Wednesday, 11th December 2024

ಯುದ್ದದಿಂದ ಕಲಿಯುವ ಪಾಠ

ಅಭಿಮತ

ಬೈಂದೂರು ಚಂದ್ರಶೇಖರ ನಾವಡ

ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಸ್ಥಿತಿಯಿಂದ ಉದ್ಭವಿಸಿರುವ ಬೀಭತ್ಸ ದೃಶ್ಯ ಮನ ಕಲಕುವಂತಹದ್ದು. ಅಮಾಯಕ ನಾಗರಿಕರ ಬಲಿ, ಲಕ್ಷಾಂತರ ಜನರ ಪಲಾಯನ ಯುದ್ಧದ ಬಿಸಿ ಹೇಗೆ ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡಬಲ್ಲದು ಎನ್ನುವುದರತ್ತ ಬೊಟ್ಟು ಮಾಡುತ್ತದೆ.

ಇದರೊಂದಿಗೆ ಅಮೆರಿಕ ಸಹಿತ ಅದರ ಮಿತ್ರ ರಾಷ್ಟ್ರಗಳ ಬೊಗಳೆತನ, ವಿಶ್ವಸಂಸ್ಥೆಯ ಅಸಹಾಯಕತೆ ಜಗಜ್ಜಾಹೀರಾಗಿದೆ. ಯುದ್ಧ ದಂತಹ ಸಂಕಷ್ಟದ ಸಮಯದಲ್ಲಿ ಮಿತ್ರ ರಾಷ್ಟ್ರಗಳ ಸಹಾಯವನ್ನು ನೆಚ್ಚಿ ಕೂರುವಂತಿಲ್ಲ, ಏಕಾಕಿಯಾಗಿಯೇ ಎದುರಿಸಬೇಕಾಗುತ್ತದೆ ಎನ್ನುವುದು ಕಟು ಸತ್ಯ. ಬಗಲಲ್ಲಿ ನಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಎರಡೆರಡು ಶತ್ರುಗಳನ್ನಿಟ್ಟುಕೊಂಡಿರುವ ಭಾರತ ವಿಶ್ವ ಸಂಸ್ಥೆಯಲ್ಲಿ ಎಚ್ಚರದ ಹೆಜ್ಜೆ ಇಡಬೇಕಾಗಿದೆ. ನ್ಯಾಯ- ನೀತಿ, ಮಾನವೀಯತೆ ಮೊದಲಾದ ಸೈದ್ಧಾಂತಿಕ ಮೌಲ್ಯಗಳ ಆದರ್ಶ ವಾದದ ಮೇಲೆ ವಿಶ್ವ ವ್ಯವಸ್ಥೆ ನಡೆಯುತ್ತಿಲ.

ದೇಶ ಹಿತ ಮತ್ತು ವಾಸ್ತವದ ಆಧಾರದ ಮೇಲೆಯೇ ನಮ್ಮ ನಿಲುವು ಇರಬೇಕು. ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ವಿಶ್ವಾಸಾರ್ಹರಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕವನ್ನು ಮೆಚ್ಚಿಸಲು ಹೋಗಿ ರಷ್ಯಾದ ಸ್ನೇಹವನ್ನು ಭಾರತ ಕಳೆದುಕೊಳ್ಳುವಂತಿಲ್ಲ. ಮೊದಲ ನೋಟಕ್ಕೆ ರಷ್ಯಾದ ಕ್ರಮ ತುಂಬಾ ಅತಿ ರೇಕದ್ದು ಎನಿಸಿದರೂ ಅದರ ನೀತಿಯನ್ನು ವಿರೋಧಿಸಿದರೆ ಮುಂದೆಂದಾರೂ ಚೀನಾ ಅಥವಾ ಪಾಕಿಸ್ತಾನ ದೊಂದಿಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ದೀರ್ಘ ಕಾಲದ ಮಿತ್ರ ರಾಷ್ಟ್ರವಾದ ರಷ್ಯಾದ ಬೆಂಬಲ ಕಳೆದುಕೊಳ್ಳ ಬೇಕಾಗಬಹುದು.

