ಒಂಕೋಲರ್ ತಮ್ಮ ಚುನಾವಣಾ ಚಿಹ್ನೆಯಾಗಿ ಟಾರ್ಚ್ನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಮೇರಿ ಕೋಮ್ರ ಪತಿಯ ಈ ಪ್ರಯತ್ನಕ್ಕೆ ಗ್ರಾಮಸ್ಥರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ. ಸಿಯಾಲ್ಕೋಟದಿಂದ ಸಮುಲ್ಲಮನ್ ಗ್ರಾಮಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಒಂಕೋಲರ್ರ ಬೆಂಬಲ ಸೂಚಿಸುವ ಸಾಕಷ್ಟು ಬ್ಯಾನರ್ಗಳನ್ನು ಅಂಟಿಸಲಾಗಿದೆ.
ನಮ್ಮ ಗ್ರಾಮವು ಮೇರಿ ಕೋಮ್ ಗ್ರಾಮ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ನಮ್ಮ ಗ್ರಾಮಕ್ಕೆ ಅಭಿವೃದ್ಧಿಯ ಅವಶ್ಯಕತೆ ಇದೆ. ಮೇರಿ ಕೋಮ್ ಸಂಸದರಾದ ಬಳಿಕ ನಮ್ಮ ಗ್ರಾಮದಲ್ಲಿ ಕೆಲವು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕಾಗಿಯೇ ನಾವು ಒಂಕೋಲರ್ರನ್ನು ವಿಧಾನ ಸಭಾ ಚುನಾವಣೆಯ ಕಣಕ್ಕಿಳಿಸುತ್ತಿದ್ದೇವೆ ಎಂದು ಸ್ಥಳೀಯ ಅಸಾಂಗ್ ಲಾಂಗ್ ಎಂಬವರು ಹೇಳಿದರು.
ಮೇರಿಕೋಮ್ ಪತಿ ಒಂಕೋಲರ್ ಮಾತನಾಡಿ, ನಾವು ಯಾವುದೇ ರೀತಿಯಲ್ಲಾದರೂ ಜನರಿಗಾಗಿ ಕೆಲಸ ಮಾಡಬೇಕೆಂದು ಬಯಸುತ್ತೇನೆ. ಈ ಬಾರಿ ಕೂಡ ನನಗೆ ಜನರೇ ಒತ್ತಾಯ ಮಾಡಿ ಕಣಕ್ಕಿಳಿಸಿದ್ದಾರೆ. ನಾನು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗಬಹುದಾ ಎಂದು ಯತ್ನಿಸಿದೆ. ಆದರೆ ಟಿಕೆಟ್ ನೀಡಲಿಲ್ಲ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿ ದಿದ್ದೇನೆ ಎಂದು ಹೇಳಿದರು.
ಮೇರಿಕೋಮ್ ಕೂಡ ಸಂಸದೆಯಾಗಿರುವುದರಿಂದ ಅವರಿಗೆ ನನಗೆ ನೇರವಾಗಿ ಬೆಂಬಲ ನೀಡಲು ಸಾಧ್ಯವಿಲ್ಲ. ಆದರೆ ಪರೋಕ್ಷ ಬೆಂಬಲ ನನಗಿದೆ. ನನ್ನ ಪ್ರತಿಯೊಂದು ಹೆಜ್ಜೆಗೂ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.