Wednesday, 11th December 2024

ಇದು ಸಂವಿಧಾನದ ಜತೆಗಿನ ಸಂಘರ್ಷ !?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509.com

ಅಧಿವೇಶನದಲ್ಲಿ ಹಿಜಾಬ್ ವಿಷಯ ಪ್ರಸ್ತಾಪಿಸಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಪರವಾಗಿ ಆಗ್ರಹಿಸುವುದನ್ನು ಬಿಟ್ಟು ಈಶ್ವರಪ್ಪನವರ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಹಿಜಾಬ್‌ಗಿಂತಲೂ ಈಶ್ವರಪ್ಪನವರ ‘ದೇಶದ್ರೋಹ’ವೇ ಇವರಿಗೆ ಪ್ರಮುಖವೆನಿಸಿದ್ದಾದರೂ ಹೇಗೆ?

ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ಅರಸ ಶ್ರೀಕೃಷ್ಣದೇವರಾಯನಿಗೆ ‘ಯವನರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಅಪರೂಪದ ಬಿರುದಿದೆ. ಈ ಬಿರುದು ಬರಲು ಕಾರಣ ರಾಯನು ಅಂದಿನ ಬಿಜಾಪುರ, ಗುಲ್ಬರ್ಗ, ರಾಯಚೂರಿನ ಮೇಲೆ ದಾಳಿ ಮಾಡಿ ಇಸ್ಲಾಂ ದಾಳಿ ಕೋರರನ್ನು ಸೆದೆಬಡಿಯುತ್ತಾನೆ. ಆದರೆ ಪರಧರ್ಮಸಹಿಷ್ಣುತೆಗೆ ಹೆಸರಾದ ವಿಜಯ ನಗರಕ್ಕೆ ಶೋಭೆ ತರುವ ಸದುದ್ದೇಶದಿಂದ ರಾಯನು ಗಂಡಾಂತರಕಾರಿ ತಪ್ಪೊಂದನ್ನು ಎಸಗುತ್ತಾನೆ.

ಅದೇನೆಂದರೆ ಬಂಧನದಲ್ಲಿದ್ದ ಬಹುಮನಿ ಸುಲ್ತಾನನಿಗೆ ಕರುಣೆ ತೋರಿ, ಸ್ಥಳೀಯ ಆಡಳಿತದ ಅನುಕೂಲಕ್ಕಾಗಿ ಅವನಿಗೇ ಪಟ್ಟ ಕಟ್ಟಿ ಅದೇ ರಾಜ್ಯವನ್ನು ತನ್ನ ಅಧೀನದಲ್ಲಿ ಆಳ್ವಿಕೆ ಮಾಡಿಕೊಂಡಿರಲು ಅವಕಾಶ ನೀಡುತ್ತಾನೆ. ಇದೇ ಸಂದರ್ಭದಲ್ಲಿ ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ರಾಯನಿಗೆ ಪ್ರಾಪ್ತವಾಗುತ್ತದೆ. ಹೀಗೆ ಸಾಮ್ರಾಜ್ಯ ಕಟ್ಟಿದ ರಾಯನ ಆಡಳಿತದಲ್ಲಿ ಭೇದವಿಲ್ಲದೆ ಮುಸಲ್ಮಾನ ಸೈನಿಕರೂ ವಿಜಯನಗರದ ಸೈನ್ಯದಲ್ಲಿ ಸೇರಿಕೊಳ್ಳುತ್ತಾರೆ.

ರಾಯನ ಆಡಳಿತವಿರುವವರೆಗೂ ತಲೆಬಾಗಿ ನಡೆದ ಇಸ್ಲಾಂ ಸೈನಿಕರು ರಾಯನ ಕಾಲವಾದ ನಂತರ ದುರ್ಬಲ ರಾಮರಾಯನ ಕಾಲದಲ್ಲಿ ತಮ್ಮ ನೀಚ ಮತ್ತು ಮೂಲ ಭೂತ ಮನಃಸ್ಥಿತಿಯನ್ನು ತೋರಿಸುತ್ತಾರೆ. 1565ರ ರಕ್ಕಸ ತಂಗಡಿ ಯುದ್ಧದಲ್ಲಿ ವಿಜಯನಗರ ಸೈನ್ಯದಲ್ಲಿದ್ದ ಗಿಲಾನಿ ಸೋದರರು ಬೆಂಬಲಿಸಿ ದೇಶದ್ರೋಹದ ಮೂಲಕ ರಾಮರಾಯನ ತಲೆಯನ್ನು ಕಡಿದು ಇಡೀ ಸಾಮ್ರಾಜ್ಯದ ಸರ್ವನಾಶಕ್ಕೆ ಕಾರಣರಾಗುತ್ತಾರೆ. ಆ ಮೂಲಕ ಇಡೀ ದಕ್ಷಿಣ ಭಾgತವನ್ನು ಆಳಿದ್ದ ಸಾಮ್ರಾಜ್ಯವು ಒಂದೇ ಒಂದು ಯುದ್ಧದಲ್ಲಿ ಪತನಗೊಳ್ಳುತ್ತದೆ.

ಆದರೂ ನಮ್ಮ ದೇಶದಲ್ಲಿ ಇಂದಿಗೂ ಪರ ಧರ್ಮ ಸಹಿಷ್ಣುತೆ, ಸಹಬಾಳ್ವೆ, ಸೌಹಾರ್ದ ಎಂಬುದು ಮೂಲ ಮನಃಸ್ಥಿತಿಯಾಗುಳಿದಿದೆ. ಅನಿಷ್ಟರಿಗೆ, ಅವಕಾಶವಾದಿ ಸಮಯಸಾಧಕರು ಇದನ್ನೇ ತಮ್ಮ ಸ್ವಾರ್ಥದ ತೆವಲಿಗಾಗಿ, ಡೋಂಗಿತನದ ಶೋಕಿಗೆ ಬಳಸಿಕೊಳ್ಳುತ್ತ ಗುಲಾಮಗಿರಿಯ ದಂಧೆ ಮುಂದುವರಿಸಿದ್ದಾರೆ. ಹಿಜಾಬ್ ವಿವಾದವೂ ಇಂಥದ್ದೇ ತೆವಲುಗಳಲ್ಲೊಂದು. ಈ ಮನಃಸ್ಥಿತಿಗಳನ್ನು ಇಡೀ
ದೇಶದ ಜನ ಗಮನಿಸುತ್ತಿದ್ದಾರೆ.ಹಿಂದುತ್ವದ ವಿಚಾರ ಎತ್ತಿದರೆ ಸಾಕು, ಕುತ್ತಿಗೆಗೆ ಕಟ್ಟಿದ ಸರಪಳಿ ಬಿಚ್ಚಿಕೊಂಡು ಕಚ್ಚಲು ಬರುವ  ನಾಯಿಯಂತೆ ಹಿಂದೂಗಳ ಮೇಲೆರಗಿ ಕೇಸರಿಕರಣ, ಕೋಮುವಾದ, ಸಂವಿಧಾನಕ್ಕೆ ಮಾಡಿದ ಅವಮಾನ ಎಂದೆಲ್ಲ ಬೊಗಳಲಾ ರಂಭಿಸುತ್ತಾರೆ.