ಅಮೆರಿಕವಂತೂ ತನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ನಿಲುವು ತಳೆಯಬಹುದು ಎನ್ನುವುದನ್ನು ನಾವು ನೆನಪಿಡಬೇಕಿದೆ. ತನ್ನ ವ್ಯಾಪಾರದ ಹಿತವನ್ನು ಗಮನದಲ್ಲಿಟ್ಟುಕೊಂಡು ಚೀನಾದ ವಿರುದ್ಧ ಘರ್ಷಣೆಗೆ ಇಳಿದಿರುವ ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಉಕ್ರೇನಿನೊಂದಿಗೆ ವರ್ತಿಸಿದಂತೆ ಭಾರತವನ್ನು  ಚೀನಾದ ವಿರುದ್ಧ ಬಳಸಿಕೊಳ್ಳುವುದರ ಪಾಯದ ಬಗೆಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಚಿಕ್ಕ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ ಬಲಾಢ್ಯ ರಾಷ್ಟ್ರಗಳತ್ತ ನೋಡಬೇಕಾದ ಶೋಚನೀಯ ಸ್ಥಿತಿ ಇದೆ.

ಅಮೆರಿಕದ ಮೋಸದ ಜಾಲದಲ್ಲಿ ಸಿಲುಕಿ ಉಕ್ರೇನ್ ಇಂದು ವಿಲವಿಲ ಒದ್ದಾಡುತ್ತಿದೆ. ಉಕ್ರೇನಿನ ರಾಜಕಾರಣಿಗಳು ಅಮೆರಿಕದ ಪ್ರಚೋ ದನೆಗೆ ಒಳಗಾಗಿ ಬಗಲಲ್ಲಿರುವ ಬಲಾಢ್ಯ ರಾಷ್ಟ್ರ ರಷ್ಯಾವನ್ನು ವಿನಾಕಾರಣ ಎದುರು ಹಾಕಿಕೊಂಡು ನಾಗರಿಕರ ಬದುಕನ್ನು ದುಸ್ತರ ಗೊಳಿಸಿವೆ. ಹಿಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್, ಅಮೆರಿಕದ ಜತೆ ಸೇರಿ ತನ್ನ ವಿರುದ್ಧ ನಿಂತಿರುವುದು ರಷ್ಯಾಕ್ಕೆ ಸರಿ ಕಾಣುತ್ತಿಲ್ಲ.

ಸುರಕ್ಷತಾ ಕಾರಣಗಳಿಂದ ನ್ಯಾಟೋದ ವಿಸ್ತಾರವನ್ನು ಸಹಿಸದ ರಷ್ಯಾದ ಸ್ಥಿತಿ ಹೆಚ್ಚು ಕಡಿಮೆ ನೆರೆಯ ಬಾಂಗ್ಲಾ, ಶ್ರೀಲಂಕಾ, ಮಾಲ್ಡೀವ್ಸ್ ನಲ್ಲಿ ಚೀನಾದ ಉಪಸ್ಥಿತಿಯನ್ನು ಸಹಿಸದ ಭಾರತದ ನಿಲುವಿಗೆ ಹೋಲುವಂತಹದ್ದೇ ಆಗಿದೆ. ಹಾಗಾಗಿ ರಷ್ಯಾದ ನೀತಿಯನ್ನು ಸಂಪೂರ್ಣ ವಾಗಿ ವಿರೋಧಿಸುವ ಸ್ಥಿತಿಯಲ್ಲಿ ಭಾರತವಿಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಒಣ ಆದರ್ಶದ ಆಧಾರದ ಮೇಲೆ ಸೈನ್ಯದ ಆಧುನೀಕರಣಕ್ಕೆ ನಮ್ಮ ನಾಯಕರು ಒಲವು ತೋರಿಸ ಲಿಲ್ಲ. ಸೇನೆಗೆ ಖರ್ಚು ಮಾಡುವುದು ವ್ಯರ್ಥ ಎನ್ನುವ ಧೋರಣೆ ನಮ್ಮ ಅನೇಕ ರಾಜಕಾರಣಿಗಳಲ್ಲಿ ಇನ್ನೂ ಇದೆ. ಅಣ್ವಸ ಹೊಂದುವ ವಾಜಪೇಯಿ ಸರಕಾರದ ಐತಿಹಾಸಿಕ ನಿರ್ಧಾರದಿಂದ ಭಾರತ ಇಂದು ಚೀನಾದ ವಿರುದ್ಧ ಸೆಡ್ಡು ಹೊಡೆದು ನಿಲ್ಲುವಂತಾಗಿದೆ.

