ಸಂಗತ
ವಿಜಯ್ ದರ್ಡ
ಒಬ್ಬ ಆರಡಿಯ ಆಳನ್ನು ಸಿದ್ಧಪಡಿಸಲು ಎರಡು ಅಡಿಯ ಮೂವರನ್ನು ಜೋಡಿಸುವುದು ಸಾಧ್ಯವಿಲ್ಲದ ಮಾತು. ಮೂಲ ಕಾಂಗ್ರೆಸಿಗರು ಈಗ ಸ್ಪಷ್ಟವಾಗಿ ದನಿ ಎತ್ತಿ ತಮ್ಮ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಿದೆ. ಕೇವಲ ಎರಡು ಸೀಟು ಗೆದ್ದಿದ್ದ ಬಿಜೆಪಿ ಇಂದು ದೇಶವನ್ನೇ ಆಕ್ರಮಿಸಿಕೊಂಡಿದೆ ಎಂಬ ಮಾತನ್ನು ಕಾಂಗ್ರೆಸ್ ಗಮನಿಸಬೇಕಿದೆ.
ಎಕ್ಸಿಟ್ ಪೊಲ್ಗೆ ಮುಂಚಿತಾಗಿಯೇ, ಈ ಬಾರಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥರಿಗೆ ಗೆಲುವಾಗಲಿದೆ, ಬಿಜೆಪಿಗೆ 250ಕ್ಕಿಂತ ಹೆಚ್ಚು ಸೀಟುಗಳು ಬರಲಿವೆ ಎಂದು ನಾನು ನನ್ನ ಸಹೋದ್ಯೋಗಿಗಳ ಜತೆ ಮಾತನಾಡುತ್ತ ಹೇಳಿದ್ದೆ. ಆದರೆ, ಈ ಬಾರಿ ಹವಾ ಸಮಾಜವಾದಿ ಪಾರ್ಟಿಯ ಕಡೆಗಿದೆ ಎಂದು ಹೇಳುತ್ತ ಬಹುತೇಕರು ನನ್ನ ವಾದವನ್ನು ಒಪ್ಪಲೇ ಇಲ್ಲ.
ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯ ಬಗ್ಗೆ ಗಮನಿಸು ತ್ತಲೇ ಇದ್ದೆ. ಜತೆಗೆ ಗೃಹಮಂತ್ರಿ ಅಮಿತ್ ಷಾ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಡೆಗಳ ಬಗ್ಗೆಯೂ ನಾನು ಗಮನವಿಟ್ಟಿದ್ದೆ. ಬಹಳ ಮುಖ್ಯವಾಗಿ
ಈ ಗೆಲುವಿನ ಹಿಂದಿನ ರೂವಾರಿಗಳು ಕೂಡ ಈ ಮೂವರೇ ಆಗಿದ್ದಾರೆ.
ಪ್ರಧಾನಮಂತ್ರಿಯವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಂತ್ರದ ಮೂಲಕ ಎಲ್ಲ ಇಲಾಖೆಗಳಲ್ಲಿ ಪ್ರಗತಿ, ಮಹಿಳಾ ಸಬಲೀಕರಣ, ಸಾಮಾಜಿಕ ಯೋಜನೆಗಳ ಅನುಷ್ಠಾನ ಹೀಗೆ ಹಲವು ವಿಧಗಳಲ್ಲಿ ಸಮಾಜದಲ್ಲಿ ಭರವಸೆ ತುಂಬುವ ಕೆಲಸವನ್ನು ಮಾಡಿದರು.
ಅಮಿತ್ ಶಾ ಅದಕ್ಕೆ ತಕ್ಕ ಕಾರ್ಯಯೋಜನೆ ರೂಪಿಸಿದರು. ಯೋಗಿ ಆದಿತ್ಯನಾಥರು ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಹಳ ದೊಡ್ಡ ಕೆಲಸ ಮಾಡುತ್ತ ಬಂದರು. ಇವೆಲ್ಲವೂ ಬಿಜೆಪಿಯ ಗೆಲುವಿಗೆ ಕಾರಣವಾದ ಅಂಶಗಳು. ಅಖಿಲೇಶ
ಯಾದವ್ ತನ್ನೆಲ್ಲ ಪ್ರಯತ್ನಗಳನ್ನು ಹಾಕಿ ಮತದಾರನ ಒಲವನ್ನು ತನ್ನತ್ತ ಸೆಳೆಯುವ ತಂತ್ರಗಳನ್ನು ಹೆಣೆದಿದ್ದರು ಸಹ ಕುರ್ಚಿ ಅವರಿಗೆ ಒಲಿಯಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥರ ಜೋಡಿ ಮಾಡಿದ ಮೋಡಿ.