ಇಂದು ಪುಟ್ಟ ಹೆಣ್ಣು ಮಕ್ಕಳು ನಮಗೆ ಹಿಜಾಬ್ ಬೇಕೇಬೇಕು, ನಮಗೆ ಧರ್ಮ ಮುಖ್ಯ, ಅದ್ಯಾವ ನ್ಯಾಯಾಲಯ, ಅದ್ಯಾವ ಕಾನೂನು, ಅದಕ್ಕೂ ನಮ್ಮ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದರೆ. ಒಬ್ಬನೇ ಒಬ್ಬ ಜಾತ್ಯತೀತ ಮಹಾಪುರುಷನೂ ಬಾಯಿಬಿಡುತ್ತಿಲ್ಲ.
ಕಾಂಗ್ರೆಸ್ ಪಕ್ಷಕ್ಕಂತೂ ಈ ವಿವಾದ ಬಿಸಿತುಪ್ಪವಾಗಿಬಿಟ್ಟಿದೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಹಿಜಾಬ್ ವಿಷಯ ಪ್ರಸ್ತಾಪಿಸಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಪರವಾಗಿ ಆಗ್ರಹಿಸುವುದನ್ನು ಬಿಟ್ಟು ಈಶ್ವರಪ್ಪನವರ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಹಿಜಾಬ್‌ಗಿಂತಲೂ ಈಶ್ವರಪ್ಪನವರ ‘ದೇಶದ್ರೋಹ’ವೇ ಇವರಿಗೆ ಪ್ರಮುಖವೆನಿಸಿದ್ದಾದರೂ ಹೇಗೆ? ಪ್ರತಿ ಪಕ್ಷದಲ್ಲಿರುವ ಕಾಂಗ್ರೆಸ್ ಈ ಸಮಯದಲ್ಲಿ ಸರಕಾರದೊಂದಿಗೆ ಚರ್ಚಿಸಿ ಹಿಜಾಬ್ ವಿವಾದವನ್ನು ಸಂಧಾನದ ಮೂಲಕವೋ ಮನವೊಲಿಸುವ ಮೂಲಕವೋ ಆದಷ್ಟು ಬೇಗ ಇತ್ಯಾರ್ಥಗೊಳಿಸುವ ಪ್ರಯತ್ನ ಮಾಡಬಹುದಿತ್ತು. ಹಿಜಾಬ್ ಮರೆ ಮಾಚಿ ಈಶ್ವರಪ್ಪನವರ ಹೇಳಿಕೆಯನ್ನೇ ಹಿಡಿದುಕೊಂಡು ಇಡೀ ಅಽವೇಶನವನ್ನು ದಾರಿತಪ್ಪಿಸುತ್ತಿರುವುದು ಪಲಾಯನವಾದವಲ್ಲವೇ? ಒಟ್ಟಿನಲ್ಲಿ ಯಾವುದೋ ಒಂದು ವಿಚಾರದಲ್ಲಿ ಬಿಜೆಪಿ ವಿರುದ್ಧ
ಕಾಂಗ್ರೆಸ್ ಹೋರಾಡುತ್ತಿದೆ ಎಂಬ ಸಂದೇಶ ಹೊರಟರೆ ಸಾಕು.

ಮುಸಲ್ಮಾನರಿಗೆ ಈ ನಾಟಕವೆಲ್ಲ ಅರ್ಥವಾಗುವುದಿಲ್ಲವೆಂದು ಭಾವಿಸಿದ್ದಾರೆಯೇ? ಮೊನೆ ಮುಸ್ಲಿಂ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಹಿಜಾಬ್ ವಿಚಾರವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಮತ್ತು ಇದರ ಹಿಂದಿರುವ ಶಕ್ತಿಗಳನ್ನು ಹತ್ತಿಕ್ಕಬೇಕೆಂದು
ಮನವಿ ಸಲ್ಲಿಸಿದ್ದಾರೆ. ಬಹಳ ಒಳ್ಳೆಯ ಬೆಳವಣಿಗೆ. ಹಾಗೆಯೇ ಇದೇ ಮುಖಂಡರೆಲ್ಲ ಒಬ್ಬಬ್ಬರೂ ಒಂದೊಂದು ಜಿಲ್ಲೆಗೆ ತೆರಳಿ ಧರ್ಮಕ್ಕಿಂತ ಹಿಜಾಬ್ ಮುಖ್ಯವೆಂದು ಹಠಕ್ಕೆ ಬಿದ್ದಿರುವ ವಿದ್ಯಾರ್ಥಿಗಳಿಗೆ ‘ನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸಿ, ದೇಶದ ಸಂವಿಧಾನವನ್ನು ಗೌರವಿಸಿ, ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯವೇ ಅಂತಿಮ’ ಎಂದು ತಿಳಿ ಹೇಳಿದ್ದರೆ ಯಾರು ತಾನೇ ಕೇಳುತ್ತಿರಲಿಲ್ಲ ಹೇಳಿ? ಒಬ್ಬ ಜಮೀರ್, ಒಬ್ಬ ಇಬ್ರಾಹಿಂ,ಒಬ್ಬ ರೋಷನ್‌ಬೇಗ್ ಮಾತಾಡಬಹುದಿತ್ತಲ್ಲ? ಜನನಾಯಕರೆನಿಸಿಕೊಳ್ಳುವುದೆಂದರೆ ಇದೇ ತಾನೇ?
ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ ಮೇಲೆಯೂ ಅದನ್ನು ಗೌರವಿಸದೇ ಹೀಗೆ ಧರ್ಮವೇ ಮುಖ್ಯವೆಂದು ವಾದಿಸುತ್ತಿದ್ದಾರೆ.

