Saturday, 23rd November 2024

ಷೇರುಪೇಟೆ ಛಿದ್ರ: 13 ನೂರಕ್ಕೂ ಹೆಚ್ಚು ಅಂಕ ಕುಸಿತ

ಮುಂಬೈ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸುತ್ತಿದ್ದಂತೆ ಮಾರುಕಟ್ಟೆ ಬೆಚ್ಚಿಬಿದ್ದಿದ್ದು, ಗುರುವಾರ ಆರಂಭ ವಾದ ತಕ್ಷಣ ಷೇರುಪೇಟೆ ಛಿದ್ರಗೊಂಡಿದೆ. 13 ನೂರಕ್ಕೂ ಹೆಚ್ಚು ಅಂಕಗಳ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ.

ಬಿಎಸ್‌ಇ ಸೆನ್ಸೆಕ್ಸ್ 1,800 ಪಾಯಿಂಟ್‌ಗಳಿಗಿಂತ ಕಡಿಮೆಯಾಗಿದೆ. ಎನ್‌ಎಸ್‌ಇ ನಿಫ್ಟಿ ಕೂಡ 500ಕ್ಕೂ ಹೆಚ್ಚು ಅಂಕಗಳ ನಷ್ಟದಲ್ಲಿದೆ. ಸೆನ್ಸೆಕ್ಸ್ 13 ನೂರಕ್ಕೂ ಹೆಚ್ಚು ಅಂಕಗಳ ಕುಸಿತದಲ್ಲಿ ಉಳಿಯಿತು. ಮಾರುಕಟ್ಟೆ ಆರಂಭವಾದ ನಂತರ ಸೆನ್ಸೆಕ್ಸ್ 55,750 ಅಂಕಗಳ ಆಸುಪಾಸಿನಲ್ಲಿ ವಹಿವಾಟು ನಡೆಸು ತ್ತಿದೆ. ನಿಫ್ಟಿ 350 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 16,700 ಕ್ಕಿಂತ ಕಡಿಮೆಯಾಗಿದೆ.

ವಹಿವಾಟು ಅಂತ್ಯಗೊಂಡಾಗ, ಸೆನ್ಸೆಕ್ಸ್ 68.62 ಪಾಯಿಂಟ್ (ಶೇ. 0.12) ಇಳಿಕೆ ಕಂಡು 57,232.06 ಅಂಕಗಳಿಗೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 28.95 ಪಾಯಿಂಟ್‌ಗಳ (ಶೇ. 0.17) ನಷ್ಟದೊಂದಿಗೆ 17,063.25 ನಲ್ಲಿತ್ತು.