ಪಕ್ಷದ ಕಾರ್ಯಕರ್ತರು ಸದಾ ಜನರ ನಡುವೆ ಇರುವಂತೆ ಅವರು ನೋಡಿಕೊಂಡರು. ಕೋವಿಡ್ ಸಾಂಕ್ರಾಮಿಕದ ಕಷ್ಟಕಾಲದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಜನರ ನಡುವೆ ಕೆಲಸ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಆ ಕಾಲಘಟ್ಟ ದಲ್ಲಿ ಕೆಲ ಪಕ್ಷಗಳ ಧುರೀಣರು ಬೀದಿಗಿಳಿಯಲೇ ಇಲ್ಲ. ಚುನಾವಣೆಯ ವಿಚಾರದಲ್ಲೂ ಅಷ್ಟೆ, ಕೆಲ ಪಕ್ಷಗಳು ಇನ್ನೇನು ಚುನಾವಣೆ ಬರಲಿದೆ ಎಂದಾಗ ಕೆಲ ತಿಂಗಳ ಹಿಂದಷ್ಟೇ ಅಂಗಳಕ್ಕೆ ಇಳಿದು ಕೆಲಸ ಮಾಡಿದ್ದರು. ಆದರೆ ಅದಾಗಲೇ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾಕಷ್ಟು ತಾಲೀಮು ಮಾಡಿಯಾಗಿತ್ತು. ಇದು ಗೆಲುವಿಗೆ ಬಹುಮುಖ್ಯ ಕಾರಣ. ನಿಜವಾದ ನಾಯಕ ಯಾರು, ನಾಯಕನಂತೆ ನಟಿಸುವ ರಾಜಕಾರಣಿ ಯಾರು ಎಂಬುದನ್ನು ಮತದಾರ ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ.
ಪ್ರಾಯಶಃ ಇದೇ ಮೊದಲ ಬಾರಿಗೆ ಯುಪಿಯಲ್ಲಿ ಜಾತಿ ರಾಜಕಾರಣ ಕೆಲಸ ಮಾಡಲಿಲ್ಲ. ಮುಸ್ಲಿಮರು ಓವೈಸಿಗೆ ವೋಟು ಹಾಕ ಲಿಲ್ಲ. ಅವರು ಕಾಂಗ್ರೆಸ್ಗೂ ವೋಟು ಹಾಕಲಿಲ್ಲ. ಈ ಎರಡೂ ಪಕ್ಷಗಳಿಗೆ ವೋಟು ಹಾಕುವುದು ವ್ಯರ್ಥ ಎಂಬುದನ್ನವರು ಅರ್ಥ ಮಾಡಿಕೊಂಡರು. ಈ ಬಾರಿ ಹವಾ ಸಮಾಜವಾದಿ ಪಾರ್ಟಿ ಯತ್ತ ಇತ್ತು. ಹಾಗಾಗಿ ಮುಸ್ಲಿಮರ ವೋಟುಗಳೆಲ್ಲವೂ ಅತ್ತ ಸರಿದವು. ರೈತರು ಕೂಡ ಬಹುತೇಕ ಸಮಾಜವಾದಿ ಪಾರ್ಟಿಯನ್ನು ಬೆಂಬಲಿಸಿದರು.