ಬದಲಾಗಿ ಗೌರವಿಸಬೇಕಾದ ದೈವ ಸಮನ ಶಿಕ್ಷಕರನ್ನು ನಿಂದಿಸುತ್ತಾ, ‘ಅವನ್ಯಾವನು ಹಿಜಾಬ್ ತೆಗೆಯಿರಿ ಎಂದು ಹೇಳೋದಕ್ಕೆ’ ಎಂದು ತಿರುಗಿ ಬೀಳುತ್ತಾರೆಂದರೆ ಏನರ್ಥ? ಸಂವಿಧಾನಕ್ಕೆ ಮರ್ಮಾಘಾತ ನೀಡುವಂಥ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸುವ ನೈಜ ಕಾಳಜಿ ಯಾವನಲ್ಲೂ ಕಾಣುತ್ತಿಲ್ಲ  ಒಂದೊಮ್ಮೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಬಂದಿದ್ದರೆ, ಇವರೇ ಅಧಿವೇಶನಲ್ಲಿ ವಿಧಾನಸೌಧದ ಚಾವಣಿ ಕಿತ್ತುಹೋಗು ವಷ್ಟು ಅಬ್ಬರಿಸುತ್ತಿದ್ದರು. ಸದನದ ಬಾವಿಯನ್ನು ಕೊರೆದು ಪಾತಾಳ ತೋರಿಸಿ ಬಿಡುತ್ತಿದ್ದರು. ಆದರೆ ಅದಾಗದೇ ಹಿಜಾಬ್ ಮುಂದು ವರಿದಿರುವುದು ಈ ಸೋಕಾಲ್ಡ್ ಸೆಕ್ಯುಲರ್‌ಗಳ ಅಂಡಿಗೆ ಕೆಂಡ ಬಿದ್ದಂತಾಗಿದೆ.