ಅಮೆರಿಕದ ಬೆದರಿಕೆಗೆ ಮಣಿದು ಅಂದು ವಾಜಪೇಯಿಯವರು ಪರಮಾಣು ಪರೀಕ್ಷೆ ಕಾರ‍್ಯಕ್ರಮ ಕೈ ಬಿಟ್ಟಿದ್ದರೆ ಇಂದು ಭಾರತ ಚೀನಾದ ಎದುರು ಮಂಡಿಯೂರ ಬೇಕಾಗುತ್ತಿತ್ತು. ಸೈನ್ಯದ ಆಧುನೀಕರಣ ಮತ್ತು ರಕ್ಷಣಾ ಸ್ವಾವಲಂಬನೆಯಿಂದ ಮಾತ್ರ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹದು. ರಕ್ಷಣೆಗೆ ಮಾಡುವ ಖರ್ಚು ವ್ಯರ್ಥವಲ್ಲ. ಇನ್ನೊಂದೆಡೆ ಪ್ರತ್ಯೇಕ ಖಲಿಸ್ಥಾನ, ಕಾಶ್ಮೀರ ಎಂದೆಲ್ಲ ಸ್ವತಂತ್ರ ದೇಶದ ಕನಸು ಕಾಣುವವರು ಸಣ್ಣ ದೇಶಗಳ ಅಶಕ್ತತೆ ಮತ್ತು ವಿಶ್ವ ರಾಜಕಾರಣದ ತುಳಿತಕ್ಕೆ ಒಳಗಾಗಬೇಕಾದ ಸ್ಥಿತಿಯನ್ನು ಕಂಡಾದರೂ ಬುದ್ಧಿ ಕಲಿಯಬೇಕಾಗಿದೆ. ಭಾರತದ ಅನೇಕ ರಾಜ್ಯಗಳಲ್ಲೂ ಪ್ರತ್ಯೇಕತೆಯ ಭಾವನೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಕಳೆದ ಏಳು ದಶಕಗಳಿಂದ ನೆಮ್ಮದಿಯ ಬದುಕನ್ನು ಜನಸಾಮಾನ್ಯರು ಕಾಣಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ಭಾರತ ಒಂದು ವಿಶಾಲ ದೇಶವಾಗಿ ಉಳಿದಿರುವುದು.

ದೇಶ ಇದ್ದರೆ ಮಾತ್ರ ನಾವು. ದೇಶದ ಅಸ್ತಿತ್ವವೇ ಗಂಡಾಂತರದಲ್ಲಿದ್ದಾಗ ನಮ್ಮ ಬದುಕು ತರಗೆಲೆಯಂತೆಯೇ ಸರಿ. ದೇಶದ ವಿರುದ್ಧ ಕೆಲಸ ಮಾಡುತ್ತಿರು ವವರು ಉಕ್ರೇನಿನ ಮೇಲೆ ರಷ್ಯಾದ ದಾಳಿಯಾದಾಗ ಭಯಭೀತರಾಗಿ ಇರುವುದೆಲ್ಲವ ಬಿಟ್ಟು ಓಡುತ್ತಿರುವ ಜನರ ದುಗುಡ- ದುಮ್ಮಾನ ಗಳನ್ನು ಕಂಡು ಪಾಠ ಕಲಿಯಲಿ. ಹಾಂ ಇನ್ನೊಂದು ಮಾತು. ದೇಶದ ನಾಯಕತ್ವ ಹೇಗಿರಬೇಕು ಎನ್ನುವುದಕ್ಕೂ ಇದು ಒಂದು ಉದಾಹರಣೆ. ತನ್ನ ಇತಿ ಮಿತಿಗಳನ್ನು ಅರಿಯದೇ ಜನರ ಬದುಕನ್ನು ಅಪಾಯಕ್ಕೆ ನೂಕುವ ಅಪ್ರಬುದ್ಧ ರಾಜಕಾರಣಿ ದೇಶಕ್ಕೆ ಕಂಟಕವೇ ಸರಿ. ಬಲಿಷ್ಠ ಭಾರತದಲ್ಲಿ ಮಾತ್ರ ಎಲ್ಲರ ನೆಮ್ಮದಿಯ ಬದುಕು ಸಾಧ್ಯ.

