Saturday, 14th December 2024

ಕಾಶ್ಮೀರ ಭಾರತಕ್ಕೆ ಉಳಿಯಲು ಜಗಮೋಹನ್‌ ಕಾರಣ

ಸಂವಾದ – ೨೪೦

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕಾಶ್ಮೀರದ ಸ್ಥಿತಿಗತಿಗಳ ಕುರಿತು ಲೇಖಕಿ ಸಹನಾ ವಿಜಯಕುಮಾರ್ ಉಪನ್ಯಾಸ

ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಚಿತ್ರ ಜನರಲ್ಲಿ ಜಾಗೃತಿ ಮೂಡಿಸಿದೆ. ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ? ಎಂದು ಈ ಚಿತ್ರವನ್ನು ನೋಡಿ ಆಲೋಚನೆ ಮಾಡಬೇಕಿದೆ. ನಮ್ಮ ಊರು- ನಮ್ಮ ರಾಜ್ಯ ಆ ಸ್ಥಿತಿಗೆ ತಲುಪದೇ ಇರಲು ನಾವೇನು ಮಾಡ  ಬೇಕು ಎಂದು ಆಲೋಚನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕಾಶ್ಮೀರದ ಸ್ಥಿತಿಗತಿಗಳ ಕುರಿತಂತೆ ‘ಕಶೀರ’ ಎಂಬ ಕೃತಿ ರಚಿಸಿರುವ ಸಹನಾ ವಿಜಯಕುಮಾರ್ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತಾದ ಕಾರ್ಯಕ್ರಮ ದಲ್ಲಿ ಅವರು ಅರಿವಿನ ಉಪನ್ಯಾಸ ನೀಡಿದರು. ದಿ ಕಾಶ್ಮೀರ್ ಫೈಲ್ಸ್ ಚಿತ್ರ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಅದೊಂದು ಚಲನಚಿತ್ರ ಎನ್ನುವುದನ್ನು ಹೊರತು ಪಡಿಸಿದರೆ, ಮಾಡಿದ ಕೆಲಸ ಶ್ಲಾಘನೀಯ. ಅನೇಕ ವರ್ಷ ಹಿಂದೇಯೇ ಯಾವ ಸತ್ಯವನ್ನು ದೇಶದ ಪ್ರಜೆಗಳಿಗೆ ತಿಳಿಸಬೇಕಿತ್ತೋ ಆ ಸತ್ಯವನ್ನು ಜನರಿಗೆ ತಲುಪಿಸಿದ್ದಾರೆ. ಮೊದಲು ಈ ಸತ್ಯ ವನ್ನು ಜನರಿಗೆ ತಲುಪಲು ಬಿಡುತ್ತಿರಲಿಲ್ಲ.

ಕಾಶ್ಮೀರದಲ್ಲಿ ನಡೆದ ಘಟನೆಗಳ ಭೀಕರ ರೂಪ ಸಿನಿಮಾದಲ್ಲಿ ಮೂಡಿ ಬಂದಿರುವುದು ಜನರನ್ನು ಹೆದರಿಸಿದೆ. ಅದರಲ್ಲೂ ಉಗ್ರವಾದಕ್ಕೆ ಬಲಿಯಾದ ಶಾರದಾ ಎಂಬ ಮುಗ್ದ ಹೆಣ್ಣುಮಗಳನ್ನು ಗರಗಸದಲ್ಲಿ ಸೀಳುವ ದೃಶ್ಯ ಭಯಾನಕವಾಗಿದೆ. ಕಾಶ್ಮೀರ ಎಂದಾಕ್ಷಣ ಎಲ್ಲರ ಕಲ್ಪನೆಯಲ್ಲಿ ಒಂದು ಚಿತ್ರ ಮೂಡಿದರೂ, ದೃಶ್ಯ ಮಾಧ್ಯಮದಲ್ಲಿ ಬಂದಿರುವುದು ಎಲ್ಲರ ಮನಸ್ಸಲ್ಲಿ ಭಾವುಕತೆ ಮೂಡಿಸುತ್ತಿದೆ. ಈ ಚಿತ್ರದಿಂದ ದೇಶಭಕ್ತರೆಲ್ಲಾ ಒಟ್ಟಾಗಿರು ವುದು ಸಂತೋಷದ ವಿಚಾರ ಎಂದರು.