ಅಸಲಿಗೆ ಇದು ಇಂದು ಹಿಜಾಬ್ ಮತ್ತು ಕೇಸರಿ ಅಥವಾ ಹಿಜಾಬ್ ಮತ್ತು ಹಿಂದುಗಳ ನಡುವಿನ ವಿಚಾರವೇ ಅಲ್ಲ. ಇದು ನೇರವಾಗಿ ಹಿಜಾಬ್ ಮತ್ತು ಸಂವಿಧಾನ, ನ್ಯಾಯಾಲಯದ ನಡುವಿನ ಸಂಘರ್ಷವಾಗಿದೆ. ಕೇಸರಿ ಶಾಲಿನ ವಿಚಾರ ಇಲ್ಲಿ ನೆಪಮಾತ್ರ. ಪುಟ್ಟ ಮಕ್ಕಳು ನಮಗೆ ಶಿಕ್ಷಣ, ಭವಿಷ್ಯ, ನ್ಯಾಯಾಲಯಕ್ಕಿಂತ ಧರ್ಮವೇ ಮುಖ್ಯವೆಂದು ಹೇಳುತ್ತಿರುವುದನ್ನು ನೋಡಿದರೆ ಮನೆಯಲ್ಲಿ ಅವರ ಪೊಷಕರು ಯಾವ ಮಟ್ಟದಲ್ಲಿ ಈ ದೇಶದ ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಂಡಿದ್ದಾರೆಂಬುದು ಅರ್ಥವಾಗುತ್ತದೆ. ಅದಕ್ಕೆ ತಕ್ಕಂತೆ ಕೆಲ ನಾಯಕರುಗಳ, ಬುದ್ಧಿಜೀವಿಗಳ ಮನಃಸ್ಥಿತಿಯೂ ಅನಾವರಣವಾಗುತ್ತಿದೆ.

ಇದೇ ವಿಚಾರಗಳನ್ನಿಟ್ಟುಕೊಂಡು ಸುದ್ದಿವಾಹಿನಿಗಳು ನಡೆಸುವ ಡಿಬೆಟ್‌ನಲ್ಲಿ ಬಂನದು ಕುಳಿತು ಪಕ್ಕಾ ಜಿಹಾದಿಯಂತೆ ವಾದಿಸುತ್ತಾರೆ. ಅಸಂಬದ್ಧವಾಗಿ ಮಾತನಾಡಿ ವಾಸ್ತವವನ್ನು ಒಪ್ಪಿಕೊಳ್ಳದೇ ವಿಷಯಾಂತರ ಮಾಡುತ್ತಿದ್ದಾರೆ. ವಾಹಿನಿಗಳವರೂ ಇಂಥವರನ್ನು ತಿಪ್ಪೆ ಯಂತೆ ಬಳಸಿಕೊಳ್ಳುತ್ತಾರೆ. ಇಂಥ ವಿತಂಡ ವಾದಿಯೊಬ್ಬನನ್ನು ಕಂಡು ಬೇಸತ್ತ ನಿರೂಪಕರೊಬ್ಬರು ಕೊನೆಗೆ ಬೇಸತ್ತು, ಕೆರಳಿ ನೀವು ಈ ‘ದೇಶದಲ್ಲಿರಲೇ ಯೋಗ್ಯರಲ್ಲ, ದೇಶವನ್ನು ಬಿಟ್ಟು ಹೋಗಿ’ ಎಂದು ಮುಲಾಜಿಲ್ಲದೆ ಉಗಿದು ಹೊರಹಾಕಿದರು.

ಇದನು ನೋಡಿದ ಯಾರಿಗಾದರೂ ಸ್ಪಷ್ಟವಾಗುತ್ತದೆ ಈತ ಯಾರನ್ನು, ಏನನ್ನು ಮತ್ತು ಎಂಥ ಮನಃಸ್ಥಿತಿಯನ್ನು ಪ್ರತಿ ನಿಽಸುತ್ತಿದ್ದಾ ನೆಂದು. ಇಂಥವನಿಂದ ಇಡೀ ಜನಾಂಗದ ಮೇಲೆ ಅಸಹ್ಯ ಅನುಮಾನ ಹುಟ್ಟುವಂತೆ ಆಗಿದೆ. ಇಂಥ ಅಯೋಗ್ಯರಿಂದ ಮುಗ್ಧ ವಿದ್ಯಾರ್ಥಿಗಳಿಗೆ ಪೋಷಕರಿಗೆ ತಪ್ಪು ಸಂದೇಶ ಹೋಗುವುದರ ಜತೆಗೆ ಪ್ರಚೋದನೆ ಹೆಚ್ಚಾಗಿ ಸಮಾಜದ ವಿಶ್ವಾಸ ದ್ರೋಹ ವಾಗುತ್ತಿದೆಯೇ ಹೊರತು ಸಂಯಮ, ಸಮನ್ವಯ, ಸಹಬಾಳ್ವೆ ಖಂಡಿತಾ ಮೂಡುವುದಿಲ್ಲ.