ಉಕ್ರೇನಿನಂತಹ ಸ್ಥಿತಿ ಭಾರತೀಯರಿಗೆ ಬರಬಾರದು ಎಂದಾ ದರೆ ನಮ್ಮ ಸರಕಾರದ ಚುಕ್ಕಾಣಿ ಯಾವಾಗಲೂ ಸಕ್ಷಮ ನಾಯಕತ್ವದ ಬಳಿ ಇರಬೇಕು ಎನ್ನುವುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿದೆ.ರ ಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಸ್ಥಿತಿಯಿಂದ ಉದ್ಭವಿಸಿರುವ
ಬೀಭತ್ಸ ದೃಶ್ಯ ಮನ ಕಲಕುವಂತಹದ್ದು. ಅಮಾಯಕ ನಾಗರಿಕರ ಬಲಿ, ಲಕ್ಷಾಂತರ ಜನರ ಪಲಾಯನ ಯುದ್ಧದ ಬಿಸಿ ಹೇಗೆ ಜನರ ನೆಮ್ಮದಿಯ
ಬದುಕಿಗೆ ಕೊಳ್ಳಿ ಇಡಬಲ್ಲದು ಎನ್ನುವುದರತ್ತ ಬೊಟ್ಟು ಮಾಡುತ್ತದೆ. ಇದರೊಂದಿಗೆ ಅಮೆರಿಕ ಸಹಿತ ಅದರ ಮಿತ್ರ ರಾಷ್ಟ್ರಗಳ ಬೊಗಳೆತನ, ವಿಶ್ವಸಂಸ್ಥೆಯ ಅಸಹಾಯಕತೆ ಜಗಜ್ಜಾಹೀರಾಗಿದೆ. ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ಮಿತ್ರ ರಾಷ್ಟ್ರಗಳ ಸಹಾಯವನ್ನು ನೆಚ್ಚಿ ಕೂರುವಂತಿಲ್ಲ, ಏಕಾಕಿಯಾಗಿಯೇ ಎದುರಿಸಬೇಕಾಗುತ್ತದೆ ಎನ್ನುವುದು ಕಟು ಸತ್ಯ. ಬಗಲಲ್ಲಿ ನಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಎರಡೆರಡು ಶತ್ರುಗಳನ್ನಿಟ್ಟು ಕೊಂಡಿರುವ ಭಾರತ ವಿಶ್ವ ಸಂಸ್ಥೆಯಲ್ಲಿ ಎಚ್ಚರದ ಹೆಜ್ಜೆ ಇಡಬೇಕಾಗಿದೆ.

ನ್ಯಾಯ- ನೀತಿ, ಮಾನವೀಯತೆ ಮೊದಲಾದ ಸೈದ್ಧಾಂತಿಕ ಮೌಲ್ಯಗಳ ಆದರ್ಶವಾದದ ಮೇಲೆ ವಿಶ್ವ ವ್ಯವಸ್ಥೆ ನಡೆಯುತ್ತಿಲ್ಲ. ದೇಶ ಹಿತ ಮತ್ತು ವಾಸ್ತವದ ಆಧಾರದ ಮೇಲೆಯೇ ನಮ್ಮ ನಿಲುವು ಇರಬೇಕು. ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ವಿಶ್ವಾಸಾರ್ಹರಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕವನ್ನು ಮೆಚ್ಚಿಸಲು ಹೋಗಿ ರಷ್ಯಾದ ಸ್ನೇಹವನ್ನು ಭಾರತ ಕಳೆದುಕೊಳ್ಳುವಂತಿಲ್ಲ.

ಮೊದಲ ನೋಟಕ್ಕೆ ರಷ್ಯಾದ ಕ್ರಮ ತುಂಬಾ ಅತಿರೇಕದ್ದು ಎನಿಸಿದರೂ ಅದರ ನೀತಿಯನ್ನು ವಿರೋಧಿಸಿದರೆ ಮುಂದೆಂದಾರೂ ಚೀನಾ ಅಥವಾ ಪಾಕಿಸ್ತಾನದೊಂದಿಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ದೀರ್ಘ ಕಾಲದ ಮಿತ್ರ ರಾಷ್ಟ್ರವಾದ ರಷ್ಯಾದ ಬೆಂಬಲ ಕಳೆದುಕೊಳ್ಳಬೇಕಾಗಬಹುದು. ಅಮೆರಿಕವಂತೂ ತನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ನಿಲುವು ತಳೆಯಬಹುದು ಎನ್ನುವುದನ್ನು ನಾವು ನೆನಪಿಡಬೇಕಿದೆ. ತನ್ನ ವ್ಯಾಪಾರದ ಹಿತವನ್ನು ಗಮನದಲ್ಲಿಟ್ಟುಕೊಂಡು ಚೀನಾದ ವಿರುದ್ಧ ಘರ್ಷಣೆಗೆ ಇಳಿದಿರುವ ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಉಕ್ರೇನಿನೊಂದಿಗೆ ವರ್ತಿಸಿದಂತೆ ಭಾರತವನ್ನು ಚೀನಾದ ವಿರುದ್ಧ ಬಳಸಿಕೊಳ್ಳುವುದರ ಪಾಯದ ಬಗೆಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ.