ಮಾಯಾವತಿ ತನ್ನ ಮೇಲಿದ್ದ ಪ್ರಕರಣಗಳಿಂದ ಜರ್ಝರಿತರಾಗಿದ್ದರಲ್ಲದೇ ಚುನಾವಣಾ ಕಣದಲ್ಲಿ ಛಾಪು ಮೂಡಿಸುವುದು ಆಕೆಯಿಂದ ಸಾಧ್ಯವಾಗಲೇ ಇಲ್ಲ. ಆದಾಗ್ಯೂ ಆಕೆ 25-30 ಸೀಟು ಬೆಲ್ಲುವ ಭರವಸೆಯಲ್ಲಿದ್ದರು, ಆದರೆ ಕೊನೆಗೆ ಅದೂ ದಕ್ಕಲಿಲ್ಲ. ಎಲ್ಲ ಲೆಕ್ಕಾಚಾರಗಳನ್ನೂ ಮೀರಿ ಜನರು ಬಿಜೆಪಿಯನ್ನು ಈ ಬಾರಿ ಬೆಂಬಲಿಸಿದರು. ಇದೇ ಮೊದಲ ಬಾರಿಗೆ ಆಡಳಿ ತದ ಚುಕ್ಕಾಣಿ ಹಿಡಿದು ಐದು ವರ್ಷ ಪೂರೈಸಿದ ಪಕ್ಷವೊಂದು ಪುನರಾಯ್ಕೆಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
ನಾನು ಯಾವುದೇ ಸಂಗತಿಯನ್ನು ರಾಜಕೀಯ ದೃಷ್ಟಿಕೋನದಿಂದ ಪರಾಮರ್ಶಿಸುವ ಬದಲು ವಾಸ್ತವ ಸತ್ಯದೊಂದಿಗೆ ತಳಕು
ಹಾಕಿ ವಿಮರ್ಶೆ ಮಾಡುತ್ತೇನೆ. ಅಸಾಧ್ಯವನ್ನು ಸಾಧ್ಯವಾಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯದ ಶಂಕರಾಚಾರ್ಯರಾಗಿ ಹೊರಹೊಮ್ಮಿದ್ದಾರೆ. ಅವರು ರಾಜಕಾರಣಿಯಾಗಿ ಮಾತ್ರವಲ್ಲ ಒಬ್ಬ ಸಂತಸದೃಶ್ಯ ಮುತ್ಸದ್ಧಿಯಾಗಿ ವಿಶ್ವದ ಗಮನ ಸೆಳೆದಿzರೆ.
2012ರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಾನು ಮೋದಿಜೀಯವರನ್ನು ‘ಗುಜರಾತಿನ ಸಿಂಹ’ ಎಂದು ಕರೆದಿದ್ದು ಕಣಜದ ಗೂಡಿಗೆ ಕಸೆದಂತೆ ಆಗಿತ್ತು. ಆದರೆ ಅದು ಇಂದು ಸತ್ಯವಾಗಿದೆ. ಒಂದು ಸಂದರ್ಭದಲ್ಲಿ ಮೋದಿಜಿ ಮಾತನಾಡುತ್ತ ‘ನೀವು ನನ್ನನ್ನು ಸಿಂಹ ಎಂದು ಕರೆದಿರಿ, ಸಂತನೆಂದೂ ಹೇಳಿದಿರಿ, ಆದರೆ ನೀವು ಅದರಿಂದ ಬಹಳ ತೊಂದರೆ ಎದುರಿಸಬೇಕಾದೀತು’
ಎಂದು ಹೇಳಿದ್ದು ನನಗಿನ್ನೂ ನೆನಪಿದೆ. ನಿಜಕ್ಕೂ ನಾನು ಅನೇಕ ತೊಂದರೆಗಳು ಎದುರಿಸಿದೆ.
ಇರಲಿ, ನಾನೀಗ ಚುನಾವಣೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಆದಿತ್ಯ ಠಾಕ್ರೆ ಯುಪಿ ತಲುಪಿದ್ದರು. ನೂರು ಸೀಟುಗಳಿಗೆ ಸ್ಪರ್ಧಿಸುವ ಘೋಷಣೆ ಮಾಡಿದ್ದರು ಕೂಡ. ಆದರೆ ಸ್ಪರ್ಧಿಸಿದ್ದು 37 ಸೀಟುಗಳಿಗೆ ಮಾತ್ರ. ಅವೆಲ್ಲ ಕಡೆಗಳಲ್ಲಿಯೂ ಅವರ ಸ್ಪರ್ಧಿಗಳು ಠೇವಣಿ ಕಳೆದುಕೊಂಡರು. ಗೋವಾದಲ್ಲಿ ಶಿವಸೇನೆಗೆ ಆಗಿದ್ದು ಅದೇ ಸ್ಥಿತಿ, ನಾವೀಗ ಕಾಂಗ್ರೆಸ್ನ ಸ್ಥಿತಿಯನ್ನು ಗಮನಿಸೋಣ. ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿದ್ದು ಯುಪಿಯಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದರು.
