ ಹಲವಾರು ಬಳಕೆದಾರರು ಟ್ವಿಟರ್ ನಲ್ಲಿ ತಮ್ಮ ಕೋಪವನ್ನು ಹೊರಹಾಕಿದರು. ಆದಾಗ್ಯೂ, ಏರ್ಟೆಲ್ ಬ್ರಾಡ್ ಬಾಂಡ್ ಮತ್ತು ಇಂಟರ್ ನೆಟ್ ಸ್ಥಗಿತದ ಹಿಂದಿನ ಕಾರಣ ತಿಳಿದಿಲ್ಲ.

ನಮ್ಮ ಇಂಟರ್ನೆಟ್ ಸೇವೆಗಳು ಸ್ವಲ್ಪ ಸಮಯದ ಅಡಚಣೆ ಹೊಂದಿದ್ದವು. ಇದರಿಂದ ನಿಮಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರ ವಿಷಾದಿಸುತ್ತೇವೆ. ನಮ್ಮ ತಂಡಗಳು ನಮ್ಮ ಗ್ರಾಹಕರಿಗೆ ತಡೆರಹಿತ ಅನುಭವವನ್ನು ನೀಡಲು ಕೆಲಸ ಮಾಡುತ್ತಿದೆ. ಈಗ ಸರಿಯಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ತಿಳಿಸಿದೆ.

ಶೇ.51 ಬಳಕೆದಾರರು ಏರ್ ಟೆಲ್ ನೆಟ್ ವರ್ಕ್ ನಲ್ಲಿ ಸಂಪೂರ್ಣ ಬ್ಲಾಕ್ ಔಟ್ ಅನುಭವಿಸುತ್ತಿದ್ದಾರೆ. ಶೇ.33 ಬಳಕೆದಾರರು ಮೊಬೈಲ್ ಇಂಟರ್ನೆಟ್ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಆದರೆ ಶೇ.16 ಏರ್ ಟೆಲ್ ಬಳಕೆದಾರರು ಏರ್ ಟೆಲ್ ನಲ್ಲಿ ಯಾವುದೇ ಸಿಗ್ನಲ್ ಸಮಸ್ಯೆ ಎದುರಿಸುತ್ತಿಲ್ಲ ಎಂದು ದೂರಿದ್ದಾರೆ.