ಮತ್ತೊಂದು ವಾಹಿನಿಯ ವೇದಿಕೆಯಲ್ಲಿ ಚರ್ಚೆಯಾದ ಕುತೂಹಲಕಾರಿ ವಿಚಾರವೆಂದರೆ ಲಿಬಾನ್ ಥಿಯರಿ!. ಮುಸ್ಲಿಂ ಹೆಣ್ಣು ಮಕ್ಕಳು
ಹೆಚ್ಚು ಓದಿ ವಿದ್ಯಾವಂತರಾದರೆ ಗಂಡುಮಕ್ಕಳೂ ಇನ್ನೂ ಹೆಚ್ಚು ಓದಬೇಕಾಗುತ್ತದೆ. ಹೆಣ್ಣು ಮಕ್ಕಳು ಸಾಮಾಜಿಕ ವ್ಯವಸ್ಥೆಯನ್ನು ಅರಿತುಕೊಂಡು ಅವರು ಎಂದಿಗೂ ಮೂರ್ನಾಲ್ಕು ಮಕ್ಕಳನ್ನು ಹೆರಲು ಬಯಸುವುದಿಲ್ಲ. ಇಂದಿನ ಸಮಾಜದ ಸರಕಾರಿ ಹುದ್ದೆಯಲ್ಲಾಗಲಿ, ಖಾಸಗಿ ಕ್ಷೇತ್ರದ ಉದ್ಯಮಗಳಾಗಲಿ ಮುಸ್ಲಿಂ ವನಿತೆಯರು ಮುಂದುವರಿದವರಾಗಿ ಒಂದು ಅಥವಾ ಎರಡಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಹೊಂದುವುದು ಅವೈಜ್ಞಾನಿಕ ಮತ್ತು ಜೀವನ ನಿರ್ವಹಣೆಗೆ ಕಷ್ಟಸಾಧ್ಯವೆಂಬುದನ್ನು ಸಹಜವಾಗಿ ಅರಿತಿರುತ್ತಾರೆ. ಹೀಗಾಗಿ ಆಕೆ ಅವಿದ್ಯಾವಂತಳಾಗಿ ಮನೆಯ ನಾಲ್ಕು ಗೋಡೆಯ ನಡುವೆ ಇದ್ದರೇನೇ ಜನಸಂಖ್ಯೆ ಹೆಚ್ಚೆಚ್ಚು ಬೆಳೆ ಯಲು ಸಾಧ್ಯ.

ಆ ಮೂಲಕ ಇಡೀ ವಿಶ್ವವನ್ನು ಇಸ್ಲಾಮಿಕ್ ಆಗಿ ಪರಿವರ್ತಿಸಲು ಸುಲಭವೆಂಬ ಮೂಲಭೂತವಾದ ಚರ್ಚೆಯಾಗುತ್ತಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಹಿಜಾಬ್ ವಿಚಾರವಿಟ್ಟುಕೊಂಡು ಸರಕಾರದ ಮೇಲೆ ಗೂಬೆ ಕೂರಿಸಿ ಕೋಮುಸೌಹಾರ್ದ ಹಾಳು ಮಾಡುವುದು ಮತ್ತು ಅದೇ ನೆಪದಲ್ಲಿ ಹೆಣ್ಣು ಮಕ್ಕಳನ್ನು ಮನೆಯೊಳಗೆ ಕೂರಿಸುವುದು. ಇವೆರಡರ ಕಾರ್ಯತಂತ್ರವೇ ಹಿಜಾಬ್ ಎಂಬುದು ಗಮನಾರ್ಹ.