ಆದರೆ ಆಗಿದ್ದೇನು? ಕಾಂಗ್ರೆಸ್ ಧೂಳೀಪಟವಾಯಿತು. ಹತ್ರಾಸ್ ಮತ್ತು ಲಖೀಂಪುರದಲ್ಲಿ ಗಲಭೆಗಳು ನಡೆದಿದ್ದರೂ ಅಲ್ಲ ಬಿಜೆಪಿ ಗೆದ್ದಿತು. ಕಾಂಗ್ರೆಸಿನ ಭದ್ರಕೋಟೆ ಎನಿಸಿದ್ದ ಅಮೇಥಿಯ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಈಗಾಗಲೇ ಸೋಲುಂಡಿ ದ್ದಾರೆ. ಈ ಬಾರಿ ರಾಯಬರೇಲಿ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವುದೂ ಸಾಧ್ಯವಾಗಲಿಲ್ಲ.
ಪ್ರಿಯಾಂಕಾ ಗಾಂಧಿಯನ್ನು 10-12 ವರ್ಷಗಳ ಮೊದಲೇ ರಾಜಕೀಯಕ್ಕೆ ಬರಬೇಕಿತ್ತು ಎಂದು ನಾನು ಈಗಾಗಲೇ ನನ್ನ ಅಂಕಣದಲ್ಲಿ ಬರೆದಿದ್ದನ್ನು ಮತ್ತೆ ಉಲ್ಲೇಖಿಸುತ್ತಿದ್ದೇನೆ. ಅದೀಗ ಬಹಳ ತಡವಾಗಿ ಆಗಿದೆ. ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿದೆ. ಜನರು ಗಾಂಧಿಕುಟುಂಬದ ಬಗ್ಗೆ ಆರೋಪಿಸುತ್ತಿಲ್ಲ, ಆದರೆ ಎಲ್ಲಿ ಬಹುಸಂಖ್ಯಾತ ಜನಾಂಗಗಳಿವೆಯೋ ಅವರನ್ನೆಲ್ಲ ಕಡೆಗಣಿಸಲಾಗಿದೆ ಎಂಬ ಆರೋಪ ಬಹುಮುಖ್ಯವಾಗಿ ಕೇಳಿಬರುತ್ತಿದೆ.
ಯಾವುದೇ ಜನಬೆಂಬಲವಿಲ್ಲದ ವ್ಯಕ್ತಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಡಲಾಗಿದೆ. ಪಕ್ಷದ ಹೀನಾಯ ಸ್ಥಿತಿಯನ್ನು ಗಮನಿಸಿ ಹಿರಿಯ ನಾಯಕ ಎ.ಕೆ.ಆಂಟನಿ ತಮ್ಮ ನಿವೃತ್ತಿ ಘೋಷಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಬರಲಿರುವ ದಿನಗಳಲ್ಲಿ ಬಹುತೇಕ ನಾಯಕರು ಹಿನ್ನೆಲೆಗೆ ಸರಿಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುವ ಮೋದಿಜಿಯವರ ನಡೆಯನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ; ಪ್ರಜಾಪ್ರಭುತ್ವದಲ್ಲಿ ಒಂದು ಬಲಿಷ್ಠ ವಿರೋಧ ಪಕ್ಷವಿರಬೇಕು, ಆದರೆ ಇಂದು ಆ ಸ್ಥಾನವನ್ನು ತುಂಬುವ ರ್ಯಾರು? ಇದು ವಿರೋಧಪಕ್ಷ ತನ್ನ ಜವಾಬ್ದಾರಿ
ನಿಭಾಯಿಸುತ್ತಿಲ್ಲ.
ಕಾಂಗ್ರೆಸಿನ ಇಂದಿನ ಪರಿಸ್ಥಿತಿ ಗಮನಿಸಿದಾಗ ಅವರು ಕೂಡ ಬಿಜೆಪಿಯೊಂದಿಗೆ ಆಂತರಿಕವಾಗಿ ಹೊಂದಾಣಿಕೆ ಮಾಡಿಕೊಂಡಿ ದ್ದಾರೇನೋ ಎಂಬ ಅನುಮಾನ ನನಗೆ ಮೂಡುತ್ತಿದೆ. ಏಕೆಂದರೆ ಗೆಲ್ಲುವ ಭರವಸೆ ಇರುವ ಅಭ್ಯರ್ಥಿಗಳಿಗೆ ಅವರ್ಯಾಕೆ ಅವಕಾಶ ಕೊಡುತ್ತಿಲ್ಲ? ಇದು ಅರ್ಥವಾಗದ ಸಂಗತಿ. ಪಂಜಾಬಿನಲ್ಲಿ ಆದ ಸೋಲಿನ ಹೊಣೆಯನ್ನು ಕಾಂಗ್ರೆಸ್ ತಾನೇ ಹೊರ ಬೇಕು. ಇಷ್ಟೊಂದು ಗೋಜಲುಗಳನ್ನು ಸೃಷ್ಟಿ ಮಾಡದೇ ಇದ್ದಲ್ಲಿ ಅದಿಂದು ಹೀನಾಯ ಸ್ಥಿತಿಗೆ ತಲುಪುತ್ತಿರಲಿಲ್ಲ.
ಕ್ಯಾಪ್ಟನ್ ಅಮರೀಂದರ್ ಸಿಂಗ್, ನವಜ್ಯೋತ್ ಸಿಂಗ್ ಸಿದ್ದು ಸೋತರು. ಜನರಿಗಿಂದು ನಾಟಕಮಾಡುವ ನಾಯಕರು ಬೇಕಿಲ್ಲ. ದೆಹಲಿಯಲ್ಲಿ ತೋರಿದ ಆಡಳಿತ ಕ್ಷಮತೆಯನ್ನು ಗುರುತಿಸಿದ ಪಂಜಾಬಿನ ಜನ ಈ ಬಾರಿ ಅರವಿಂದ ಕೇಜ್ರಿವಾಲರ ಆಪ್ ಪಕ್ಷಕ್ಕೆ ಮಣೆಹಾಕಿ ಅಧಿಕಾರದ ಚುಕ್ಕಾಣಿಯನ್ನು ಕೊಟ್ಟಿದ್ದಾರೆ. ದೆಹಲಿಯ ಜನತೆಗೆ ಆಪ್ ಕೊಟ್ಟ ಪ್ರಣಾಳಿಕೆಯಲ್ಲಿ ರಾಜಕೀಯ ವಿರಲಿಲ್ಲ, ಪ್ರಣಾಳಿಕೆಯನ್ನವರು ಕಾರ್ಯರೂಪಕ್ಕೆ ತಂದಿದ್ದಾರೆ ಕೂಡ.
ಬಡಜನರಿಗೆ ಉಚಿತ ವಿದ್ಯುತ್, ಗಲ್ಲಿಗಲ್ಲಿಗಳಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಹಲವು ಪ್ರಗತಿಪರ ಕೆಲಸಗಳು ಜನರಿಗೆ ಇಷ್ಟವಾಗಿವೆ. ಹೇಗೆ ಮಮತಾ ಬ್ಯಾನರ್ಜಿ ಸ್ವಶಕ್ತಿಯಿಂದ ದೇಶದ ರಾಜಕೀಯ ಕ್ಷಿತಿಜದಲ್ಲಿ ತನ್ನದೇ ಸ್ಥಾನವನ್ನು ಗಳಿಸಿದರೋ ಅದೇ ರೀತಿ ಕೇಜ್ರಿವಾಲ್ ಕೂಡ ಮತದಾರರ ಗಮನ ಸೆಳೆದಿದ್ದಾರೆ. ಮಣಿಪುರದಲ್ಲಿ ಬಿಜೆಪಿ ಗೆದ್ದಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಈಗಾ ಗಲೇ ಆರ್ಎಸ್ಎಸ್ ಮತ್ತು ಬಿಜೆಪಿ ತಮ್ಮ ಅಡಿಪಾಯವನ್ನು ಈಶಾನ್ಯ ಭಾರತದಲ್ಲಿ ಗಟ್ಟಿಗೊಳಿಸಿಕೊಂಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ಪ್ರಮಾದಗಳಿಂದ ಜನಬೆಂಬಲವನ್ನು ಕಳೆದುಕೊಂಡಿದ್ದಾರೆ.
ಉತ್ತರಾಖಂಡ ಮತ್ತು ಗೋವಾದಲ್ಲೂ ಬಿಜೆಪಿಯವರು ಸೋಲುಂಡಿದ್ದಾರೆ. ಒಂದು ಸಮುದಾಯದ ಪ್ರಬಲ ಬೆಂಬಲ ಹೊಂದಿದ್ದ ಕಾಂಗ್ರೆಸಿನ ಹರೀಶ ರಾವತ್ ಕೂಡ ಸೋತಿದ್ದಾರೆ. ಕಾಂಗ್ರೆಸ್ ಈ ಬಾರಿ ಸೋಲಲಿದೆ ಎಂದು ನಾನು ಮೊದಲೇ ನನ್ನ
ಮಿತ್ರರೊಬ್ಬರಲ್ಲಿ ಹೇಳಿದ್ದೆ. ಇನ್ನು ಗೋವಾದ ವಿಚಾರಕ್ಕೆ ಬರುವುದಾದರೆ ಗೆಲುವಿನ ಎಲ್ಲ ಶ್ರೇಯ ದೇವೇಂದ್ರ -ಡ್ನವೀಸ್ರಿಗೆ ಸಲ್ಲಬೇಕು. ತನ್ನ ಆತ್ಮವಿಶ್ವಾಸ, ತಂತ್ರಗಾರಿಕೆಗಳ ಮೂಲಕ ಅವರು ಅಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹೇಗಿದ್ದರೂ ಅಧಿಕಾರವಿಲ್ಲ, ಈ ಫಡ್ನವೀಸ್ ರನ್ನು ಗೋವಾದ ಮುಖ್ಯಮಂತ್ರಿ ಮಾಡಬಹುದು ಎಂದು ನನ್ನ ಮಿತ್ರರೊಬ್ಬರು ತಮಾಷೆಗೆ ಹೇಳುತ್ತಿದ್ದರು. ಕಾಂಗ್ರೆಸ್ ಪಕ್ಷ ತನಗೆ ಮಾತ್ರವಲ್ಲ ದೇಶದ ಜನರಿಗೂ ಕಷ್ಟ ಕೊಡುತ್ತಿದೆ ಎಂದು ಜನರು ಮಾತನಾಡುವಂತಾಗಿದೆ. ನಿಜ ಹೇಳಬೇಕೆಂದರೆ ಬಿಜೆಪಿಗೆ ಎದುರಾಳಿಯಾಗಬೇಕಾದ ಎಲ್ಲ ಅರ್ಹತೆ ಇರುವುದು ಕಾಂಗ್ರೆಸಿಗೆ ಮಾತ್ರ. ಪ್ರಾದೇಶಿಕ ಪಕ್ಷಗಳಿಗೆ ಇದು ಸಾಧ್ಯವಾಗದ ಮಾತು. ಒಬ್ಬ ಆರಡಿಯ ಆಳನ್ನು ಸಿದ್ಧಪಡಿಸಲು ಎರಡು ಅಡಿಯ ಮೂವ ರನ್ನು ಜೋಡಿಸುವುದು ಸಾಧ್ಯವಿಲ್ಲದ ಮಾತು.
ಮೂಲ ಕಾಂಗ್ರೆಸಿಗರು ಈಗ ಸ್ಪಷ್ಟವಾಗಿ ದನಿ ಎತ್ತಿ ತಮ್ಮ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಿದೆ. ಕೇವಲ ಎರಡು ಸೀಟು ಗೆದ್ದಿದ್ದ ಬಿಜೆಪಿ ಇಂದು ದೇಶವನ್ನೇ ಆಕ್ರಮಿಸಿಕೊಂಡಿದೆ ಎಂಬ ಮಾತನ್ನು ಕಾಂಗ್ರೆಸ್ ಗಮನಿಸಬೇಕಿದೆ. ಸೋತರೇನಂತೆ, ಮತ್ತೆ ನಾವು ಗತವೈಭವಕ್ಕೆ ಮರಳುತ್ತೇವೆ, ಅದಕ್ಕೂ ಮುನ್ನ ನಮ್ಮ ಹೃದಯಗಳನ್ನು ನಾವು ಗೆಲ್ಲಬೇಕಿದೆ ಎಂಬ ಘಾಲಿಬ್ನ ಮಾತು ಯಾಕೋ ನೆನಪಾಗುತ್ತಿದೆ.