Saturday, 23rd November 2024

ಇಂದಿನಿಂದ 12-14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಿಕೆ

Vaccination

ನವದೆಹಲಿ ಮಹಾಮಾರಿ ಕರೋನಾ ವೈರಸ್​ ವಿರುದ್ಧದ ಹೋರಾಟದ ಮುಂದುವರೆದ ಭಾಗವಾಗಿ ಮಾ.೧೬ರಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್​ ವ್ಯಾಕ್ಸಿನ್ ನೀಡಲಾಗುತ್ತಿದೆ.

ಮಕ್ಕಳಿಗೆ ಕಾರ್ಬೆವ್ಯಾಕ್ಸ್​ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. ಮಕ್ಕಳನ್ನ ಎರಡು ಗುಂಪುಗಳಲ್ಲಿ ವಿಂಗಡಣೆಗೆ ಸೂಚಿಸಿದ್ದು, 12ರಿಂದ 13 ವರ್ಷ ಹಾಗೂ 13ರಿಂದ 14 ವರ್ಷದೊಳಗಿನ ಮಕ್ಕಳನ್ನ ಎರಡು ಗುಂಪುಗಳಲ್ಲಿ ವಿಂಗಡಣೆ ಮಾಡುವಂತೆ ತಿಳಿಸಿದೆ.

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ವ್ಯಾಕ್ಸಿನ್ ನೀಡಲು ಸೂಚನೆ ನೀಡಿರುವ ಕೇಂದ್ರ 15 ಮಾರ್ಚ್​​ 2010ರೊಳಗೆ ಜನಿಸಿರುವ ಮಕ್ಕಳು ವ್ಯಾಕ್ಸಿನ್​ ಪಡೆದುಕೊಳ್ಳಲು ಅರ್ಹರಲ್ಲ ಎಂದಿದೆ. ಮಕ್ಕಳಿಗೆ ಕಾರ್ಬೆವ್ಯಾಕ್ಸ್​ ಲಸಿಕೆ ಮಾತ್ರ ನೀಡಲು ಮಾರ್ಗಸೂಚಿ ಯಲ್ಲಿ ತಿಳಿಸಿದ್ದು, ಎರಡು ಡೋಸ್​ಗಳ ಮಧ್ಯೆ 28 ದಿನಗಳ ಅಂತರ ಇರುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.