ಹಾಗಂತ ಎಲ್ಲ ಮುಸ್ಲಿಂ ಕುಟುಂಬಗಳೂ ಹೀಗಲ್ಲ. ತಮ್ಮ ಮಕ್ಕಳಿಗೆ ಹಿಜಾಬ್‌ಗಿಂತ ಶಿಕ್ಷಣ ಮುಖ್ಯ, ಮಗಳು ಚೆನ್ನಾಗಿ ಕಲಿತು ಸಮಾಜದಲ್ಲಿ
ಎಲ್ಲರಂತೆ ಬದುಕಬೇಕು, ಸ್ವಾವಲಂಬಿಯಾಗಬೇಕೆಂಬ ಅಭಿಲಾಷೆ ಹೊಮದಿದವರೂ ಇದ್ದಾರೆ. ತಮ್ಮ ಮನೆಯ ಹೆಣ್ಣುಮಕ್ಕಳ ಭವಿಷ್ಯ ವನ್ನು ರೂಪಿಸುವುದು ನಾವುಗಳೇ ಹೊರತು ಯಾವುದೋ ಪೂರ್ವಗ್ರಹವುಳ್ಳವರು, ಜಿಹಾದಿ ದೇಶಗಳ ಕಟ್ಟುಪಾಡುಗಳನ್ನು ಹೇರುವವ ರಿಂದಲ್ಲ ಎಂಬುದನ್ನು ಅರಿತವರಿದ್ದಾರೆ.

ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿನ ಮುಸ್ಲಿಂ ಶಿಕ್ಷಣ ಸಂಸ್ಥೆಯಾದ ಟಿಪ್ಪು ಪ್ರೌಢ ಶಾಲೆಯಲ್ಲಿ ಹಿಜಾಬ್ ಧರಿಸಿ ಬಂದು ಅದನ್ನು ತೆರೆದಿಟ್ಟು ತರಗತಿಯೊಗೆ ಕೂತು ಸಹಜವಾಗಿ ಪಾಠ ಕೇಳಿದ್ದಾರೆ. ಸಹಿಷ್ಣುಗಳನ್ನು ಕೋಮುವಾದಿಗಳೆಂದು ಜರಿದು, ಅಸಹಿಷ್ಣುತೆಯನ್ನು ಸಷ್ಟಿಸಿ
ಬಿರಿಯಾನಿ ಬೇಯಿಸಿಕೊಳ್ಳುವ ನೀಚ ನಾಯಕರುಗಳು, ದೇಶದ್ರೋಹಿ ಸಂಘಟನೆಗಳು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದಾರೆ. ಇನ್ನು ಮತಾಂಧರ ಹೆಗಲಮೇಲಿನ ಕುಂಬಳಕಾಯಿಯೂ ದೇಶಕ್ಕೆ ಕಾಣುತ್ತಿದೆ. ಅಂದಹಾಗೆ ಚಾಮರಾಜ ಪೇಟೆಯಲ್ಲಿ ಮುಂದಿನ ಬಾರಿ ಸಿದ್ದರಾಮಯ್ಯ ನವರು ಸ್ಪಽಸುವ ವಿಚಾರ ಕೇಳಿಬರುತ್ತಿದೆ.

ಒಂದೊಮ್ಮೆ ಸಿದ್ದರಾಮಯ್ಯನವರು ಸ್ಪರ್ಧಿಸಿ ಅವರ ವಿರುದ್ಧ ಅಸಾವುದ್ದೀನ್ ಓವೈಸಿ ತನ್ನ ಪಕ್ಷದಿಂದ ನಿಂತರೆ ಅಲ್ಪಸಂಖ್ಯಾತರ ಮತಗಳು ಯಾರಿಗೆ ಬೀಳಬಹುದು? ಉತ್ತರ ಸರಳವಲ್ಲವೇ? ಅದಕ್ಕೇ ಹೇಳಿದ್ದು ಇದು ಧರ್ಮ ಮತ್ತು ಸಂವಿಧಾನದ ನಡುವಿನ ಸಂಘರ್ಷವೆಂದು.