ಚಿಕ್ಕ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ ಬಲಾಢ್ಯ ರಾಷ್ಟ್ರಗಳತ್ತ ನೋಡಬೇಕಾದ ಶೋಚನೀಯ ಸ್ಥಿತಿ ಇದೆ. ಅಮೆರಿಕದ ಮೋಸದ ಜಾಲದಲ್ಲಿ ಸಿಲುಕಿ
ಉಕ್ರೇನ್ ಇಂದು ವಿಲವಿಲ ಒದ್ದಾಡುತ್ತಿದೆ. ಉಕ್ರೇನಿನ ರಾಜಕಾರಣಿಗಳು ಅಮೆರಿಕದ ಪ್ರಚೋದನೆಗೆ ಒಳಗಾಗಿ ಬಗಲಲ್ಲಿರುವ ಬಲಾಢ್ಯ ರಾಷ್ಟ್ರ ರಷ್ಯಾ ವನ್ನು ವಿನಾಕಾರಣ ಎದುರು ಹಾಕಿಕೊಂಡು ನಾಗರಿಕರ ಬದುಕನ್ನು ದುಸ್ತರಗೊಳಿಸಿವೆ. ಹಿಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್, ಅಮೆರಿಕದ ಜತೆ ಸೇರಿ ತನ್ನ ವಿರುದ್ಧ ನಿಂತಿರುವುದು ರಷ್ಯಾಕ್ಕೆ ಸರಿ ಕಾಣುತ್ತಿಲ್ಲ.

ಸುರಕ್ಷತಾ ಕಾರಣಗಳಿಂದ ನ್ಯಾಟೋದ ವಿಸ್ತಾರವನ್ನು ಸಹಿಸದ ರಷ್ಯಾದ ಸ್ಥಿತಿ ಹೆಚ್ಚು ಕಡಿಮೆ ನೆರೆಯ ಬಾಂಗ್ಲಾ, ಶ್ರೀಲಂಕಾ, ಮಾಲ್ಡೀವ್ಸ್ ನಲ್ಲಿ ಚೀನಾದ
ಉಪಸ್ಥಿತಿಯನ್ನು ಸಹಿಸದ ಭಾರತದ ನಿಲುವಿಗೆ ಹೋಲುವಂತಹದ್ದೇ ಆಗಿದೆ. ಹಾಗಾಗಿ ರಷ್ಯಾದ ನೀತಿಯನ್ನು ಸಂಪೂರ್ಣವಾಗಿ ವಿರೋಧಿಸುವ
ಸ್ಥಿತಿಯಲ್ಲಿ ಭಾರತವಿಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಒಣ ಆದರ್ಶದ ಆಧಾರದ ಮೇಲೆ ಸೈನ್ಯದ ಆಧುನೀಕರಣಕ್ಕೆ ನಮ್ಮ ನಾಯಕರು ಒಲವು ತೋರಿಸ ಲಿಲ್ಲ. ಸೇನೆಗೆ ಖರ್ಚು ಮಾಡುವುದು ವ್ಯರ್ಥ ಎನ್ನುವ ಧೋರಣೆ ನಮ್ಮ ಅನೇಕ ರಾಜಕಾರಣಿಗಳಲ್ಲಿ ಇನ್ನೂ ಇದೆ.