ಕಾಶ್ಮೀರದ ವಿಚಾರ ಬಂದರೆ ನಾವು ಮೊದಲು ನೆನಪು ಮಾಡಿಕೊಳ್ಳಬೇಕಾಗಿರುವುದು ಕಾಶ್ಮೀರದ ಹಿಂದಿನ ರಾಜ್ಯಪಾಲರಾಗಿದ್ದ
ಜಗಮೋಹನ್ ಅವರನ್ನು. ಕಾಶ್ಮೀರವನ್ನು ಭಾರತದಿಂದ ಕಿತ್ತಿಕೊಳ್ಳಲು ಅನೇಕ ವರ್ಷಗಳ ಹಿಂದಿನಿಂದಲೇ ಪೂರ್ವ ಸಿದ್ದತೆಗಳು ನಡೆಯುತ್ತಿದ್ದವು. ಆದರೆ, ಜಗಮೋಹನ್ ತಮ್ಮ ಅಧಿಕಾರದ ಮೊದಲ ಅವಧಿಯಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಪ್ರಯತ್ನ ಮಾಡಿದ್ದರು. ಪರಿಸ್ಥಿತಿ ಹತೋಟಿಗೆ ತರಲು ಗಟ್ಟಿಯಾಗಿ ನಿಂತಿದ್ದರು ಎಂದು ಹೇಳಿದರು.

ತಮ್ಮ ಅವಧಿ ಮುಗಿದ ನಂತರ ಜಗಮೋಹನ್ ಕಾಶ್ಮೀರದಿಂದ ಹಿಂತಿರುಗಿದರೂ ಕೇಂದ್ರ ಸರಕಾರ ಮತ್ತೆ ಅವರನ್ನು ವಾಪಸ್ ರಾಜ್ಯಪಾಲರಾಗಿ ನೇಮಿಸಿ ಕಳುಹಿಸಿತು. ಅದರಂತೆ 1989ರಲ್ಲಿ ಮತ್ತೆ ಪ್ರಮಾಣವಚನ ಸ್ವೀಕರಿಸಿದ್ದ ಅವರು, ಮೊದಲು ಅಧಿ
ಕಾರಿಯಾಗಿ ಬಂದಿದ್ದೆ. ಆದರೆ, ಈಗ ನಿಮ್ಮ ಸೇವಕ ನಾಗಿ ಬಂದ್ದಿದೇನೆ. ನನ್ನ ಸಂಬಳ 11 ಸಾವಿರ ರು. ಆದರೆ ನನ್ನ ಸಂಸಾರ ನಿರ್ವಹಣೆಗೆ ಒಂದು ಸಾವಿರ ರು. ಸಾಕು. ಉಳಿದ 11  ಸಾವಿರ ರು. ಇಲ್ಲಿನ ಅಭಿವೃದ್ಧಿಗೆ ಮೀಸಲಿಡುತ್ತೇನೆ ಎಂದು ಹೇಳಿದ್ದರು.

ಜಗಮೋಹನ್ ಅವರು ಒಬ್ಬಂಟಿಯಾಗಿದ್ದರೂ, ಗಟ್ಟಿಯಾಗಿ ನಿಂತು ಉಗ್ರಗಾಮಿಗಳನ್ನು ಎದುರಿಸಿ ಜನರಿಗೆ ಸೌಲಭ್ಯ ಒದಗಿಸಿ ದವರು ಎಂದರು. ಆದರೆ, ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿತ್ತು. ಜಮ್ಮುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಜಗಮೋಹನ್ ಅವರು ಕಾಶ್ಮೀರಕ್ಕೆ ಬಂದಾಗ, ‘ಕಾಶ್ಮೀರ ಬಿಟ್ಟು ತೊಲಗಿ’ ಎಂಬ ಕೂಗು ಕೇಳಿ ಬಂದಿತ್ತು. ಆದರೆ, ‘ನಮ್ಮನ್ನು ರಕ್ಷಣೆ ಮಾಡಿ’ ಎಂಬ ಜನರ ಕೂಗು ರಾಜ್ಯಪಾಲರ ಕಿವಿಗೆ ಬೀಳುತ್ತಿತ್ತು. ಇದರ ಮಧ್ಯೆ ಕಾಶ್ಮೀರದಲ್ಲಿ ಆ.14ರಂದು ಪಾಕಿಸ್ಥಾನದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಬೇಕು ಮತ್ತು ಆ. ೧೫ರಂದು ಭಾರತದ ಸ್ವತಂತ್ರ್ಯೋತ್ಸವದಂದು ಕಪ್ಪು ಭಾವುಟ ಹಾರಿಸಬೇಕು. ಸಂಪೂರ್ಣ ಶ್ರೀನಗರದಲ್ಲಿ ವಿದ್ಯುತ್ ಕಡಿತಗೊಳಿಸಿ ಕತ್ತಲೆಯ ದಿನ ಎಂದು ಆಚರಿಸಲು ಉಗ್ರರು ನಿರ್ಧರಿಸಿದ್ದರು.

ಅದು 1989ರ ಆ. 14ರ ರಾತ್ರಿ. ಕಾಶ್ಮೀರದ ಎಲ್ಲಾ ಮಸೀದಿಗಳ ಮುಖಾಂತರ ‘ಕಾಶ್ಮೀರ ಬಿಟ್ಟು ಪುರುಷರು ತೊಲಗಿ. ಹೆಂಡತಿ, ಮಕ್ಕಳನ್ನು ಬಿಟ್ಟು ಹೋಗಿ’ ಎಂದು ಕೂಗಲಾಯಿತು. ಒಂದೆರಡಲ್ಲ, ನಗರದ ಎಲ್ಲಾ ಮಸೀದಿಗಳಲ್ಲಿ ಏಕಕಾಲಕ್ಕೆ ಈ ಘೋಷ ಣೆಯ ರೆಕಾರ್ಡ್ ಹಾಕಲಾಯಿತು. ಜತೆಗೆ ಸಾವಿರಾರು ಮಂದಿಯ ಗುಂಪು, ಪಂಜು ಹಿಡಿದು ಗುಂಪು-ಗುಂಪಾಗಿ ಕಾಶ್ಮೀರ ಬಿಟ್ಟು ತೊಲಗಿ ಎಂದು ಕೂಗುತ್ತಾ ಸಾಗಿದರು.

ಅಂತಹ ಭಯ ಹುಟ್ಟಿಸುವ ಅನೇಕ ಘಟನೆಗಳು ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯವಾಗಿತ್ತು ಎಂದು ವಿವರಿಸಿದರು. ಮತ್ತೊಂದೆಡೆ ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ಮಿತಿಮೀರಿತ್ತು. ಇದರಿಂದ ಹೆದರಿದ ಕಾಶ್ಮೀರಿ ಪಂಡಿತರು, ಹಿಂದೂಗಳು ಮಾರನೇ ದಿನವೇ ಊರು ಕಾಲಿ ಮಾಡಲು ನಿರ್ಧರಿಸಿದರು. ಹಲವಾರು ಮಂದಿ ರಾತ್ರೋರಾತ್ರಿ ಊರು ಖಾಲಿ ಮಾಡಿ ಪ್ರಾಣ ಉಳಿಸಿಕೊಂಡರು. ಇನ್ನುಳಿದವರು ತಮ್ಮ ನೆರೆಹೊರೆಯವರು ತಮಗಾಗಿ ತಮ್ಮ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ಮತ್ತು ಧೈರ್ಯದಿಂದ ಅಲ್ಲೇ ಉಳಿದರು. ಆದರೆ, ಮುಂದೆ ನಡೆದ ಅನಾಹುತ, ದೌರ್ಯನ್ಯಗಳನ್ನು ಅವರು ಎದುರಿಸಬೇಕಾಯಿತು. ಈ ಎಲ್ಲಾ ಅಂಶಗಳ ಬಗ್ಗೆ ನಾನು ನನ್ನ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.

ಕಾಶ್ಮೀರ ಬಿಟ್ಟು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋದ ಪಂಡಿತರು ಯಾವುದೇ ಮಿಸಲಾತಿ ಕೇಳದೆ, ಅಲ್ಪಸಂಖ್ಯಾತ ಸೌಲಭ್ಯ ಗಳನ್ನೂ ಬಯಸದೆ ವಿದ್ಯೆಯನ್ನೇ ನೆಚ್ಚಿಕೊಂಡು ಬಂದು ಈಗಲೂ ಹಾಗೆಯೇ ಮುಂದುವರಿದಿದ್ದಾರೆ. ಎಂಜಿನಿಯರಿಂಗ್ ಕಾಲೇಜುಗಳಿಗೆ ಸೇರಬೇಕು ಎಂಬುದು ಅವರಲ್ಲಿ ಬಹುತೇಕರ ಇಚ್ಛೆಯಾಗಿತ್ತು. ಇದಕ್ಕೆ ಮಹಾರಾಷ್ಟ್ರದ ಬಾಳ್ ಠಾಕ್ರೆ ಸ್ಪಂದಿಸಿ, ಕಾಶ್ಮೀರದಿಂದ ಬಂದವರಿಗೆ ಎಂಜಿನಿಯರಿಂಗ್ ಸೀಟುಗಳನ್ನು ಕೊಡಿಸಿದರು ಎಂದು ಸಹನಾ ವಿಜಯಕುಮಾರ್ ಕಾಶ್ಮೀರ ಘಟನೆ ಗಳ ಬಗ್ಗೆ ಬೆಳಕುಚೆಲ್ಲಿದರು.

***
ಕಾಶ್ಮೀರದ ಬಗ್ಗೆ ಮಾತನಾಡುವುದು ತುಂಬಾ ಇದೆ. ಎಲ್ಲರೂ ನೋಡಲೇ ಬೇಕಾದಂತಹ ಚಿತ್ರ ಸಿನಿಮಾ ಕಾಶ್ಮೀರ್ ಫೈಲ್ಸ್. ಒಂದು ಕ್ರೂರ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದಂತಹ, ಕಣ್ಣು ತೆರೆಯುವಂಥ ಕಾಲ ಇದಾಗಿದೆ. ಇಷ್ಟು ದಿನಗಳ ಕಾಲ ಯಾರೋ ಹೇಳಿದ ಕಥೆಗಳನ್ನು ನಂಬಿಕೊಂಡು ಕಾಶ್ಮೀರದ ಬಗ್ಗೆ ನಮ್ಮದೇ ಆದ ಅಭಿಪ್ರಾಯ ಮೂಡಿಸಿಕೊಂಡಿದ್ದೆವು. ಆದರೆ ಆ ಎಲ್ಲ ಸಂಕೋಲೆಗಳಿಂದ ನಾವು ಹೊರಗೆ ಬಂದಿದ್ದೇವೆ. ಭಾರತದಲ್ಲಿ ಇಂತಹದ್ದೊಂದು ಸಿನಿಮಾ ನಿರ್ಮಾಣವಾಗುತ್ತದೆ, ಇಷ್ಟು ಜನ ನೋಡುತ್ತಾರೆ, ನೋಡಲು ಸಾಧ್ಯವಾಗುತ್ತದೆ ಎಂದು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಜನರನ್ನು ಧಾಟಿ ಮುಕ್ತವಾಗಿ ಚರ್ಚೆ ಮಾಡುವಂತಹ ವಾತಾವರಣ ನಿರ್ಮಾಣವಾಗಿರುವತಹದ್ದೇ ಭಾರತದಲ್ಲಿ ಆದಂತಹ ಒಂದು ದೊಡ್ಡ ಪರಿವರ್ತನೆ. ಅಷ್ಟರ ಮಟ್ಟಿಗೆ ದೇಶದಲ್ಲಿ ಮನಃಪರಿವರ್ತನೆ , ಆಡಳಿತ ಪರಿವರ್ತನೆ, ಜನರಲ್ಲಿ ಪರಿವರ್ತನೆ ಆಗಿದೆ.
-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ

***

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ತಕ್ಷಣ ಗೃಹ ಸಚಿವ ಅಮಿತ್ ಶಾ ಅವರು ಜಗಮೋಹನ್ ಅವರ ಮನೆಗೆ
ಹೋಗಿ ಈ ವಿಷಯ ತಿಳಿಸಿದ್ದಾರೆ ಎಂದರೆ ಜಗಮೋಹನ್ ಅವರು ಎಷ್ಟೊಂದು ಸಾಧನೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕೇವಲ ಚಿತ್ರ ನೋಡಿದರೆ ಕಥೆಯ ಹಂದರ ಸಿಗುವುದಿಲ್ಲ. ಮೂಲ ಕಾರಣ ಅನ್ವೇಷಿಸಿಕೊಂಡು ಹೋದಾಗ ನಿಜವಾದ ಸಂಗತಿಗಳು
ಅರಿವಾಗಿ ಕಾಶ್ಮೀರದ ಬೆಳವಣಿಗೆಗಳು ತುಂಬಾ ಭಯ ಹುಟ್ಟಿಸುತ್ತದೆ.

ಕಾಶ್ಮೀರದಲ್ಲಿ ನಡೆದ ಮೂಲ ಕಥೆಯನ್ನು ನೋಡಿದಾಗ ಹಿಂದೂಗಳ ಕುರಿತಾಗಿ ಅಲ್ಲಿನ ದೇಶ ವಿರೋಧಿಗಳಿಗೆ ಸಾಂಸ್ಕೃತಿಕ
ವೈರತ್ವ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿದುಬರುತ್ತದೆ.

ಕಾಶ್ಮೀರ ಯಾವಾಗಲೂ ಲಾವಾರಸ ಇದ್ದಂತೆ. ಯಾವಾಗ ಉಕ್ಕಿ ಹೊರಗೆ ಚೆಲ್ಲುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಈ
ಕಾರಣದಿಂದಲೇ ಈಗಲೂ ಹಿಂದೂಗಳು ಕಾಶ್ಮೀರದ ಬಗ್ಗೆ ಆತಂಕದಲ್ಲೇ ಇದ್ದಾರೆ.

ನೆಹರು ಅವರಿಂದ ಕಾಶ್ಮೀರದ ವಿಚಾರದಲ್ಲಿ ಸರಣಿ ಅನ್ಯಾಯಗಳು ನಡೆದಿದೆ. ಮೊದಲಿನಿಂದಲೂ ನಾಯಕತ್ವದ ಕೊರತೆ ಮತ್ತು
ನಿರ್ಲಕ್ಷ್ಯ ಕಾಶ್ಮೀರದ ದುಸ್ಥಿತಿ ಮತ್ತು ಅಲ್ಲಿ ಪಂಡಿತರು ದೌರ್ಜನ್ಯಕ್ಕೆ ಒಳಗಾಗಲು ಕಾರಣ.