Wednesday, 11th December 2024

ನಾಲ್ವರು ನೂತನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕಾರ

#DelhiHC

ನವದೆಹಲಿ: ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಅವರು ಹೈಕೋರ್ಟ್‌ನ ನ್ಯಾಯ ಮೂರ್ತಿಗಳಾಗಿ ನೀನಾ ಬನ್ಸಾಲ್ ಕೃಷ್ಣ, ದಿನೇಶ್ ಕುಮಾರ್ ಶರ್ಮಾ, ಅನೂಪ್ ಕುಮಾರ್ ಮೆಂಡಿರಟ್ಟಾ ಮತ್ತು ಸುಧೀರ್ ಕುಮಾರ್ ಜೈನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಮೂಲಕ ನ್ಯಾಯಾಂಗಕ್ಕೆ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ 34 ನ್ಯಾಯಾಧೀಶರನ್ನು ಹೊಂದಿದೆ. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೀನಾ ಬನ್ಸಾಲ್ ಕೃಷ್ಣ, ದಿನೇಶ್ ಕುಮಾರ್ ಶರ್ಮಾ, ಅನೂಪ್ ಕುಮಾರ್ ಮೆಂಡಿರಟ್ಟಾ ಮತ್ತು ಸುಧೀರ್ ಕುಮಾರ್ ಜೈನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಕಾನೂನು ಮತ್ತು ನ್ಯಾಯ ಸಚಿವಾಲಯವು ಶುಕ್ರವಾರ ದೆಹಲಿಯ ಹೈಕೋರ್ಟ್‌ಗಳಿಗೆ ನಾಲ್ಕು ಹೊಸ ನ್ಯಾಯಾ ಧೀಶರ ನೇಮಕಾತಿಗೆ ಸೂಚನೆ ನೀಡಿದೆ.

ಹಿರಿಯತೆಯ ಕ್ರಮದಲ್ಲಿ ಶ್ರೀಮತಿ ನೀನಾ ಬನ್ಸಾಲ್ ಕೃಷ್ಣ, ದಿನೇಶ್ ಕುಮಾರ್ ಶರ್ಮಾ, ಅನೂಪ್ ಕುಮಾರ್ ಮೆಂಡಿರಟ್ಟ ಮತ್ತು ಸುಧೀರ್ ಕುಮಾರ್ ಜೈನ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಿ, ತಮ್ಮ ತಮ್ಮ ಕಚೇರಿಗಳ ಉಸ್ತುವಾರಿ ಯನ್ನು ವಹಿಸಿಕೊಳ್ಳುತ್ತಾರೆ.

ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಅವರನ್ನು ಭಾರತದ ಕಾನೂನು ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ.