ವಿಶೇಷ ವರದಿ: ರಂಗನಾಥ ಕೆ.ಮರಡಿ
ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ(ಟೂಡಾ) ಅಧ್ಯಕ್ಷ, ಸದಸ್ಯರ ಬದಲಾವಣೆಯ ಗುಸುಗುಸು ನಡೆಯುತ್ತಿದ್ದು, ವಿಧಾನಸಭಾ ಚುನಾವಣೆ ಸಮೀಪವಿರುವಾಗ ಹೊಸ ಸದಸ್ಯರನ್ನು ನೇಮಕ ಮಾಡುವುದು ಸಮಂಜಸವಲ್ಲ. ಹಾಲಿ ಇರುವ ಸದಸ್ಯರನ್ನು ನೇಮಕ ಮಾಡಿ ಕೇವಲ 13 ತಿಂಗಳಾಗಿದೆ. ಕರೋನಾದ ಸಂಕಷ್ಟದ ನಡುವೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. 2023ಕ್ಕೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಜನಪರ ಯೋಜನೆ ಕೈಗೊಳ್ಳಲು ಕಡಿಮೆ ಸಮಯ ಇರುವುದರಿಂದ ದಿಢೀರನೆ ಬದಲಾವಣೆ ಮಾಡಿದರೆ ಅಭಿವೃದ್ಧಿಗೆ ಅಡ್ಡಿಯುಂಟಾ ಗುತ್ತದೆ.
ಪಕ್ಷದಲ್ಲಿ ದುಡಿದವರಿಗೆ ಟೂಡಾದಲ್ಲಿ ಅಧ್ಯಕ್ಷ, ಸದಸ್ಯರನ್ನಾಗಿ ನೇಮಕ ಮಾಡಿ ಜನಾಭಿ ವೃದ್ಧಿ ಕಾರ್ಯ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಲಿಂಗಾಯಿತ ಸಮುದಾ ಯದ ಬಿ.ಎಸ್.ನಾಗೇಶ್ ಅಧ್ಯಕ್ಷ, ಸದಸ್ಯರಾಗಿ ಕಾಡುಗೊಲ್ಲ ಸಮುದಾಯದ ಜೆ.ಜಗದೀಶ್, ಲಿಂಗಾಯಿತ ಸಮುದಾಯದ ವೀಣಾ, ಸಾದರ ಸಮುದಾಯದ ಶಿವಕುಮಾರ್, ಪರಿಶಿಷ್ಟ ಜಾತಿ ಸಮುದಾಯದ ಹನುಮಂತಪ್ಪ, ಪ್ರತಾಪ್ ಕುಮಾರ್ ಇವರುಗಳನ್ನು ಮುಂದಿನ ಚುನಾವಣೆವರೆಗೂ ಬದಲಾಯಿಸದೆ ಮುಂದುವರೆಸಲು ಶಾಸಕ ಜ್ಯೋತಿಗಣೇಶ್ ಅವರಿಗೆ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಕಾಡುಗೊಲ್ಲರನ್ನು ಕಡೆಗಣಿಸಬೇಡಿ: ಶಿರಾ ಉಪಚುನಾವಣೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕಾಡುಗೊಲ್ಲ, ಗೊಲ್ಲ ಸಮುದಾಯದ ಮತಗಳು ನಿರ್ಣಾಯಕವಾಗಿದ್ದವು. ಟೂಡಾದಲ್ಲಿ ಕಾಡುಗೊಲ್ಲ ಸಮುದಾಯದ ಜೆ.ಜಗದೀಶ್ ಅವರನ್ನು ಸದಸ್ಯರನ್ನಾಗಿ ನೇಮಕಮಾಡಿರುವುದು ಶ್ಲಾಘನೀಯ. ಟೂಡಾ ಅಧ್ಯಕ್ಷ, ಸದಸ್ಯರ ಬದಲಾವಣೆಯ ಗಾಳಿ ಬೀಸುತ್ತಿದ್ದು ಕಾಡುಗೊಲ್ಲ ಸಮುದಾಯದ ಜಗದೀಶ್ ಅವರನ್ನು ಬದಲಾಯಿಸದಂತೆ ಕಾಡುಗೊಲ್ಲ ಯುವಸೇನೆಯ ಪದಾಧಿಕಾರಿಗಳು ಶಾಸಕ ಜ್ಯೋತಿಗಣೇಶ್ ಅವರಿಗೆ ಒತ್ತಾಯಿ ಸಿದ್ದಾರೆ.