ಅಣ್ವಸ್ತ್ರ ಹೊಂದುವ ವಾಜಪೇಯಿ ಸರಕಾರದ ಐತಿಹಾಸಿಕ ನಿರ್ಧಾರದಿಂದ ಭಾರತ ಇಂದು ಚೀನಾದ ವಿರುದ್ಧ ಸೆಡ್ಡು ಹೊಡೆದು ನಿಲ್ಲುವಂತಾಗಿದೆ. ಅಮೆರಿಕದ ಬೆದರಿಕೆಗೆ ಮಣಿದು ಅಂದು ವಾಜಪೇಯಿಯವರು ಪರಮಾಣು ಪರೀಕ್ಷೆ ಕಾರ‍್ಯಕ್ರಮ ಕೈ ಬಿಟ್ಟಿದ್ದರೆ ಇಂದು ಭಾರತ ಚೀನಾದ ಎದುರು ಮಂಡಿಯೂರ ಬೇಕಾಗುತ್ತಿತ್ತು. ಸೈನ್ಯದ ಆಧುನೀಕರಣ ಮತ್ತು ರಕ್ಷಣಾ ಸ್ವಾವಲಂಬನೆಯಿಂದ ಮಾತ್ರ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹದು. ರಕ್ಷಣೆಗೆ
ಮಾಡುವ ಖರ್ಚು ವ್ಯರ್ಥವಲ್ಲ. ಇನ್ನೊಂದೆಡೆ ಪ್ರತ್ಯೇಕ ಖಲಿಸ್ಥಾನ, ಕಾಶ್ಮೀರ ಎಂದೆಲ್ಲ ಸ್ವತಂತ್ರ ದೇಶದ ಕನಸು ಕಾಣುವವರು ಸಣ್ಣ ದೇಶಗಳ ಅಶಕ್ತತೆ ಮತ್ತು ವಿಶ್ವ ರಾಜಕಾರಣದ ತುಳಿತಕ್ಕೆ ಒಳಗಾಗಬೇಕಾದ ಸ್ಥಿತಿಯನ್ನು ಕಂಡಾದರೂ ಬುದ್ಧಿ ಕಲಿಯಬೇಕಾಗಿದೆ.

ಭಾರತದ ಅನೇಕ ರಾಜ್ಯಗಳಲ್ಲೂ ಪ್ರತ್ಯೇಕತೆಯ ಭಾವನೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಕಳೆದ ಏಳು ದಶಕಗಳಿಂದ ನೆಮ್ಮದಿಯ ಬದುಕನ್ನು ಜನಸಾಮಾನ್ಯರು ಕಾಣಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ಭಾರತ ಒಂದು ವಿಶಾಲ ದೇಶವಾಗಿ ಉಳಿದಿರುವುದು. ದೇಶ ಇದ್ದರೆ ಮಾತ್ರ ನಾವು. ದೇಶದ ಅಸ್ತಿತ್ವವೇ ಗಂಡಾಂತರದಲ್ಲಿದ್ದಾಗ ನಮ್ಮ ಬದುಕು ತರಗೆಲೆಯಂತೆಯೇ ಸರಿ. ದೇಶದ ವಿರುದ್ಧ ಕೆಲಸ ಮಾಡುತ್ತಿರುವವರು ಉಕ್ರೇನಿನ ಮೇಲೆ ರಷ್ಯಾದ
ದಾಳಿಯಾದಾಗ ಭಯಭೀತರಾಗಿ ಇರುವುದೆಲ್ಲವ ಬಿಟ್ಟು ಓಡುತ್ತಿರುವ ಜನರ ದುಗುಡ- ದುಮ್ಮಾನಗಳನ್ನು ಕಂಡು ಪಾಠ ಕಲಿಯಲಿ.

ಹಾಂ ಇನ್ನೊಂದು ಮಾತು. ದೇಶದ ನಾಯಕತ್ವ ಹೇಗಿರಬೇಕು ಎನ್ನುವುದಕ್ಕೂ ಇದು ಒಂದು ಉದಾಹರಣೆ. ತನ್ನ ಇತಿ ಮಿತಿಗಳನ್ನು ಅರಿಯದೇ ಜನರ
ಬದುಕನ್ನು ಅಪಾಯಕ್ಕೆ ನೂಕುವ ಅಪ್ರಬುದ್ಧ ರಾಜಕಾರಣಿ ದೇಶಕ್ಕೆ ಕಂಟಕವೇ ಸರಿ. ಬಲಿಷ್ಠ ಭಾರತದಲ್ಲಿ ಮಾತ್ರ ಎಲ್ಲರ ನೆಮ್ಮದಿಯ ಬದುಕು ಸಾಧ್ಯ. ಉಕ್ರೇನಿ ನಂತಹ ಸ್ಥಿತಿ ಭಾರತೀಯರಿಗೆ ಬರಬಾರದು ಎಂದಾದರೆ ನಮ್ಮ ಸರಕಾರದ ಚುಕ್ಕಾಣಿ ಯಾವಾಗಲೂ ಸಕ್ಷಮ ನಾಯಕತ್ವದ ಬಳಿ ಇರಬೇಕು ಎನ್ನುವುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿದೆ.