Saturday, 14th December 2024

ಗುರ್ಮೀತ್​ ರಾಮ್​ ರಹೀಮ್ ಸಿಂಗ್’ಗೆ ಜೆಡ್​ ಪ್ಲಸ್​ ಭದ್ರತೆ

ನವದೆಹಲಿ: ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಮ್ ಸಿಂಗ್​​ ಖಲಿಸ್ತಾನ್​ ಪರ ಕಾರ್ಯಕರ್ತರಿಂದ ಜೀವ ಬೆದರಿಕೆ ಕರೆ‌ ಇರುವ ಹಿನ್ನೆಲೆಯಲ್ಲಿ ಜೈಲಿನಿಂದ ಹೊರ ಬಂದಿರುವ ರಾಮ್​ ರಹೀಮ್ ಸಿಂಗ್‌ ಗೆ ಜೆಡ್​ ಪ್ಲಸ್​ ಭದ್ರತೆ ಒದಗಿಸಲಾಗಿದೆ.

ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಡಿಯಲ್ಲಿ ಶಿಕ್ಷೆಗೆ ಒಳಗಾದ ನಾಯಕನಿಗೆ ಉನ್ನತ ಮಟ್ಟದ ಭದ್ರತೆ ನೀಡಲು ಹರಿಯಾಣ ಸರ್ಕಾರದ ನಿರ್ಧರಿ ಸಿದೆ. ಸ್ವಯಂ ಘೋಷಿತ ದೇವ ಮಾನವ ರಾಮ್​ ರಹೀಮ್ ಸಿಂಗ್​​ ಪೆರೋಲ್​ ಮೂಲಕ ಹೊರ ಬಂದಿದ್ದಾರೆ.‌

ಮಾಜಿ ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಹಾಗೂ ಇಬ್ಬರು ಡೇರಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಸ್ತುತ ಜೀವಾವಧಿ ಶಿಕ್ಷೆ ಅನು ಭವಿಸುತ್ತಿರುವ ರಾಮ್​ ರಹೀಮ್ ಫೆಬ್ರವರಿ 7ರಂದು 14 ದಿನಗಳ ಪೆರೋಲ್​ನ ಅಡಿಯಲ್ಲಿ ರೋಹ್ಟಕ್​ನಲ್ಲಿರುವ ಸುನಾರಿಯಾ ಜೈಲಿನಿಂದ ಹೊರ ಬಂದಿ ದ್ದಾರೆ.‌

2017 ರಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಈ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿತ್ತು.